ಹೈದರಾಬಾದ್: ಚಾಲಕನ ನಿಯಂತ್ರ ತಪ್ಪಿ ರಸ್ತೆಗೆ ಬಿದಿದ್ದ ಬಸ್ ಬೆಂಕಿಯಿಂದ ಧಗಧಗಿಸಿದ ಪರಿಣಾಮ ಬಸ್ನಲ್ಲಿದ್ದ ಮಹಿಳೆಯೊಬ್ಬರು ಸಜೀವವಾಗಿ ದಹನಗೊಂಡಿದ್ದಾರೆ.
ತೆಲಂಗಾಣದ ಗದ್ವಾಲ್ ಜಿಲ್ಲೆಯ ಜೋಗುಲಾಂಬದ ಬಳಿ ಈ ಘಟನೆ ನಡೆದಿದ್ದು, ಜಗನ್ ಅಮೆಜಾನ್ ಟ್ರಾವೆಲ್ನ ವೋಲ್ವೋ ಬಸ್ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೈದರಾಬಾದ್ನಿಂದ ಚಿತ್ತೂರಿಗೆ ತೆರಳುತ್ತಿತ್ತು.
ಈ ವೇಳೆ ಗದ್ವಾಲ್ನ ಜೋಗುಲಾಂಬದ ರಸ್ತೆ ಬಳಿ ಬರುತ್ತಿದ್ದಂತೆ ರಾತ್ರಿ 3 ಗಂಟೆ ಸುಮಾರಿಗೆ ಚಾಲಕನ ನಿಯಂತ್ರ ತಪ್ಪಿ ಬಸ್ ಬಿದ್ದು ಹಾಗೇ ಜಾರಿಕೊಂಡು ಹೋಗಿದೆ. ಪರಿಣಾಮ ಬಸ್ಗೆ ಬೆಂಕಿ ಹೊತ್ತಿಕೊಂಡು ಧಗಧಗಿಸಿದೆ.
ಈ ವೇಳೆ ಓರ್ವ ಮಹಿಳೆ ಸಜೀವ ದಹನಗೊಂಡಿದ್ದು, ಒಳಗಿದ್ದ ಎಲ್ಲ ಪ್ರಯಾಣಿಕರು ಇಳಿದು ಜೀವ ಉಳಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಬಸ್ ಒಳಗಿದ್ದ ಒಬ್ಬ ಮಹಿಳೆಯ ಕೈ ಸಿಕ್ಕಿಕೊಂಡಿದ್ದರಿಂದ ಹೊರಗೆ ಬರಲಾಗಿಲ್ಲ.
ಕ್ಷಣಾರ್ಧದಲ್ಲೇ ಬೆಂಕಿ ಇಡೀ ಬಸ್ ಅನ್ನು ವ್ಯಾಪಿಸಿಕೊಂಡಿದ್ದರಿಂದ ಸಿಕ್ಕಿಕೊಂಡಿದ್ದ ಮಹಿಳೆ ಸಜೀವವಾಗಿ ದಹನಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ವೇಳೆ ಬಸ್ ಇಳಿಯುತ್ತಿದ್ದಾಗ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಒಬ್ಬರ ಪರಿಸ್ಥತಿ ಗಂಭೀರವಾಗಿದೆ ಎನ್ನಲಾಗಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.