ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ವೇತನ ಹೆಚ್ಚಳವಾಗಬೇಕು ಅದಾದ ಬಳಿಕ ಅರಿಯರ್ಸ್ ಕೊಡಬೇಕು ಎಂದರೆ ಹೋರಾಟ ಮಾಡುವುದು ನೌಕರರು. ಅದಕ್ಕೆ ಕರೆ ಕೊಡುವುದು ಮನ ಮರ್ಯಾದೆ ಇಲ್ಲದ ಕೆಲ ಸಂಘಟನೆಗಳ ಮುಂಖಡರು. ಈ ಮುಷ್ಕರಕ್ಕೆ ಬರುವ ನೌಕರರನ್ನು ಅಮಾನತು, ವಜಾ, ಪೊಲೀಸ್ ಕೇಸ್, ವರ್ಗಾವಣೆ ಹೀಗೆ ಶಿಕ್ಷೆ ಕೊಡುವವರು ಅಧಿಕಾರಿಗಳು.
ಅಂದರೆ ಅಧಿಕಾರಿಗಳಿಗೆ ಮಾತ್ರ ವೇತನ ಹೆಚ್ಚಳ ಬಳಿಕ ಆ ಹೆಚ್ಚಳದ ಅರಿಯರ್ಸ್ ಮಾತ್ರ ಬೇಕು. ಇನ್ನು ಇದಕ್ಕಾಗಿ ಹೋರಾಡಿದ ನೌಕರರನ್ನು ಈ ಅಧಿಕಾರಿಗಳೇ ತಮ್ಮ ಸರ್ಕಾರ ಅಥವಾ ಸಚಿವರ ಮುಂದೆ ಒಳ್ಳೆಯವರು ಎಂದು ತೋರಿಸಿಕೊಳ್ಳಲು ಹಲವು ನೌಕರರಿಗೆ ಶಿಕ್ಷೆ ನೀಡಿ ಅದನ್ನು ಸಾಧನೆ ಎಂಬಂತೆ ತೋರಿಸಿಕೊಳ್ಳುತ್ತಾರೆ. ಇವರ ಜತೆಗೆ ನಮ್ಮ ಹೋರಾಟದಿಂದಲೇ ವೇತನ ಹೆಚ್ಚಳವಾಯಿತು ಎಂದು ಹಾರ ತುರಾಯಿ ಹಾಕು ಸಂಘಟನೆಗಳ ಮುಖಂಡರು ಒಂದುಕಡೆ ಬೀಗುತ್ತಾರೆ.
ಇನ್ನು ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳನ್ನು ಈವರೆಗೂ ವೇತನ ಹೆಚ್ಚಳ ಸಂಬಂಧ ಈ ನಾಲಾಯಕ್ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ನೀಡಿ ಎಂದು ಕರೆಯುವುದಿಲ್ಲ. ಆದರೆ ನೌಕರರನ್ನು ಕಾರ್ಮಿಕರು ಎಂದು ಬಿಂಬಿಸಿ ಡಿಪೋ ಡಿಫೋಗಳಿಗೆ ಹೋಗಿ ಬೆಂಲಕ್ಕೆ ಒತ್ತಾಯಮಾಡುತ್ತಾರೆ. ಮುಷ್ಕರ ಮಾಡಿಸಿ ಅದು ಒಂದು ಹಂತ ತಲುಪಿದ ಬಳಿಕ ನೌಕರರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಈ ಮುಖಂಡರು ನಡೆದುಕೊಳ್ಳುತ್ತಾರೆ.
ಹೌದು! ಮುಷ್ಕರ ನಡೆದ ಬಳಿಕ ಕೆಲ ನೌಕರರ ವಿರುದ್ಧ ಆಗುತ್ತದೆಯಲ್ಲ ಅಮಾನತು, ವಜಾ, ವರ್ಗಾವಣೆ ಹಾಗೂ ಪೊಲೀಸ್ ಪ್ರಕರಣಗಳು. ಆ ಬಗ್ಗೆ ಹೋರಾಟ ಮಾಡಿದ್ದಾವೆಯೇ ಈ ಸಂಘಟನೆಗಳು. ಇಲ್ಲ ಪಾಪ ಮುಷ್ಕರಕ್ಕೆ ಬಂದ ನೂರಾರು ನೌಕರರು ಈ ಎಲ್ಲ ಪ್ರಕರಣಗಲ್ಲಿ ಸಿಲುಕಿ ಡ್ಯೂಟಿಯೂ ಇಲ್ಲದೆ ಮಾನಸಿಕ ಯಾತನೆ ಅನುಭವಿಸುತ್ತಾರೆ. ಈ ಹಿಂದೆ ನಡೆದ ಮುಷ್ಕರಗಳಲ್ಲೂ ಆಗಿರುವ ಈ ಪ್ರಕರಣಗಳಿಂದ ಈಗಲೂ ನೂರಾರು ನೌಕರರು ಕೋರ್ಟ್‌ಗೆ ಅಲೆಯುತ್ತಿದ್ದಾರೆ.
