NEWSನಮ್ಮಜಿಲ್ಲೆನಮ್ಮರಾಜ್ಯ

ಆರ್‌.ಆರ್‌.ಇನ್‌ಫ್ರಾಸ್ಟ್ರಕ್ಚರ್‌ ಕಂಪನಿಯ ಮುಖ್ಯ ಕಾನೂನು ಸಲಹೆಗಾರ ವಕೀಲ H.B.ಶಿವರಾಜು ತಮಿಳುನಾಡಿಗೆ ವರ್ಗಾವಣೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಆರ್‌.ಆರ್‌.ಇನ್‌ಫ್ರಾಸ್ಟ್ರಕ್ಚರ್‌ ಕಂಪನಿಯ ಸಿವಿಲ್‌ ಪ್ರಕರಣಗಳ ಸಂಬಂಧ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಕಟ ಹೈ ಕೋರ್ಟ್‌ಗಳಲ್ಲಿ ಹಾಗೂ ಸುಪ್ರೀಂ ಕೋರ್ಟ್‌ಗಳಲ್ಲಿ ವಕಾಲತ್ತು ವಹಿಸುತ್ತಿದ್ದ ವಕೀಲ ಎಚ್‌.ಬಿ.ಶಿವರಾಜು ಅವರನ್ನು ಈ ಕೂಡಲೇ ಜಾರಿಗೆ ಬರುವಂತೆ ತಮಿಳುನಾಡು ರಾಜ್ಯದ  ಊಟಿಯಲ್ಲಿರುವ ಕಂಪನಿಗೆ ವರ್ಗಾವಣೆ ಮಾಡಲಾಗಿದೆ.

ಆರ್‌.ಆರ್‌.ಇನ್‌ಫ್ರಾಸ್ಟ್ರಕ್ಚರ್‌ ಕಂಪನಿಯ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಕಟ ಹೈ ಕೋರ್ಟ್‌ಗಳಲ್ಲಿ ನೂರಾರು ಪ್ರಕರಣಗಳ ವಕಾಲತ್ತು ವಹಿಸುವ ಮೂಲಕ ಕಂಪನಿಗೆ ಲಾಭದಾಯಕವಾಗುಂತಹ ಕೆಲಸ ಮಾಡಿದ್ದರು, ಈ ಕೆಲಸವನ್ನು ಶ್ಲಾಘಿಸಿರುವ ಕಂಪನಿಯ ಸಿಇಒ ತಮಿಳುನಾಡಿನಲ್ಲಿರುವ ಪ್ರಕರಣಗಳನ್ನೂ ಇವರೆ ವಹಿಸಿಕೊಳ್ಳಬೇಕು ಎಂಬ ದೃಷ್ಟಿಯಿಂದ ವರ್ಗಾವಣೆ ಮಾಡಿದ್ದಾರೆ.

ವಕೀಲ ಎಚ್‌.ಬಿ.ಶಿವರಾಜು ಅವರ ಸೇವೆ ಬಗ್ಗೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಹಲವು ನೌಕರರು ಸೇರಿದಂತೆ ಇತರರಿಗೆ ಉಚಿತವಾಗಿ ಕಾನೂನು ಸೇವೆ ನೀಡಿದ ಫಲವಾಗಿ ವಕೀಲರಾದ ಎಚ್‌.ಬಿ.ಶಿವರಾಜು ಅವರಿಗೆ ಕೈ ತುಂಬ ವೇತನ ಕೊಡುವ ಖಾಸಗಿ ಕಂಪನಿ (ಆರ್‌.ಆರ್‌.ಇನ್‌ಫ್ರಾಸ್ಟ್ರಕ್ಚರ್‌)ನಲ್ಲಿ ಕಳೆದ 2025ರ ಜೂನ್‌ ತಿಂಗಳಿನಲ್ಲಿ ಮುಖ್ಯ ಕಾನೂನು ಸಲಹೆಗಾರ ಹುದ್ದೆ ಸಿಕ್ಕಿದೆ.

