NEWSನಮ್ಮಜಿಲ್ಲೆನಮ್ಮರಾಜ್ಯ

ಮೂರ್ಖರಂತೆ ನಡೆದುಕೊಂಡರೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಚ್ಚರ…!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಯಾರು ನೌಕರರಿಗೆ ತಪ್ಪು ಸಂದೇಶಕೊಡುವ ಮೂಲಕ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೋ ಅಂಥವರ ಬಗ್ಗೆ ನೌಕರರಿಗೆ ಸತ್ಯ ತಿಳಿಯಬೇಕೆಂದರೆ ಒಂದು ವೇದಿಕೆ ಆಯೋಜನೆ ಮಾಡಿ ಅಲ್ಲಿ ಅವರನ್ನು ಬೆತ್ತಲೆಗೊಳಿಸೋಣ ಅಂದರೆ ಅವರ ವಾಮಮಾರ್ಗದ ನಡೆ ನೌಕರರಿಗೂ ತಿಳಿಯಲಿ ಎಂಬ ನಿಟ್ಟಿನಲ್ಲಿ ವರದಿ ಮಾಡಿದರೆ ಅದನ್ನು ಬೇರೆ ರೀತಿ ಕೆಲ ನೌಕರರು ಬಿಂಬಿಸಿಕೊಂಡು ನಡೆದುಕೊಂಡಿರುವುದು ಮೂರ್ಖತನದ ಪರಮಾವಧಿಯಾಗಿದೆ.

ಇಂಥ ಶತಮೂರ್ಖರು ಇರುವುದರಿಂದ ಸಂಸ್ಥೆಯಲ್ಲಿ ಈಗಲೂ ಅಧಿಕಾರಿಗಳು ನೌಕರರ ಮಧ್ಯೆ ಒಡಕು ಉಂಟಾಗಿ ಒಬ್ಬರಿಗೊಬ್ಬರು ಶತ್ರುಗಳಂತೆ ನೋಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ವಿಷಯ ಏನೆಂದು ಅರ್ಥ ಮಾಡಿಕೊಳ್ಳಲಾಗದೆ ನಾವು ಗ್ರಹಿಸಿದ್ದೆ ಸರಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮಾಡಿದ್ದೀರಾ ಎಂದರೆ ಇದು ನಿಮ್ಮ ಬೌದ್ಧಿಕ ಮಟ್ಟವನ್ನು ತೋರಿಸುತ್ತದೆ.

ಅಷ್ಟಕ್ಕೂ ಆ ವರದಿಯ ಶೀರ್ಷಿಕೆ “KSRTC- ತಪ್ಪುಮಾಡಿದವರ ಬೆತ್ತಲೆಗೊಳಿಸಲು ನಾವು ಸಿದ್ಧ ನೀವು ಸಿದ್ಧರಿದ್ದೀರಾ?: ಜಯರಾಮ್‌ ರಾಥೋಡ್‌ ಸವಾಲು” ಎಂದು ಇದೆ. ಇದರ ಜತೆಗೆ ಯಾರು ಏನು ಹೇಳಿದ್ದಾರೆ ಎಂಬುದನ್ನು ತೋರಿಸುವುದಕ್ಕೆ ಒಂದು ಫೋಟೋ ಅಂದರೆ..

ಈ ಫೋಟೋವನ್ನು ಹಾಕಲಾಗಿದೆ. ಇದಕ್ಕೆ ಇಲ್ಲದ ಕತೆಕಟ್ಟಿ ಕೆಲವರು ನಡೆದುಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಈರೀತಿ ನಡೆದುಕೊಂಡರೆ ತಕ್ಕ ಶಿಕ್ಷೆ ಅನುಭವಿಸಬೇಕಾಗುತ್ತದೆ. ಈ ಬಗ್ಗೆ ನಿಮಗೆ ಅರಿವಿದೆಯೇ?

ಈ ಬಗ್ಗೆ ಚರ್ಚೆ ಮಾಡುವ ಮುನ್ನ ಯಾರು ಏನು ಹೇಳಿದ್ದಾರೆ ಎಂಬುದನ್ನು ಏಕೆ ತಿಳಿಯದೆ ಮನಸ್ಸಿಗೆ ಬಂದಂತೆ ಚರ್ಚೆ ಮಾಡುತ್ತೀರಿ ಇದು ನಿಮಗೆ ಸರಿ ಅನಿಸುತ್ತದೆಯೇ? ಹೌದು ಈ ವಿಷಯದಲ್ಲಿ ಆರೋಪ ಪ್ರತ್ಯಾರೋಪವಿದೆ. ಆದರೆ ಅದು ವೈಯಕ್ತಿಕವಾಗಿಲ್ಲ ಬದಲಿಗೆ ಕೆಲ ಸಂಘಟನೆಗಳು ನೌಕರರನ್ನು ಹೇಗೆ ದಾರಿ ತಪ್ಪಿಸುತ್ತಿವೆ ಎಂಬುದನ್ನು ಸಾಬೀತುಪಡಿಸುವುದಕ್ಕೆ ಏನು ಮಾಡಬೇಕು ಎಂಬುದರ ಬಗ್ಗೆ ಇದೆ.

ಇದನ್ನು ಅರ್ಥ ಮಾಡಿಕೊಳ್ಳದೆ ಯಾರನ್ನೋ ವೈಯಕ್ತಿಕವಾಗಿ ನಿಂದಿಸುವ ರೀತಿಯಲ್ಲಿ ನಡೆದುಕೊಳ್ಳುವುದು ಯಾರಿಗೂ ತರವಲ್ಲ. ಇದು ಮೂರ್ಖತನದ ಪರಮಾವಧಿ ಎಂದೇ ಹೇಳಬೇಕು. ಏಕೆಂದರೆ ಮೂರ್ಖರಾದವರು ಮಾತ್ರ ತಮಗೆ ಮನಬಂದ ರೀತಿ ತಿಳಿದು ಚರ್ಚೆಯಲ್ಲಿ ತೊಡಗುತ್ತಾರೆ. ಹೀಗಾಗಿ ಇನ್ನಾದರೂ ಇಂಥ ಮೂರ್ಖತನಕ್ಕೆ ಆಸ್ಪದಕೊಡದೆ ಉತ್ತಮ ನಾಗರಿಕರಾಗಿ ನಡೆದುಕೊಳ್ಳಿ. ಇಲ್ಲದಿದ್ದರೆ ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ. ಇದು ಮೂರ್ಖರ ರೀತಿ ನಡೆದುಕೊಳ್ಳುವ ಪ್ರತಿಯೊಬ್ಬರಿಗೂ ಎಚ್ಚರಿಕೆ.

ವಿಜಯಪಥ ಸಂ.

Leave a Reply

error: Content is protected !!
LATEST
160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್