ಬೆಂಗಳೂರು: ಗ್ರಾಮಾಂತರ ಜಿಲ್ಲೆಯ 101 ಗ್ರಾಮ ಪಂಚಾಯಿತಿಗಳಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಕಲಂ 199ರಡಿ ವೈಜ್ಞಾನಿಕ ಮತ್ತು ಏಕರೂಪ ಆಸ್ತಿ ತೆರಿಗೆ ಸಂಗ್ರಹಕ್ಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಜಿಪಂ ಸಿಇಒ ಡಾ.ಕೆ.ಎನ್.ಅನುರಾಧ ತಿಳಿಸಿದ್ದಾರೆ.
ಎಲ್ಲಾ ಗ್ರಾಮ ಪಂಚಾಯಿತಿಗಳು ಗ್ರಾಮ ಪಂಚಾಯತಿ ತೆರಿಗೆ ವ್ಯಾಪ್ತಿಗೆ ಒಳಪಡುವ ಆಸ್ತಿಗಳಿಗೆ ಆಸ್ತಿ ತೆರಿಗೆಯನ್ನು ವಿಧಿಸುತ್ತವೆ. ಗ್ರಾಮ ಪಂಚಾಯಿತಿಗಳಲ್ಲಿ ವೈಜ್ಞಾನಿಕವಾಗಿ ಆಸ್ತಿ ತೆರಿಗೆ ಸಂಗ್ರಹ ಮಾಡಲು ಬಾಪೂಜಿ ಸೇವಾ ಕೇಂದ್ರ ಮತ್ತು ಪಂಚತಂತ್ರ 2.0 ತಂತ್ರಾಂಶದ ಮೂಲಕ ಸೇವೆಯನ್ನು ನೀಡಲಾಗುತ್ತಿದೆ ಎಂದರು.
ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಆಸ್ತಿಗಳ ವಿವರವನ್ನು ತಂತ್ರಾಂಶದಲ್ಲಿ ಅಳವಡಿಸಿಕೊಂಡು ಸರ್ಕಾರದ ಸುತ್ತೋಲೆಯಂತೆ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿರುವ ಆಸ್ತಿಗಳನ್ನು ಕೂಡ ನಿಯಾಮಾನುಸಾರ ತಂತ್ರಾಂಶದಲ್ಲಿ ಇಂಡೀಕರಿಸುತ್ತ ಕಂದಾಯ ವಸೂಲಾತಿ ಅಂದೋಲನಗಳನ್ನು ಆಯೋಜಿಸಿಕೊಂಡು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಳೆದ ಆರ್ಥಿಕ ವರ್ಷ 2023-24 ನೇ ಸಾಲಿನಲ್ಲಿ ಶೇ.75 ರಷ್ಟು ಕಂದಾಯ ವಸೂಲಾತಿಯಾಗಿದೆ ಎಂದು ತಿಳಿಸಿದ್ದಾರೆ.
ಇನ್ನು 2024-25ನೇ ಸಾಲಿನಲ್ಲಿ ಶೇ.88 ರಷ್ಟು ಕಂದಾಯ ವಸೂಲಾತಿಯಾಗಿದ್ದು ಮುಂದುವರಿದು ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ POS ಮಷೀನ್ ಬಳಸಿಕೊಂಡು ಪ್ರಸ್ತುತ 2025-26ನೇ ಸಾಲಿನಲ್ಲಿ 100% ಕಂದಾಯ ವಸೂಲಾತಿಯನ್ನು ಕೈಗೊಳ್ಳಲು ಕ್ರಮ ವಹಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಡಿಜಿಟಲ್ ಸೇವೆ: ಗ್ರಾಮ ಪಂಚಾಯಿತಿಯು ಆಧುನಿಕತೆ ಬೆಳೆದಂತೆಲ್ಲ ಆಸ್ತಿ ತೆರಿಗೆಯನ್ನು ಆನ್ ಲೈನ್ ಮೂಲಕ ಪಾವತಿಸುವ ಸೌಲಭ್ಯಗಳನ್ನು ಸಹನೀಡಲಾಗುತ್ತಿದ್ದು ಸಾರ್ವಜನಿಕರು ಕಂದಾಯವನ್ನು ತಾವು ಇರುವಲ್ಲಿಯೇ ತೆರಿಗೆಯನ್ನು ಪಾವತಿಸಬಹುದು ಇದರಿಂದ ಸಮಯ ಮತ್ತು ಪಾರದರ್ಶಕತೆ ಹಾಗೂ ತಮ್ಮ ಬಾಕಿ ಎಷ್ಟು ಇದೆ ಎಂದು ಆನ್ ಲೈನ್ ನಲ್ಲಿಯೇ ಪರಿಶೀಲನೆ ಮಾಡಿಕೊಂಡು ತೆರಿಗೆಯನ್ನು ಪಾವತಿಸಬಹುದು.
