
ಬೆಂಗಳೂರು: ಬೆಂಗಳೂರಿಗರು ವಾಹನ ನಿಲುಗಡೆ ಸ್ಥಳವನ್ನು ರಚಿಸಲು ಪ್ರೋತ್ಸಾಹಿಸುವ ಉದ್ದೇಶದಿಂದ ಬಿಬಿಎಂಪಿಯು ವಾಹನ ನಿಲ್ದಾಣ ಪ್ರದೇಶಕ್ಕೆ ಆಸ್ತಿ ತೆರಿಗೆ ದರಗಳನ್ನು (ಘಟಕ ಪ್ರದೇಶದ ಮೌಲ್ಯ-Unit Area Value) ಕಡಿಮೆ ಮಾಡಲು ಮತ್ತು ಪ್ರಮಾಣ ಬದ್ಧೀಕರಣಗೊಳಿಸಲು ನಿರ್ಧರಿಸಿದೆ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ನಾಗರಿಕರು ಹಲವು ದಶಕಗಳಿಂದ ವಾಹನ ನಿಲ್ದಾಣದ ಬಳಕೆಗಾಗಿ ಮೀಸಲಿಟ್ಟ ಪ್ರದೇಶದ ಮೇಲೆ ಆಸ್ತಿ ತೆರಿಗೆಯನ್ನು ಪಾವತಿಸುತ್ತಿದ್ದಾರೆ. ಇದು ಹೊಸ ಆಸ್ತಿ ತೆರಿಗೆಯಲ್ಲ. ವಾಸ್ತವವಾಗಿ, ಪ್ರಸ್ತುತ ಕರಡು ಅಧಿಸೂಚನೆಯಲ್ಲಿ ವಾಹನ ನಿಲ್ದಾಣದ ದರಗಳನ್ನು ಕಡಿಮೆ ಮಾಡುವ, ಪ್ರಮಾಣ ಬದ್ಧೀಕರಣಗೊಳಿಸುವ ಮತ್ತು ತರ್ಕಬದ್ಧಗೊಳಿಸುವ ಗುರಿಯನ್ನು ಹೊಂದಿತ್ತು. ವಾಸ್ತವವಾಗಿ, ಘಟಕ ಪ್ರದೇಶ ಮೌಲ್ಯ ದರಗಳಲ್ಲಿನ ಕಡಿತದಿಂದಾಗಿ ಬಿಬಿಎಂಪಿಯು ವಾಹನ ನಿಲ್ದಾಣದಿಂದಾಗಿ ಆಸ್ತಿ ತೆರಿಗೆ ಆದಾಯವನ್ನು ಕಳೆದುಕೊಳ್ಳುತ್ತಿದೆ ಎಂದರು.
ಮಾಧ್ಯಮದಲ್ಲಿ ಕೆಲವರು ವಾಹನ ನಿಲ್ದಾಣದ ದರಗಳಲ್ಲಿ ಕಡಿತ ಮಾಡಿರುವ ಬಗ್ಗೆ ಅರ್ಥ ಮಾಡಿಕೊಳ್ಳದೇ ತಪ್ಪಾಗಿ ವರದಿ ಮಾಡುತ್ತಿರುವುದರಿಂದ ಹೊಸ ವಾಹನ ನಿಲ್ದಾಣದ ತೆರಿಗೆಯನ್ನು ಪರಿಚಯಿಸಲಾಗಿದೆ ಎಂಬ ತಪ್ಪು ಅಭಿಪ್ರಾಯವನ್ನು ಸೃಷ್ಟಿಸುತ್ತಿದ್ದಾರೆ.
ಆದರೆ, 1. 2008 ರಿಂದ ಇಲ್ಲಿಯವರೆಗೆ ಆಸ್ತಿಯ ಆಸ್ತಿ ತೆರಿಗೆ ದರದ (ಘಟಕ ಪ್ರದೇಶದ ಮೌಲ್ಯ – UAV) ಶೇ. 50 ರಷ್ಟಿನ UAV ದರವನ್ನು ಆಸ್ತಿಯಲ್ಲಿನ ವಾಹನ ನಿಲ್ದಾಣ ಪ್ರದೇಶಕ್ಕೆ ವಿಧಿಸಲಾಗುತ್ತಿದೆ.
2. ಆದ್ದರಿಂದ, ವಾಹನ ನಿಲ್ದಾಣದ ಪ್ರದೇಶಗಳಿಗೆ ಆಸ್ತಿ ತೆರಿಗೆ ದರ (ಯುಎವಿ) ವಾಣಿಜ್ಯ ಆಸ್ತಿಗಳಿಗೆ ಅತ್ಯಧಿಕ ಪ್ರತಿ ಚದರ ಅಡಿಗೆ ರೂ. 12.50 ರಷ್ಟಿದ್ದು ವಾಹನ ನಿಲ್ದಾಣ ಪ್ರದೇಶಗಳಿಗೆ ಸರಾಸರಿ ಆಸ್ತಿ ತೆರಿಗೆ ದರ (ಯುಎವಿ) ವಾಣಿಜ್ಯಕ್ಕೆ ಪ್ರತಿ ಚದರ ಅಡಿಗೆ ರೂ.7 ಮತ್ತು ವಸತಿ ಆಸ್ತಿಗಳಿಗೆ ರೂ. 2.1 ಆಗಿರುತ್ತದೆ.
