NEWSನಮ್ಮಜಿಲ್ಲೆನಮ್ಮರಾಜ್ಯ

ಇಪಿಎಸ್ ನಿವೃತ್ತರ ಪರನಿಂತ 11 ಸಂಸದರು – ನಮ್ಮ ಹೋರಾಟ ಫಲಿಸುತ್ತದೆ ಎಂಬ ಆಶಾ ಭಾವನೆ: 79ನೇ ಮಾಸಿಕ ಸಭೆಯಲ್ಲಿ ಹರ್ಷ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ದೇಶಾದ್ಯಂತ ಇರುವ ಇಪಿಎಸ್ ನಿವೃತ್ತರು ನಾವೆಲ್ಲರೂ ಒಂದೇ. ಅದರಂತೆ ಕರ್ನಾಟಕ ಒಂದರಲ್ಲಿಯೇ ಸುಮಾರು ಆರೂವರೆ ಲಕ್ಷ ಇಪಿಎಸ್ ನಿವೃತ್ತರಿದ್ದೀವಿ. ಆದರೆ, ಬೇಕಾದವರು ಮಾತ್ರ ಹೋರಾಟದಲ್ಲಿ ಭಾಗವಹಿಸಲಿ, ಅವರಿಗೆ ಆದದ್ದೆ ನಮಗೂ ಅನ್ವಯವಾಗುತ್ತದೆ ಎಂಬ ಧೋರಣೆಯಿಂದ ಕೆಲವರು ಸಭೆಯಲ್ಲಿ ಭಾಗವಹಿಸುತ್ತಿಲ್ಲ ಈ ಧೋರಣೆಯನ್ನು ಬಿಡಬೇಕು ಎಂದು ಬಿಎಂಟಿಸಿ & ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ಕಾರ್ಯಧ್ಯಕ್ಷ ನಂಜುಂಡೇಗೌಡ ಹೇಳಿದರು.

ಇನ್ನು ಮೊನ್ನೆ ನಗರದ ಲಾಲ್‌ಬಾಗ್‌ನಲ್ಲಿ ನಡೆದ ಇಪಿಎಸ್ ನಿವೃತ್ತರ 79ನೇ ಮಾಸಿಕ ಸಭೆಗೆ ರಾಜ್ಯದ ವಿವಿಧ ಭಾಗಗಳಿಂದ ನಿವೃತ್ತರು ಆಗಮಿಸಿದ್ದು ಭಾರಿ ಸಂತಸ ತಂದಿತು. ಆದರೆ ಬಹುತೇಕರು ಬಾರದಿರುವುದು ಅಷ್ಟೇ ನೋವನ್ನು ಉಂಟು ಮಾಡಿತು ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ ಈ ಎಲ್ಲದರ ನಡುವೆ ರಾಷ್ಟ್ರೀಯ ಸಂಘರ್ಷ ಸಮಿತಿ CWC ಕಾರ್ಯಕಾರಿ ಸಮಿತಿ ಸಭೆ ಜುಲೈ 29 ಮತ್ತು 30 ರಂದು ದೆಹಲಿಯಲ್ಲಿ ನಡೆಸಿದ್ದು, ಕರ್ನಾಟಕದಿಂದ ಸುಮಾರು 30 ಜನ ಮುಖಂಡರು ಭಾಗವಹಿಸಿದ್ದೆವು. ಮುಂದುವರಿದಂತೆ, ಜುಲೈ 31 ಆಗಸ್ಟ್ 01, ರಂದು ಜಂತರ್ ಮಂತರ್‌ನಲ್ಲಿ ಜರುಗಿದ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ ಎಂದು ಹೇಳಲಿ ಹೆಮ್ಮೆಪಡುತ್ತೇನೆ ಎಂದರು.

ಅಂದರೆ ನಮ್ಮ ಹೋರಾಟಕ್ಕೆ ದೇಶದ ಮೂಲೆ ಮೂಲೆಯಿಂದಲೂ ಇಪಿಎಸ್ ನಿವೃತ್ತರು ಆಗಮಿಸಿ ಹೋರಾಟ ಮಾಡಿದ್ದರು.ಈ ವೇಳೆ ರಾಷ್ಟ್ರೀಯ ಸಂಘರ್ಷ ಸಮಿತಿ ಮುಖ್ಯಸ್ಥರಾದ ಅಶೋಕ್ ರಾವುತ್, ವೀರೇಂದ್ರ ಸಿಂಗ್ ರಾಜಾವತ್, ರಮಾಕಾಂತ್ ನರಗುಂದ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಕನಿಷ್ಠ ಹೆಚ್ಚುವರಿ ಪಿಂಚಣಿ ಬೇಡಿಕೆಯನ್ನು ಕೂಡಲೇ ಈಡೇರಿಸಿಕೊಡಬೇಕೆಂದು ಆಗ್ರಹಿಸಿದರು.

ಇನ್ನು ಇದಕ್ಕೆ ಧ್ವನಿಗೂಡಿಸಿದ ದೇಶದ 11 ಮಂದಿ ಸಂಸದರು ಸಹ ನಮ್ಮ ಹೋರಾಟಕ್ಕೆ ಬಲ ತುಂಬುತ್ತೇವೆ ಜತೆಗೆ ನಿಮಗೆ ನ್ಯಾಯ ಕೊಡಿಸುತ್ತೇವೆ ಎಂಬ ಭರವಸೆ ನೀಡಿದ್ದಾರೆ. ಹೀಗಾಗಿ ನಾವೆಲ್ಲರೂ ಸಂಘಟಿತರಾಗಿ ಹೋರಾಟ ಮಾಡಿದಲ್ಲಿ ಮಾತ್ರ ಜಯ ಶತಸಿದ್ಧ ಎಂದು ಎನ್ಎಸಿ ರಾಜ್ಯಾಧ್ಯಕ್ಷ ಜೆಎಸ್ಎಂ ಸ್ವಾಮಿ ಕರೆ ನೀಡಿದರು.