ಅಧಿಕೃತ ವೆಬ್ ಸೈಟ್ ಗೆ https://bsk.karnataka.gov.in ಗೆ ಭೇಟಿ ನೀಡಿ ಆನ್ ಲೈನ್ ಮೂಲಕ, ಪೋನ್ ಪೇ, ಗೂಗಲ್ ಪೇ ಮೂಲಕ ಅಥವಾ ಗ್ರಾಮ ಪಂಚಾಯಿತಿಯಲ್ಲಿ ಕಂದಾಯ ಪಾವತಿ ಮಾಡಬಹುದಾಗಿದೆ.
ಕಂದಾಯ ವಸೂಲಾತಿಗೆ ವಿಶೇಷ ಅಭಿಯಾನವು ಏಪ್ರಿಲ್ 01 ರಿಂದ ಜೂನ್ 30, 2025 ರವರಗೆ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ನಡೆಯುತ್ತಿದ್ದು ಇದರ ಸದುಪಯೋಗವನ್ನು ಗ್ರಾಮೀಣ ಭಾಗದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಮತ್ತು ತೆರಿಗೆಯನ್ನು ಪಾವತಿಸಿ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಿಇಒ ತಿಳಿಸಿದ್ದಾರೆ.
Related

You Might Also Like
NWKRTC: UPI ಮೂಲಕ ಹೆಚ್ಚು ಟಿಕೆಟ್ ವಿತರಿಸಿದ ನಿರ್ವಾಹಕರ ಅಭಿನಂದಿಸಿದ ಎಂಡಿ ಪ್ರಿಯಾಂಗಾ
ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ಗಳಲ್ಲಿ ಪ್ರಯಾಣಿಕರಿಗೆ UPI ಮೂಲಕ ಹೆಚ್ಚು ಟಿಕೆಟ್ ವಿತರಣೆ ಮಾಡಿದ ನಿರ್ವಾಹಕರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಪ್ರಶಂಸನಾ...
KKRTC ಅಧಿಕಾರಿ-ಸಿಬ್ಬಂದಿಗಳು ಕಚೇರಿಗೆ ಭೇಟಿ ನೀಡುವಾಗ ಈ ನಿಯಮ ಪಾಲಿಸಬೇಕು: ಸಂಸ್ಥೆಯ ಎಂಡಿ ಸುಶೀಲಾ ನಿರ್ದೇಶನ
ಕಲಬುರಗಿ: ನಿಗಮದ ಅಧಿಕಾರಿ-ಸಿಬ್ಬಂದಿಗಳು ವೈಯಕ್ತಿಕ ಕಾರ್ಯಗಳಿಗಾಗಿ ಕಚೇರಿಗೆ ಭೇಟಿ ನೀಡುವಾಗ ಈ ನಿಯಮಗಳನ್ನು ಪಾಲಿಸಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಸುಶೀಲಾ...
KSRTC ಬಡ ಸಾರಿಗೆ ನೌಕರರ ಮೇಲೆ ಎಸ್ಮಾ ಜಾರಿ ಸಲ್ಲ: ಸಾರಿಗೆ ಸಚಿವರು ಪರಿಶೀಲಿಸಿ- ಅಧಿವೇಶನದಲ್ಲಿ ಶಾಸಕರ ಆಗ್ರಹ
ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆಯಿಂದ ಕರ್ನಾಟಕ ರಾಜ್ಯ ಅತ್ಯವಶ್ಯಕ ಸೇವೆ ವಿಧೇಯಕವನ್ನು ಮಂಡಿಸುವ ಸಂದರ್ಭದಲ್ಲಿ ರಾಜ್ಯದ ಸಾರಿಗೆ ನೌಕರರ ಮೇಲೆ ಎಸ್ಮಾ ಕಾಯಿದೆಯನ್ನು ಜಾರಿ ಮಾಡುತ್ತಿರುವ ಬಗ್ಗೆ...
