NEWSನಮ್ಮಜಿಲ್ಲೆನಮ್ಮರಾಜ್ಯ

ಮಧ್ಯಮ ವರ್ಗದ ವ್ಯಕ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಮೌನಕ್ಕೆ ಶರಣಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ವಿಜಯಪಥ ಸಮಗ್ರ ಸುದ್ದಿ

ಮುಂಬೈ: ಮಧ್ಯಮ ವರ್ಗದ ವ್ಯಕ್ತಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರ ನೀಡಲಾಗದೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೌನಕ್ಕೆ ಶರಣಾದ ಘಟನೆ ರಾಷ್ಟ್ರೀಯ ಸುದ್ದಿ ವಾಹಿನಿಯ ಸಂದರ್ಶನದಲ್ಲಿ ಜರುಗಿದ್ದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಆ ವಿಡಿಯೋ ಸಖತ್ ವೈರಲ್ ಆಗಿದೆ.

ಅಸಲಿಗೆ ಆಗಿದ್ದೇನು?:  ಮುಂಬೈನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಧ್ಯಮ ವರ್ಗದ ನಾಗರಿಕರೊಬ್ಬರು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪ್ರಶ್ನೆ ಕೇಳಿದ್ದಾರೆ. ನಾಗರಿಕನ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ ಅನ್ನೋ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೌನಕ್ಕೆ ಜಾರಿದ್ದಾರೆ. ಮಧ್ಯಮ ವರ್ಗದ ತೆರಿಗೆ ಕಷ್ಟವನ್ನು ನಿರ್ಮಲಾ ಸೀತಾರಾಮನ್ ಎದುರು ನಾಗರಿಕನೊಬ್ಬ ಎಳೆಎಳೆಯಾಗಿ ಬಿಚ್ಚಿಟ್ಟು ಗಮನ ಸೆಳೆದಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರಿಗೆ ಪ್ರಶ್ನೆ ಕೇಳಿದ ನಾಗರಿಕ ಕೇಂದ್ರ ಸರ್ಕಾರವು ಬ್ರೋಕರ್‌ಗಿಂತ ಹೆಚ್ಚು ಸಂಪಾದನೆ ಮಾಡುತ್ತಿದೆ. ಅದು ಹೇಗೆ ಅಂದ್ರೆ ನಾವು ಸಾಕಷ್ಟು ತೆರಿಗೆಗಳನ್ನು ಕಟ್ಟುತ್ತಿದ್ದೇವೆ. ಜಿಎಸ್‌ಟಿ, ಸಿಜಿಎಸ್‌ಟಿ, ಸ್ಟಾಂಪ್ ಡ್ಯೂಟಿ, ಎಸ್‌ಟಿಟಿ, ಎಲ್‌ಟಿಸಿಜಿ ಕಟ್ಟುತ್ತಿದ್ದೇವೆ. ಇದರಿಂದಾಗಿ ಇಂದು ಕೇಂದ್ರ ಸರ್ಕಾರವು ಬ್ರೋಕರ್‌ಗಿಂತ ಹೆಚ್ಚಿನ ಸಂಪಾದನೆ ಮಾಡುತ್ತಿದೆ ಎಂದಿದ್ದಾರೆ.

ನಾಗರಿಕನ ಈ ಪ್ರಶ್ನೆಗೆ ವೇದಿಕೆ ಮೇಲಿದ್ದ ನಿರ್ಮಲಾ ಸೀತಾರಾಮನ್ ಅವರು ನಕ್ಕಿದ್ದಾರೆ. ನಾಗರಿಕನ ಪ್ರಶ್ನೆಗೆ ಜೋರಾಗಿ ಚಪ್ಪಾಳೆ ಹೊಡೆದು ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಮುಂದುವರಿದು ಮಾತನಾಡಿದ ನಾಗರಿಕ ನಾನು ಎಲ್ಲಾ ಹೂಡಿಕೆ ಮಾಡುತ್ತಿದ್ದೇನೆ. ನಾನು ಎಲ್ಲಾ ರಿಸ್ಕ್‌ಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಆದರೆ ಭಾರತ ಸರ್ಕಾರವು ನನ್ನ ಎಲ್ಲಾ ಲಾಭವನ್ನು ತೆಗೆದುಕೊಳ್ಳುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರವು ನನ್ನ ಸ್ಲೀಪಿಂಗ್ ಪಾರ್ಟನರ್. ನಾನು ಹಣದೊಂದಿಗೆ ವರ್ಕಿಂಗ್ ಪಾರ್ಟನರ್. ನನ್ನ ರಿಸ್ಕ್, ಕೆಲಸ ಮಾಡುವ ಸಿಬ್ಬಂದಿ ಎಲ್ಲವೂ ನಮ್ಮದು. ಇದರ ಬಗ್ಗೆ ನೀವು ಏನು ಹೇಳುತ್ತೀರಿ ಎಂದು ಕೇಂದ್ರ ಸಚಿವೆಗೆ ನಾಗರಿಕನು ಪ್ರಶ್ನಿಸಿದ್ದಾರೆ.

ಎರಡನೇ ಪ್ರಶ್ನೆಗೂ ನಿರ್ಮಲಾ ಉತ್ತರವಿಲ್ಲ!: ಕೇಂದ್ರ ಹಣಕಾಸು ಸಚಿವರಿಗೆ ಎರಡನೇ ಪ್ರಶ್ನೆ ಕೇಳಿದ ನಾಗರಿಕ, ನೀವು ಕ್ಯಾಶ್ ಮೂಲಕ ಹಣ ನೀಡದಂತೆ ತೆಗೆದು ಹಾಕಿದ್ದೀರಿ. ಲೋಧಾ ಕಂಪನಿಯ ಲೋಧಾ ಅವರು ಇಲ್ಲಿದ್ದಾರೆ. ಬಾಂಬೆಯಲ್ಲಿ ಯಾರಾದರೂ ಇಂದು ಮನೆ ಖರೀದಿ ಮಾಡಲು ಬಯಸಿದರೆ ದೊಡ್ಡ ಸಂಕಷ್ಟ ಎದುರಾಗುತ್ತದೆ. ಯಾಕೆಂದರೆ ನಾವು ತೆರಿಗೆ ಕಟ್ಟುತ್ತೇವೆ. ನನ್ನ ಬಳಿ ವೈಟ್ ಮನಿ ಇದೆ. ಈಗ ಎಲ್ಲವನ್ನೂ ನಾವು ಚೆಕ್ ಮೂಲಕವೇ ಪಾವತಿ ಮಾಡಬೇಕು.

ಲೋಧಾ ಅವರು ಕ್ಯಾಶ್‌ನಲ್ಲಿ ಹಣ ತೆಗೆದುಕೊಳ್ಳಲ್ಲ. ಭಾರತ ಸರ್ಕಾರಕ್ಕೆ ಎಲ್ಲಾ ತೆರಿಗೆ ಕಟ್ಟಿದ ಬಳಿಕ ಬ್ಯಾಂಕ್ ಬ್ಯಾಲೆನ್ಸ್ ಇರುತ್ತೆ. ಮತ್ತೆ ನಾನು ಮನೆ ತೆಗೆದುಕೊಳ್ಳುವಾಗ, ನಾನು ಸ್ಟಾಂಪ್ ಡ್ಯೂಟಿ ಕಟ್ಟಬೇಕು. ನಾನು ಹಣಕ್ಕೆ ತಕ್ಕಂತೆ ಜಿಎಸ್‌ಟಿ ಕಟ್ಟಬೇಕು, ಇದು ಶೇ.11 ರಷ್ಟಾಗುತ್ತೆ. ಬಾಂಬೆಯಲ್ಲಿ ಮನೆ ಖರೀದಿಸುವಾಗ ಶೇ.11ರಷ್ಟು ಹಣ ನನ್ನ ಪಾಕೆಟ್‌ನಿಂದ ಹೋಗುತ್ತೆ. ಹೇಗೆ ನೀವು ನನಗೆ ಕೇಂದ್ರ ಸರ್ಕಾರದಿಂದ ಸಹಾಯ ಮಾಡುತ್ತೀರಿ ಹೇಳಿ ಎಂದು ಪ್ರಶ್ನಿಸಿದ್ದಾರೆ.

ಸೀಮಿತ ಸಂಪನ್ಮೂಲ ಹೊಂದಿರುವ ಸಣ್ಣ ವ್ಯಕ್ತಿಗೆ ಮನೆ ಖರೀದಿಗೆ ಕೇಂದ್ರ ಸರ್ಕಾರ ಹೇಗೆ ಸಹಾಯ ಮಾಡುತ್ತೆ ಹೇಳಿ? ಕೇಂದ್ರ ಸರ್ಕಾರವು ಸ್ಲೀಪಿಂಗ್ ಪಾರ್ಟನರ್, ನಾನು ಯಾವುದೇ ಆದಾಯ ಇಲ್ಲದೇ ವರ್ಕಿಂಗ್ ಪಾರ್ಟನರ್ ಎಂದು ಹೇಳಿರುವ ನಾಗರಿಕನ ಈ ಪ್ರಶ್ನೆಗೆ ಉತ್ತರ ನೀಡಲಾಗದೆ ಕೇಂದ್ರ ಸಚಿವೆ ನಿರ್ಮಲಾ ಅವರು ಸೈಲೆಂಟ್ ಆಗಿದ್ದಾರೆ. ಕೊನೆಗೆ ಸ್ಲೀಪಿಂಗ್ ಪಾರ್ಟನರ್ ಆಗಿ ಇಲ್ಲಿ ಕುಳಿತುಕೊಂಡು ಉತ್ತರ ನೀಡಲಾಗಲ್ಲ ಎಂದಷ್ಟೇ ಉತ್ತರಿಸಿದ್ದಾರೆ.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