CrimeNEWSನಮ್ಮಜಿಲ್ಲೆನಮ್ಮರಾಜ್ಯ

KSRTC ಲಂಚಕೋರ, ಹೆಣ್ಣುಬಾಕ ಅಧಿಕಾರಿ ದಿನೇಶ್‌ ಚನ್ನಗಿರಿ: ಶಿಕ್ಷಿಸಬೇಕಾದ ಮೇಲಧಿಕಾರಿಗಳೇ ರಕ್ಷಣೆಗೆ ನಿಂತರೆ..!?

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಶಿವಮೊಗ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಶಿವಮೊಗ್ಗ ವಿಭಾಗದಲ್ಲಿ ವಿಭಾಗೀಯ ಸಂಚಲನಾಧಿಕಾರಿ (DTO) ಒಬ್ಬರು  ಚಾಲನಾ ಸಿಬ್ಬಂದಿಗಳನ್ನು ಬೇರೆ ಬೇರೆ ಘಟಕ/ ವಿಭಾಗಕ್ಕೆ ವರ್ಗಾವಣೆ ಮಾಡಿಸಲು ತಲಾ ತಲಾ 10-15‌ ಸಾವಿರ ರೂಪಾಯಿಗಳನ್ನು ಲಂಚವಾಗಿ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇನ್ನು ಆ ಡಿಟಿಒಗೆ ರಾಷ್ಟ್ರದ ರಾಜಕೀಯ ಪಕ್ಷವೊಂದರ ಬೆಂಬಲ ಇದೆ ಎಂದು ಸ್ವತಃ ಆತನೆ ಹೇಳಿಕೊಂಡಿದ್ದು, ನನ್ನನ್ನು ಯಾರೂ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಭ್ರಷ್ಟಾಚಾರದಲ್ಲಿ ಮುಳುಗಿದ್ದಾನೆಂದು ಸಾರಿಗೆ ನೌಕರರು ದೂರಿದ್ದಾರೆ.

ಇನ್ನು ಈ ಭ್ರಷ್ಟ ಅಧಿಕಾರಿಯ ಹೆಸರು ದಿನೇಶ್ ಕುಮಾರ್‌ ಚನ್ನಗಿರಿ ಎಂದು. ಈತ ಮಹಿಳಾ ಕಂಡಕ್ಟರ್‌ಗಳನ್ನು ಸೆಕ್ಸ್‌ಗೆ ಕರೆಯುವುದು, ಲೈಂಗಿಕ ಕಿರುಕುಳ ನೀಡುವುದು ಮಾಡುತ್ತಿದ್ದಾನೆ ಎಂದು ಖುದ್ದು ಮಹಿಳಾ ನಿರ್ವಾಹಕರೊಬ್ಬರು ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾದ ಅಧಿಕಾರಿಗಳು ಈತನನ್ನು ರಕ್ಷಿಸಿ ದೂರು ಕೊಟ್ಟ ನಿರ್ವಾಹಕಿಯನ್ನೇ  ಅಮಾನತು ಮಾಡಿದ್ದಾರಂತೆ.

ಇಂಥ ಲಂಚಬಾಕ, ಹೆಣ್ಣು ಪೀಡಕ ಅಧಿಕಾರಿಯ ರಕ್ಷಣೆಯಲ್ಲಿ ಮೇಲಧಿಕಾರಿಗಳೇ ನಿಂತಿರುವುದು ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಇನ್ನಾದರೂ ಈತನ ಕೃತ್ಯ ಮತ್ತು ಭ್ರಷ್ಟಾಚಾರವನ್ನು ಬಯಲಿಗೆಳೆದು ಕಾನೂನಿನ ಪ್ರಕಾರ ತಕ್ಕ ಶಿಕ್ಷೆ ಕೊಡಬೇಕು ಎಂದು ನೊಂದ ಶಿವಮೊಗ್ಗ ಘಟಕದ ಸಾರಿಗೆ ನೌಕರರು ಮನವಿ ಮಾಡಿದ್ದಾರೆ.

