ಮೈಸೂರು: ಕೃಷಿ ಸಮಸ್ಯೆಗಳಿಗೆ ಪೂರಕವಲ್ಲದ ರೈತರ ಕಡೆಗಣಿಸಿ ರೈತರ ತುಟಿಗೆ ತುಪ್ಪ ಹಚ್ಚಿರುವ ಬಜೆಟ್ ಇದಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಆತ್ತಹಳ್ಳಿ ದೇವರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಕೇಂದ್ರ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಅನುದಾನ ಹೆಚ್ಚಳ ಮಾಡಿದ್ದರು, ರೈತರ ನೈಜ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ದಿಕ್ಕಿನಲ್ಲಿ ಕಾರ್ಯಯೋಜನೆ ಇಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಖಾತ್ರಿ ಮಾಡುವ ಬಗ್ಗೆ ಪ್ರಸ್ತಾಪ ಮರೆಮಾಚಿದ್ದು, ಕೃಷಿ ಕ್ಷೇತ್ರ ಶ್ರಮಿಕರ ಕ್ಷೇತ್ರವಾಗಿದ್ದು ಡಿಜಿಟಲೀಕರಣ ಆಹಾರ ಉತ್ಪಾದನೆ ಮಾಡುವುದಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ಮರೆತಿದೆ. ರೈತರ ಜಮೀನು ಮೌಲ್ಯದ 80 ರಷ್ಟು ಸಾಲ ನೀಡುವ ನೀತಿ. ಜಾರಿಯಾಗಿಲ್ಲ. ಕಿಸಾನ್ ಕ್ರೆಡಿಟ್ ಕಾರ್ಡ್ ರೈತರಿಗೆ ಉಪಯೋಗ ಇಲ್ಲ ಎಂದಿದ್ದಾರೆ.