ಈ ಬಗ್ಗೆ ಯಾವುದೇ ಗಮನವಿಲ್ಲ ಈ ಸಂಘಟನೆಗಳ ಮುಖಂಡೆರೆನಿಸಿಕೊಂಡವರು ನೌಕರರನ್ನು ಮಾತ್ರ ಮುಷ್ಕರಕ್ಕೆ ಬನ್ನಿ ಹರಕೆಯ ಕುರಿ ಮಾಡಿ ಹೋಗುತ್ತಿರುವುದಕ್ಕೆ ಇವರಿಗೆ ನಾಚಿಕೆ ಆಗಬೇಕು. ಜತೆಗೆ ಅಧಿಕಾರಿಗಳು ಇಲ್ಲದ ಮುಷ್ಕರ ನೌಕರರಿಗೆ ಏಕೆ ಬೇಕು. ಈ ಮುಷ್ಕರದಿಂದ ನೌಕರರಿಗಷ್ಟೇ ಲಾಭವಾಗುತ್ತದೆ ಎಂದರೆ ಓಕೆ. ಆದರೆ ಇದರ ಲಾಭವನ್ನು ಹೆಚ್ಚಾಗಿ ಪಡೆದುಕೊಳ್ಳುವವರು ಅಧಿಕಾರಿಗಳು ಅಂದಮೇಲೆ ಅವರೆ ಬರದ ಮುಷ್ಕರ ನೌಕರರಿಗೆ ಬೇಕಾ?
ಇನ್ನು ಕೆಲ ಕಾರ್ಮಿಕ ಸಂಘಟನೆಗಳ ಮುಖಂಡರು ಹೇಳುತ್ತಾರೆ ಈವರೆಗೂ ಅಧಿಕಾರಿಗಳು ಮುಷ್ಕರಕ್ಕೆ ಬಂದಿಲ್ಲ ಎಂದು. ಆದರೆ ವೇತನ ಹೆಚ್ಚಳವಾದಾಗ ಹೆಚ್ಚಿಗೆ ಪಗಾರ ತೆಗೆದುಕೊಳ್ಳುವವರು ಯಾರು? ಅಧಿಕಾರಿಗಳು ತಾನೆ. ಅವರೇಕೆ ಮುಷ್ಕರಕ್ಕೆ ಬರೊದಿಲ್ಲ ಎನ್ನುತ್ತಾರೆ. ನೀವು ಹೋಗಿ ಅವರನ್ನು ಯಾವತ್ತಾದರೂ ನಿಮ್ಮ ವೇತನ ಹೆಚ್ಚಳಕ್ಕಾಗಿ ನಾವು ಮುಷ್ಕರ ಮಾಡಬೇಕು ಎಂದುಕೊಂಡಿದ್ದೇವೆ ಅದಕ್ಕೆ ನಿಮ್ಮ ಬೆಂಬಲ ಬೇಕು ಎಂದು ಕೇಳಿದ್ದೀರಾ? ಇಲ್ಲ ಅಂದಮೇಲೆ ಅಧಿಕಾರಿಗಳು ಹೇಗೆ ಮುಷ್ಕರಕ್ಕೆ ಬರುತ್ತಾರೆ ಹೇಳಿ?