ಈ ಡಿಟಿಒ ದಿನೇಶ್‌ ಕುಮಾರ್‌ ಚನ್ನಗಿರಿ ಎಸಗಿರುವ ಅಕ್ರಮಗಳು, ಲಂಚ ಪಡೆದಿರುವ ಬಗ್ಗೆ ಮತ್ತು ಮಹಿಳಾ ನೌಕರರಿಗೆ ಲೈಂಗಿಕ ಕಿರುಕು ನೀಡಿರುವ ಬಗ್ಗೆ ದಾಖಲೆಗಳು ಸಿಕ್ಕಿದ್ದು, ಅದನ್ನು ಅಧಿಕಾರಿಗಳಿಗೆ ತಲುಪಿಸಿದರು ಯಾವುದೇ ಕ್ರಮ ಜರುಗಿಸಿಲ್ಲ ಎಂದು ನೊಂದ ನೌಕರರು ಆಕ್ರೋಶ ಹೊರಹಾಕುತ್ತಿದ್ದಾರೆ.

ಡಿಟಿಒ ದಿನೇಶ್‌ ಕುಮಾರ್‌ ಚನ್ನಗಿರಿ ಕರ್ಮಕಾಂಡ: ಈತ ಶಿವಮೊಗ್ಗದ  ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ರಾಮೇಗೌಡ ಅವರ ಅಳಿಯನಂತೆ. ಹೀಗಾಗಿ ಈವರೆಗೂ ಮೇಲಧಿಕಾರಿಗಳು ಈತನನ್ನು ಅಮಾನತು ಮಾಡುವುದಕ್ಕೂ ಹೆದರುತ್ತಿದ್ದಾರೆ. ಅಲ್ಲದೆ ಯಾವುದೇ ರೀತಿಯ ಶಿಸ್ತು ಕಠಿಣ ಕ್ರಮ ಕೈಗೊಂಡಿಲ್ಲ. ಆದರೆ ಇದೇ ಕೆಲಸವನ್ನು ಚಾಲಕ ಅಥವಾ ನಿರ್ವಾಹಕರು ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡಿದ್ದರೆ ಅವರನ್ನು ಕ್ರಿಮಿನಲ್‌ಗಳಂತೆ ಬಿಂಬಿಸಿ ಕೂಡಲೇ ಕಠಿಣಾತೀಕಠಿಣ ಕ್ರಮ ಜರುಗಿಸುತ್ತಿದ್ದರು ನಿಗಮದ ಅಧಿಕಾರಿಗಳು.

ಅದೇ ಮೇಲಧಿಕಾರಿಗಳು ಅದರಲ್ಲೂ ಅವರಿಗೆ ಯಾವುದಾದರೂ ರಾಜಕೀಯ ಪ್ರಭಾವ ಇದೆ ಎಂದರೆ ಅಂಥವರು ಕಣ್ಣಿಗೆ ರಾಚುವಂಥ ಅಕ್ರಮ-ಭ್ರಷ್ಟಾಚಾರ- ವ್ಯಭಿಚಾರ- ನಿಯಮ ಉಲ್ಲಂಘನೆ ಇದಾವುದೇ ಕೆಲಸ ಮಾಡಿದರೂ ಅವರನ್ನು ಪ್ರಶ್ನಿಸುವ ಮಾತು ಇರಲಿ ಅವರಿಗೆ ನೊಟೀಸ್‌ ಕೂಡ ನೀಡುವುದಿಲ್ಲ. ಇದೇ ಸಾರಿಗೆ ಸಂಸ್ಥೆಯಲ್ಲಿ ನಡೆಯುತ್ತಿರುವುದು.

