ಬೆಂಗಳೂರು: ಮಾರ್ಚ್ 2023ರ ಅಂತ್ಯದ ಅಂತರ್ಜಲ ಮೌಲೀಕರಣದ ವರದಿಯ ಪ್ರಕಾರ ಗ್ರಾಮಾಂತರ ಜಿಲ್ಲೆಯಲ್ಲಿರುವ ನಾಲ್ಕು ತಾಲೂಕುಗಳನ್ನು ಅಂತರ್ಜಲ ಅತಿ ಬಳಕೆ ತಾಲೂಕುಗಳೆಂದು ವರ್ಗೀಕರಿಸಲಾಗಿದ್ದು ಜಿಲ್ಲೆಯಲ್ಲಿ ಪ್ರಸ್ತುತ ಇರುವ ಹಾಗೂ ಹೊಸದಾಗಿ ಪ್ರಾರಂಭಿಸುವ ಕೈಗಾರಿಕೆ, ವಾಣಿಜ್ಯ, ಗಣಿಗಾರಿಕೆ, ಮನೋರಂಜನೆ ಉದ್ದೇಶಕ್ಕಾಗಿ ಅಂತರ್ಜಲ ಬಳಸುವವರು ಕಡ್ಡಾಯವಾಗಿ ಅಂತರ್ಜಲ ಪ್ರಾಧಿಕಾರದಿಂದ ನಿರಾಕ್ಷೇಪಣಾ (NOC) ಪತ್ರ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ತಿಳಿಸಿದ್ದಾರೆ.
ಪ್ರಸ್ತುತ ಬೇಸಿಗೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಧಿಕ ಉಷ್ಣಾಂಶ ದಾಖಲಾಗುತ್ತಿದ್ದು ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಇದರಿಂದ ಕುಡಿಯುವ ನೀರು, ಕೃಷಿ ಕಾರ್ಯ, ದಿನ ಬಳಕೆಯ ನೀರಿನ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಈಗಾಗಲೇ ಹೆಚ್ಚಿನ ಕೊಳವೆ ಬಾವಿ, ಕೆರೆ, ಜಲಾಶಯಗಳು ಬತ್ತಿ ಹೋಗಿದ್ದು ಉಳಿದ ನೀರಿನ ಸಂರಕ್ಷಣೆ ಆಗಬೇಕಿದೆ.
ಆದುದರಿಂದ ಕೈಗಾರಿಕೆ, ವಾಣಿಜ್ಯ, ಗಣಿಗಾರಿಕೆ ಮನೋರಂಜನೆ ಉದ್ದೇಶಕ್ಕಾಗಿ ಅಂತರ್ಜಲ ಬಳಸುವವರು ಬಿದ್ದಂತಹ ಮಳೆ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಕಡ್ಡಾಯವಾಗಿ ಅಂತರ್ಜಲ ಮರುಪೂರಣ ರಚನೆಗಳನ್ನು ನಿರ್ಮಿಸಿ ಅಂತರ್ಜಲ ಸಂರಕ್ಷಣೆ ಮಾಡಲು ಕ್ರಮ ಕೈಗೊಳ್ಳಬೇಕು. ಮತ್ತೆ ಮಳೆ ಆರಂಭವಾಗುವವರೆಗೂ ನೀರನ್ನು ಮಿತವಾಗಿ ಬಳಸಿ ಅಂತರ್ಜಲ ವ್ಯರ್ಥವಾಗಿ ಪೋಲ್ ಆಗದಂತೆ ಅಗತ್ಯಕ್ಕೆ ತಕ್ಕಂತೆ ಸಾರ್ವಜನಿಕರು ಬಳಕೆ ಮಾಡಬೇಕು.
ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) ಅಧಿನಿಯಮ 2011 ಮತ್ತು ನಿಯಮಾವಳಿ 2012ರ ಅನುಸಾರ ಕೈಗಾರಿಕೆ, ವಾಣಿಜ್ಯ, ಗಣಿಗಾರಿಕೆ, ಮನೋರಂಜನೆ ಮತ್ತು ಇತರೆ ಉದ್ದೇಶಕ್ಕಾಗಿ ಕೊಳವೆಬಾವಿ ಕೊರೆಯಲು ಮತ್ತು ಕೊರೆದ ಕೊಳವೆಬಾವಿಗಳಿಂದ ಅಂತರ್ಜಲ ಬಳಸಲು ಅಂತರ್ಜಲ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು.