ಈಗ ಅಧಿಕಾರಿಗಳು ಕೂಡ ವೇತನ ಹೆಚ್ಚಳ ಮಾಡಬೇಕು. ಅದೂ ಕೂಡ 7ನೇ ವೇತನ ಆಯೋಗದಂತೆ ವೇತನ ಕೊಡಿ ಎಂದು ಮನವಿ ಕೊಟ್ಟಿದ್ದಾರೆ. ಕಳೆದ 40 ವರ್ಷಗಳಿಂದ ಕೊಡದ ಅಧಿಕಾರಿಗಳು ಈ ಬಾರಿ ಕೊಟ್ಟಿದ್ದಾರೆ ಎಂದಮೇಲೆ ತಾವು ಅವರನ್ನು ಮುಷ್ಕರಕ್ಕೆ ಬೆಂಬಲ ನೀಡಿ ಎಂದು ಕರೆಯಬೇಕಿತ್ತಲ್ಲವೇ ಏಕೆ ಕರೆದಿಲ್ಲ.
ಏಕೆಂದರೆ ಅವರು ಮುಷ್ಕರಕ್ಕೆ ಬೆಂಬಲ ನೀಡಿದರೆ ನೌಕರರ ಅಮಾನತತು, ವಜಾ, ವರ್ಗಾವಣೆ ಹಾಗೂ ಪೊಲೀಸ್ ಪ್ರಕರಣ ದಾಖಲಿಸುವವರು ಯಾರು ಇರಲ್ಲ ಎಂದು ತಾನೆ ನೀವು ಅಧಿಕಾರಿಗಳ ಬಿಟ್ಟು ಬರಿ ನೌಕರರನ್ನು ಮಾತ್ರ ಮುಷ್ಕರಕ್ಕೆ ಬೆಂಬಲ ನೀಡಿ ಎಂದು ಕರೆಯುತ್ತಿರುವುದು.
ಈ ದೊಬ್ಬರಾಟವನ್ನು ಬಿಟ್ಟು ತಾವುಗಳ ನಿಜವಾಗಲು ನೌಕರರ ಪರ ಹೋರಾಟ ಮಾಡಬೇಕು ಎಂದುಕೊಂಡಿದ್ದರೆ ಅಧಿಕಾರಿಗಳನ್ನು ಜತೆಗೆ ಕರೆದುಕೊಂಡು ಮುಷ್ಕರ ಮಾಡಿ ಏಕೆಂದರೆ ಇಲ್ಲಿ ಅಧಿಕಾರಿಗಳು/ನೌಕರರು ಇಬ್ಬರಿಗೂ ವೇತನ ಹೆಚ್ಚಳವಾಗಬೇಕು ಬರಿ ನೌಕರರಿಗಷ್ಟೇ ವೇತನ ಹೆಚ್ಚಳವಾಗುವುದಿಲ್ಲ. ಹೀಗಾಗಿ ಮೊದಲು ನೌಕರರನ್ನು ಹರಕೆ ಕುರಿ ಮಾಡುವುದನ್ನು ಬಿಟ್ಟು ಅಧಿಕಾರಿಗಳು/ನೌಕರರು ಒಗ್ಗಟ್ಟಿನಿಂದ ಮುಷ್ಕರ ಮಾಡೋಣ ಬನ್ನಿ ಎಂದು ಸಂಘಟನೆಗಳ ಮುಖಂಡರು ಕರೆ ನೀಡಬೇಕು.
ಒಂದು ವೇಳೆ ಬರಿ ನೌಕರರಿಗಷ್ಟೇ ಮುಷ್ಕರಕ್ಕೆ ಬನ್ನಿ ಎಂದು ಕರೆಯುವ ಸಂಘಟನೆಗಳ ಪರವಾಗಿ ನೌಕರರು ಬೀದಿಗಿಳಿದರೆ ಮುಂದಿನ ದಿನಗಳಲ್ಲಿ ತಮ್ಮ ಕುಟುಂಬದವರು ಭಿಕ್ಷೆ ಬೇಡಲು ಬೀದಿಗೆ ಬರಬೇಕಾಗುತ್ತಿದೆ ಎಚ್ಚರ. ಈ ಬಗ್ಗೆ ಅರಿತು ಮುಂದಿನ ಹೆಜ್ಜೆಹಾಕಿ. ಈಗಾಗಲೇ 3-4 ದಶಕಗಳಿಂದಳು ನೌಕರರು ಮಷ್ಕರ ಮಾಡಿ ಬೀದಿಗೆ ಬಂದಿರುವ ಪ್ರಕರಣಗಳು ಇರುವುದನ್ನು ಕಾಣುತ್ತಿದ್ದೇವೆ. ಆದರೆ ಒಬ್ಬೇವೊಬ್ಬ ಅಧಿಕಾರಿ ವೇತನಕ್ಕಾಗಿ ಹೋರಾಡಿ ಕೆಲಸ ಕಳೆದುಕೊಂಡಿರುವ ನಿದರ್ಶನ ನಮ್ಮ ಮುಂದೆ ಇದೆಯೇ ಇಲ್ಲ. ಈ ಪುರುಷಾರ್ಥಕ್ಕಾಗಿ ನೌಕರರು ಮುಷ್ಕರ ಮಾಡಬೇಕಾ?