3. ಸಾಮೂಹಿಕ ವಾಹನ ನಿಲ್ದಾಣದ ಪ್ರದೇಶಗಳನ್ನು ರಚಿಸಲು ಉತ್ತೇಜಿಸುವ ಮತ್ತು ಸಾಮಾನ್ಯವಾಗಿ ಪಾರ್ಕಿಂಗ್ ಸ್ಥಳಗಳಿಗೆ ಘಟಕ ಪ್ರದೇಶದ ಮೌಲ್ಯ ದರಗಳನ್ನು ಕಡಿಮೆ ಮಾಡಲು, ತರ್ಕಬದ್ಧಗೊಳಿಸಲು ಮತ್ತು ಪ್ರಮಾಣಬದ್ಧೀಕರಿಸಲು, ವಾಣಿಜ್ಯ/ವಸತಿಯೇತರ ಪ್ರದೇಶಗಳಿಗೆ ಪ್ರತಿ ಚದರ ಅಡಿಗೆ ರೂ. 3 ಮತ್ತು ವಸತಿಗೆ ರೂ. 2ಕ್ಕೆ ಪ್ರಸ್ತಾವನೆಯನ್ನು ಮಾಡಲಾಗುತ್ತಿದೆ.
4. ಪ್ರಸ್ತಾವನೆಯನ್ನು ಕರಡು ಎಂದು ಅಧಿಸೂಚಿಸಲಾಗಿದೆ ಮತ್ತು ಇನ್ನೂ ಜಾರಿಗೆ ಬಂದಿಲ್ಲ. ನಾಗರಿಕರ ಪ್ರತಿಕ್ರಿಯೆಯ ಪ್ರಕಾರ, ವಸತಿ ಆಸ್ತಿಗಳ ವಾಹನ ನಿಲ್ದಾಣದ ತೆರಿಗೆಯನ್ನು ಸರ್ಕಾರವು ಮತ್ತಷ್ಟು ಕಡಿತಗೊಳಿಸಲು ಪರಿಶೀಲಿಸುತ್ತದೆ.
5. ಬಿಬಿಎಂಪಿಯು, ಈಗಾಗಲೇ ಅಧಿಸೂಚಿಸಲಾದ ಕರಡು UAV ದರಗಳ ಅಡಿಯಲ್ಲಿಯೂ ಸಹ, ಕಳೆದ ವರ್ಷ (2024-25) ವಾಹನ ನಿಲ್ದಾಣದ ಪ್ರದೇಶಗಳಿಂದ ಸಂಗ್ರಹಿಸಲಾದ 211 ಕೋಟಿ ರೂ. ಆಸ್ತಿ ತೆರಿಗೆಯಲ್ಲಿ ಸುಮಾರು 40 ಕೋಟಿ ರೂ. ಗಳನ್ನು ಕಳೆದುಕೊಳ್ಳುವುದು. ಆದುದರಿಂದ ಬಿಬಿಎಂಪಿಯು ವಾಹನ ನಿಲ್ದಾಣದ ತೆರಿಗೆಯನ್ನು ಕಡಿಮೆ ಮಾಡಲು ಮತ್ತು ತರ್ಕಬದ್ಧಗೊಳಿಸುವ ಗುರಿಯನ್ನು ಹೊಂದಿದೆ.
ವಾಹನ ನಿಲ್ದಾಣದ ಪ್ರದೇಶಗಳಿಗೆ ಸಂಬಂಧಿಸಿದಂತೆ ಪ್ರತಿಯೊಬ್ಬರ ಆಸ್ತಿ ತೆರಿಗೆ ಹೊರೆಯನ್ನು ಕಡಿಮೆ ಮಾಡುವುದು ಪ್ರಮುಖ ಉದ್ದೇಶವಾಗಿರುವುದರಿಂದ, ದಯವಿಟ್ಟು ಬಿಬಿಎಂಪಿಯ ಪ್ರಸ್ತಾವನೆಯಂತೆ ಕಡಿತಗೊಳಿಸುತ್ತಿರುವ ಲಾಭವನ್ನು ಪಡೆದುಕೊಳ್ಳಿ ಮತ್ತು ಸುಳ್ಳು ವದಂತಿಗಳು ಮತ್ತು ತಪ್ಪು ಮಾಹಿತಿಗೆ ಕಿವಿಗೊಡಬೇಡಿ.