BMTC ಬಸ್ ಬಾಗಿಲಿಗೆ ಸಿಲುಕಿದ ಕೈ- ಬಿದ್ದು ಚಕ್ರಕ್ಕೆ ಸಿಲುಕಿ ಪ್ರಯಾಣಿಕ ಸಾವು
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಎಲೆಕ್ಟ್ರಿಕ್ ಬಸ್ ಚಕ್ರಕ್ಕೆ ಸಿಲುಕಿ ಪ್ರಯಾಣಿಕ ಮೃತಪಟ್ಟಿರುವ ಘಟನೆ ಇಂದು ಜಯನಗರದ 4ನೇ ಬ್ಲಾಕ್ನಲ್ಲಿ ನಡೆದಿದೆ. ಸಂಪಂಗಿ (64) ಮೃತಪಟ್ಟವರು....
ರೀಲ್ಸ್, ವಿಡಿಯೋ ಮಾಡುವ ವಕೀಲರಿಗೆ ಶಿಸ್ತು ಕ್ರಮದ ಎಚ್ಚರಿಕೆ ಕೊಟ್ಟ ವಕೀಲರ ಪರಿಷತ್
ಬೆಂಗಳೂರು: ವೃತ್ತಿನಿರತ ವಕೀಲರು ತಮ್ಮನ್ನು ತಾವೇ ಉನ್ನತೀಕರಿಸಿಕೊಳ್ಳುವಂತಹ ಪ್ರಚಾರದ ಯಾವುದೇ ರೀಲ್ಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ ಲೋಡ್ ಮಾಡಿದ್ದರೆ ಅಂತಹ ಆಕ್ಷೇಪಾರ್ಹ ರೀಲ್ಗಳು, ವಿಡಿಯೋಗಳನ್ನು...
KKRTC ಬಸ್ – ಟಿಪ್ಪರ್ ನಡುವೆ ಭೀಕರ ಅಪಘಾತ: ಕಂಡಕ್ಟರ್ ಸ್ಥಳದಲ್ಲೇ ಸಾವು, ಚಾಲಕ ಸೇರಿ ಹಲವರಿಗೆ ಗಾಯ
ಹೊಸಪೇಟೆ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ಹಾಗೂ ಟಿಪ್ಪರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಿರ್ವಾಹಕ ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆ ಚಿಲಕನಹಟ್ಟಿ (ಮರಿಯಮ್ಮನಹಳ್ಳಿ)...
KSRTC ನೌಕರರು ಮುಷ್ಕರ ನಡೆಸಿದರೆ ಕಠಿಣ ಕ್ರಮ: 2035ರವರೆಗೆ ಎಸ್ಮಾ ವಿಸ್ತರಣೆ – ಚರ್ಚೆ ಇಲ್ಲದೇ ಸದನದಲ್ಲಿ ವಿಧೇಯಕ ಅಂಗೀಕಾರ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ಮುಷ್ಕರ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳುವ ಎಸ್ಮಾ ಕಾಯ್ದೆ 10 ವರ್ಷಗಳ ಅವಧಿಗೆ ವಿಸ್ತರಣೆಯಾಗುವ ಅತ್ಯಾವಶ್ಯಕ...
ರೈತರ ಸಮಸ್ಯೆ ಬಗೆ ಹರಿಸಲು ಒತ್ತಾಯಿಸಿ ಡಿಸಿ ಕಚೇರಿ ಮುಂದೆ ರೈತ ಮುಖಂಡರ ಪ್ರತಿಭಟನೆ
ಮೈಸೂರು: ರೈತರ ಸಮಸ್ಯೆ ಬಗೆ ಹರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ , ರಾಜ್ಯ ಕಬ್ಬು ಬೆಳೆಗಾರರ ಸಂಘದ...
KSRTC ನೌಕರರ ಸಾಮಾನ್ಯ ಮರಣ ಪ್ರಕರಣಕ್ಕಿದ್ದ 10 ಲಕ್ಷ ರೂ. ಪರಿಹಾರ ಮೊತ್ತ 14 ಲಕ್ಷ ರೂ.ಗಳಿಗೆ ಏರಿಸಿ ಎಂಡಿ ಆದೇಶ
ಪರಿಷ್ಕರಿಸಿದ 14 ಲಕ್ಷ ರೂ. ಪರಿಹಾರ ಮೊತ್ತ ಸೆಪ್ಟೆಂಬರ್ 1-2025ರಿಂದ ಜಾರಿ ಬೆಂಗಳೂರು: 10 ಲಕ್ಷ ರೂ.ಗಳಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಕುಟುಂಬ...