ಬೆಂಗಳೂರು: ಮಾ.27ರಂದು ಆರಂಭವಾದ ಎಸ್ಎಸ್ಎಲ್ಸಿ ಪರೀಕ್ಷೆ ಇಂದು ಮುಕ್ತಾಯವಾಗಿದೆ. ಇದರಿಂದ ಎಸ್ಎಸ್ಎಲ್ಸಿಯ ಎಲ್ಲಾ ವಿದ್ಯಾರ್ಥಿಗಳು ನಿರಾಳರಾಗಿದ್ದಾರೆ.!?
ಹೌದು! ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿಗದಿಪಡಿಸಿದ್ದ ಎಸ್ಎಸ್ಎಲ್ಸಿ ಪರೀಕ್ಷೆ ಸಮಯಕ್ಕೆ ಸರಿಯಾಗಿ ಆಗಿದ್ದರೆ ಈ ರೀತಿಯ ಶೀರ್ಷಿಕೆಯೊಂದಿಗೆ ದೃಶ್ಯ ಮತ್ತು ಪ್ರಿಂಟ್ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿತ್ತು.
ಆದರೆ, ಕೊರೊನಾ ಎಂಬ ವಿಶ್ವ ಹೆಮ್ಮಾರಿ ಆವರಿಸಿದ್ದು, ನಡೆಯಬೇಕಿದ್ದ ಪರೀಕ್ಷೆ ಅರ್ನಿದಿಷ್ಟ ಅವಧಿವರೆಗೆ ಮುಂದೂಡಿದೆ. ಪರಿಣಾಮ ಎಲ್ಲಾ ವಿಷಯದ ಪರೀಕ್ಷೆಗಳನ್ನು ಬರೆದು ಇಂದು ಕೊನೆಯ ವಿಷಯವಾದ ಸಮಾಜ ವಿಜ್ಞಾನ ಪರೀಕ್ಷೆ ಬರೆದು ಎಲ್ಲಾ ವಿದ್ಯಾರ್ಥಿಗಳು ನಿರಾಳರಾಗುತ್ತಿದ್ದರು. ಆದರೆ ಇಲ್ಲಿ ತಾನೊಂದು ಬಗೆದರೆ ದೈವವೊಂದು ಬಗೆದಂತೆ ಎಂಬ ಗಾದೆ ಮಾತುನಂತೆ ವಿದ್ಯಾರ್ಥಿಗಳು ಅಡಕತ್ತರಿಯಲ್ಲಿ ಇಂದು ಸಿಲುಕಿ ಒದ್ದಾಡುತ್ತಿದ್ದಾರೆ.
ಇಂದು ವಿದ್ಯಾರ್ಥಿಗಳಲ್ಲಿ ನಿರಾಳತೆ ಬದಲು ಆತಂಕದ ಛಾಯೆ ಮನೆಮಾಡಿದೆ. ನಮಗೆ ಪರೀಕ್ಷೆ ನಡೆಯುತ್ತದೋ ಇಲ್ಲವೋ ಎಂಬ ಆತಂಕದಲ್ಲಿ ಸಮಯವನ್ನು ಇಂದಿಗೂ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ದೂಡುತ್ತಿದ್ದಾರೆ. ಜತೆಗೆ ಪರೀಕ್ಷೆ ಸಮಯ ಮುಂದೊಂದುದಿನ ನಿಗದಿಯಾದರೆ ನಾವು ಮತ್ತೆ ಯಾವರೀತಿ ಪರೀಕ್ಷೆಗೆ ತಯಾರಿ ನಡೆಸಬೇಕು ಎಂಬ ಭಯದಲ್ಲಿಯೂ ಕಾಲ ದೂಡುತ್ತಿದ್ದಾರೆ.
ಇದನ್ನೂ ಓದಿರಿ ಮಾರ್ಚ್ 27 ರಿಂದ ಎಸ್ಎಸ್ಎಲ್ಸಿ ಪರೀಕ್ಷೆ
ಇನ್ನು ಕೆಲ ವಿದ್ಯಾರ್ಥಿಗಳು ನಮಗೆ ಯಾವ ಸಮಯದಲ್ಲಿ ಬೇಕಾದರೂ ಪರೀಕ್ಷೆ ದಿನಾಂಕ ನಿಗದಿಯಾಗಲಿ. ಮನಗೇನು ಭಯವಿಲ್ಲ. ನಾವು ಪರೀಕ್ಷೆ ಬರೆಯಲು ಸದಾ ಸಿದ್ಧರಿದ್ದೇವೆ ಎಂದು ಹೇಳುತ್ತಲ್ಲೂ ಇದ್ದಾರೆ.
ಒಟ್ಟಾರೆಯಾಗಿ ಯಾವುದೇ ಸಮಸ್ಯೆ ಇಲ್ಲದೆ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿಗದಿಪಡಿಸಿದ್ದ ಸಮಯಕ್ಕೆ ಸರಿಯಾಗಿ ಎಕ್ಸಾಂ ಮುಗಿದಿದ್ದರೆ ಇಂದು ವಿದ್ಯಾರ್ಥಿಗಳಲ್ಲಿರುವ ಆತಂಕ ದುಗುಡ ದೂರವಾಗುತ್ತಿತ್ತು. ಆದರೆ ಇಡೀ ವಿಶ್ವವನ್ನೇ ಕಾಡುತ್ತಿರುವ ಕೋವಿಡ್ 19 ವಿದ್ಯಾರ್ಥಗಳನ್ನು ಒಂದು ರೀತಿಯಲ್ಲಿ ಪೀಡಿಸದೆಬಿಡುತ್ತಿಲ್ಲ.