NEWSನಮ್ಮಜಿಲ್ಲೆವಿಡಿಯೋ

KSRTC ಅಧಿಕಾರಿಗಳ ಬೇಜವಾಬ್ದಾರಿ: ಮಾದಪ್ಪನ ಬೆಟ್ಟಕ್ಕೆ ತೆರಳುವ ಬಸ್‌ಗಳಿಗೆ ತಂತಿ ಕಾಣುವ ಟೈರ್‌ಗಳ ಅಳವಡಿಕೆ

ವಿಜಯಪಥ ಸಮಗ್ರ ಸುದ್ದಿ

ಚಾಮರಾಜನಗರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ನ ಮುಂದಿನ ಚಕ್ರಕ್ಕೆ ತಂತಿ ಕಾಣಿಸುತ್ತಿರುವ ಟೈರ್‌ಗಳನ್ನು ಅಳವಡಿಸಿ ಬೆಟ್ಟಗುಡ್ಡಗಳ ಮಾರ್ಗಗಳಲ್ಲಿ ಓಡಿಸುವುದಕ್ಕೆ ಬಿಡುತ್ತಿದ್ದು ಇದರಿಂದ ಭಾರಿ ಪ್ರಮಾಣದಲ್ಲಿ ಅನಾಹುತವಾದರೆ ಯಾರು ಹೊಣೆಯಾಗುತ್ತಾರೆ ಎಂದು ಚಾಲನಾ ಸಿಬ್ಬಂದಿ ಅಳಲು ತೋಡಿಕೊಳ್ಳುತ್ತಿದ್ದಾರೆ.

ಘಟಕ ಮಟ್ಟದ ಅಧಿಕಾರಿಗಳು ಮೇಲಧಿಕಾರಿಗಳ ಆದೇಶ ಪಾಲನೆ ಮಾಡುವ ದೃಷ್ಟಿಯಿಂದ ಎಂದು ಹೇಳಿಕೊಂಡು ಯಾವ ಬಸ್‌ ಸಿಗುತ್ತದೋ ಆ ಬಸ್‌ಅನ್ನು ಮಾರ್ಗ ಕಾರ್ಯಾಚರಣೆಗೆ ಕಳುಹಿಸುತ್ತಾರೆ. ಆದರೆ ಆ ಬಸ್‌ ಈ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುವುದಕ್ಕೆ ಯೋಗವಾಗಿದೆಯೋ ಇಲ್ಲವೋ ಎಂದು ನೋಡುವುದೇ ಇಲ್ಲ.

ಇನ್ನು ಈ ರೀತಿ ತಂತಿ ಕಾಣಿಸುತ್ತಿರುವ ಟೈರ್‌ಗಳಿರುವ ಬಸ್‌ ಕನಿಷ್ಠ 35-45 ಕಿಮೀ ವೇಗವಾಗಿ ಚಲಿಸಿದರೂ ಬೆಟ್ಟಪ್ರದೇಶದಲ್ಲಿ ಯಾವರೀತಿಯ ಅನಾಹುತ ಸಂಭವಿಸುತ್ತದೋ ಎಂಬುದನ್ನು ಊಹಿಸಿಕೊಳ್ಳಲಿಕ್ಕೂ ಅಸಾಧ್ಯ. ಆದರೂ ಅದ್ಯಾವ ಭಂಡ ಧೈರ್ಯದ ಮೇಲೆ ಅಧಿಕಾರಿಗಳು ಈ ಬಸ್‌ಗಳ ಕಾರ್ಯಾಚರಣೆ ಮಾಡುತ್ತಾರೋ ಗೊತ್ತಿಲ್ಲ.

ನೋಡಿ ಮೊನ್ನೆ ನಂಜನಗೂಡು ಘಟಕದಿಂದ ಮಲೈ ಮಹದೇಶ್ವರ ಬೆಟ್ಟಕ್ಕೆ ಮಾರ್ಗಚರಣೆಗಾಗಿ ತಂತಿ ಕಾಣಿಸುತ್ತಿರುವ ಟೈರ್‌ಅನ್ನು ಮುಂದಿನ ಭಾಗದಲ್ಲಿ ಅಳವಡಿಸಿ ಕಳುಹಿಸಿ ಕೊಟ್ಟಿದ್ದಾರೆ. ಈ ರೀತಿ ಬೇಜವಾಬ್ದಾರಿ – ನಿರ್ಲಕ್ಷ್ಯತನದಿಂದ ಮಾರ್ಗಚರಣೆಗೆ ಕಳುಹಿಸಿ ಕೊಟ್ಟಿರುವ  ತಪ್ಪಿತಸ್ಥ ಅಧಿಕಾರಿಗಳು -ಸಿಬ್ಬಂದಿಗಳ ವಿರುದ್ಧ ಮೇಲಧಿಕಾರಿಗಳು ಕ್ರಮ ಜರುಗಿಸಬೇಕು. ಅದನ್ನು ಬಿಟ್ಟು ಕಾರಣ ಕೇಳಿಕೊಂಡು ಸುಮ್ಮನಾಗಬಾರದು.

