NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಸಾರಿಗೆ ಅಧಿಕಾರಿಗಳು LIC ಅಧಿಕಾರಿಗಳ ನಡುವೆ ಒಳ ಒಪ್ಪಂದ- ಪಾಲಿಸಿದಾರ ನೌಕರರಿಗೆ ಸಾವಿರಾರು ರೂ. ನಷ್ಟ !!!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಸಾರಿಗೆ ಅಧಿಕಾರಿಗಳು ಮತ್ತು LIC ಅಧಿಕಾರಿಗಳ ನಡುವೆ ಮೌಖಿಕವಾಗಿ ಒಳ ಒಪ್ಪಂದವೊಂದು ಆಗಿದ್ದರು ಇದರಿಂದ ಪಾಲಿಸಿದಾರ ಸಾರಿಗೆ ನೌಕರರಿಗೆ ತಲಾ ಸಾವಿರಾರು ರೂ.ಗಳ ನಷ್ಟವಾಗುತ್ತಿದೆ ಎಂದು ನೌಕರರು ಆರೋಪಿಸಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಅಂದರೆ, ಸಾರಿಗೆ ನೌಕರರ ವೇತನದಲ್ಲಿ ಕಾಲ ಕಾಲಕ್ಕೆ ಕಡಿತ ಅಥವಾ ಕಟ್‌ ಮಾಡುತ್ತಿರುವ ವಿಮೆ ಹಣವನ್ನು ನಿಗಮದ ಅಧಿಕಾರಿಗಳು ಸರಿಯಾದ ಸಮಯಕ್ಕೆ ತುಂಬದಿದ್ದರೂ ಅದಕ್ಕೆ ಬಡ್ಡಿಯನ್ನು ತೆಗೆದುಕೊಳ್ಳದೆಯೇ ಪಾಲಿಸಿಗೆ ಹಣವನ್ನಷ್ಟೇ ಪಾವತಿಸಿಕೊಳ್ಳುತ್ತಿದ್ದಾರೆ LIC ಅಧಿಕಾರಿಗಳು. ಇದರಿಂದ ಪಾಲಿಸಿದಾರ ನೌಕರರಿಗೆ ಸಾರಿರಾರು ರೂಪಾಯಿ ಲಾಸ್‌ ಆಗುತ್ತಿದೆ.

ಅದೇ ಒಬ್ಬ ಎಲ್‌ಐಸಿ ಪಾಲಿಸಿದಾರ ಒಂದೆರಡು ಪ್ರೀಮಿಯಂ ಕಟ್ಟದೆ ಹೋದರೆ ಅವರಿಂದ ವೈದ್ಯಕೀಯ ಪ್ರಮಾಣಪತ್ರ ಜತೆಗೆ ತಡವಾಗಿ ಪಾವತಿಸುತ್ತಿರುವುದಕ್ಕೆ ಇಂತಿಷ್ಟು ಬಡ್ಡಿ ಎಂದು ತೆಗೆದುಕೊಳ್ಳುತ್ತಿದ್ದಾರೆ. ಇದು ಪಾಲಿಸಿಯ ನಿಯಮಕೂಡ ಸರಿ. ಆದರೆ, ನೌಕರರ ವೇತನದಲ್ಲಿ ಕಡಿತ ಮಾಡಿಕೊಂಡು 5-6 ಪ್ರೀಮಿಯಂಗಳನ್ನು ತಡವಾಗಿ ತುಂಬಿದರು ಆ ಪಾಲಿಸಿಗೆ ಬಡ್ಡಿ ತೆಗೆದುಕೊಳ್ಳದೆ ಪಾವತಿಸಿಕೊಳ್ಳುತ್ತಿರವುದರಿಂದ ಇಲ್ಲಿ ಪಾಲಿಸಿದಾರ ನೌಕರರಿಗೆ ನಷ್ಟವಾಗುತ್ತಿದೆ.

ಇನ್ನು ತಡವಾಗಿ ಪಾವತಿಸುತ್ತಿರುವುದಕ್ಕೆ ಬಡ್ಡಿ ಕಟ್ಟಲೇ ಬೇಕು ಎಂದು ಖಡಕ್‌ಆಗಿ ಹೇಳಬೇಕಿರುವ ಎಲ್‌ಐಸಿ ಅಧಿಕಾರಿಗಳು ಜಾಣ ಮೌನವಹಿಸಿದ್ದು, ಪಾಲಿಸಿದಾರ ನೌಕರರಿಗೆ ಮುಳುವಾಗಿ ಪರಿಣಮಿಸುತ್ತಿದೆ. ಇದರಿಂದ ಎಲ್‌ಐಸಿ ಅಧಿಕಾರಿಗಳಿಗೆ ಎಷ್ಟು ಲಂಚ ಸಿಗುತ್ತಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ ಪಾಲಿಸಿದಾರ ನೌಕರರು. ಅಲ್ಲದೆ ಎಲ್‌ಐಸಿ ಅಧಿಕಾರಿಗಳ ವಿರುದ್ಧವೂ ಕಿಡಿಕಾರುತ್ತಿದ್ದಾರೆ.

