ವಿಜಯಪಥ ಸಮಗ್ರ ಸುದ್ದಿ
ತಿ.ನರಸೀಪುರ: ಪಟ್ಟಣದ ಪುರಸಭೆ ವ್ಯಾಪ್ತಿಗೆ ಬರುವ ಮುದ್ದಬೀರನಹುಂಡಿ ಗ್ರಾಮದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಗ್ರಾಮವನ್ನು ಪುರಸಭೆ ಅಧಿಕಾರಿಗಳು ಸೀಲ್ ಡೌನ್ ಮಾಡಿದರು.
ಪಟ್ಟಣದ ಹೊರವಲಯದಲ್ಲಿರುವ ಮುದ್ದಬೀರನಹುಂಡಿ ಗ್ರಾಮದಲ್ಲಿ ನಿನ್ನೆಯಷ್ಟೇ 15 ಜನರಿಗೆ ತಗುಲಿದ್ದ ಮಹಾಮಾರಿ ಕೋವಿಡ್ ಸೋಂಕು 19 ಮಂದಿಗೆ ಪಾಸಿಟಿವ್ ಆಗಿ ವ್ಯಾಪಿಸಿರುವುದರಿಂದ ಗ್ರಾಮವನ್ನು ಪುರಸಭೆಯ ಅರೋಗ್ಯ ಅಧಿಕಾರಿಗಳ ನೇತೃತ್ವದಲ್ಲಿ ಇಂದು ಸೀಲ್ ಡೌನ್ ಮಾಡಲಾಯಿತು.
ಆರೋಗ್ಯಅಧಿಕಾರಿ ಚೇತನ್ ಕುಮಾರ್, ಪರಿಸರ ಅಭಿಯಂತರೆ ಲೋಕೇಶ್ವರಿ, ಸಿಬ್ಬಂದಿಗಳಾದ ಮಹೇಂದ್ರ, ಮುಖಂಡ ಶ್ರೀಕಂಠ ಹಾಗೂ ಇನ್ನಿತರರು ಇರಿದ್ದರು.