NEWSನಮ್ಮಜಿಲ್ಲೆನಮ್ಮರಾಜ್ಯ

BMTC ಚಾಲಕನ ಪುತ್ರಿಯ ಚಿನ್ನದ ಸಾಧನೆ: ಹಾಡಿ ಹೊಗಳಿ ಸನ್ಮಾನಿಸಿದ ಸಂಸ್ಥೆಯ ಎಂಡಿ ಸತ್ಯವತಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಚಾಲಕರೊಬ್ಬರ ಪುತ್ರಿ M.Scಯಲ್ಲಿ ಐದು ಚಿನ್ನದ ಪದಕವನ್ನು ತನ್ನ ಕೊರಳಿಗೆ ಏರಿಸಿಕೊಂಡಿದ್ದಾರೆ.

ಬಿಎಂಟಿಸಿ ದಕ್ಷಿಣ ವಲಯ ಘಟಕ -3ರ ಚಾಲಕ ಉಮೇಶ್‌ (ಬಿಲ್ಲೆ‌ ಸಂಖ್ಯೆ 12217) ಅವರ ಪುತ್ರಿ ರೋಹಿಣಿ ಎಂಬುವರೆ ಎಂ.ಎಸ್ಸಿ ಪರಿಸರ ವಿಜ್ಞಾನ ವಿಭಾಗದಲ್ಲಿ 5 ಚಿನ್ನದ ಪದಕಗಳನ್ನು ಪಡೆದವರು.

ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಸತ್ಯವತಿ ಅವರು ಶಾಂತಿನಗರದಲ್ಲಿರುವ ತಮ್ಮ ಕೇಂದ್ರ ಕಚೇರಿಗೆ ಕರೆಸಿಕೊಂಡು ಆಕೆಯನ್ನು ಸನ್ಮಾನಿಸಿದ್ದಾರೆ. ಅಲ್ಲದೆ ಅವರ ಸಾಧನೆಯನ್ನು ಗುರುತಿಸಿ, ಪ್ರೋತ್ಸಾಹಿಸಿ ಸಂಸ್ಥೆಯ ವತಿಯಿಂದ 5ಸಾವಿರ ರೂ. ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರವನ್ನು ನೀಡಿ ಅಭಿನಂದಿಸಿದ್ದಾರೆ.

ಈ ವೇಳೆ ಮಾತನಾಡಿರುವ ಸತ್ಯವತಿ ಅವರು, ಇಂದಿನ ಮಕ್ಕಳೆ‌ ನಮ್ಮ ಮುಂದಿನ ಉತ್ತಮ ಪ್ರಜೆಗಳು. ನಮ್ಮ ಸಂಸ್ಥೆಯ ಚಾಲಕ ಉಮೇಶ್‌ ಅವರ ಪುತ್ರಿ ರೋಹಿಣಿ ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ತನ್ನ ಗಣನೀಯ ಸಾಧನೆ ಹಾಗೂ ಪರಿಶ್ರಮಕ್ಕೆ 5 ಚಿನ್ನದ ಪದಕಗಳನ್ನು ಪಡೆದು ಚಿನ್ನದ ಹುಡುಗಿ ಎನಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.

ಇನ್ನು ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ ಓದುತ್ತಿದ್ದ ರೋಹಿಣಿ ತನ್ನ ಪರಿಶ್ರಮ ಹಾಗೂ ಪಾಲಕರು ನೀಡಿದ ಬೆಂಬಲ ಪ್ರೋತ್ಸಾಹದಿಂದಾಗಿ ಈ 5 ಚಿನ್ನದ ಪದಕ ಪಡೆಯಲು ಸಾಧ್ಯವಾಯಿತು. ಇವರಂತೆ ತಮ್ಮ ಮಕ್ಕಳಿಗೆ ಉತ್ತಮ ವಿದ್ಯೆ ಕೊಡಿಸುವತ್ತ ಪ್ರತಿಯೊಬ್ಬ ನೌಕರರು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ತಮಗಿರುವ ಆರ್ಥಿಕ ಸಂಕಷ್ಟದ ನಡುವೆಯೂ ಮಗಳ ಶೈಕ್ಷಣಿಕ ಭವಿಷ್ಯದ ಏಳ್ಗೆಗೆ ಶ್ರಮಿಸಿದ ನಮ್ಮೆಲ್ಲ ಕುಟುಂಬದವರ ತ್ಯಾಗದ ಫಲವಾಗಿ ಮಗಳು ಎಲ್ಲರೂ ಹೆಮ್ಮೆ ಪಡುವಂತ ಸಾಧನೆ ಮಾಡಿದ್ದಾಳೆ ಎಂದು ತಂದೆ ಉಮೇಶ್‌  ಖುಷಿಯನ್ನು ಹಂಚಿಕೊಂಡರು.

ಇನ್ನು ತಮ್ಮ ಮಗಳು ಮಾಡಿರುವ ಸಾಧನೆಯನ್ನು ನಮ್ಮೆದುರಲ್ಲೇ ಸಂಸ್ಥೆಯ ಉನ್ನತ ಅಧಿಕಾರಿಗಳು ಹಾಡಿ ಹೊಗಳಿದ್ದು, ಈ ಕ್ಷಣವನ್ನು ನಾನು ಮತ್ತು ನಮ್ಮ ಕುಟುಂಬ ಎಂದಿಗೂ ಮರೆಯುವುದಿಲ್ಲ ಎಂದ ಉಮೇಶ್‌ ಅವರು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಸನ್ಮಾನಿಸಿ 5 ಸಾವಿರ ರೂ. ನಗದು ಬಹುಮಾನ ನೀಡಿರುವುದು ಮಗಳ ಸಾಧನೆಗೆ ಸಿಕ್ಕ ಸನ್ಮಾನ ಎಂದು ಆನಂದಭಾಷ್ಪ ಸುರಿಸಿದರು.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