- ಐದು ಆರು ಟ್ರಿಪ್ ಸಾಗಿಸಿರುವುದು ಅದು ಸಾರಿಗೆ ನೌಕರರನ್ನೂ ಅವರ ವೈಯುಕ್ತಿಕ ಕೆಲಸಕ್ಕೆ ಬಳಸಿಕೊಂಡ ಅಧಿಕಾರಿ
- ವಿಡಿಯೋದಲ್ಲಿ ಕಾಣುವ ಕೆಂಪು ಟೀ ಶರ್ಟ್ ಹಾಕಿಕೊಂಡಿರುವ ವ್ಯಕ್ತಿಯೆ ಡಿಟಿಒ
- ಕೆಎಸ್‌ಆರ್‌ಟಿಸಿ, ಸಿಬ್ಬಂದಿ, ಕಚೇರಿ ವಾಹನ ದುರುಪಯೋಗ
- ತನ್ನ ತೋಟಕ್ಕೆ ಬೇಕಾದ ಸಸಿಗಳನ್ನು ತರಲು ಇಲಾಖೆ ಸಿಬ್ಬಂದಿ, ವಾಹನ ದುರ್ಬಳಕೆ ವಿಡಿಯೋ ಸಹಿತ ಬಹಿರಂಗ
ದಾವಣಗೆರೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ದಾವಣಗೆರೆ ವಿಭಾಗದ ವಿಭಾಗೀಯ ಸಂಚಾರ ಅಧಿಕಾರಿ (ಡಿಟಿಒ) ಸಾರಿಗೆ ವಾಹನವನ್ನು ದುರುಪಯೋಗ ಪಡಿಸಿಕೊಂಡು ತನ್ನ ತೋಟಕ್ಕೆ ಬೇಕಾದ ಅಡಕೆ ಸಸ್ಯಗಳನ್ನು ತರಿಸಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಇನ್ನು ಸಾರಿಗೆ ನೌಕರರು ಮುಷ್ಕರ ಮಾಡಿದರು ಎಂಬ ಕಾರಣಕ್ಕೆ ವಜಾ, ಅಮಾನತು, ವರ್ಗಾವಣೆ ಮತ್ತು ಪೊಲೀಸ್ ಪ್ರಕರಣಗಳನ್ನು ದಾಖಲಿಸಿ ಇನ್ನಿಲ್ಲದ ಹಿಂಸೆ ನೀಡುತ್ತಿರುವ ಸಾರಿಗೆ ಆಡಳಿತ ವರ್ಗ ಈ ರೀತಿ ಸಾರಿಗೆ ವಾಹನ ಮತ್ತು ಸಾರಿಗೆ ನೌಕರರನ್ನು ತನ್ನ ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡ ಈ ಅಧಿಕಾರಿಯ ವಿರುದ್ಧ ಇನ್ನೂ ಏಕೆ ಕಾನೂನು ಕ್ರಮ ಜರುಗಿಸಿಲ್ಲ ಎಂಬುದುವುದು ಪ್ರಶ್ನೆಯಾಗಿಯೇ ಉಳಿದಿದೆ.
ಹೌದು! ಇಲ್ಲಿ ಅಧಿಕಾರಿಗಳಿಗೆ ಒಂದು ನ್ಯಾಯ ನೌಕರರಿಗೆ ಒಂದು ನ್ಯಾಯ ಎಂಬುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಆದರೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಸಂಸ್ಥೆಯ ವಾಹನ ಮತ್ತು ನೌಕರರನ್ನು ದುರ್ಬಳಕೆ ಮಾಡಿಕೊಳ್ಳುವ ಅಧಿಕಾರಿಗಳನ್ನು ಶಿಕ್ಷಿಸುವ ಬದಲಿಗೆ ಮತ್ತೆ ನೌಕರರನ್ನು ಶಿಕ್ಷಿಸುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ. ಇದರಿಂದ ಸಂಸ್ಥೆ ಲಾಭದಲ್ಲಿದ್ದರು ಇಂಥ ಅಧಿಕಾರಿಗಳಿಂದ ನಷ್ಟವನ್ನು ಅನುಭವಿಸುವಂತಾಗಿದೆ.
