NEWSನಮ್ಮರಾಜ್ಯ

ಕರಾರಸಾ ಸಂಸ್ಥೆಯ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ಮುಖ್ಯ ಕಾನೂನು ಸಲಹೆಗಾರ ಹುದ್ದೆಗೆ  ವಕೀಲ ಶಿವರಾಜು ರಾಜೀನಾಮೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ಮುಖ್ಯ ಕಾನೂನು ಸಲಹೆಗಾರರ ಹುದ್ದೆಗೆ ಸುಪ್ರೀಂ ಮತ್ತು ಹೈ ಕೋರ್ಟ್‌ ವಕೀಲ ಎಚ್‌.ಬಿ.ಶಿವರಾಜು ರಾಜೀನಾಮೆ ನೀಡಿದ್ದಾರೆ.

ಸಂಘದ ಆಡಳಿತ ಮಂಡಳಿ ಕೂಡ ವಕೀಲರ ರಾಜೀನಾಮೆಯನ್ನು ನವೆಂಬರ್‌ 5ರಂದು ಅಂಗೀಕರಿಸಿದೆ. ಈ ಮೂಲಕ ಕಳೆದ ನಾಲ್ಕು ವರ್ಷದಿಂದ ಇದ್ದ ಸಾರಿಗೆ ನೌಕರರ ಮತ್ತು ವಕೀಲರ ನಡುವಿನ ಒಡನಾಟ ಅಂತ್ಯಗೊಂಡಂತಾಗಿದ್ದು, ಇನ್ನು ಮುಂದೆ ಯಾವುದೇ ನೌಕರರ ಪ್ರಕರಣವನ್ನು ಉಚಿತವಾಗಿ ನಡೆಸುವುದಿರಲು ತೀರ್ಮಾನಿಸಿದ್ದಾರೆ.

ಇತ್ತೀಚೆಗಷ್ಟೇ ಸಂಘದ ಕೆಲ ಪದಾಧಿಕಾರಿಗಳು ಮತ್ತು ಸದಸ್ಯರು ವಕೀಲರ ಬಗ್ಗೆ ಸಾಮಾಜಿ ಜಾಲತಾಣದಲ್ಲಿ ಅವಹೇಳನಕಾರಿಯಾದ ಆಡಿಯೋಗಳನ್ನು ಹರಿಯಬಿಟ್ಟಿದ್ದರು. ಈ ವೇಳೆ ವಕೀಲರಿಂದ ನಮಗೆ ಯಾವುದೇ ಪ್ರಯೋಜನಾವಗಿಲ್ಲ ಎಂದೆಲ್ಲ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಎಲ್ಲ ಬೆಳವಣಿಗೆಗಳನ್ನು ನೋಡಿದ ವಕೀಲರು ತಾವೇ 2 ವರ್ಷದ ಹಿಂದೆ ಕಟ್ಟಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದಿಂದ ಈಗ ಹೊರ ನಡೆದಿದ್ದಾರೆ. ಇನ್ನು ಮುಂದೆ ಈ ಸಂಘಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ವಿಜಯಪಥಕ್ಕೆ ತಿಳಿಸಿದ್ದಾರೆ.

ಇನ್ನು ಸಂಘದಲ್ಲಿ ಪ್ರಸ್ತುತ ಸುಮಾರು 16 ಸಾವಿರ  ಸದಸ್ಯರಿದ್ದು, 21.21 ಲಕ್ಷ ರೂಪಾಯಿ ಸಂಘದ ಬ್ಯಾಂಕ್‌ ಖಾತೆಯಲ್ಲಿ ಇದೆ. ನಾವು ಕಾನೂನ ಸಲಹೆಗಾರರಾಗಿದ್ದರೂ ಸಂಘದ ಸದಸ್ಯರ ಒಂದು ರೂಪಾಯಿಯೂ ಕೂಡ ದುರ್ಬಳಕೆ ಆಗಬಾರದು ಎಂಬ ನಿಟ್ಟಿನಲ್ಲಿ ಕೆಲಸ ಮಾಡಿದ್ದೇವೆ. ಹೀಗಾಗಿ ಇಂದು 21.21 ಲಕ್ಷ ರೂಪಾಯಿನ್ನು ಉಳಿಸಲು ಸಾಧ್ಯವಾಗಿದೆ.

ಅಲ್ಲದೆ ಸಂಘದ ಕಚೇರಿಗೆ ಮತ್ತು ಕೆಲ ನೌಕರರು ಸದಸ್ಯತ್ವ ಪಡೆಯುವುದಕ್ಕೂ ನಮ್ಮ ಬಳಿ ಹಣವಿಲ್ಲ ಎಂದವರಿಗೆ ನಾನೇ ಸ್ವಂತ ಹಣಹಾಕಿ ಸದಸ್ಯತ್ವ ಮಾಡಿಸಿಕೊಟ್ಟಿದ್ದೇನೆ. ಅದೇ ರೀತಿ ಹೈ ಕೋರ್ಟ್‌ ಪ್ರಕರಣಗಳಲ್ಲಿ ಕೋರ್ಟ್‌ ಫೀ ಬಿಟ್ಟರೆ ನನ್ನ ವಕೀಲ ವೃತ್ತಿಗಾಗಿ ಒಂದೇ ಒಂದು ರೂಪಾಯಿಯನ್ನು ಸಂಭಾವನೆಯಾಗಿ ಪಡೆದಿಲ್ಲ.

ಇನ್ನು ಕೆಳಹಂತದ ನ್ಯಾಯಾಲಯಗಳಲ್ಲಿ ನೂರಾರು ನೌಕರರಿಗೆ ಉಚಿತವಾಗಿ ಬೇಲ್‌ ಮಾಡಿಸಿಕೊಟ್ಟಿದ್ದೇನೆ. ಅಲ್ಲದೆ ಹಲವರ ಪ್ರಕರಣಗಳಲ್ಲಿ ಉಚಿತವಾಗಿ ವಕಾಲತ್ತು ವಹಿಸಿದ್ದೇನೆ. ಇಷ್ಟೆಲ್ಲ ಮಾಡಿದರೂ ನನ್ನ ಮೇಲೆ ಕೆಲವರು ಅಪಪ್ರಚಾರ ಮಾಡಿದರು ಇದರಿಂದ ಬೇಸತ್ತು ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಶಿವರಾಜು ತಿಳಿಸಿದರು.

Leave a Reply

error: Content is protected !!
LATEST
ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ ಸಿಮೆಂಟ್ ಲಾರಿಗೆ ಕಾರು ಡಿಕ್ಕಿ: ತಂದೆ, 2ವರ್ಷದ ಮಗು ಮೃತ, ತಾಯಿ ಸ್ಥಿತಿ ಗಂಭೀರ KSRTC: ವಾರದೊಳಗೆ ವೇತನ ಹೆಚ್ಚಳದ 38ತಿಂಗಳ ಹಿಂಬಾಕಿ ನಿವೃತ್ತ ನೌಕರರ ಬ್ಯಾಂಕ್‌ ಖಾತೆಗೆ ಜಮಾ!