ಪಿರಿಯಾಪಟ್ಟಣ: ಕ್ಷುಲ್ಲಕ ಕಾರಣಕ್ಕೆ ಪತಿಯೇ ಪತ್ನಿಯ ಕುತ್ತಿಗೆ ಹಿಸುಕಿ ಹತ್ಯೆ ಮಾಡಿರುವ ಘಟನೆ ಇಂದು ಮುಂಜಾನೆ ತಾಲೂಕಿನ ಹೊನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೊನ್ನೇನಹಳ್ಳಿ ಗ್ರಾಮದ ಪ್ರೇಮಾ (36) ಕೊಲೆಯಾದವರು. ಈಕೆಯ ಪತಿ ಆರೋಪಿ ಕುಮಾರ್‌ನನ್ನು ಪಿರಿಯಾಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಕಳೆದ 18 ವರ್ಷಗಳ ಹಿಂದೆ ಪ್ರೇಮಾಳನ್ನು ಕುಮಾರ್ ವಿವಾಹವಾಗಿದ್ದ. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ, ಆರೋಪಿ ಕುಮಾರ್ ಪ್ರತಿದಿನ ಕುಡಿದು ಬಂದು ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಬುಧವಾರ ಮಧ್ಯರಾತ್ರಿ ಜಗಳ ತೆಗೆದಿದ್ದು ಗುರುವಾರ ಬೆಳಗಿನ ಜಾವ ಮಕ್ಕಳ ಎದುರಲ್ಲೇ ಟವೆಲ್‌ನಿಂದ ಕುತ್ತಿಗೆ ಬಿಗಿದು ಕೊಲೆಗೈದು ಪರಾರಿಯಾಗಿದ್ದ.
ವಿಷಯ ತಿಳಿಯುತ್ತಿದ್ದಂತೆ ಪ್ರೇಮಾ ಅವರ ಸಹೋದರ ಚೆಲುವರಾಜು ಮತ್ತು ಸಂಬಂಧಿಕರು ಗ್ರಾಮಕ್ಕೆ ಓಡಿಬಂದಿದ್ದಾರೆ. ಬಳಿಕ ಚೆಲುವಾರಜು ಪೊಲೀಸರಿಗೆ ಈ ಸಂಬಂಧ ದೂರು ನಿಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ಡಿವೈಎಸ್‌ಪಿ ಗೋಪಾಲಕೃಷ್ಣ, ಇನ್ಸ್‌ಫೆಕ್ಟರ್ ಕೆ.ವಿ.ಶ್ರೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.