ಇನ್ನು ಈ ವಿಷಯ ದಾವಣಗೆರೆ ವಿಭಾಗೀಯ ನಿಯಂತ್ರಣಾಧಿರಿ ಸಿದ್ದೇಶ್ ಅವರ ಗಮನಕ್ಕೂ ಬಂದಿದೆ. ಆದರೆ ಅವರು ಈ ಬಗ್ಗೆ ಮಂಜುನಾಥ್ ಅವರನ್ನು ವಿಚಾರಣೆಗೆ ಒಳಪಡಿ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತರುವ ಬದಲಿಗೆ ಕೃತ್ಯವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದ್ದಾರೆ. ಅಂದರೆ ಈ ರೀತಿ ವಾಹನ ದುರುಪಯೋಗ ಪಡಿಸಿಕೊಳ್ಳಲಿ ಡಿಸಿ ಸಿದ್ದೇಶ್ ಅವರು ಪರೋಕ್ಷವಾಗಿ ಕಾರಣರಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಇಲ್ಲಿ ನೋಡಿ ದಾವಣಗೆರೆ ಡಿಟಿಒ ಮಂಜುನಾಥ ಸಂಸ್ಥೆಯ ವಾಹನದಲ್ಲಿ ಚನ್ನಗಿರಿ ಹತ್ತಿರದ ದೋಣಿಹಳ್ಳಿಯಿಂದ ಸಂತೇಬೆನ್ನೂರಿನಲ್ಲಿರುವ ಅವರ ತೋಟಕ್ಕೆ ಅಡಕೆ ಗಿಡಗಳನ್ನು ಇಲಾಖೆ ವಾಹನದಲ್ಲಿ ಸಾಗಿಸಿದ್ದಾರೆ. ಅದೂ ಒಂದು ಬಾರಿ ಅಲ್ಲ ಆರೇಳು ಟ್ರಿಪ್ ಸಾಗಿಸಿರುವುದು ಖಚಿತವಾಗಿದೆ.
ತನ್ನ ತೋಟಕ್ಕೆ ಅಡಕೆ ಗಿಡಗಳನ್ನು ಸಾಗಿಸಲು ಬೇರೆ ಕೂಲಿಗಾರರನ್ನೂ ಬಳಿಸಿಕೊಂಡಿಲ್ಲ ಬದಲಿಗೆ ಇವರು ಸಾರಿಗೆ ನೌಕರರನ್ನೇ ಬಳಸಿಕೊಂಡು ತನ್ನ ವೈಯುಕ್ತಿಕ ಕೆಲಸ ಮಾಡಿಸಿಕೊಂಡಿದ್ದಾರೆ. ಇವರ ಈ ನಡೆಯಿಂದ ಸಂಸ್ಥೆಗೆ ಅಂದಾಜು 15 ಸಾವಿರ ರೂ.ಗಳಿಗೂ ಹೆಚ್ಚು ನಷ್ಟವಾಗಿದೆ. ಜತೆಗೆ ಇವರು ಅಂದು ಕರ್ತವ್ಯಕ್ಕೆ ಹಾಜರಾಗಿಲ್ಲ ಅಂದರೆ ಅವರ ವೇತನ ಸೇರಿಸಿದರೆ ಕನಿಷ್ಠ 20 ಸಾವಿರ ರೂ.ವರೆಗೆ ಸಂಸ್ಥೆಗೆ ನಷ್ಟವಾಗಿದೆ.
ಅಂದರೆ, ಅಧಿಕಾರಿಯ ವೈಯಕ್ತಿಕ ಕೆಲಸಕ್ಕೆ ಸಾರಿಗೆ ವಾಹನ ಮತ್ತು ನೌಕರರನ್ನು ಬಳಸಿಕೊಂಡಿರುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ. ಆದರೂ ಈ ಕೃತ್ಯವನ್ನು ಅಧಿಕಾರಿ ಮಂಜುನಾಥ್ ಎಸಗಿ ಒಂದು ತಿಂಗಳು ಕಳೆಯುತ್ತಿದ್ದರೂ ಈವರೆಗೂ ಈತನ ವಿರುದ್ಧ ಯಾವುದೇ ಕ್ರಮ ಜರುಗಿಸದೆ ಇರುವುದು ಏಕೆ ಎಂಬ ಪ್ರಶ್ನೆ ಎದ್ದಿದೆ.
