NEWSನಮ್ಮಜಿಲ್ಲೆನಮ್ಮರಾಜ್ಯ

ಸರಿಸಮಾನ ವೇತನ ಸೇರಿ ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾಳಿದಿಂದ ಚಿತ್ರದುರ್ಗದಿಂದ ಪಾದಯಾತ್ರೆ: ಒಕ್ಕೂಟ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸರ್ಕಾರ ಚುನಾವಣಾ ಪೂರ್ವ ಸಾರಿಗೆ ನೌಕರರಿಗೆ ನೀಡಿರುವ ಪ್ರಣಾಳಿಕೆ ಭರವಸೆ ಈಡೇರಿಸದೆ ಹಾಗೂ ಇತರೆ ಸಮಸ್ಯೆಗಳನ್ನು ಬಗೆಹರಿಸಲು ಅನುಸರಿಸುತ್ತಿರುವ ವಿಳಂಬ ನೀತಿ ಖಂಡಿಸಿ ಇದೇ ಏ.8ರಿಂದ ಚಿತ್ರದುರ್ಗದಿಂದ ಪಾದಯಾತ್ರೆ ಹೋರಟು ಏ.21ರಿಂದ ಬೆಂಗಳೂರಿಗೆ ತಲುಪಿ, ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುತ್ತಿದ್ದೇವೆ ಎಂದು ಸಾರಿಗೆ ನೌಕರರ ಒಕ್ಕೂಟ ತಿಳಿಸಿದೆ.

ಈ ಸಂಬಂಧ ಇಂದು ನಗರದ ಪ್ರಸ್‌ಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟ ಪದಾಧಿಕಾರಿಗಳು, ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲಿ ಪ್ರತಿದಿನ ಒಂದು ಕೋಟಿಗೂ ಅಧಿಕ ಪ್ರಯಾಣಿಕರಿಗೆ ಸೇವೆ ನೀಡಲು 1.15 ಲಕ್ಷ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ನಾವೆಲ್ಲ ಹಬ್ಬ-ಹರಿದಿನಗಳಲ್ಲಿ ಕುಟುಂಬ ಸದಸ್ಯರೊಂದಿಗೆ ಇರದೆ, ಮಳೆ-ಗಾಳಿ-ಬಿಸಿಲು ಎನ್ನದೆ ಅತೀ ಒತ್ತಡದಲ್ಲಿ ಕಷ್ಟಪಟ್ಟು ದುಡಿಯುವ ವರ್ಗವಾಗಿದ್ದರು ನಮಗೆ ಸರ್ಕಾರಿ ಮತ್ತು ಇತರೆ ನಿಗಮ ಮಂಡಳಿಗಳ ನೌಕರರ ವೇತನಕ್ಕೆ ಹೋಲಿಸಿದರೆ ಸಿಗುವ ವೇತನ ಅತ್ಯಲ್ಪ ಮತ್ತು ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದೇವೆ.

ನಾವು ಕಾಯ-ವಚಾ-ಮನಸ್ಸ ದುಡಿಯುವ ಕಾರಣದಿಂದಲೇ ಸಂಸ್ಥೆಗೆ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಒಲಿದು ಬಂದಿವೆ. ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾಂದ ಶಕ್ತಿ ಯೋಜನೆಯನ್ನು ಜಾರಿಗೆ ತರುವ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಸಾಕಷ್ಟು ಬಸ್ಸುಗಳ ಮತ್ತು ನೌಕರರ ಕೊರತೆ ಇದ್ದರೂ ಸಾರಿಗೆ ನೌಕರರು ಕಷ್ಟ ಪಟ್ಟು ದುಡಿದ ಪರಿಣಾಮ ಇಂದು ಶಕ್ತಿ ಯೋಜನೆಯಲ್ಲಿ ನೂರಾರು ಕೋಟಿಗಳ ಸಂಖ್ಯೆಯಲ್ಲಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿರುವ ದಾಖಲೆಯು ಸಹ ನಿರ್ಮಾಣವಾಗಿದೆ. ಜತೆಗೆ ಸರ್ಕಾರಕ್ಕೆ ಅತೀ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಯೋಜನೆ ಎಂದರೆ ಶಕ್ತಿ ಯೋಜನೆ ಎಂದರೆ ಸುಳ್ಳಾಗಲಾರದು.