ಈ ಹೆಣ್ಣು ಬಾಕನ ವಿರುದ್ಧ ಆರೋಪಗಳನ್ನು ಸಾಕ್ಷ್ಯ ಸಮೇತ ನೀಡಿದರು ಮೇಲಧಿಕಾರಿಗಳು ಅದನ್ನೆಲ್ಲಾ ಡಸ್ಟ್‌ ಬಿನ್‌ಗೆ ಹರಿದು ಬಿಸಾಕಿದ್ದಾರಂತೆ. ಲೈಂಗಿಕ ಕಿರುಕುಳದಂಥ ಗಂಭೀರ ಆಪಾದನೆ ಮಾಡಿದ್ದ ಮಹಿಳಾ ಸಿಬ್ಬಂದಿಗೆ ರಕ್ಷಣೆ ಕೊಡಬೇಕಾದ ಅಧಿಕಾರಿಗಳು ಆಕೆಯನ್ನೇ ಅಮಾನತು ಮಾಡಿದ್ದಾರೆ. ಅದು ಕೂಡ ಈ ಮಹಾನುಭಾವನೇ ಆಕೆ ಡ್ಯೂಟಿ ಮೇಲೆ ಇದ್ದರೆ ಅಪಾಯ ಗ್ಯಾರಂಟಿ ಎಂದು ಹೀಗೆ ಮಾಡಿಸಿದ್ದಾನಂತೆ.

ಇನ್ನು ಈ ಡಿಟಿಒ ದಿನೇಶ್‌ ಕುಮಾರ್‌ ವಿರುದ್ಧ ಲೋಕಾಯುಕ್ತ, ಕೆಎಸ್‌ಆರ್‌ಟಿಸಿ ಎಂಡಿ, ಪೊಲೀಸ್‌ ಕಮಿಷನರ್‌ಗೂ ಲೈಂಗಿಕ ಕಿರುಕುಳ ಸಂಬಂಧ ದೂರು ನೀಡಿರುವ ಮಹಿಳಾ ಕಂಡಕ್ಟರ್‌ವೊಬ್ಬರು ಈತ ಮೂರು ಜನರನ್ನು ಮದುವೆ ಆಗಿದ್ದಾನೆ ಇದು ಕಾನೂನು ಬಾಹಿರ ಜತೆಗೆ ನನಗೂ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ದೂರು ನೀಡಿದ್ದಾರೆ. ಆದರೆ ಈವರೆಗೂ ಯಾವುದೇ ಕ್ರಮ ಜರುಗಿಸಲ್ಲ ಎಂಬುವುದು ನೋವಿನ ಸಂಗತಿ.

ಅದಂರೆ ದಿನೇಶನ ಭ್ರಷ್ಟಾಚಾರ, ನೌಕರರಿಗೆ ಕಿರುಕುಳ ಕೊಡುತ್ತಿರುವುದನ್ನು ನೋಡಿಕೊಂಡು ಅಧಿಕಾರಿಗಳು ಸುಮ್ಮನಿದ್ದಾರೆ ಎಂದರೆ ಅವರ ಅಂಜುಬರುಕತನ ಎಷ್ಟು ಎಂಬುವುದು ಗೊತ್ತಾಗುತ್ತದೆ. ಇಂಥ ಅಂಜುಬುರುಕ ಅಧಿಕಾರಿಗಳು ಸಂಸ್ಥೆಯಲ್ಲಿ ಇರುವುದಕ್ಕೆ ನಾಲಾಯಕ್‌ ಅಲ್ಲದೆ ಮತ್ತೇನು? ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಜರುಗಿಸಿ ನೊಂದ ಹೆಣ್ಣುಮಗಳಿಗೆ ನ್ಯಾಯ ಕೊಡಿಸಲು ಮುಂದಾಗಿ ಇಲ್ಲ ರಾಜೀನಾಮೆ ಕೊಟ್ಟು ಮನೆಗೆ ಹೋಗಿ.