ಕಳೆದ 2019ರಿಂದ ಇಲ್ಲಿಯ ವರೆವಿಗೂ ಸಾರಿಗೆ ಅಧಿಕಾರಿಗಳ ಕಿರುಕುಳಕ್ಕೆ ಒಳಗಾಗಿ ಹಾಗೂ 2021ರ ಏಪ್ರಿಲ್‌ನಲ್ಲಿ ನಡೆದ ಮುಷ್ಕರದ ವೇಳೆ ಕೇಸ್‌ ದಾಖಲಾಗಿದ್ದ ಹಲವು ನೌಕರರ ಪರ ಉಚಿತವಾಗಿ ವಕಾಲತ್ತು ವಹಿಸುವ ಮೂಲಕ ಕರ್ನಾಟಕ ಹೈ ಕೋರ್ಟ್‌ನಲ್ಲಿ ಅವರಿಗೆ ನ್ಯಾಯದೊರಕಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಅಲ್ಲದೆ ಮೈಸೂರು ನಗರದ ಮಾಜಿ  ಶಾಸಕ ಎಸ್‌.ಎ.ರಾಮದಾಸ್‌  ಅವರಿಂದ ದೌರ್ಜನ್ಯಕ್ಕೆ ಒಳಗಾಗಿದ್ದ ಮೈಸೂರು ಮೂಲಕ ಮಹಿಳೆಗೆ ಪ್ರೇಮಕುಮಾರಿ ಪರ ಸುಪ್ರೀಂ ಕೋರ್ಟ್‌ನಲ್ಲಿ ಉಚಿತವಾಗಿ ವಕಲತ್ತು ಹಾಕುವ ಮೂಲಕ ಅವರಿಗೂ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ಜತೆಗೆ ಹಲವು ಶಾಸಕರ ಪರವಾಗಿ ಕ್ರಿಮಿನಲ್‌ ಮತ್ತು ಸಿವಿಲ್‌ ಪ್ರಕರಣಗಳ ವಕಾಲತ್ತು ವಹಿಸಿದ್ದಾರೆ.

ಸಿದ್ದುಗೆ ರಿಲೀಫ್‌ ಕೊಟ್ಟಿದ್ದು ಇದೇ ವಕೀಲ ಶಿವರಾಜು: ಇದಿಷ್ಟೇ ಅಲ್ಲದೆ ಹಾಲಿ ಸಿಎಂ ಸಿದ್ದರಾಮಯ್ಯ ಅವರು ಈ ಹಿಂದೆ ಅಂದರೆ 1997ರಲ್ಲಿ ಉಪಮುಖ್ಯಮಂತ್ರಿ ಯಾಗಿದ್ದಾಗ ಮೈಸೂರು ಮಹಾನಗರ ಅಭಿವೃದ್ಧಿ ಪ್ರಾಧಿಕಾರ(ಮೂಡಾ)ದ ನಿಯಮಾವಳಿಗಳನ್ನು ಉಲ್ಲಂಘಿಸಿ ಭೂಮಿ ಖರೀದಿಸಿದ್ದಾರೆ ಎಂದು ಆರೋಪಿಸಲಾಗಿದ್ದ ಪ್ರಕರಣವನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು.

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಎ.ಎಸ್.ಬೋಪಣ್ಣ ಮತ್ತು ವಿ.ಸುಬ್ರಹ್ಮಣ್ಯ ಅವರನ್ನೊಳಗೊಂಡ ವಿಭಾಗೀಯ ಪೀಠ 23 ವರ್ಷಗಳ ಹಿಂದಿನ ಪ್ರಕರಣವನ್ನು 2020ರಲ್ಲಿ ವಜಾಗೊಳಿಸಿತ್ತು.

1997ರಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಮೈಸೂರಿನ ಹಿಂಕಲ್ ಬಳಿ 10ಗುಂಟೆ ಜಮೀನು ಖರೀದಿಸಿದ್ದರು. ಅದರ ಡಿನೋಟಿಫಿಕೇಶನ್ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಪ್ರಕರಣ ಸಂಬಂಧ ಪ್ರಮುಖವಾಗಿ ವಕಾಲತ್ತುವಹಿಸಿದ್ದ ಇದೇ ವಕೀಲ ಶಿವರಾಜು ಅವರು ತ್ರೀಸದಸ್ಯ ನ್ಯಾಯಪೀಠದ ಮುಂದೆ ಸುಮಾರು 25 ನಿಮಿಷಗಳ ಕಾಲ ವಾದ ಮಂಡಿಸುವ ಮೂಲಕ ಪ್ರಕರಣವನ್ನು ವಜಾಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಬಹಳ ಮುಖ್ಯವಾಗಿ ವಿಜಯಪಥ ಸಂಪಾದಕರಾದ ದೇವರಾಜು ಅವರು ಸಾರಿಗೆ ನೌಕರರ ಪರ ಧ್ವನಿಯಾಗಿದ್ದಕ್ಕೆ ಬಿಎಂಟಿಸಿ ಜಯನಗರ ಡಿಪೋ -4ರ ಘಟಕ ವ್ಯವಸ್ಥಾಪಕನಾಗಿದ್ದ ಪ್ರಶಾಂತ್‌ ಎಂಬುವನು ಡ್ಯೂಟಿ ಮಾಡುತ್ತಿದ್ದ ನಮ್ಮ ನೌಕರನಿಗೆ ಭಯಹುಟ್ಟಿಸಿ ಡ್ಯೂಟಿಗೆ ಅಡ್ಡಿಪಡಿಸಿದ್ದಾರೆ ಎಂದು ಸುಳ್ಳು ಕೇಸ್‌ ಹಾಕಿದ್ದರ ವಿರುದ್ಧ ಹೈ ಕೋರ್ಟ್‌ನಲ್ಲಿ ಉಚಿತವಾಗಿ ವಕಾಲತ್ತು ವಹಿಸಿ ಕೆಳಹಂತದ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣಕ್ಕೆ ಸ್ಟೇ ತರುವ ಮೂಲಕ ನ್ಯಾಯದ ಪರ ನಿಂತಿದ್ದಾರೆ.