ನುಡಿದಂತೆ ನಡೆಯುವ ಸರ್ಕಾರವೆಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳು, ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆದಿದೆ. ಇದರ ಜತೆಗೆ ಇದುವರೆಗೂ ಮುಖ್ಯಮಂತ್ರಿಗಳು, ಸಾರಿಗೆ ಸಚಿವರು ಮತ್ತು ವ್ಯವಸ್ಥಾಪಕ ನಿರ್ದೇಶಕರ ಸಭೆಗಳು ನಡೆದಿವೆಯೇ ಹೊರತು ನೌಕರರಿಗೆ ಯಾವುದೇ ರೀತಿಯ ಅನುಕೂಲವಾಗಿಲ್ಲ. ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳು ಮಾತ್ರ ಇನ್ನೂ ಈಡೇರಿಸಲು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ, ಇದು ಬೇಸರದ ಸಂಗತಿಯಾಗಿದೆ.

ಇನ್ನು ಇದರಿಂದ ಸಾರಿಗೆ ನೌಕರರು ತಮ್ಮ ದಿನ ನಿತ್ಯದ ಅಗತ್ಯ ವಸ್ತುಗಳ ಖರೀದಿಗೆ, ಮಕ್ಕಳ ವಿದ್ಯಭ್ಯಾಸಕ್ಕೆ ಮತ್ತು ಇತರೆ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗದೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಈ ಎಲ್ಲ ಕಾರಣಗಳಿಂದ ಬೇಸತ್ತ ನಮಗೆ ಅನ್ಯ ಮಾರ್ಗವಿಲ್ಲದೆ ಬೇಡಿಕೆಗಳ ಈಡೇರಿಕೆಗಾಗಿ ಏ.8ರಿಂದ ಚಿತ್ರದುರ್ಗದ ಜಿಲ್ಲೆಯ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಸಾರಿಗೆ ನೌಕರರ ಬೇಡಿಕೆಗಳ ಮನವಿ ಪತ್ರ ರವಾನಿಸಿ ಅಲ್ಲಿಂದಲೇ ಪಾದಯಾತ್ರೆ ಆರಂಭ ಮಾಡುತ್ತಿದ್ದೇವೆ.

ಆ ಬಳಿಕ ಪಾದಯಾತ್ರೆ ಏ.21 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ ತಲುಪಿ ಅಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲು ನಿರ್ದರಿಸಿದ್ದೇವೆ ಎಂದು ಒಕ್ಕೂಟ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೇಡಿಕೆಗಳು ಏನೇನು?: ಸರ್ಕಾರ ಚುನಾವಣಾ ಪೂರ್ವ ನೀಡಿರುವ ಪ್ರಣಾಳಿಕೆ ಭರವಸೆಯಂತೆ ಸಾರಿಗೆ ನೌಕರರಿಗೂ, ಸರ್ಕಾರಿ ನೌಕರರಂತೆ ಸರಿಸಮಾನ ವೇತನ (7 ನೇ ವೇತನ ಆಯೋಗದ ಮಾದರಿಯಲ್ಲಿ) 01/01/2024 ರಿಂದ ಜಾರಿಗೆ ಬರುವಂತೆ ಕೂಡಲೇ ಕ್ರಮತೆಗೆದುಕೊಳ್ಳಬೇಕು.

01/01/2020 ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಲಾಗಿದ್ದು, ಈ ವೇತನ ಪರಿಷ್ಕರಣೆಯ 38 ತಿಂಗಳ ಹಿಂಬಾಕಿಯನ್ನು ನೀಡಬೇಕು. (ಈಗಾಗಲೇ ಸರ್ಕಾರ 26 ತಿಂಗಳ ವೇತನ ಹಿಂಬಾಕಿ ನೀಡುವ ಸುತ್ತೋಲೆ ಹೊರಡಿಸಿದ್ದು ಬಾಕಿ 12 ತಿಂಗಳ ವೇತನ ಹಿಂಬಾಕಿಯನ್ನು ಸರ್ಕಾರ ಅಥವಾ ಸಂಸ್ಥೆ
ಭರಿಸಬೇಕು)