ಇನ್ನು ಅವರು ಸಾರಿಗೆ ವಾಹನವನ್ನು ಮತ್ತು ಸಿಬ್ಬಂದಿಯನ್ನು ದುರುಪಯೋಗ ಪಡಿಸಿಕೊಂಡಿರುವ ವಿಡಿಯೋ ವಿಜಯಪಥಕ್ಕೆ ಲಭ್ಯವಾಗಿದ್ದು ಅವರ ದುರ್ನಡತೆಯನ್ನು ಬಿಚ್ಚಿಡುತ್ತಿದೆ. ಇನ್ನು ಈ ಅಧಿಕಾರಿಯ ವಿರುದ್ಧ ಸಂಸ್ಥೆಯ ಎಂಡಿ ಮತ್ತು ಸಾರಿಗೆ ಸಚಿವರು ಸೇರಿದಂತೆ ಸರ್ಕಾರ ಯಾವ ಕ್ರಮ ಜರುಗಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಏನು ತಪ್ಪನ್ನು ಮಾಡದ ಅಮಾಯಕ ನೌಕರರನ್ನು ವಜಾ ಮಾಡಿರುವ ಸಂಸ್ಥೆಯ ಆಡಳಿತ ವರ್ಗ ಇಂಥ ಅಧಿಕಾರಿಗಳ ಬಗ್ಗೆ ಸೂಕ್ತ ದಾಖಲೆಗಳಿದ್ದರೂ ಏನೂ ಕಾಣದಂತೆ ವರ್ತಿಸುತ್ತಿರುವುದು ಏಕೆ? ಈ ಆಡಳಿತ ವರ್ಗಕ್ಕೆ ಇಂಥ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ದಮ್ಮು ತಾಕತ್ತು ಇಲ್ಲದಷ್ಟು ನಿಸ್ಪ್ರಯೋಜಕವಾಗಿದೆಯೆ?.
ಅದೇ ಒಬ್ಬ ನೌಕರ ಏನೊಂದು ತಪ್ಪು ಮಾಡದಿದ್ದರೂ ಕೂಡಲೇ ಅಮಾನತು, ವಜಾ ಮಾಡುತ್ತೀರಿ ಅದಕ್ಕೆ ನೌಕರರ ಹೇಳಿಕೆಯನ್ನು ಪಡೆಯುವುದಿಲ್ಲ. ಈಗ ಮಾತ್ರ ಇಂಥ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ನಿಮಗೆ ಬೇಕಾದ ಸಾಕ್ಷಿ ಸಹಿತ ದಾಖಲೆಗಳು ಕಣ್ಣಮುಂದೆ ಇದ್ದರೂ ಅವುಗಳು ನಿಮ್ಮ ಕಣ್ಣಿಗೆ ಕಾಣುವುದಿಲ್ಲ ಅಲ್ಲ. ಏಕೆ ಈ ರೀತಿಯ ಮಲತಾಯಿ ಧೋರಣೆ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಬೇಕು. ಅದನ್ನು ಮೊದಲು ಸಂಬಂಧಪಟ್ಟ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಚಿವರು ಮಾಡಬೇಕು ಎಂಬ ಆಗ್ರಹ ಕೇಳಿ ಬಂದಿದೆ.
Related

You Might Also Like
ಕಾವೇರಿ ನದಿಗೆ 31,550 ಕ್ಯೂಸೆಕ್ ನೀರು ಬಿಡುಗಡೆ- ನದಿ ತಟದ ಜನರಿಗೆ ಸೂಚನೆ
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತೆ ವರುಣನ ಆರ್ಭಟ ಹೆಚ್ಚಾಗಿದ್ದು ಈ ಹಿನ್ನೆಲೆ ಹಳೇ ಮೈಸೂರು ಭಾಗದ ಜೀವನಾಡಿ ಕೆಆರ್ಎಸ್ ಡ್ಯಾಂಗೆ ಒಳಹರಿವು ಹೆಚ್ಚಾಗುತ್ತಿದೆ. ಹೀಗಾಗಿ ನದಿ...
BMTC: ಬ್ರೇಕ್ ಫೇಲಾಗಿ ಕಂದಕಕ್ಕೆ ನುಗ್ಗಿದ ಬಸ್- ಅದೃಷ್ಟವಶಾತ್ ಪ್ರಯಾಣಿಕರು ಸೇಫ್
ಆನೇಕಲ್: ಬ್ರೇಕ್ ಫೇಲಾಗಿ ರಸ್ತೆ ಬದಿಯ ಕಂದಕಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ ನುಗ್ಗಿರುವ ಘಟನೆ ಬೆಂಗಳೂರು ಹೊರವಲಯ ಜಿಗಣಿ ಸಮೀಪದ ಹರಪ್ಪನಹಳ್ಳಿ ಬಳಿ...
ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಇಂದು ಸಿಗುತ್ತಿದೆ ಮುಕ್ತಿ
ಬೆಂಗಳೂರು: ರಾಜ್ಯ ರಾಜಧಾನಿಯ ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಇಂದು ಮುಕ್ತಿ ಸಿಗುತ್ತಿದೆ. ಹೌದು! ಬಹುನಿರೀಕ್ಷಿತ ಹೆಬ್ಬಾಳ ವಿಸ್ತರಿತ ಮೇಲ್ಸೇತುವೆ ಉದ್ಘಾಟನೆ ಆಗುತ್ತಿದೆ. ಇಂದು...