ಇದೇ ಆಗಸ್ಟ್ 17 ಹಾಗೂ 18ರಂದು ಕ್ರಮವಾಗಿ ಹುಬ್ಬಳ್ಳಿ ಮತ್ತು ಕಲಬುರಗಿಯಲ್ಲಿ ಎನ್ಎಸಿ ವತಿಯಿಂದ ಆಯೋಜಿಸಿರುವ ಇಪಿಎಸ್ ನಿವೃತ್ತರ ಸಮಾವೇಶ ನಡೆಯಲಿದ್ದು, ಈ ಸಭೆಗೆ ರಾಷ್ಟ್ರೀಯ ಮುಖಂಡರಾದ ಅಶೋಕ್ ರಾವತ್, ವೀರೇಂದ್ರ ಸಿಂಗ್ ರಜಾವತ್ ಹಾಗೂ ರಮಕಾಂತ್ ನರಗುಂದ ಅವರು ಭಾಗವಹಿಸಲಿದ್ದಾರೆ.

ಇನ್ನು ಈ ಸಭೆ ಅತ್ಯಂತ ಮಹತ್ವದ ಸಭೆಯಾಗಿದ್ದು, ಎಲ್ಲ ಇಪಿಎಸ್ ನಿವೃತ್ತರು ಭಾಗವಹಿಸಬೇಕು. ಭಾನುವಾರ ಸಂಘದ ಪದಾಧಿಕಾರಿಗಳಾದ ನಾಗರಾಜ, ರುಕ್ಮೇಶ್, ಮನೋಹರ್ ಅವರು ಸಭೆಯ ನಿರ್ವಹಣೆ ಜವಾಬ್ದಾರಿ ಹೊತ್ತು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು. ಸಭೆಯ ನಿರ್ಣಯಗಳ ಬಗ್ಗೆ ಸದಸ್ಯರು ತಮ್ಮ ಹರ್ಷ ವ್ಯಕ್ತಪಡಿಸಿದ್ದು, ಡೋಲಪ್ಪನವರ ವಂದನಾರ್ಪಣೆಯೊಂದಿಗೆ ಸಭೆ ಪೂರ್ಣಗೊಳಿಸಿದರು.

ಪ್ರಾಸ್ತಾವಿಕ ನುಡಿ: ಇನ್ನು ಸಭೆಗೂ ಮುನ್ನಾ ಲಾಲ್ ಬಾಗ್ ಆವರಣದಲ್ಲಿ ಭಾರತದ 78ನೇ ಸ್ವಾತಂತ್ರ್ಯೋತ್ಸವವನ್ನು (78th Independence day) ಆಚರಿಸುವ ಸಲುವಾಗಿ, ಫಲ ಪುಷ್ಪ ಪ್ರದರ್ಶನಕ್ಕೆ ಸಿಬ್ಬಂದಿಗಳಿಂದ ಭರದ ಸಿದ್ಧತೆ ನಡೆಯುತ್ತಿತ್ತು. ಇದರಿಂದ ಗಾಜಿನ ಮನೆ ನವ ವಧುವಿನಂತೆ ಶೃಂಗಾರ ಗೊಳ್ಳುತ್ತಿದೆ.

ಇದೇ ಸಂದರ್ಭದಲ್ಲಿ ಇಪಿಎಸ್ ನಿವೃತ್ತರ 79ನೇ ಮಾಸಿಕ ಸಭೆಗೆ ರಾಜ್ಯದ ವಿವಿಧ ಭಾಗಗಳಿಂದ ನಿವೃತ್ತರು ಆಗಮಿಸಿದ್ದು, ಈ ಸುಮಧುರ ಪರಿಸರದಲ್ಲಿ ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ. ತಮ್ಮ ಹಳೆಯ ಸಹಪಾಠಿಗಳನ್ನು ಕಂಡೊಡನೆ, ಎಲ್ಲಿಲ್ಲದ ನವೊಲ್ಲಾಸದಿಂದ, ಉಭಯ ಕುಶಲೋಪರಿ ವಿಚಾರಿಸುತ್ತಿದ್ದುದು ಸಾಮಾನ್ಯ ದೃಶ್ಯಾವಳಿಯಾಗಿತ್ತು.

ಮೊದಲಿಗೆ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಡೋಲಪ್ಪನವರು ಎಲ್ಲಾ ಇಪಿಎಸ್ ನಿವೃತ್ತರು, ಸಂಘದ ಪದಾಧಿಕಾರಿಗಳು ಹಾಗೂ ಎನ್ಎಸಿ ರಾಜ್ಯಾಧ್ಯಕ್ಷ ಜಿಎಸ್ಎಂ ಸ್ವಾಮಿ ಅವರನ್ನು ಸ್ವಾಗತಿಸಿ, ನಮ್ಮ ಹೋರಾಟದ ಸಂಪೂರ್ಣ ಚಿತ್ರಣವನ್ನು ಸಭೆಗೆ ತಿಳಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