25 ವರ್ಷಗಳಲ್ಲೇ ಡಿಟಿಒ ಆದನು: ಎಟಿಐ ಆಗಿ ಸೇವೆಗೆ ಸೇರಿದ ದಿನೇಶ್‌ ಕೇವಲ 25 ವರ್ಷಗಳ ಅವಧಿಯಲ್ಲಿ ಎಟಿಐ, ಟಿಐನಿಂದ ಎಟಿಎಸ್‌, ಎಟಿಎಸ್‌ ನಿಂದ ಡಿಪೋ ಮ್ಯಾನೇಜರ್‌, ಡಿಪೋ ಮ್ಯಾನೇಜರ್‌ ನಿಂದ ಡಿಟಿಒ ಆಗಿ ಬಡ್ತಿ ಪಡೆದಿದ್ದಾನೆ. ಕೆಎಸ್‌ಆರ್‌ಟಿಸಿ ಇತಿಹಾಸದಲ್ಲೇ ಇದು ಸೋಜಿಗ (ಇಷ್ಟೊಂದು ಕಡಿಮೆ ಅವಧಿಯಲ್ಲೇ ಪ್ರಮೋಷನ್‌ಗಳ ಮೇಲೆ ಪ್ರಮೋಷನ್‌ ಪಡೆಯೋದು ಅಸಾಧ್ಯ). ಯಾರಿಗೂ ರೀತಿ ಬಡ್ತಿ ಕೊಟ್ಟಿರೋದೇ ಇಲ್ಲ ಎಂದು ಹೇಳಲಾಗುತ್ತಿದೆ.

ಮಹಿಳಾ ಸಿಬ್ಬಂದಿ ನೀಡಿರುವ ದೂರು: ಶಿವಮೊಗ್ಗ ವಿಭಾಗದ ಬಸ್‌ಗಳನ್ನು ನಿಲುಗಡೆಗೊಳಿಸಲಾಗುವ ತಿಪಟೂರಿನ ಕೋಟೆನಾಯಕನಹಳ್ಳಿಯಲ್ಲಿರುವ ಶ್ರೀರಾಮಾಂಜನೇಯ ಹೊಟೇಲ್‌ ಮಾಲೀಕರ ಜತೆ ಸೇರಿ ದಿನೇಶ್‌ ತನ್ನನ್ನು ಹೊಟೇಲ್‌ನ ಮಾಲೀಕರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಪೀಡಿಸಿದರು. ಒಪ್ಪದಿದ್ದಾಗ ತನ್ನ ವಿರುದ್ಧ ತಿಪಟೂರು ಪೊಲೀಸ್‌ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು ಎಂದು ಆರೋಪಿಸಿದ್ದಾರೆ.

ಇದಿಷ್ಟೇ ಅಲ್ಲದೆ ತನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಹಲವಾರು ಬಾರಿ ದಿನೇಶ್‌ ಯತ್ನಿಸಿದ. ನಾನು ಕೆಲಸ ಮುಗಿಸಿಕೊಂಡು ಹೋಗುವಾಗಲೆಲ್ಲಾ ಜೀಪಿನಲ್ಲಿ ಅಡ್ಡಬಂದು ನಿಲ್ಲಿಸಿ ಮನೆಗೆ ಕರೆದುಕೊಂಡು ಹೋಗಿ ಡ್ರಾಪ್‌ ಕೂಡ ಮಾಡಿದ್ದಾನೆ. ಅಲ್ಲದೇ ಗಾಂಧೀಬಜಾರ್‌ನ ತುಳಜಾ ಭವಾನಿ ರಸ್ತೆಯಲ್ಲಿರುವ ರೇಣುಕಾ ನಿಲಯಕ್ಕೆ ಬರುವಂತೆ ( ಲೈಂಗಿಕ ಕ್ರಿಯೆಗೆ..!?) ಪೀಡಿಸಿದ್ದಾನೆ. ಒಪ್ಪದಿದ್ದಾಗ ನನ್ನ ವಿರುದ್ಧ ಇಲ್ಲಸಲ್ಲದ ಆಪಾದನೆ ಮಾಡಿದ್ದಾನೆ ಎಂದು ಉಲ್ಲೇಖಿಸಿದ್ದಾರೆ.