ಕೊಳವೆಬಾವಿ ಕೊರೆಯುವ ಮಾಲೀಕರು ಕಡ್ಡಾಯವಾಗಿ ತಾವು ಹೊಂದಿದ ರಿಗ್ ಯಂತ್ರಗಳನ್ನು ಕರ್ನಾಟಕ ಅಂತರ್ಜಲ ಪ್ರಾಧಿಕಾರದಲ್ಲಿ ನೋಂದಾಯಿಸಿ ‘ನಮೂನೆ-7ಎ’ ಪಡೆದು ಕೊಳವೆಬಾವಿ ಕೊರೆಯಬೇಕು. ಕೊರೆದ ಕೊಳವೆಬಾವಿ ವಿಫಲವಾದರೆ ಸಂಬಂಧಪಟ್ಟ ಜಮೀನು ಮಾಲೀಕರು ಹಾಗೂ ರಿಗ್ ಮಾಲೀಕರು ವಿಫಲ ತೆರೆದ ಕೊಳವೆಬಾವಿಯನ್ನು ಸುರಕ್ಷಿತವಾಗಿ ಮುಚ್ಚಲು ಕ್ರಮಕೈಗೊಳ್ಳಬೇಕು. ಇದರಿಂದ ತೆರೆದ ವಿಫಲ ಕೊಳವೆಬಾವಿಗಳಿಗೆ ಚಿಕ್ಕ ಮಕ್ಕಳು ಬೀಳುವ ಸಂಭವ ಅಥವಾ ಇನ್ನಿತರ ಅವಘಡಗಳನ್ನು ತಪ್ಪಿಸಬಹುದು. ಇದನ್ನು ಎಲ್ಲರೂ ಗಂಭಿರವಾಗಿ ಪರಿಗಣಿಸತಕ್ಕದ್ದು.
ಕೊಳವೆಬಾವಿ ಕೊರೆಯುವ ಮುನ್ನ ಸಂಬಂಧಪಟ್ಟ ಜಮೀನು ಮಾಲೀಕರು ಕಡ್ಡಾಯವಾಗಿ ಸ್ಥಳೀಯ ಗ್ರಾಮಪಂಚಾಯತ್/ಪಟ್ಟಣ ಪಂಚಾಯತ್/ನಗರಸಭೆ/ಪುರಸಭೆಗೆ ತಿಳಿಸಿ ನಿರಾಕ್ಷೇಪಣಾ ಪತ್ರ ಪಡೆದು ನಂತರ ಜಿಲ್ಲಾ ಅಂತರ್ಜಲ ಕಛೇರಿಗೆ ಅರ್ಜಿ ಸಲ್ಲಿಸಿ ಕೊಳವೆಬಾವಿ ಕೊರೆಯಲು ನಿಯಮಾನುಸಾರ ಅನುಮತಿ ಪಡೆಯಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂತರ್ಜಲ ಕಚೇರಿ, ಅಂತರ್ಜಲ ನಿರ್ದೇಶನಾಲಯ ಜಿಲ್ಲಾಡಳಿತ ಭವನ, ಬೀರಸಂದ್ರ, ದೇವನಹಳ್ಳಿ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಕಚೇರಿ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
Related

You Might Also Like
ಕರ್ತವ್ಯ ಲೋಪವೆಸಗಿದ ಮೂವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ
ಬೆಂಗಳೂರು: ಬಿಬಿಎಂಪಿ ಪಶ್ಚಿಮ ವಲಯ ಮಹಾಲಕ್ಷ್ಮಿಪುರ ವಿಭಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಸಿಬ್ಬಂದಿಯನ್ನು ಕರ್ತವ್ಯ ಲೋಪವೆಸಗಿರುವ ಕಾರಣ ಕರ್ತವ್ಯದಿಂದ ಬಿಡುಗಡೆಗೊಳಿ ಪಶ್ಚಿಮ ವಲಯ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್...
ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಇಲ್ಲ: ಜಿಲ್ಲಾಧಿಕಾರಿ ಬಸವರಾಜು
10,165 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯ ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ 10.165 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯ ಇದ್ದು, ಬೇಡಿಕೆಗಿಂತ ಹೆಚ್ಚಿನ ರಸಗೊಬ್ಬರ ದಾಸ್ತಾನು ಇದೆ ಹಾಗಾಗಿ...
ಆ.5ರಿಂದ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಭಾಗವಹಿಸುವ ನೌಕರರ ವಿರುದ್ಧ ಕ್ರಮ: KSRTC ಎಂಡಿ ಅಕ್ರಮ್ ಪಾಷ ಆದೇಶ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆ.5ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹೂಡಲು ತೀರ್ಮಾನಿಸಿರುವುದರಿಂದ ನೌಕರರು...
