LatestNEWSನಮ್ಮರಾಜ್ಯ

KSRTC: ಇನ್ಸೆಂಟಿವ್, ಒಟಿ ವಿಷಯದಲ್ಲಿ ತಾರತಮ್ಯ- ಕೂಡಲೇ ಪರಿಹರಿಸಲು ಎಂಡಿಗೆ ಒತ್ತಾಯ

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಚಾಲನಾ ಸಿಬ್ಬಂದಿಗಳ ಕಣ್ಣಿಗೆ ಅಧಿಕಾರವೆಂಬ ಮಣ್ಣೆರಚಿ ಸಂಸ್ಥೆಯಲ್ಲಿ ಅಧಿಕಾರಿಗಳು ಯಾವ ರೀತಿ ವಂಚಿಸುತ್ತಿದ್ದಾರೆಂದರೆ. ಪ್ರಸ್ತುತ ಮಾರ್ಚ್ ಏಪ್ರಿಲ್ ಮೇ ತಿಂಗಳುಗಳು ಪೀಕ್ ಸಿಜನ್ ಎಂದು ಕೆಎಸ್ಆರ್ಟಿಸಿಯ ಎಲ್ಲ ವಿಭಾಗದ ಪ್ರತಿ ಘಟಕಗಳಿಂದ ಹಬ್ಬ ಹರಿದಿನ ಸರ್ಕಾರಿ ರಜಾದಿನಗಳಂದು ರಾಜಧಾನಿ ಬೆಂಗಳೂರಿಗೆ ಹೆಚ್ಚುವರಿಯಾಗಿ ಅಡಿಷನಲ್ ಬಸ್ಸುಗಳು ಓಡಿಸಲಾಗುತ್ತಿದೆ.

ಆದರೆ, ಈ ಅಡಿಷನಲ್ (ಹೆಚ್ಚುವರಿ) ಮಾರ್ಗಗಳಿಗೆ ನಿಯೋಜಿಸಿರುವ ಚಾಲನಾ ಸಿಬ್ಬಂದಿಗಳಿಗೆ ಮುಕ್ಕಾಲು ಪರ್ಸೆಂಟ್ ಇನ್ಸೆಂಟಿವ್ ಮತ್ತು ಯಾವುದೇ ಒಟಿ ಕೊಡುವುದಿಲ್ಲ. ಇಲ್ಲಿ ಅದೇ ಫಾರಂ ನಂ.4 ಮಾರ್ಗಗಳಿಗಿರುವ, ಒಟಿ ಅಡಿಷನಲ್ ಮಾರ್ಗಗಳಿಗೆ ಕೊಡುವುದಿಲ್ಲ.

ಇಲ್ಲಿ ನೋಡಿ ಅದೇ ಮಾರ್ಗ ಅದೇ ಬಸ್ಸು ಅದೇ ಶ್ರಮ ಆದರೆ ಫಲ ಮಾತ್ರ ತಾರತಮ್ಯ, ಇದು ಯಾವ ನ್ಯಾಯ ಮತ್ತು ಘಟಕದಲ್ಲಿ ಅಡಿಷನಲ್ ಆಗಿ ಒಂದು ಬಸ್ಸು ಕಾರ್ಯಚರಿಸಿದರೆ, ಘಟಕ ವ್ಯವಸ್ಥಾಪಕರು, ಎಟಿಎಸ್ ಹಾಗೂ ಎಡಬ್ಲ್ಯೂಎಸ್ ಅವರಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಇಲ್ಲಿ ಅಧಿಕಾರಿಗಳಿಗೆ ಪ್ರೋತ್ಸಾಹ ಧನ ಕೊಡುತ್ತಿರುವುದರಿಂದ, ಚಾಲನಾ ಸಿಬ್ಬಂದಿಗಳಿಗೆ ಯಾವುದೇ ಅಭ್ಯಂತರವಿಲ್ಲ.

ಆದರೆ, ಹಬ್ಬ ಹರಿದಿನ ಬಿಟ್ಟು ಕುಟುಂಬದವರಿಂದ, ದೂರವಾಗಿ ಶ್ರಮವಹಿಸಿ ದುಡಿಯುವ, ಚಾಲನಾ ಸಿಬ್ಬಂದಿಗಳಿಗೆ ಮುಕ್ಕಾಲು ಪರ್ಸೆಂಟ್ ಇನ್ಸೆಂಟಿವ್ ಮತ್ತು ಯಾವುದೇ ಒಟಿ ಇಲ್ಲ ಎಂಬುದು ಬೇಸರದ ಸಂಗತಿ.

ಅದೇ ಫಾರಂ ನಂಬರ್-4, ಮಾರ್ಗಗಳಿರುವ ಒಟಿ ಮತ್ತು ಫುಲ್ ಇನ್ಸೆಂಟಿವ್, ಅಡಿಷನಲ್ ಮಾರ್ಗಗಳಿಗೆ ಕೂಡ ಕೊಡಬೇಕು ಎಂದು ಈ ಹಿಂದೆಯೇ ವಿಭಾಗಿಯ ನಿಯಂತ್ರಣಾಧಿಕಾರಿಗಳಿಗೂ ಮತ್ತು ಹಿಂದಿನ ಎಂಡಿ ಅವರ ಗಮನಕ್ಕೆ ತರಲಾಗಿತ್ತು. ಆದರೆ ಅದರ ಪ್ರಯೋಜನವಾಗದೆ, ಇಲ್ಲಿವರೆಗೂ ಆ ತಾರತಮ್ಯ ಹಾಗೆ ಮುಂದುವರಿದುಕೊಂಡು ಬಂದಿದೆ.

ಪ್ರಸ್ತುತ ಇರುವ ಸಾರಿಗೆ ನೌಕರರ ನೆಚ್ಚಿನ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರು, ಈ ಚಾಲನಾ ಸಿಬ್ಬಂದಿಗಳಿಗೆ ಆಗುತ್ತಿರುವ ತಾರತಮ್ಯಯನ್ನು, ಕೂಡಲೇ ಬಗೆಹರಿಸುವ ಕಡೆ ಗಮನ ಹರಿಸಿಬೇಕು ಎಂದು ಚಾಲನಾ ಸಿಬ್ಬಂದಿಗಳು ಒತ್ತಾಯಿಸಿದ್ದಾರೆ.

Advertisement
Deva
the authorDeva

Leave a Reply

error: Content is protected !!