ನೋಡಿ ಸಾರ್ವಜನಿಕ ಪ್ರಯಾಣಿಕರು ಕೂಡ ಇಂಥ ನಿರ್ಲಕ್ಷ್ಯತನದ ಅಧಿಕಾರಿಗಳ ವಿರುದ್ಧ ಸೂಕ್ತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದಿಷ್ಟೇ ಅಲ್ಲ ಇತ್ತೀಚೆಗೆ ಕೊಳ್ಳೇಗಾಲ ಘಟಕದಲ್ಲಿ ಇದೇ ರೀತಿಯ ಟೈರ್ ಅಳವಡಿಸಿ ಮಾರ್ಗಚರಣೆಗೆ ಕಳುಹಿಸಿದ ಸಂದರ್ಭದಲ್ಲಿ ಟೈರ್ ಬರ್ಸ್ಟ್ ಆಗಿ ಓರ್ವ ಮಹಿಳೆಯ ಕಾಲು ತುಂಡಾಗಿರುವ ನೆನೆಪು ಇನ್ನೂ ಮಾಸಿಲ್ಲ. ಈ ನಡುವೆಯೇ ಮತ್ತೆ ಇಂಥ ಟೈರ್‌ಗಳ ಅಳವಡಿಕೆಯೇ?

ಇನ್ನು ಆ ಪ್ರಕರಣದಲ್ಲಿ ಚಾಲಕನ ನಿರ್ಲಕ್ಷ್ಯವೇ ಟೈರ್ ಬರ್ಸ್ಟ್ ಆಗಿ ಓರ್ವ ಮಹಿಳೆಯ ಕಾಲು ತುಂಡಾಗಲು ಕಾರಣ ಎಂದು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ರೀತಿಯಾಗಿ ಖಾಲಿ ಬಸ್‌ಗಳು ಓಡಲು ಸಾಧ್ಯವಾಗದಂತಹ ಟೈರ್‌ಗಳನ್ನು ಅಳವಡಿಸಿ ಅನಾಹುತವಾದರೆ ಆ ತಪ್ಪನ್ನು ಚಾಲಕರ ಮೇಲೆ ಹೊರಿಸುವುದು ಎಷ್ಟರ ಮಟ್ಟಿಗೆ ಸರಿ ಇದೆ ಎಂದು ಪ್ರಶ್ನಿಸುತ್ತಿದ್ದಾರೆ ಜನರು.

ಹೀಗೆ ಬೇಜವಾಬ್ದಾರಿ – ನಿರ್ಲಕ್ಷ್ಯತನದಿಂದ ಮಾರ್ಗಚರಣೆಗೆ ಕಳುಹಿಸಿ ಕೊಡುವ ಈ ಅಧಿಕಾರಿಗಳ ನಡೆಯಾದರೂ ಏನು. ಬಸ್‌ಗಳಲ್ಲಿ ಟೈರ್‌ ಸವೆದು ಹೋದಾಗ ಹೊಸ ಟೈರ್‌ ಅಳವಡಿಸುವುಕ್ಕೆ ನಿಗಮದಲ್ಲಿ ಸವಲತ್ತುಗಳಿಲ್ಲವೇ? ಅಥವಾ ಬಿಡಿ ಭಾಗಗಳ ಖರೀದಿಸುವ ನೆಪದಲ್ಲಿ ಆ ಹಣವನ್ನು ಇವರು ತಮ್ಮ ಜೇಬಿಗೆ ಇಳಿಸಿಕೊಂಡು ತಪ್ಪು ಲೆಕ್ಕ ತೋರಿಸಿ ಯಾಮಾರಿಸುತ್ತಿದ್ದಾರೆಯೇ? ಈ ಬಗ್ಗೆ ಮೇಲಧಿಕಾರಿಗಳು ವಿಚಾರಣೆ ನಡೆಸಿದರೆ ಸತ್ಯಾಸತ್ಯತೆ ಹೊರಬರಲಿದೆ ಎಂದು ನೌಕರರು ಹೇಳುತ್ತಿದ್ದಾರೆ.