ಇದೆಲ್ಲವನ್ನು ಬಿಟ್ಟು ಈಗಾಗಲೇ ಅಧಿಕಾರಿಗಳು ಕೂಡ ವೇತನ ಹೆಚ್ಚಳಕ್ಕಾಗಿ ಮನವಿ ಮಾಡಿದ್ದು ಅವರು ಮತ್ತು ನೌಕರರ ನಿಜವಾದ ಸಂಘಟನೆಗಳು ಅಂದರೆ ಕಾರ್ಮಿಕರು ಎಂದು ಕರೆಯುವ ಈ ಕಾರ್ಮಿಕ ಪದ್ಧತಿಯ ಸಂಘಟನೆಗಳ ಬಿಟ್ಟು ಕರೆ ನೀಡುವ ಮುಷ್ಕರಕ್ಕೆ ಅದೂ ಅಧಿಕಾರಿಗಳು/ನೌಕರರು ಒಟ್ಟಿಗೆ ಮುಷ್ಕರ ಮಾಡುವವರಿಗೆ ನೌಕರರು ಬೆಂಬಲ ಕೊಟ್ಟರೆ ಈ ಅಮಾನತು, ವಾಜಾ, ವರ್ಗಾವಣೆ ಹಾಗೂ ಪೊಲೀಸ್ ಪ್ರಕರಣದಿಂದ ಮುಕ್ತರಾಗಿ ನಿಮ್ಮ ಸೌಲಭ್ಯಪಡೆದುಕೊಂಡು ನಿರಾಳರಾಗಿ ಡ್ಯೂಟಿ ಮಾಡುವಂತ ವಾತಾವರಣಕ್ಕೆ ಬೆಂಬಲ ನೀಡಬೇಕು ಎಂಬುವುದು ನಮ್ಮ ಕಳಕಳಿ ಎಂದು ಪ್ರಜ್ಞಾವಂತ ನೌಕರರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
Related

You Might Also Like
ಆ.5ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಅಂಗವಾಗಿ ಒಂದು ದಿನದ ಸಾಮೂಹಿಕ ಉಪವಾಸ ಸತ್ಯಾಗ್ರಹ ಆರಂಭ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ಬರಬೇಕಾಗದ 38 ತಿಂಗಳ ಹಿಂಬಾಕಿಯನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಹಾಗೂ 2024ರ ಜನವರಿ 1ರಿಂದ...
EPS Pensioners Protest: ಅಧಿವೇಶನ ಮುಗಿಯುವುದರೊಳಗೆ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ: ನಂಜುಂಡೇಗೌಡ ಎಚ್ಚರಿಕೆ
ಬೆಂಗಳೂರು: ಇದೇ ಜುಲೈ 21ರಿಂದ ಪಾರ್ಲಿಮೆಂಟ್ ಅಧಿವೇಶನ ಪ್ರಾರಂಭವಾಗಿದ್ದು, ಈ ಅಧಿವೇಶನ ಮುಗಿಯುವುದರೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದೆ ಹೊದಲ್ಲಿ ನಾವು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಬಿಎಂಟಿಸಿ...
ಸಮಾನ ವೇತನಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಧರಣಿ ಸತ್ಯಾಗ್ರಹ ಮಾಡುತ್ತಿದ್ದ ಸಾರಿಗೆ ನೌಕರರ ಮುಖಂಡರ ಬಂಧನ
ಸಾರಿಗೆ ನೌಕರರ ಹೋರಾಟ ಹತ್ತಿಕ್ಕಿದ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕೊಟ್ಟ ಭರವಸೆ ಈಡೇರಿಸುವ ಬದಲಿಗೆ ದೌರ್ಜನ್ಯ ಎಸಗಿದ ಕಾಂಗ್ರೆಸ್ ಸರ್ಕಾರ ಬೆಂಗಳೂರು: ಸಮಾನ ವೇತನ,...
