ಬೆಂಗಳೂರು: ಏಷ್ಯನ್ ಮೆಡಲಿಸ್ಟ್ ಬಿಂದುರಾಣಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯವೆಸಗಿರುವ ಆರೋಪ ಕೇಳಿಬಂದಿದೆ.
ಇಂದು ಕಂಠೀರವ ಸ್ಟೇಡಿಯಂನಲ್ಲಿ ಸೀನಿಯರ್ ಕೋಚ್ ಯತೀಶ್ ಎಂಬುವವರ ಪತ್ನಿ ಅವಾಚ್ಯವಾಗಿ ನಿಂದಿಸಿ ಬಿಂದುರಾಣಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕಂಠೀರವ ಸ್ಟೇಡಿಯಂನಲ್ಲಿಂದು ಟೆಡ್ ಎಕ್ಸ್ ಇನ್ಸ್ ಫಿರೇಷನಲ್ ಶೋ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಶೋನಲ್ಲಿ ಬಾಲಿವುಡ್ ನಟ ಅಮೀರ್ ಖಾನ್, ವಿರಾಟ್ ಕೊಹ್ಲಿ ಸೇರಿದಂತೆ ದೊಡ್ಡ ದೊಡ್ಡ ಸೆಲಬ್ರೆಟಿಗಳು ಭಾಗಿಯಾಗಿದ್ರು. ಜತೆಗೆ ಬಿಂದು ರಾಣಿಗೂ ಸಹ ಭಾಗಿಯಾಗುವ ಅವಕಾಶ ಸಿಕ್ಕಿತ್ತು.
ಆದರೆ ಟೆಡ್ಎಕ್ಸ್ ಇನ್ಸ್ ಫಿರೇಷನಲ್ ಕಾರ್ಯಕ್ರಮಕ್ಕೆ ಭಾಗಿಯಾಗಿರುವ ಹಿನ್ನೆಲೆ ಬಿಂದುರಾಣಿ ಮೇಲೆ ನಿಂದನೆ ಜೊತೆಗೆ ಹಲ್ಲೆ ನಡೆದಿದೆ. ಕಾರ್ಯಕ್ರಮದಲ್ಲಿ ತಪ್ಪು ಮಾಹಿತಿ ಕೊಟ್ಟು ಅವಕಾಶ ಗಿಟ್ಟಿಸಿರೋದಾಗಿ ನಿಂದಿಸಿ ಸೀನಿಯರ್ ಕೋಚ್ ಯತೀಶ್ ಪತ್ನಿ ಹಲ್ಲೆ ಮಾಡಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲೂ ಯತೀಶ್ ಪತ್ನಿ ಬಿಂದುರಾಣಿಗೆ ಚಪ್ಪಳಿ ತೋರಿಸಿರುವ ಚಿತ್ರಣ ವೈರಲ್ ಆಗುತ್ತಿದೆ. ಅನೇಕರು ಈ ಚಿತ್ರಣವನ್ನು ಹಂಚಿಕೊಳ್ಳುತ್ತಿದ್ದಾರೆ.
ಇನ್ನು ಸಂಪಗಿರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನೆ ಕುರಿತು ಬಿಂದುರಾಣಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದಾರೆ.