Please assign a menu to the primary menu location under menu

CrimeNEWSನಮ್ಮಜಿಲ್ಲೆನಮ್ಮರಾಜ್ಯ

ಹೊಸವರ್ಷದ ಹೊಸ್ತಿಲಲ್ಲಿ BMTC ನೌಕರರಿಗೆ ಸಿಹಿ ನ್ಯೂಸ್‌ಕೊಟ್ಟ ಎಂಡಿ ಸತ್ಯವತಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಸತ್ಯವತಿ ಅವರು ನೌಕರರ ವಿರೋಧಿ ಎಂದು ಬಿಂಬಿಸುವ ರೀತಿ ಇತ್ತೀಚೆಗಷ್ಟೆ AITUCಯ ಅಧ್ಯಕ್ಷರು ಹೇಳಿಕೆ ಬಿಡುಗಡೆ ಮಾಡಿದ್ದರು. ಆದರೆ, ಆ ರೀತಿ ನಾವು ಇಲ್ಲ ಎಂದಿಗೂ ನೌಕರರ ಪರವಾಗಿದ್ದೇವೆ ಎಂದು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ ಎಂಡಿ ಸತ್ಯವತಿ.

ಹೌದು! 2024ರ ಹೊಸವರ್ಷಕ್ಕೆ (New Year 2024) ಇನ್ನೆರಡು ದಿನ ಬಾಕಿ ಇರುವಾಗಲೇ ನಿಗಮದ ಸಿಬ್ಬಂದಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಸಿಬ್ಬಂದಿ ಮೇಲೆ ನಿಗಮದಲ್ಲಿ ದಾಖಲಾದ ಎಲ್ಲ 6,960 ಕೇಸ್‌ಗಳನ್ನು ಖುಲಾಸೆಗೊಳಿಸುವ ಮೂಲಕ ಸಿಬ್ಬಂದಿಗೆ ಹೊಸ ವರ್ಷದ ಉಡುಗೊರೆ ನೀಡಿದ್ದಾರೆ ಎಂಡಿ ಸತ್ಯವತಿ.

ಬಿಎಂಟಿಸಿಯಲ್ಲಿ ಬಹಳ ವರ್ಷಗಳಿಂದಲೂ ಡಿಪೋ ವ್ಯವಸ್ಥಾಪಕರ ಕಿರುಕುಳ, ಸಣ್ಣಪುಟ್ಟ ಪ್ರಕರಣಗಳಿಗೂ ಕೇಸ್ ದಾಖಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ರೀತಿಯ ಪ್ರಕರಣಗಳು ಸಿಬ್ಬಂದಿಗಳ ವಿರುದ್ಧ ದಾಖಲಾಗಿದ್ದು, ಆ ಎಲ್ಲ ಒಟ್ಟು 6,960 ಕೇಸ್‌ಗಳನ್ನು ಖುಲಾಸೆ ಮಾಡಲಾತ್ತಿದೆ. ಬಸ್‌ಗಳ ಆಪರೇಷನ್ ಕಾರ್ಯಾಚರಣೆ, ಮಾನವ ಸಂಪನ್ಮೂಲಗಳ ಸದ್ಬಳಕೆಯಿಂದ ಹಾಗೂ ಕಾರ್ಮಿಕರ ಹಿತ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸತ್ಯವತಿ ತಿಳಿಸಿದ್ದಾರೆ.

ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ರೂಲ್-23ರಲ್ಲಿ ಬರೋ 26 ಗೈರು ಹಾಜರಿ ಪ್ರಕರಣ, 284 ಅಶಿಸ್ತು ಪ್ರಕರಣ ಸೇರಿ ಒಟ್ಟು 544 ಗಂಭೀರ ಶಿಕ್ಷಾರ್ಹ ಪ್ರಕರಣಗಳು ಖುಲಾಸೆಗೊಳಿಸಲಾಗುತ್ತಿದೆ. ಅದರಲ್ಲಿ ಅಮಾನತಾಗಿ ರಿವೋಕ್ ಆದ ಪ್ರಕರಣಗಳೂ ಸೇರಿವೆ. ಹಾಗೆಯೇ ಡಿಪೋಗಳಲ್ಲಿ ದಾಖಲಾದ ಒಟ್ಟು 2,276 ಗೈರು ಹಾಜರಿ, 4,140 ಅಶಿಸ್ತು ಪ್ರಕರಣಗಳು ಸೇರಿ ಒಟ್ಟು 6,416 ಪ್ರಕರಣಗಳನ್ನು ಕೈ ಬಿಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇನ್ನು ಒಟ್ಟಾರೆ 6,960 ಕೇಸ್‌ಗಳನ್ನು ಖುಲಾಸೆಯಾಗುತ್ತಿದ್ದು, ಈಗಾಗಲೇ ಈ ಕೇಸ್‌ಗಳಲ್ಲಿ ಟ್ರಾಫಿಕ್ ಸೆನ್ಸಾರ್ ಉಲ್ಲಂಘನೆ, ಎಲ್ಲೆಂದರಲ್ಲಿ ಬಸ್ ನಿಲುಗಡೆ, ಬಸ್ ಚಾಲನೆ ವೇಳೆ ಮೊಬೈಲ್ ಬಳಕೆ, ಕರ್ತವ್ಯದ ವೇಳೆ ಸಮವಸ್ತ್ರ ಧರಿಸದೇ ಇರೋದು ಹೀಗೆ ಹಲವು ಪ್ರಕರಣಗಳಿಗೆ ಲಘು ಹಾಗೂ ಏಕರೂಪದ ಶಿಕ್ಷೆ ಕೊಟ್ಟು ಖುಲಾಸೆಗೊಳಿಸಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರಾದ ಸತ್ಯವತಿ ತಿಳಿಸಿದ್ದಾರೆ.