ಹೀಗೆ ಹಲವಾರು ರೀತಿಯಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ನೊಂದ ಸಾರಿಗೆ ನೌಕರರು ಸೇರಿದಂತೆ ಹಲವರಿಗೆ ಕಾನೂನಿಕೊಂಡಿಯಾಗಿ ನ್ಯಾಯಾಲಯಗಳಲ್ಲಿ ವಕಾಲತ್ತು ವಹಿಸಿ ನ್ಯಾಯಕೊಡಿಸಿದ್ದು, ಈಗಲೂ ಕೊಡಿಸುತ್ತಿರುವ ವಕೀಲರ ಶಿವರಾಜು ಅವರಿಗೆ ಆಂಧ್ರ ಮೂಲದ ಆರ್‌.ಆರ್‌.ಇನ್‌ಫ್ರಾಸ್ಟ್ರಕ್ಚರ್‌ ಕಂಪನಿಯ ಮುಖ್ಯ ಕಾನೂನು ಸಲಹೆಗಾರ ಹುದ್ದೆಗೆ ನೇಮಕಗೊಂಡಿದ್ದಾರೆ.

ವಕೀಲ ಶಿವರಾಜು ಅವರು ಆರ್‌.ಆರ್‌.ಇನ್‌ಫ್ರಾಸ್ಟ್ರಕ್ಚರ್‌ ಕಂಪನಿಗೆ ಸಂಬಂಧಪಟ್ಟ ಸಿವಿಲ್‌ ಪ್ರಕರಣಗಳ ಸಂಬಂಧ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಕಟ ಹೈ ಕೋರ್ಟ್‌ಗಳಲ್ಲಿ ಹಾಗೂ ಸುಪ್ರೀಂ ಕೋರ್ಟ್‌ಗಳಲ್ಲಿ ವಕಾಲತ್ತು ವಹಿಸಿದ್ದರು. ಈಗ ತಮಿಳುನಾಡಿಗೆ ವರ್ಗಾವಣೆಗೊಂಡಿದ್ದಾರೆ. ಹೀಗಾಗಿ ಇವರಿಗೆ ಕಾರ್ಯಭಾರ ಹೆಚ್ಚಾಗಿರುವುದರಿಂದ ಉಳಿದುಕೊಳ್ಳುವುದಕ್ಕೆ ಮನೆ, ಓಡಾಡುವುಕ್ಕೆ ಕಾರು ಸೇರಿದಂತೆ ಇತರೆ ಸೌಲಭ್ಯಗಳನ್ನು ಕಂಪನಿ ನೀಡಿದೆ. ಜತೆಗೆ ಕೈ ತುಂಬ ವೇತನವನ್ನು ಕೊಡುತ್ತಿದೆ.

ಈ ಹಿನ್ನೆಲೆಯಲ್ಲಿ ಕಂಪನಿಗೆ ಸಂಬಂಧಪಟ್ಟ ಪ್ರಕರಣಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕಿರುವುದರಿಂದ ಇತರೆ ಪ್ರಕರಣಗಳ ಬಗ್ಗೆ ಹೆಚ್ಚಿನ ಗಮನಕೊಡಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಕಾವೇರಿ ಲಾ ಅಸೋಸಿಯೇಟ್ಸ್‌ ಎಲ್ಲ ಜವಾಬ್ದಾರಿಗಳನ್ನು ಈಗಾಗಲೇ ನಮ್ಮ ಸಂಬಂಧಿ ವಕೀಲರಾದ ಕಾವೇರಿ ಅವರು ನೋಡಿಕೊಳ್ಳುತ್ತಿದ್ದಾರೆ.

ಇನ್ನು ಇಲ್ಲಿಯವರೆವಿಗೂ ನಾವು ಸಾರಿಗೆಯ ಕೆಲ ನೌಕರರು ಏನೆ ಅಂದುಕೊಂಡರು ಅದಕ್ಕೆ ಕಿವಿಯಾಗದೆ ನೊಂದ ನೌಕರರ ಪರವಾಗಿ ಸಾಧ್ಯವಾದಷ್ಟು ಸೇವೆ ನೀಡಿದ್ದೇವೆ ಹೀಗಾಗಿಯೇ ನಮಗೆ ಈ ಹುದ್ದೆಯಲ್ಲಿ ಇನ್ನಷ್ಟು ಯಸಕಾಣಲು ಸಾಧ್ಯವಾಗುತ್ತಿದೆ ಎಂದರೂ ತಪ್ಪಾಗುವುದಿಲ್ಲ ಎಂದು ವಕೀಲರು ಖುಷಿ ಹಂಚಿಕೊಂಡಿದ್ದಾರೆ.