ಸರ್ಕಾರಿ ಬಸ್ ಗಾಜು ಒಡೆದು, ಚಾಲನಾ ಸಿಬ್ಬಂದಿ ಮೇಲೆ ಬೈಕ್ ಸವಾರನಿಂದ ಹಲ್ಲೆ
ಹುಬ್ಬಳ್ಳಿ: ಗದುಗಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಸಾರಿಗೆ ಬಸನ್ನು ನಗರದ ಗದಗ ರಸ್ತೆ ಬಳಿ ಬೈಕ್ ಸವಾರನೊಬ್ಬ ಅಡ್ಡಗಟ್ಟಿ ಬಸ್ ಗಾಜು ಒಡೆದು ಹಾಕಿರುವುದಲ್ಲದೆ ಚಾಲಕ ಹಾಗೂ...
ಕೊಟ್ಟ ಚಿನ್ನಾಭರಣ- ನಗದನ್ನು ವಾಪಸ್ ಕೊಡಿಸಿ ಎಂದರೆ 2 ಲಕ್ಷ ಲಂಚಕೊಡಿ ಎಂದ ಪೊಲೀಸರು: ಲೋಕಾಯುಕ್ತ ಖೆಡ್ಡಕ್ಕೆ ಬಿದ್ದರು
ಬೆಂಗಳೂರು: ಕೊಟ್ಟಿರುವ ಆಭರಣ ಮತ್ತು ನಗದನ್ನು ವಾಪಸ್ ಕೊಡಿಸಿ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ನಮಗೆ 2 ಲಕ್ಷ ರೂ. ಲಂಚ ಕೊಟ್ಟರೆ ವಾಪಸ್...
ಭೀಕರ ಅಪಘಾತ: ಲಾರಿಗೆ ಸರ್ಕಾರಿ ಬಸ್ ಡಿಕ್ಕಿ -ಮೂವರ ಸಾವು, 7ಮಂದಿಗೆ ಗಂಭೀರಗಾಯ
ಯಲ್ಲಾಪುರ: ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿೆಉವ ಘಟನೆ ಉತ್ತರಕನ್ನಡ...
KSRTC: ಯಾವುದೇ ಕಾರಣಕ್ಕೂ ನೌಕರರ ವಾರದ ರಜೆ ರದ್ದುಪಡಿಸಬಾರದು- ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ಆದೇಶ
ವಾರದ ರಜೆ ರದ್ದು ಪಡಿಸಿದರೆ ಅಂಥ ಅಧಿಕಾರಿಯ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ಅಧಿಕಾರಿ ನೌಕರರಿಗೆ ಇದೆ ಬೆಂಗಳೂರು: ನೌಕರರಿಗೆ ವಾರದ ರಜೆಯನ್ನು ನಿಗದಿತ ದಿನದಂದು ನೀಡಬೇಕು...
ಚಂದ್ರಶೇಖರನಾಥ ಶ್ರೀಗಳ ಪೂರ್ವಾಶ್ರಮದ ಹೆಸರು ಕೆ.ಟಿ.ಗೋವಿಂದೇಗೌಡ
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ 80 ವರ್ಷದ ಶ್ರೀ ಚಂದ್ರಶೇಖರನಾಥ ಸ್ವಾಮಿಗಳು ಇಂದು ರಾತ್ರಿ 12.01 ರ ಸಮಯದಲ್ಲಿ ಇಹಲೋಕ ತ್ಯಜಿಸುವ ಮೂಲಕ ಶ್ರೀ ಕೃಷ್ಣನ...
ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ: ದೇವಕಿ ಸುತನ ವೇಷದಲ್ಲಿ ಮಿಂಚಿದ ಲಿಟಲ್ ಲಿಶಾನ್
ಬೆಂಗಳೂರು: ರಾಜ್ಯಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶನಿವಾರ ಅದ್ದೂರಿಯಾಗಿ ಆಚರಿಸುತ್ತಿದ್ದು, ಪುಟಾಣಿಗಳು ಶ್ರೀಕೃಷ್ಣ - ರಾಧೆ ವೇಷ ಧರಿಸಿ ಮಿಂಚುತ್ತಿದ್ದಾರೆ. ಈ ಪೈಕಿ ಮಕ್ಕಳ ಚಂದದ ಫೋಟೋಗಳನ್ನು...