ಈ ರೀತಿ ನೌಕರರ ಪರವಾದ ಕೆಲಸ ಮಾಡು ಎಂಡಿ ಅವರ ವಿರುದ್ಧ ಎಐಟಿಯುಸಿಯ ಅಧ್ಯಕ್ಷರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕೆಲ ನೌಕರರು ಅಧ್ಯಕ್ಷರ ವಿರುದ್ಧ ಸಮಾಜಿಕ ಜಾಲತಾಣಗಳಲ್ಲೇ ಆಡಿಯೋಗಳನ್ನು ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.

ನೌಕರರ ಪರವಾದ ಯಾವುದೇ ನಿರ್ಧಾರವನ್ನು ಯಾರದೆ ಮುಲಾಜಿಗೂ ಒಳಗಾಗದೆ ಎಂಡಿ ಸತ್ಯವತಿ ಅವರು ತೆಗೆದುಕೊಳ್ಳುತ್ತಿರುವುದರಿಂದ ನಮಗೆ ಸ್ವಲ್ಪ ಒತ್ತಡರಹಿತವಾಗಿ ಕೆಲಸ ಮಾಡುವುದಕ್ಕೆ ಸಾಧ್ಯವಾಗುತ್ತಿದೆ. ನಾವು ಈ ಸಂಘಟನೆಗಳ ಹಿಂದೆ ಬಿದ್ದು ಅಮಾನತು, ವರ್ಗಾವಣೆ, ವಜಾ ಮತ್ತು ಪೊಲೀಸ್‌ ಕೇಸ್‌ಗಳನ್ನು ಎದುರಿಸಿದ್ದೇವೆ ಎಂದು ಸಮಸ್ಯೆಯ ಸುಳಿಯಿಂದ ಹೊರ ಬಂದ ನೌಕರರು ಹೇಳಿದ್ದಾರೆ.

ಇನ್ನು ಮುಂದೆ ಈರೀರಿಯ ಹೋರಾಟಗಳಿಗೆ ಅವಕಾಶ ಕೊಡದಂತೆ ನಮ್ಮ ಎಂಡಿ ಅವರು ನಮಗೆ ಸೌಲಭ್ಯಗಳನ್ನು ಸರ್ಕಾರದ ಮಟ್ಟದಲ್ಲಿ ಕೊಡಿಸುವತ್ತ ಮನಸ್ಸು ಮಾಡಬೇಕು. ನಾವು ಯಾವುದೇ ಸಂಘಟನೆಗಳನ್ನು ನಂಬಿ ಹಿಂದೆ ಹೋಗುವುದಿಲ್ಲ ಸಾರ್ವಜನಿಕರಿಗೆ ಉತ್ತಮ ಸಾರಿಗೆ ನೀಡುತ್ತೇವೆ ಎಂದು ನೌಕರರು ವಾಗ್ದಾನ ಮಾಡಿದ್ದಾರೆ.

Leave a Reply

error: Content is protected !!
LATEST
ದೇಶದ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಇನ್ನಿಲ್ಲ 2024ರ ಜನವರಿಯಿಂದ ಈವರೆಗೂ 48 ದೌರ್ಜನ್ಯ ಪ್ರಕರಣಗಳು ದಾಖಲು: ಅಪರ ಜಿಲ್ಲಾಧಿಕಾರಿ ಅಮರೇಶ್ KSRTC: ಡಿ.31ರಿಂದ ಕರೆ ಕೊಟ್ಟಿರುವ ಮುಷ್ಕರ ಬೆಂಬಲಿಸದ ನೌಕರರು- ವಿಲವಿಲ ಒದ್ದಾಡುತ್ತಿರುವ ಜಂಟಿ ಸಮಿತಿ ಮುಖಂಡರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಡಿ.27ರಂದು BMTC & KSRTC ನಿವೃತ್ತ ನೌಕರರ ಪ್ರತಿಭಟನೆ ಮೈಸೂರು: ದೆಹಲಿ ರೈತ ಹೋರಾಟ ಬೆಂಬಲಿಸಿ ಮೇಣದ ಬತ್ತಿ ಬೆಳಗಿಸಿ ಪ್ರತಿಭಟನೆ KSRTC: ಯಾರದೋ ಆರ್ಥಿಕ ಲಾಭಕ್ಕಾಗಿ 4 ವರ್ಷಕ್ಕೊಮ್ಮೆ ನಡೆಯೋ ಈ ಚೌಕಾಸಿ ಪದ್ಧತಿ ಬಿಟ್ಟು ಶಾಶ್ವತ ಪರಿಹಾರಕ್ಕೆ ಬದ್ಧರಾಗೋ... KSRTC: ರಸ್ತೆಗಿಳಿದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್​​ ಬಸ್​ಗಳು- ಸಚಿವರಿಂದ ಲೋಕಾರ್ಪಣೆ KSRTCಗೆ ₹6543 ಕೋಟಿ ಅನುದಾನ ಬಿಡುಗಡೆ ಮಾಡಿರುವ ನಮಗೆ ₹414 ಕೋಟಿ ಬಿಡುಗಡೆ ಮಾಡುವುದು ಕಷ್ಟವೇ: ರಾಮಲಿಂಗಾರೆಡ್ಡಿ ಗಾಯಾಳು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ವಿಚಾರಿಸಿದ ಸಚಿವ ಪರಮೇಶ್ವರ್‌ KSRTC ಅಧಿಕಾರಿಗಳಿಲ್ಲದ ಡಿ.31ರ ಸಾರಿಗೆ ಮುಷ್ಕರ ನೌಕರರ ಹರಕೆ ಕುರಿ ಮಾಡುವ ಹೋರಾಟವೇ..!?