ಚಿಕ್ಕಮಗಳೂರು: ಕರ್ನಾಟಕರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎರಡು ಬಸ್ಗಳು ರಸ್ತೆ ಮಧ್ಯೆ ಕೆಟ್ಟು ನಿಂತಿದ್ದರಿಂದ ಚಾರ್ಮಾಡಿ ಘಾಟ್ನ ಅಣ್ಣಪ್ಪಸ್ವಾಮಿ ದೇವಾಲಯದ ಬಳಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಈ ಟ್ರಾಫಿಕ್ ಜಾಮ್ನಿಂದಾಗಿ ಪ್ರವಾಸಿಗರು, ಸ್ಥಳೀಯ ಪ್ರಯಾಣಿಕರು ಗಂಟೆಗಂಟೆಲೇ ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ ಕಿಲೋ ಮೀಟರ್ ಗಟ್ಟಲೆ ವಾಹನಹಳು ನಿಂತಿದ್ದು, ಹಿಂದಕ್ಕೂ ಹೋಗಲಾಗದೆ ಮುಂದೆಯೂ ಚಲಿಸಲಾಗದೆ ಸಮಸ್ಯೆಗೆ ಸಿಲುಕಿದ್ದಾರೆ ಜನರು.
ಇನ್ನು ಮಳೆಯು ಬೀಡುತ್ತಿದ್ದು, ಈ ಮಳೆಯಲ್ಲಿ ಯಾವ ಕಡೆ ಹೋಗಬೇಕು ಎನ್ನುವುದು ಗೊತ್ತಾಗದೆ ಪರದಾಡುತ್ತಿದ್ದಾರೆ. ಇದು ಚಿಕ್ಕಮಗಳೂರು-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಾಗಿರುವುದರಿಂದ ವಾಹನಗಳ ಓಡಾಟ ಹೆಚ್ಚಾಗಿರುತ್ತದೆ ಹೀಗಾಗಿ ಕಿಲೋ ಮೀಟರ್ ಗಟ್ಟಲೆ ವಾಹನಗಳು ನಿಂತಿವೆ.
ಇತ್ತ ನಿರಂತರ ಮಳೆಯಿಂದ ಪ್ರವಾಸಿಗರು ಪ್ರಯಾಣಿಕರು ಪರದಾಡಿದ್ದು ಇಂತಹ ಟ್ರಾಫಿಕ್ನಲ್ಲಿ ಮಂಗಳೂರಿಗೆ ಹೋಗುತ್ತಿದ್ದ ಆಂಬುಲೆನ್ಸ್ವೊಂದು ಕೂಡ ಸಿಲುಕಿಕೊಂಡಿದ್ದು ಒಳಗಿದ್ದ ರೋಗಿಯ ಜೀವ ಉಳಿಸಲು ಆಂಬುಲೆನ್ಸ್ ಸಿಬ್ಬಂದಿ ಹರಸಹಾಸ ಪಡುತ್ತಿದ್ದಾರೆ. ಇತ್ತ ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಲು ಬಣಕಲ್ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.