ರೈತರು ಮರ ಕಟಾವು ಮಾಡುವ ನಿಯಮ ಸರಳಗೊಳಿಸಿ: ಅತ್ತಹಳ್ಳಿ ದೇವರಾಜ್ ಒತ್ತಾಯ
ಮೈಸೂರು: ರೈತರು ತಮ್ಮ ಜಮೀನಿನಲ್ಲಿ ಇರುವ ಮರ ಕಟಾವು ಮಾಡಿ ಸಾಗಾಣಿಕೆ ಮಾಡಿಕೊಳ್ಳುವ ನಿಯಮ ಸರಳೀಕರಣ ಗೊಳಿಸಿಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಕ್ರಮ ಕೈಗೊಳ್ಳಬೇಕು...
ವಿಜಯಪುರ: ಕಲುಷಿತ ನೀರು ಕುಡಿದ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥ: ಗ್ರಾಮದಲ್ಲೇ ಬೀಡುಬಿಟ್ಟ ವೈದ್ಯರ ತಂಡ
ವಿಜಯಪುರ: ಕಲುಷಿತ ನೀರು ಕುಡಿದ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಬ್ಯಾಲಿಹಾಳದಲ್ಲಿ ನಡೆದಿದೆ. ಗ್ರಾಮಕ್ಕೆ ಗ್ರಾಮ ಪಚಾಯಿತಿಯಿಂದ ಸರಬರಾಜು ಮಾಡಿರುವ ನೀರು...
KSRTC ನಾಲ್ಕೂ ನಿಗಮಗಳ ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ-ಧರಣಿ ಸತ್ಯಾಗ್ರಹ ಆರಂಭ
ಬೆಂಗಳೂರು: ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟ ಇಂದಿನಿಂದ (ಜು.29)...
ಅಂಗವಿಕಲರ ಬಸ್ಪಾಸ್ ಸೇರಿ ಎಲ್ಲ ಸರ್ಕಾರಿ ಸೌಲಭ್ಯಗಳಿಂದ ವಂಚಿತ ಅಂಗವಿಕಲ ಭೀಮಪ್ಪನಿಗೆ ಬೇಕಿದೆ ಸರ್ಕಾರದ ಆಸರೆ !
ತುಮಕೂರು: ಜಿಲ್ಲೆ ಹೊಸಹಳ್ಳಿ ಗ್ರಾಮ, ರೆಡ್ಡಿಹಳ್ಳಿ ಗ್ರಾಮಪಂಚಾಯಿತಿ ಮಿಡಿಗೆಸಿ, ಮಧುಗಿರಿ ತಾಲೂಕಿನ ಅಂಗವಿಕಲ ಭೀಮಪ್ಪನಿಗೆ ಸರ್ಕಾರಿ ಸೌಲಭ್ಯ ಸಿಗಬೇಕಿದೆ. ಪೋಲಿಯೋಗೆ ಒಳಗಾಗಿರುವ ಭೀಮಪ್ಪನಿಗೆ ಬೆರಳಿನ ಗುರುತು ಸಹ...
ನೀರಿನ ಒಳಹರಿವು ಹೆಚ್ಚಾದ ಹಿನ್ನೆಲೆ ತಲಕಾಡು ನಿಸರ್ಗ ಧಾಮಕ್ಕೆ ಬರುವ ಪ್ರವಾಸಿಗರಿಗೆ ನಿರ್ಬಂಧ
ಮೈಸೂರು: ನೀರಿನ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ, ಜಿಲ್ಲೆಯ ತಿ.ನರಸೀಪುರ ತಾಲೂಕಿನ ತಲಕಾಡು ನಿಸರ್ಗ ಧಾಮಕ್ಕೆ ಬರುವ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ತಾಲೂಕು ಆಡಳಿತ ಆದೇಶ ಹೊರಡಿಸಿದೆ. ಕೆಅರ್ಎಸ್,...
KSRTC: ನಾಳೆಯಿಂದ ಸಾರಿಗೆ ನೌಕರರ ಉಪವಾಸ-ಧರಣಿ ಸತ್ಯಾಗ್ರಹ: ಚಂದ್ರಶೇಖರ್
ಬೆಂಗಳೂರು: ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟ ನಾಳೆಯಿಂದ (ಜು.29)...