ನೋಡಿ ಸರಿಯಾದ ಸಮಯಕ್ಕೆ ಪಾಲಿಸಿಯ ಹಣವನ್ನು ಪಾವತಿಸದೆ ಅಂದರೆ ತಿಂಗಳು ತಿಂಗಳು ಪಾವತಿ ಮಾಡಬೇಕಾದ ಪಾಲಿಸಿ ಹಣವನ್ನು 5-6 ತಿಂಗಳುಗಳು ತಡವಾಗಿ ಪಾವತಿಸುತ್ತಿದ್ದಾರೆ ಸಾರಿಗೆ ನಿಗಮಗಳ ಅಧಿಕಾರಿಗಳು. ಆದರೂ ತಡವಾಗಿ ಪಾವತಿ ಮಾಡುತ್ತಿರುವುದಕ್ಕೆ ಯಾವುದೆ ಬಡ್ಡಿ ತೆಗೆದುಕೊಳ್ಳದೆ LIC ಆಧಿಕಾರಿಗಳು ಪಾಲಿಸಿಯ ಹಣವನ್ನಷ್ಟೇ ಕಟ್ಟಿಸಿಕೊಳ್ಳುತ್ತಿದ್ದಾರೆ. ಇದರಿಂದ ವಿಮೆ ಮಾಡಿಸಿಕೊಂಡಿರುವ ನೌಕರರಿಗೆ ಆಗುತ್ತಿರುವ ಸಾವಿರಾರು ರೂಪಾಯಿ ನಷ್ಟವನ್ನು ಯಾರು ಭರಿಸುತ್ತಿದ್ದಾರೆ?

ಇನ್ನು ಈ ಬಗ್ಗೆ LIC ಅಧಿಕಾರಿಗಳು ಪಾಲಿಸಿದಾರರಾದ ನೌಕರರಿಗೆ ತಿಳಿಸದೆ ಮುಚ್ಚಿಹಾಕುತ್ತಿದ್ದು, ಇದರಿಂದ ಪಾಲಿಸಿ ಮೆಚುರ್‌ ಆದ ಬಳಿಕವು ಸರಿಯಾದ ಹಣ ಸಿಗುತ್ತಿಲ್ಲ. ಉದಾ: ಎಲ್‌ಐಸಿ ಪಾಲಿಸಿ ಕಳೆದ ಮಾರ್ಚ್‌ನಲ್ಲಿ ಅಂತ್ಯಗೊಂಡಿದೆ. ಪಾಲಿಸಿದಾರ ನೌಕರರ ವೇತನದಿಂದ ಅಂತಿಮವಾಗಿ ಹಣ ಕೂಡ ಕಡಿತವಾಗಿದೆ. ಆದರೆ, ಮೆಚುರಾದ ಪಾಲಿಸಿಗೆ 4 ತಿಂಗಳು ನೀವು ಹಣ ಪಾವತಿಸಿಲ್ಲ ಎಂದು ನವೆಂಬರ್‌ 2023ರವರೆಗಷ್ಟೇ ಹಣ ಪಾವತಿ ಮಾಡಿದ್ದೀರಿ ಎಂದು ಪಾಲಿಸಿಯ ಮೆಚುರ್‌ ಆದ ತಿಂಗಳಿಗೆ 4 ತಿಂಗಳ ಪ್ರೀಮಿಯಂಅನ್ನು ಸೇರಿಸದೆ ಕೊನೆಗೊಳಿಸಿದ್ದಾರೆ.