ದಿನೇಶ್‌ ಸಾಕಷ್ಟು ಬೇನಾಮಿ ಆಸ್ತಿ ಸಂಪಾದನೆ ಮಾಡಿದ್ದಾನೆ. ಅದರಲ್ಲಿ ಶಿವಮೊಗ್ಗದ ಹರಿಗೆಯಲ್ಲಿ 40*60 ಭವ್ಯ ಬಂಗಲೆ, ಗಾಂಧೀ ಬಜಾರ್‌ನ ತುಳಜಾಭವಾನಿ ರಸ್ತೆಯಲ್ಲಿ 3 ಅಂತಸ್ತಿನ ರೇಣುಕಾ ನಿಲಯ ಎನ್ನುವ ಭವ್ಯ ಮನೆ, ಬೆಂಗಳೂರಿನ ಪ್ರಕಾಶ್‌ ನಗರದಲ್ಲಿ ಭವ್ಯ ಬಂಗಲೆ, ತಿಪಟೂರಿನ ಹುಚ್ಚಗೊಂಡನ ಹಳ್ಳಿಯಲ್ಲಿರುವ ಶ್ರೀ ರಾಮಾಂಜನೇಯ ರೆಸ್ಟೋರೆಂಟ್‌ನಲ್ಲಿ ಪಾಲುದಾರಿಕೆ ಹೊಂದಿದ್ದಾನೆ. 3 ಕಾರುಗಳಿದ್ದು ಮಗ, ಮಗಳ ಹೆಸರಿನಲ್ಲಿ ರಿಜಿಸ್ಟರ್‌ ಮಾಡಿಸಿದ್ದಾನೆ ಎಂದು ಹೇಳಿದ್ದಾರೆ.

ಈ ದಿನೇಶ್‌ ಕುಮಾರ್‌ ಚನ್ನಗಿರಿ ವಿರುದ್ಧ ಪೊಲೀಸ್‌ ಠಾಣೆ ಮತ್ತು ನಮ್ಮ ಸಾರಿಗೆ ನಿಗಮದಲ್ಲಿ ಸಾಕಷ್ಟು ದೂರುಗಳು ದಾಖಲಾಗಿವೆ. ಆದರೂ ಅವರ ವಿರುದ್ಧ ಕ್ರಮ ಜಾರಿಯಾಗಿಲ್ಲ.ಅವರ ವಿರುದ್ಧ ಯಾರೇ ಸಿಡಿದೆದ್ದರೂ ತನ್ನ ಮಾವನವರ ರಾಜಕೀಯ ಪ್ರಭಾವ ಬಳಸಿ, ತನ್ನ ಬೇನಾಮಿ ಹಣದ ಲಾಬಿ ಮೂಲಕ ಎಲ್ಲವನ್ನು ಮುಚ್ಚಾಕುವ ಕೆಲಸ ಮಾಡುತ್ತಾ ಬಂದಿದ್ದಾನೆ ಎಂದು ಮಹಿಳಾ ಸಿಬ್ಬಂದಿ ದೂರಿದ್ದಾರೆ.

ಇನ್ನು ಇದೆಲ್ಲವನ್ನು ಬಯಲಿಗೆಳದಿರುವ ನನಗೆ ಆತನಿಂದ ಕೊಲೆ ಬೆದರಿಕೆ ಇದೆ. ತನ್ನ ಜೀವಕ್ಕೆ ಏನೇ ಅಪಾಯವಾದರೂ ಆತನೇ ಹೊಣೆ ಎಂದು ತಿಳಿಸಿದ್ದು, ತನಗೆ ರಕ್ಷಣೆ ನೀಡಬೇಕೆಂದು ಪೊಲೀಸ್‌ ಮತ್ತು ಸಾರಿಗೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ...