ಬೆಂಗಳೂರು: ಮನೆಯಲ್ಲೇ ಬಿಟ್ಟು ಕೆಲಸಕ್ಕೆ ಹೋಗಿದ್ದ ವೇಳೆ ಸಂಪ್ಗೆ 5 ವರ್ಷದ ಬಾಲಕ ಬಿದ್ದು ಮೃತಪಟ್ಟಿರುವ ಘಟನೆ ರಾಜಧಾನಿಯ ಅಯ್ಯಪ್ಪ ನಗರದ ವಿಶಾಲ್ ಮಾರ್ಟ್ ಮುಂಭಾಗ ನಡೆದಿದೆ.
ನೇಪಾಳ ಮೂಲದ ಹಾಲಿ ಬೆಂಗಳೂರು ನಿವಾಸಿಗಳ ಮಗು ಸುಬೀನ್ ಎಂಬುವುದೇ ಮೃತ ಬಾಲಕ.
ನೇಪಾಳ ಮೂಲದ ದಂಪತಿ ಬೆಂಗಳೂರಿನಲ್ಲೇ ನೆಲೆಸಿದ್ದು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ನಡುವೆ ಮಗುವನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದರು. ಕೆಲಸದಿಂದ ಬಂದು ಮಗು ಕಾಣದೇ ಇದ್ದಾಗ ತಂದೆ ತಾಯಿ ಹುಡುಕಾಟ ನಡೆಸಿದ್ದಾರೆ.
ಎಲ್ಲೆಡೆ ಹುಡುಕಿದ ಬಳಿಕ ಸಂಪಿನ ಬಳಿ ಬಂದು ನೋಡಿದಾಗ ಮಗು ಸಂಪಿಗೆ ಬಿದ್ದಿರೋದು ಗೊತ್ತಾಗಿದೆ. ಕೂಡಲೇ ಕೆ.ಆರ್.ಪುರ ಸರ್ಕಾರಿ ಆಸ್ಪತ್ರೆ ದಾಖಲು ಮಾಡಿದ್ದಾರೆ. ಆದರೆ, ಆ ವೇಳೆಗಾಗಲೇ ಮಗು ಮೃತಪಟ್ಟದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಈ ಸಂಬಂಧ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.