ಇನ್ನು ಬಸ್‌ನ ಈ ಟೈರ್‌ ಸಿಡಿದರೆ ಅದರ ಎಲ್ಲ ಖರ್ಚನ್ನು ಚಾಲಕನ ವೇತನದಲ್ಲಿ ಕಡಿತಮಾಡುತ್ತಾರೆ ಈ ಮಹಾನುಭವ ಅಧಿಕಾರಿಗಳು. ಇನ್ನು ಈ ರೀತಿ ನಿಗಮದಲ್ಲಿ ನಿಯವಿದೆಯೇ ಎಂದು ಪ್ರಶ್ನಿಸಿದರೆ ಅಂಥ ನೌಕರರನ್ನು 300-400 ಕಿಮಿ ದೂರದ ಯಾವುದೋ ಒಂದು ಘಟಕಕ್ಕೆ ವರ್ಗಾವಣೆ ಮಾಡಿ ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳುವ ಕೆಲಸವನ್ನು ಮಾಡುತ್ತಾರೆ.

ಬಸ್‌ನ ಒಂದು ಕಿಟಕಿಯ ಗ್ಲಾಸ್‌ ಒಡೆದರೂ ಅದರ ನಷ್ಟವನ್ನು ಚಾಲಕರೇ ಭರಿಸಬೇಕಿದೆ. ಇನ್ನು ಬಿಸಿಲಿಗೆ ಬಸ್‌ನ ಗ್ಲಾಸ್‌ಗಳು ಏರ್‌ಬರ್ಸ್ಟ್‌ (Air burst) ಆದರು ಅದಕ್ಕೆ ಚಾಲಕರನ್ನೇ ಹೊಣೆ ಮಾಡಲಾಗುತ್ತಿದೆ. ಈ ಬಗ್ಗೆ ಈವರೆಗೂ ಯಾವುದೇ ಸಂಘಟನೆಗಳು ಚಕಾರವೆತ್ತಿಲ್ಲ ಎತ್ತಿದರೂ ಕೇಳಿ ಸುಮ್ಮನಾಗಿವೆ ಅಷ್ಟೇ. ಆದರೆ ನಿತ್ಯ ಒಂದಲ್ಲ ಒಂದುಕಡೆ ನೌಕರರು ಈ ತಮ್ಮದಲ್ಲದ ತಪ್ಪಿನ ಸಮಸ್ಯೆಗೆ  ಸಿಲುಕಿಕೊಂಡು ಈಗಲು ತಮ್ಮ ವೇತನದ ಹಣವನ್ನು ಈ ರೀತಿ ಕಟ್ಟುತ್ತಿದ್ದಾರೆ.

ಫ್ಯಾನ್‌ ಅಥವಾ ಎಸಿ ಕಚೇರಿಯಲ್ಲಿ ಕುಳಿತು ಅರಾಮಾಗಿ ನೌಕರರಿಗೆ ದಂಡ ಹಾಕುತ್ತಿರುವ ಕೆಲ ಭ್ರಷ್ಟ ಅಧಿಕಾರಿಗಳು ಬಿಡಿಭಾಗಗಳ ಖರೀದಿಗೆ ಬರುವ ಹಣವನ್ನು ಕಳ್ಳಲೆಕ್ಕ ತೋರಿಸಿ ಎಂಜಾಯ್‌ ಮಾಡುತ್ತಿದ್ದಾರೆ. ಇದಕ್ಕೆ ನಿಗಮಗಳ ಆಡಳಿತ ಮಂಡಳಿ ಮತ್ತು ಎಂಡಿಗಳು ಮೊದಲು ಕಡಿವಾಣಹಾಕಬೇಕಿದೆ. ಜತೆಗೆ ಚಾಲಕರಿಂದ ಅನ್ಯಾಯವಾಗಿ ವಸೂಲಿ ಮಾಡಿರುವ ಹಣವನ್ನು ವಾಪಸ್‌ ಕೊಡಿಸಬೇಕು ಅಲ್ಲದೆ ಈ ರೀತಿ ಮುಂದೆ ವಸೂಲಿ ಮಾಡದಂತೆ ಭ್ರಷ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಬೇಕಿದೆ.

Leave a Reply

error: Content is protected !!
LATEST
KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ ಸಿಮೆಂಟ್ ಲಾರಿಗೆ ಕಾರು ಡಿಕ್ಕಿ: ತಂದೆ, 2ವರ್ಷದ ಮಗು ಮೃತ, ತಾಯಿ ಸ್ಥಿತಿ ಗಂಭೀರ