ಇದನ್ನು ಗಮನಿಸಿದ ನೌಕರ ಈ ಬಗ್ಗೆ ಎಲ್‌ಐಸಿ ಕಚೇರಿಗೆ ಹೋಗಿ ಅಧಿಕಾರಿಗಳನ್ನು ವಿಚಾರಿಸಿದರೆ ನಾವು ಏನು ಮಾಡಲು ಬರುವುದಿಲ್ಲ ನೀವು ಹೋಗಿ ನಿಮ್ಮ ಅಧಿಕಾರಿಗಳನ್ನು ಕೇಳಿ ಎಂದಷ್ಟೇ ಹೇಳಿ ಕಳುಹಿಸಿದ್ದಾರೆ. ಇದರಿಂದ ಈವರೆಗೂ ಮಾರ್ಚ್‌ ಕೊನೆಯಲ್ಲಿ ಮೆಚುರಾಗಿರುವ ಪಾಲಿಸಿಯ 4 ಪ್ರೀಮಿಯಂಗಳನ್ನು ವೇತನದಲ್ಲಿ ಕಡಿತ ಮಾಡಿದರೂ ಆ ಹಣ ಪಾಲಿಸಿದಾರ ನೌಕರರ ಕೈ ಸೇರಿಲ್ಲ. ಇದು ಎಷ್ಟು ಕೆಟ್ಟನಡೆ ಎಂದು ಊಹಿಸಿಕೊಳ್ಳುವುದು ಕಷ್ಟ. ಎಂಥ ಕಿಡಿಗೇಡಿ ಅಧಿಕಾರಿಗಳು ಸಂಸ್ಥೆಯಲ್ಲಿ ಇದ್ದಾರೆ ನೋಡಿ. ಥೂ ಇವರ ಜನ್ಮಕ್ಕೆ ಎಂದು ಕಿಡಿಕಾರುತ್ತಿದ್ದಾರೆ ನೌಕರರು.

ಇನ್ನು ಈ ರೀತಿ ಸಾರಿಗೆ ನಿಗಮದ ಅಧಿಕಾರಿಗಳ ಕಳ್ಳಾಟದಿಂದ ವೇತನದಲ್ಲಿ ಕಡಿತವಾಗುತ್ತಿರುವ ಪಾಲಿಸಿಯ ಪ್ರೀಮಿಯಂ ಹಣ ನೌಕರರಿಗೆ ಸಿಗದೆ ಲಾಸ್‌ ಆಗುತ್ತಿದೆ. ಅಲ್ಲದೆ ಪಾಲಿಸಿ ಮೆಚುರ್‌ ಆಗುವ ವೇಳೆಗೆ ಸಿಗಬೇಕಾದ ಸಾವಿರಾರು ರೂಪಾಯಿ ಕೂಡ ಲಾಸ್‌ ಆಗುತ್ತಿದೆ. ಆದರೂ ಕೂಡ ಈ ಬಗ್ಗೆ ಈವರೆಗೂ ಯಾವುದೇ ಅಧಿಕಾರಿಯ ವಿರುದ್ಧ ದೂರು ದಾಖಲಾಗಿಲ್ಲದಿರುವುದು ಬೇಸರದ ಸಂಗತಿ.

Leave a Reply

error: Content is protected !!
LATEST
ವಿಜಯಪಥ ವರದಿ ಪರಿಣಾಮ-KSRTC ಚಾಲಕನಿಗೆ ಕೊಟ್ಟಿದ್ದ ಮೆಮೋ ವಾಪಸ್‌ ಪಡೆದು 20ದಿನಗಳ ರಜೆ ಮಂಜೂರು ಮಾಡಿದ ಡಿಸಿ ಸಾರಿಗೆ ನೌಕರರಿಂದ ಚುನಾಯಿತರಾಗದ ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ ಸರಿ ಸಮಾನ... KSRTC ನೌಕರರ ಸಂಬಳ ಅ.30ರಂದೇ ಬ್ಯಾಂಕ್ ಖಾತೆಗೆ ಜಮೆ: ಸಂಸ್ಥೆ ನಿರ್ದೇಶಕರು ಬೆಳಗಾವಿಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಬರಾಕ್ ಓಬಾಮಾ ಆಹ್ವಾನಕ್ಕೆ ಚಿಂತನೆ : ಸಚಿವ ಎಚ್.ಕೆ. ಪಾಟೀಲ ಹಸಿರು ಪಟಾಕಿ ಬಳಸಿ ದೀಪಾವಳಿ ಹಬ್ಬ ಆಚರಿಸಿ- ನಿಷೇಧಿತ ಪಟಾಕಿ ಮಾರಾಟ, ಬಳಕೆ ನಿಷೇಧ: ಜಿಲ್ಲಾಧಿಕಾರಿ ಡಾ.ಶಿವಶಂಕರ ಕೆಂಗೇರಿ ಕೆರೆಯಲ್ಲಿ ಮೃತಪಟ್ಟ ಇಬ್ಬರು ಮಕ್ಕಳ ಕುಟುಂಬಕ್ಕೆ ₹5 ಲಕ್ಷ ಪರಿಹಾರ APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ BBMP: ನಗರದಲ್ಲಿ ವಿಪತ್ತು ನಿರ್ವಹಣೆಯ ನಿವಾರಣೆಗೆ ತುರ್ತು ಕ್ರಮ: ತುಷಾರ್ ಗಿರಿನಾಥ್ ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ !