NEWSನಮ್ಮಜಿಲ್ಲೆನಮ್ಮರಾಜ್ಯ

ಶೀಘ್ರದಲ್ಲೇ 4 ಸಾವಿರ ಬಸ್‌ ಖರೀದಿ, 2ಸಾವಿರ ಬಿಎಂಟಿಸಿಗೇ ಮೀಸಲು : ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಶಕ್ತಿ ಯೋಜನೆ ಜಾರಿಯಾದ ಒಂದು ತಿಂಗಳಲ್ಲಿ ಆದಾಯ ಹೆಚ್ಚಾಗಿದ್ದು, ಮಹಿಳಾ ಪ್ರಯಾಣಿಕರ ಓಡಾಟವು ಜಾಸ್ತಿಯಾಗಿರುವುದಕ್ಕೆ ಇದಕ್ಕೆ ಕಾರಣ.

ಮಹಿಳೆಯರು ಫ್ರೀಯಾಗಿ ಪ್ರಯಾಣ ಮಾಡುತ್ತಾ ಶಕ್ತಿ ಯೋಜನೆಯಿಂದ ನಿಗಮಗಳಿಗೆ ಪವರ್​​​ ತುಂಬುತ್ತಿದ್ದಾರೆ. ಮಹಿಳೆಯರ ಜತೆ ಪುರುಷರ ಓಡಾಟ ಕೂಡಾ ಹೆಚ್ಚಾಗಿದ್ದು ನಷ್ಟದಲ್ಲಿದ್ದ ನಿಗಮಗಳು ಚೇತರಿಕೆಯತ್ತ ಮುಖಮಾಡಿವೆ. ಆದರೆ ಪ್ರಯಾಣಿಕರು ಹೆಚ್ಚಾಗುತ್ತಿದ್ದರೂ ಬಸ್‌ಗಳ ಸಂಖ್ಯೆ ಮಾತ್ರ ಅಷ್ಟೇ ಇದೆ. ಇದರಿಂದ ನಿತ್ಯ ಒಂದಿಲ್ಲೊಂದು ಸಮಸ್ಯೆ ಆಗುತ್ತಲೇ ಇದೆ.

ಶಕ್ತಿಯಿಂದ ರಶ್‌ ಆಗುತ್ತಿರುವ ಪ್ರಯಾಣಿಕರ ಸಂಕ್ಯೆಯನ್ನು ಕಡಿಮೆ ಮಾಡಬೇಕು ಎಂದರೆ ಇನ್ನಷ್ಟು ಹೊಸ ಬಸ್‌ಗಳು ರಸ್ತೆಗಿಳಿಯಬೇಕು. ಹೀಗಾಗಿ ಸಾರಿಗೆ ಇಲಾಖೆ ಮತ್ತೆ ಒಟ್ಟು 10 ಸಾವಿರ ಬಸ್‌ಗಳ ಖರೀದಿಗೆ ಮುಂದಾಗಿದೆ. ಅಲ್ಲದೆ ಅತೀ ಶೀಘ್ರದಲ್ಲೇ 4 ಸಾವಿರ ಬಸ್‌ಗಳನ್ನು ಖರೀದಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಮುಂದಿನ 3 ತಿಂಗಳಲ್ಲಿ ತುರ್ತಾಗಿ 4 ಸಾವಿರ ಬಸ್​ ಖರೀದಿ ಮಾಡಲಿದ್ದು, ಬಿಎಂಟಿಸಿಗೆನೇ 2 ಸಾವಿರ ಹೊಸ ಬಸ್​ಗಳನ್ನು ನೀಡುವ ಪ್ಲಾನ್ ಮಾಡಿದೆ. ಸದ್ಯ ಬಿಎಂಟಿಸಿ ಬಳಿ 6,500 ಬಸ್​ಗಳು ಕಾರ್ಯ ನಿರ್ವಹಿಸುತ್ತಿವೆ. ಹಲವು ಬಸ್​ಗಳು 10 ಲಕ್ಷ ಕಿ.ಮೀಗೂ ಹೆಚ್ಚು ಓಡಾಟ ನಡೆಸಿವೆ.

ಹೀಗಾಗಿ ಈ ಬಸ್​ಗಳನ್ನು ಸ್ಕ್ರ್ಯಾಪ್ ಮಾಡಲೇಬೇಕಾದ ಅನಿವಾರ್ಯತೆ ಇದೆ. ಅಲ್ಲದೇ ಬಸ್ ಕೊರತೆಯಿಂದ ಕೆಲ ರೂಟ್​ಗಳನ್ನು ಕ್ಯಾನ್ಸಲ್ ಮಾಡಲಾಗಿದೆ. ಹೀಗಾಗಿ ಹೊಸ ಬಸ್ ಖರೀದಿ ಬಳಿಕ ಕ್ಯಾನ್ಸಲ್ ಆದ ರೂಟ್ ಪುನಾರಂಭ ಮಾಡಲು ಹೊಸ ಬಸ್​​ಗಳು ಸಹಾಯಕಾರಿಯಾಗಲಿವೆ ಎಂದು ಸಚಿವರ ಹೇಳಿದ್ದಾರೆ.

ಶಕ್ತಿ ಯೋಜನೆ ಬಳಿಕ ಶಾಲಾ, ಕಾಲೇಜು ಮಕ್ಕಳಿಗೂ ತೊಂದರೆಯುಂಟಾಗಿದ್ದು, ಅದನ್ನು ಸರಿ ಮಾಡೋಕೆ ಬಸ್​ಗಳ ಅಗತ್ಯವಿದೆ. ಹೀಗಾಗಿ ಹೊಸ ಬಸ್​ ಖರೀದಿಗೆ ಸಾರಿಗೆ ಇಲಾಖೆ ಮುಂದಾಗಿದೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು