ಬೆಂಗಳೂರು: ಕೆಂಗೇರಿ-ಬೈಯಪ್ಪನಹಳ್ಳಿ ಮಾರ್ಗದಲ್ಲಿ ದಿಢೀರ್ ಎಂದು ನಮ್ಮ ಮೆಟ್ರೋ ಸಂಚಾರ ಸ್ಥಗಿತವಾಗಿದ್ದು, ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು.
ಇಂದು (ಮಂಗಳವಾರ ಜು.4) ತಾಂತ್ರಿಕ ಸಮಸ್ಯೆಯಿಂದ ನಮ್ಮ ಮೆಟ್ರೋ ಸ್ಥಗಿತವಾಗಿದ್ದು, ಹೆಚ್ಚು ಜನ ಸಂಚರಿಸುವ ಅವಧಿಯಲ್ಲೇ ಮೆಟ್ರೋ ಏಕಾಏಕಿ ಸ್ಥಗಿತಗೊಂಡಿದ್ದರಿಂದ ಕಚೇರಿ, ಶಾಲಾ-ಕಾಲೇಜುಗಳೀಗೆ ಹೋಗಲು ಮೆಟ್ರೋ ಅವಲಂಬಿಸಿದ್ದ ಪ್ರಯಾಣಿಕರು ಸಮಸ್ಯೆಗೆ ಸಲುಕಿದರು.
ನೇರಳೆ ಮಾರ್ಗದ ಕೆಂಗೇರಿ – ಬೈಯ್ಯಪ್ಪನಹಳ್ಳಿ ಮೆಟ್ರೋ ಸಂಚಾರ ಸ್ಥಗಿತವಾಗಿದ್ದು, ಆಫೀಸ್ಗೆ ಹೊರಟವರೆಲ್ಲ ನಿಲ್ದಾಣದಲ್ಲೇ ಕಾಯುತ್ತಿದ್ದರು. ವಿಷಯ ತಿಳಿದ ಕೂಡಲೇ ಆತಂಕದಲ್ಲೇ ಅವರು ಬೇರೆಬೇರೆ ವ್ಯವಸ್ಥೆ ಮಾಡಿಕೊಂಡರು ಎಂದು ತಿಳಿದು ಬಂದಿದೆ.
ಇನ್ನು ಮೊನ್ನೇ ಅಷ್ಟೇ ಈ ಮಾರ್ಗದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದರಿಂದ ಭಾನುವಾರ ಎರಡು ಗಂಟೆಗಳ ಕಾಲ ನಮ್ಮ ಮೆಟ್ರೋ ಸ್ಥಗಿತವಾಗಿತ್ತು. ಜೂನ್ 30ರಂದು ಎಂಜಿ ರಸ್ತೆ ಮೆಟ್ರೋದಿಂದ ಬೈಯಪ್ಪನಹಳ್ಳಿ ನಿಲ್ದಾಣದವರೆಗೆ ಬೆಳಗ್ಗೆ 7ರಿಂದ 9 ಗಂಟೆವರೆಗೆ ಸಂಚರಿಲ್ಲ ಈ ಬಗ್ಗೆ ಬಿಎಂಆರ್ಸಿಎಲ್ (BMRCL) ಪ್ರಕಟಣೆ ಮೂಲಕ ಮಾಹಿತಿ ನೀಡಿತ್ತು.
ಆದರೆ, ಇಂದು ಯಾವುದೇ ಮಾಹಿತಿ ನೀಡದೆ ತಾಂತ್ರಿಕ ಸಮಸ್ಯೆಯಿಂದ ಮೆಟ್ರೋ ಸ್ಥಗಿತವಾಗಿದೆ ಆಗಿದೆ ಎಂದರೆ ಇದಕ್ಕೆ ಯಾರು ಉತ್ತರ ಕೊಡಬೇಕು. ತಾಂತ್ರಿಕ ಸಮಸ್ಯೆ ಆಗದಂತೆ ನೋಡಿಕೊಳ್ಳುವುದಕ್ಕೆ ತಾಂತ್ರಿಕ ಸಿಬ್ಬಂದಿ ಇಲ್ಲವೇ ಎಂದು ಪ್ರಯಾಣಿಕರು ಕಿರಿಕಾರಿದರು.