ಸಾರಿಗೆ ಸಂಸ್ಥೆಗಳಲ್ಲಿ ಸಂಘಗಳ ಮಾನ್ಯತೆಗಾಗಿ, ಕಾರ್ಮಿಕ ಸಂಘಟನೆಗಳ ಚುನಾವಣೆ ಈ ಕೂಡಲೇ ನಡೆಸಬೇಕು ಎಂಬ ಬೇಡಿಕೆಗಳನ್ನು ಇಟ್ಟುಕೊಂಡು ಈ ಹೋರಾಟಕ್ಕೆ ನಾವು ಸಜ್ಜಾಗಿದ್ದೇವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಚಂದ್ರಶೇಕರ್‌, ಎಸ್‌.ನಾಗರಾಜು, ಸುರೇಶ್‌, ತಿಪ್ಪೇಸ್ವಾಮಿ ಮತ್ತಿತರರು ಇದ್ದರು.

Megha
the authorMegha

Leave a Reply

error: Content is protected !!
Latest news
ತಂದೆ-ತಾಯಿ ಇಬ್ಬರೂ IAS ಆಗಿದ್ದರೆ ಮಕ್ಕಳಿಗೆ ಮೀಸಲಾತಿ ಸೌಲಭ್ಯ ಏಕೆ ಮುಂದುವರಿಯ -ಬೇಕು: ಸುಪ್ರೀಂ ಕೋರ್ಟ್‌ ಮಹತ್ವದ ಪ್... KARNATAKA GOVT: ಕಾರ್ಮಿಕರ ಕನಿಷ್ಠ ವೇತನ ನಿಗದಿ ಮಾಡಿ ಸರ್ಕಾರದ ಆದೇಶ- ಮೇ 22ರಿಂದಲೇ ಜಾರಿ- ಕಾರ್ಮಿಕ ಅಧಿಕಾರಿ ತುಳಸ... ಕಲ್ಲಿದ್ದಲು ಗಣಿಯಲ್ಲಿ ಗ್ಯಾಸ್‌ ಸ್ಫೋಟ: 90 ಜನರು ಮೃತ, 100ಕ್ಕೂ ಹೆಚ್ಚು ಕಾರ್ಮಿಕರಿಗೆ ಗಾಯ KSRTC ತುಮಕೂರು ಡಿಸಿಗೆ ಲಂಚ ಸಂಗ್ರಹ ಆರೋಪ: ಸಂಬಂಧಿಕರ ಫೋನ್‌ ಪೇ ಬಳಸಿ ಸಿಕ್ಕ ಬಿದ್ದ ನೌಕರ ಆತ್ಮಹತ್ಯೆಗೆ ಯತ್ನ- ಪಾರ... ಬಿಎಂಟಿಸಿ ಹೊಸ ವೇಗದೂತ ಬಸ್‌ಗಳ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವು ನಿವೇಶನ ರಹಿತ 500 ಬಡ ಕುಟುಂಬಗಳಿಗೆ ಜೂನ್ ತಿಂಗಳಲ್ಲಿ ನಿವೇಶನ ವಿತರಣೆ: ಸಚಿವ ಮುನಿಯಪ್ಪ ಸಿಬಿಎಸ್‌ಇ ತ್ರಿಭಾಷಾ ನೀತಿ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಪಾಲಕರು: ಮುಂದಿನ ವಾರ ವಿಚಾರಣೆ ಫೆಬ್ರವರಿ 2025- ಮಾರ್ಚ್‌ 2025ರ ಎರಡು ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆಗೆ ನಿರ್ದೇಶನ ನೀಡಲು ಹೈ ಕೋರ್ಟ್‌ ಮೆಟ್ಟಿಲೇರಿ... BMTC ನೌಕರರಿಗೆ ಏಪ್ರಿಲ್-2018 ರಿಂದ ಜುಲೈ-2018 ರವರೆಗಿನ 4ತಿಂಗಳ ಮೂಲ ತುಟ್ಟಭತ್ಯೆ ಮೇ 2026ರ ವೇತನದೊಂದಿಗೆ ಪಾವತಿಸಲ...