NEWSಕೃಷಿ

ಕೇಂದ್ರ,  ಪಂಜಾಬ್ ಸರ್ಕಾರಗಳ ರೈತ ವಿರೋಧಿ ದೋರಣೆ ಖಂಡಿಸಿ ಪ್ರತಿಭಟನೆ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಕೇಂದ್ರ ಹಾಗೂ ಪಂಜಾಬ್ ಸರ್ಕಾರಗಳ ರೈತ ವಿರೋಧಿ ದೋರಣೆ ಖಂಡಿಸಿ ಮೈಸೂರ ನ್ಯಾಯಾಲಯದ ಆರವರಣದಲ್ಲಿ ಇಂದು ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಹಾಗೂ ಪಂಜಾಬ್ ಸರ್ಕಾರಗಳು ದಬ್ಬಾಳಿಕೆ, ದೌರ್ಜನ್ಯ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘ ಭಾನುವಾರ ಸಂಜೆ ಮೈಸೂರಿನ ನ್ಯಾಯಾಲಯದ ಮುಂದೆ ಇರುವ ಗಾಂಧಿ ಪ್ರತಿಮೆ ಮುಂದೆ ಮೇಣದ ಹಿಡಿದು ಪ್ರತಿಭಟನೆ ನಡೆಸಿದರು.

ಈ ವೇಳೆ ಪಂಜಾಬಿನ ಕನೋರಿ ಬಾರ್ಡರ್‌ನಲ್ಲಿ ಒಂದು ವರ್ಷದಿಂದಲೂ ನ್ಯಾಯಯುತ ಹಕ್ಕುಗಳಾದ ಎಂಎಸ್ಪಿ ಕಾಯ್ದೆ ಗ್ಯಾರಂಟಿ ಕಾನೂನು ಜಾರಿ, ದೇಶದ ರೈತರ ಸಂಪೂರ್ಣ ಸಾಲ ಮನ್ನಾ, 60 ವರ್ಷ ತುಂಬಿದ ರೈತರಿಗೆ ಪಿಂಚಣಿ) ಎಂಬಿತ್ಯಾದಿ ಕಾನೂನು ಜಾರಿ ಮಾಡುವಂತೆ ಒತ್ತಾಯಿಸಿ ಚಳವಳಿ ನಡೆಸಲಾಗುತ್ತಿದೆ.

ಆದರೆ ಈ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ನಮ್ಮ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆಯ ರಾಷ್ಟ್ರೀಯ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲ ಹಾಗೂ ಮತ್ತಿತರ  ನೂರಾರು ರೈತ ಮುಖಂಡರನ್ನು ಬಂಧಿಸಿ ಚಳವಳಿಯನ್ನು ವಿಫಲ ಗೊಳಿಸಲು ಯತ್ನಿಸುತ್ತಿರುವ ಪಂಜಾಬ್ ಹಾಗೂ ಕೇಂದ್ರ ಸರ್ಕಾರದ ಧೋರಣೆಯನ್ನು ವಿರೋಧಿಸುತ್ತೇವೆ ಎಂದು ಕಿಡಿಕಾರಿದರು.

ಇನ್ನು ಕೂಡಲೇ ಬಂಧನ ಮಾಡಿರುವ ರೈತರು ಹಾಗೂ ರೈತ ಮುಖಂಡರನ್ನು ಬಿಡುಗಡೆ ಮಾಡಬೇಕು ಹಾಗೂ ಹೋರಾಟ ಮಾಡುತ್ತಿರುವ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿರು.

ಕೇಂದ್ರ ಹಾಗೂ ಪಂಜಾಬ್ ಸರ್ಕಾರಕ್ಕೆ ಎಚ್ಚರಿಸುತ್ತೇವೆ ಕಡೆಗಣಿಸಿದರೆ ದಕ್ಷಿಣ ಭಾರತದ ರೈತ ಸಂಘಟನೆಗಳು ಪಂಜಾಬ್ – ಹರಿಯಾಣದ ರೈತರ ಜತೆಗೂಡಿ ಪಂಜಾಬ್ ಸರ್ಕಾರದ ವಿರುದ್ಧ ದೆಹಲಿಯಲ್ಲಿ ಉಗ್ರ ಹೋರಾಟ  ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಜಿಲ್ಲಾ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್, ಜಿಲ್ಲಾ ಉಪಾಧ್ಯಕ್ಷ ಮಾರ್ಬಳ್ಳಿ ನೀಲಕಂಠಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ  ಪರಶಿವಮೂರ್ತಿ, ಕುರುಬೂರು ಸಿದ್ದೇಶ್, ಪ್ರದೀಪ್, ಬನ್ನೂರು ಸೂರಿ, ಚುಂಚರಾಯನ ಹುಂಡಿ ಗಿರೀಶ್, ಹೆಗ್ಗೂರು ರಂಗರಾಜು, ವಾಜ್ ಮಂಗಲ ಮಹದೇವು, ನಾಗೇಂದ್ರ,ದೊಡ್ಡ ಕಾಟೂರ್ ನಾಗೇಶ್ ಮಾರ್ಬಳ್ಳಿ ಬಸವರಾಜು, ವಿ ನಾಗೇಂದ್ರ ಮುಂತಾದವರು ಭಾಗವಹಿಸಿದ್ದರು.

Deva
the authorDeva

Leave a Reply

error: Content is protected !!