ಬೆಂಗಳೂರು: ಗ್ರಾಹಕರಿಗೆ ಕೆನರಾ ಬ್ಯಾಂಕ್ ನೀಡುತ್ತಿರುವ ಸೇವೆಗಳಲ್ಲಿ ಒಂದಾದ ಎಫ್ಡಿ ಯೋಜನೆಯ ಬಡ್ಡಿದರದ ಬಗ್ಗೆ ಆಸಕ್ತ ಬ್ಯಾಂಕ್ ಗ್ರಾಹಕರು ಪರಿಶೀಲಿಸಿ ಹೂಡಿಕೆ ಮಾಡಬಹುದಾಗಿದೆ.
ಇನ್ನು 7 ದಿನಗಳಿಂದ 45 ದಿನಗಳವರೆಗೆ ಸಾಮಾನ್ಯ ನಾಗರಿಕರಿಗೆ 4% ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ 4% ಬಡ್ಡಿದರ ನೀಡಲಾಗುತ್ತದೆ. ಅದರಂತೆ 46 ದಿನಗಳಿಂದ 90 ದಿನಗಳವರೆಗೆ ಸಾಮಾನ್ಯ ನಾಗರಿಕರಿಗೆ 5.25% ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ 5.25% ಬಡ್ಡಿದರ ನೀಡಲಾಗುತ್ತದೆ.
91 ದಿನಗಳಿಂದ 179 ದಿನಗಳವರೆಗೆ ಸಾಮಾನ್ಯ ನಾಗರಿಕರಿಗೆ 5.50% ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ 5.50% ಬಡ್ಡಿದರ ನೀಡಲಾಗುತ್ತದೆ. 180 ದಿನಗಳಿಂದ 269 ದಿನಗಳವರೆಗೆ ಸಾಮಾನ್ಯ ನಾಗರಿಕರಿಗೆ 6.15% ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ 6.65% ಬಡ್ಡಿ ಸಿಗಲಿದೆ.
270 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಗೆ ಸಾಮಾನ್ಯ ನಾಗರಿಕರಿಗೆ 6.25% ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ 6.75% ಬಡ್ಡಿದರ ನೀಡಲಾಗುತ್ತದೆ. ಒಂದು ವರ್ಷದ ಅವಧಿಗೆ ಸಾಮಾನ್ಯ ನಾಗರಿಕರಿಗೆ 6.85% ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ 7.35% ಬಡ್ಡಿ ಸೇರಿಸಿ ನೀವು ಹೂಡಿದ ಹಣದ ಜತೆಗೆ ಬಡ್ಡಿಯೂ ಬರಲಿದೆ.
ಇನ್ನು 444 ದಿನಗಳ ಅವಧಿಗೆ ಸಾಮಾನ್ಯ ನಾಗರಿಕರಿಗೆ 7.25% ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ 7.75% ಬಡ್ಡಿದರ ನೀಡಲಾಗುತ್ತದೆ. ಒಂದು ವರ್ಷಕ್ಕಿಂತ ಹೆಚ್ಚು, ಆದರೆ 2 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್ಡಿ ಮಾಡಿಸಿದರೆ ಸಾಮಾನ್ಯ ನಾಗರಿಕರಿಗೆ 6.85% ಮತ್ತು ಹಿರಿಯ ನಾಗರಿಕರಿಗೆ 7.35% ಬಡ್ಡಿ ಹಣ ಸಿಗಲಿದೆ.
2 ವರ್ಷಕ್ಕಿಂತ ಹೆಚ್ಚು, ಆದರೆ 3 ವರ್ಷಕ್ಕಿಂತ ಕಡಿಮೆ ಅವಧಿಗೆ ಸಾಮಾನ್ಯ ನಾಗರಿಕರಿಗೆ 6.85% ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ 7.35% ಬಡ್ಡಿದರ ನೀಡಲಾಗುತ್ತದೆ. 3 ವರ್ಷಕ್ಕಿಂತ ಹೆಚ್ಚು, ಆದರೆ 5 ವರ್ಷಕ್ಕಿಂತ ಕಡಿಮೆ ಅವಧಿಗೆ ಸಾಮಾನ್ಯ ನಾಗರಿಕರಿಗೆ 6.80% ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ 7.30% ಬಡ್ಡಿದರ ನೀಡಲಾಗುತ್ತದೆ.
ಅದರಂತೆ 5 ವರ್ಷಗಳಿಂದ 10 ವರ್ಷಗಳವರೆಗೆ ಸಾಮಾನ್ಯ ನಾಗರಿಕರಿಗೆ 6.70% ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ 7.20% ಬಡ್ಡಿದರ ನೀಡಲಾಗುತ್ತದೆ. ಹಾಗಾಗಿ ನಾವು 5 ವರ್ಷದ ಅವಧಿಯ 20,000 ರೂ. ಎಫ್ಡಿ ಮಾಡಿಸಿದರೆ 7.20% ಬಡ್ಡಿದರದೊಂದಿಗೆ ಒಟ್ಟು 28,575 ರೂ. ಸಿಗಲಿದೆ. ನಾವು 10 ವರ್ಷದ ಅವಧಿಯ 20,000 ರೂ. ಎಫ್ಡಿ ಮಾಡಿಸಿದರೆ 7.20% ಬಡ್ಡಿದರದೊಂದಿಗೆ ಒಟ್ಟು 40,826 ರೂ. ಸಿಗಲಿದೆ.
ಇನ್ನು ನೀವು ಬ್ಯಾಂಕ್ನಲ್ಲಿ ಹೆಚ್ಚು ವರ್ಷ ಎಫ್ಡಿ ಮಾಡಿದಷ್ಟು ಬಡ್ಡಿಯು ದುಪ್ಪಟ್ಟಾಗುತ್ತದೆ. ಅದು ಹೇಗೆಂದರೆ ತಿಂಗಳಿಂದ ತಿಂಗಳಿಗೆ ನಿಮ್ಮ ಹಣಕ್ಕೆ ಸಿಗುವ ಬಟ್ಟಿಗೂ ಬಡ್ಡಿ ಸಿಗಲಿದೆ. ಹೀಗಾಗಿ 10 ವರ್ಷ ಅದಕ್ಕೂ ಮೇಲ್ಪಟ್ಟು ಎಫ್ಡಿ ಮಾಡಿಸಿದರೆ ಹಾಕಿದ ಹಣಕ್ಕೆ ದುಪ್ಪಟ್ಟು ಹಣ ಸಿಗಲಿದೆ. ಹೆಚ್ಚಿನ ಮಾಹಿತಿಗೆ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ವಿಚಾರಿಸಬಹುದು.