ವಿದ್ಯುತ್ ಖಾಸಗೀಕರಣ ನಿಲ್ಲಿಸಿ: ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಆಗ್ರಹ
ಈ ಸಂಬಂಧ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈತ ಮುಖಂಡರ ನಿಯೋಗ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ರವಿಕುಮಾರ್ ಅವರನ್ನು ಕೆಇಆರ್‌ಸಿ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು.
Deva15.06.2026

ಬೆಂಗಳೂರು: ಖಾಸಗಿ ವಿದ್ಯುತ್ ಸರಬರಾಜಿಗಾಗಿ ಟಾಟಾ ಕಂಪನಿ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಬೇಕೆಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಇಂದು ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈತ ಮುಖಂಡರ ನಿಯೋಗ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ರವಿಕುಮಾರ್ ಅವರನ್ನು ಕೆಇಆರ್‌ಸಿ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು.
ಆಯೋಗದ ಅಧ್ಯಕ್ಷರು ಮನವಿ ಸ್ವೀಕರಿಸಿ ಅಂತಿಮ ದಿನಾಂಕ ಜೂನ್ 23 ಮುಗಿದ ನಂತರ ಎರಡು ಕಡೆಯ ಅರ್ಜಿದಾರರ ದೂರುಗಳ ಬಗ್ಗೆ ಜಿಲ್ಲಾ ತಾಲೂಕು ಮಟ್ಟದಲ್ಲಿ ವಿಚಾರಣೆ ನಡೆಸಿ ಸಾಧಕ ಬಾದಕಗಳ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದರು.
ರೈತ ಮುಖಂಡರ ನಿಯೋಗದಲ್ಲಿ ಅತ್ತಹಳ್ಳಿ ದೇವರಾಜ್, ಬರ್ಡನಪುರ ನಾಗರಾಜ್, ಹೆಗ್ಗೂರು ರಂಗರಾಜ್, ಮಿಲಿಟರಿ ಕುಮಾರ್, ಮೇಗಳಕೊಪ್ಪಲು ಕುಮಾರ್, ಚಿಕ್ಕಬಳ್ಳಾಪುರ ಶ್ರೀನಿವಾಸ ರೆಡ್ಡಿ, ಬೈರಾರೆಡ್ಡಿ, ಶಾಂತಮ್ಮ. ಉಮಾದೇವಿ ಮುಂತಾದವರು ಇದ್ದರು.
Related


Deva