ಸಾರಿಗೆ ನೌಕರರು ಸೇರಿದಂತೆ ನೂರಾರು ಜನರಿಗೆ ಉಚಿತವಾಗಿ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡಿ ನೊಂದವರ ಪರ ನಿಂತ ವಕೀಲರಾದ ಶಿವರಾಜು ಅವರು ನೂರಾರುಕಾಲ ಸುಖವಾಗಿ, ಇನ್ನಷ್ಟು ಉನ್ನತ ಹುದ್ದೆಗೇರಲಿ. ಅವರಿಗೆ ಸಿಕ್ಕಿರುವ ಹುದ್ದೆ ಕೀರ್ತಿಯ ಜತೆಗೆ ಅಷ್ಟೈಶ್ವರ್ಯಸಂಪನ್ನರನ್ನಾಗಿ ಮಾಡಲಿ ಎಂದು ನಾವೆಲ್ಲರೂ ಮನತುಂಬಿ ಹಾರೈಸೋಣ.

Megha
the authorMegha

Leave a Reply

error: Content is protected !!
Latest news
ಸರಿಸಮಾನ ವೇತನ ಸೇರಿ ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾಳಿದಿಂದ ಚಿತ್ರದುರ್ಗದಿಂದ ಪಾದಯಾತ್ರೆ: ಒಕ್ಕೂಟ KSRTC ಎಂಡಿ ಅಧ್ಯಕ್ಷತೇಲಿ ಸಾರಿಗೆ ನೌಕರರ ವೇತನ ಹೆಚ್ಚಳ ಸಂಬಂಧ ಇಂದು ಸಂಜೆ ಸಭೆ ಲಾಲ್‌ಬಾಗ್ ಆವರಣದಲ್ಲಿ ಯಶಸ್ವಿಯಾಗಿ ಜರುಗಿದ ಇಪಿಎಸ್ ಪಿಂಚಿಣಿದಾರರ 99ನೇ ಮಾಸಿಕ ಸಭೆ- ಕೇಂದ್ರದ ಬಗ್ಗೆ ಅಸಮಾಧಾನ ಆರ್‌.ಆರ್‌.ಇನ್‌ಫ್ರಾಸ್ಟ್ರಕ್ಚರ್‌ ಕಂಪನಿಯ ಮುಖ್ಯ ಕಾನೂನು ಸಲಹೆಗಾರ ವಕೀಲ H.B.ಶಿವರಾಜು ತಮಿಳುನಾಡಿಗೆ ವರ್ಗಾವಣೆ NWKRTC -ಖಾಸಗಿ ಬಸ್ ನಡುವೆ ಡಿಕ್ಕಿ: ಇಬ್ಬರು ಪ್ರಯಾಣಿಕರು ಮೃತ, 20 ಮಂದಿಗೆ ಗಾಯ KSRTC: ಪ್ರಣಾಳಿಕೆ ಭರವಸೆ ಈಡೇರಿಸದ ಸರ್ಕಾರದ ವಿರುದ್ಧ ಸಮರ ಸಾರಲು ಸಜ್ಜಾದ ಸಾರಿಗೆ ನೌಕರರಿಂದ ನಾಳೆ ಸುದ್ದಿಗೋಷ್ಠಿ KKRTC: ಏ.14ರಂದು ಡಾ.ಅಂಬೇಡ್ಕ‌ರ್‌ ಜಯಂತಿ-ತಲಾ 20 ಸಾವಿರ ರೂ. ಮಂಜೂರು 12ನೇ ತರಗತಿವರೆಗೆ ಗಂಡು ಮಕ್ಕಳಿಗೂ ಉಚಿತ ಸರ್ಕಾರಿ ಬಸ್‌ ಪ್ರಯಾಣಕ್ಕೆ ಶಿಫಾರಸು NWKRTC ಬಸ್‌ಗೆ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಬೆಂಗಾವಲು ವಾಹ‌ನ ಡಿಕ್ಕಿ ಎಲ್ಲ ಕಚೇರಿಗಳು, ನಿಗಮಗಳಲ್ಲೂ ಲೋಕಾ ಯುಕ್ತರ ಸಹಾಯವಾಣಿ ಸಂಖ್ಯೆ ಒಳಗೊಂಡ ಪ್ರದರ್ಶನ ಫಲಕ ಅಳವಡಿಸಲು ಸಿಎಸ್‌ ಡಾ. ಶಾಲಿನಿ...