ಆ.5ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆ ನಾಳೆ ಖಾಸಗಿ ಬಸ್ ಮಾಲೀಕರ ಸಭೆ ಕರೆದ ಸಾರಿಗೆ ಆಯುಕ್ತರು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರು ಆ.5ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಾರಿಗೆ ಇಲಾಖೆ ಆಯುಕ್ತರ...
ಮೊಂಡುತನ ಬಿಟ್ಟು ಸಾರಿಗೆ ನೌಕರರಿಗೆ ಕೊಡಬೇಕಿರುವುದ ಕೊಡಿ: ಅಧಿಕಾರವಿದೆ ಎಂಬ ದರ್ಪ ಬಿಡಿ ಸಿದ್ದುಜೀ- ಇದು ಶಾಶ್ವತವಲ್ಲ!
ಸಿಎಂ ಸಿದ್ದರಾಮಯ್ಯ ಸಾಹೇಬರೆ ನೀವು ಈಗ ವಕೀಲರಲ್ಲ ಸರ್ಕಾರದ ಸಂಬಳ ಪಡೆಯುವವರಲ್ಲಿ ನೀವು ಒಬ್ಬರು ಈಗ ನಿಮಗೆ ವಕೀಲ ವೃತ್ತಿ ಮಾಡುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂಬುದನ್ನು ಮರೆತಿರ...
ಆ.5ರಿಂದ ಸಾರಿಗೆ ನೌಕರರು ಹಮ್ಮಿಕೊಂಡಿರುವ ಮುಷ್ಕರಕ್ಕೆ ಬಿಜೆಪಿ ನೈತಿಕ ಬೆಂಬಲ ನೀಡಲಿದೆ: ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ನ್ಯಾಯಯುತ ಬೇಡಿಕೆಯ ಹೋರಾಟಕ್ಕೆ ಬಿಜೆಪಿ ನೈತಿಕ ಬೆಂಬಲ ನೀಡಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ...
KSRTC ನಾಲ್ಕೂ ನಿಗಮಗಳ ನೌಕರರ ವೇತನ ಪರಿಷ್ಕರಣೆ 2027ರ ನಂತರ ಮಾಡಲು ಮಾತ್ರ ಸಾಧ್ಯ: ಪ್ರತಿಪಾದಿಸುತ್ತಿರುವ ಸಾರಿಗೆ ಇಲಾಖೆ
ಬೆಂಗಳೂರು: ನಾಲ್ಕೂ ಸಾರಿಗೆ ನಿಗಮಗಳ ಅಧಿಕಾರಿಗಳು/ನೌಕರರ ವೇತನ ಪರಿಷ್ಕರಣೆ 2023ರ ಮಾರ್ಚ್ನಲ್ಲಿ ಶೇ.15ರಷ್ಟು ಹೆಚ್ಚಳ ಮಾಡಿರುವುದರಿಂದ ಮುಂದಿನ ಪರಿಷ್ಕರಣೆಯನ್ನು 2027ರ ನಂತರ ಮಾಡಲು ಮಾತ್ರ ಸಾಧ್ಯ ಎಂದು...
ಪ್ರಣವ್ ಮೊಹಾಂತಿ ಅವರ ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ಸರ್ಕಾರ ತೀರ್ಮಾನಿಸಿಲ್ಲ: ಗೃಹ ಸಚಿವ ಡಾ. ಜಿ.ಪರಮೇಶ್ವರ ಸ್ಪಷ್ಟನೆ
ಬೆಂಗಳೂರು: ಕೇಂದ್ರ ಸರ್ಕಾರದ ಡೆಪ್ಯೂಟೇಷನ್ ಪಟ್ಟಿಯಲ್ಲಿ ಎಸ್ಐಟಿ ಮುಖ್ಯಸ್ಥರಾಗಿರುವ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ಅವರ ಹೆಸರಿದ್ದು, ಅವರನ್ನು ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ರಾಜ್ಯ ಸರ್ಕಾರ...
ಅತ್ತ ದರಿ ಇತ್ತ ಪುಲಿ ಎತ್ತ ಹೋಗಲಿ ಎಂಬ ಸ್ಥಿತಿಯಲ್ಲಿ ಸಾರಿಗೆ ನೌಕರರು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಮುಷ್ಕರಕ್ಕೆ ಹೋಗಲು ಬಹುತೇಕ ನೌಕರರು ಸಿದ್ಧರಿದ್ದಾರೆ. ಆದರೆ, ನಾವು ಡ್ಯೂಟಿ...