CrimeNEWSದೇಶ-ವಿದೇಶ

ಬ್ರೆಜಿಲ್‌ನ ಸಾವೊ ಪಾಲೊ ಬಳಿ ವಿಮಾನ ಪತನ: ಎಲ್ಲ 62 ಪ್ರಯಾಣಿಕರು ಸಜೀವದಹನ

ವಿಜಯಪಥ ಸಮಗ್ರ ಸುದ್ದಿ

ಬ್ರೆಜಿಲ್‌: ಪ್ರಾದೇಶಿಕ ಟರ್ಬೊಪ್ರೊಪ್ ವಿಮಾನವು ಶುಕ್ರವಾರ ಬ್ರೆಜಿಲ್‌ನ ಸಾವೊ ಪಾಲೊ ಬಳಿ ಪತನಗೊಂಡಿದ್ದು ಅದರಲ್ಲಿದ್ದ ಸಿಬ್ಬಂದಿ ಪ್ರಯಾಣಿಕರು ಸೇರಿ ಎಲ್ಲ 62 ಪ್ರಯಾಣಿಕರು ಮೃತಪಟ್ಟಿದ್ದಾರೆ.

ಪರಾನಾ ರಾಜ್ಯದ ಕ್ಯಾಸ್ಕಾವೆಲ್‌ನಿಂದ ಸಾವೊ ಪೌಲೋ ಮುಖ್ಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಏರ್‌ಲೈನ್‌ Voepass ವಿಮಾನವು ಸಾವೊ ಪೌಲೋದಿಂದ ವಾಯುವ್ಯಕ್ಕೆ 80 ಕಿಮೀ (50 ಮೈಲುಗಳು) ದೂರದಲ್ಲಿರುವ ವಿನ್ಹೆಡೊ ಪಟ್ಟಣದಲ್ಲಿ ಪತನಗೊಂಡಿದೆ.

ವಿಮಾನ ವಸತಿ ಪ್ರದೇಶದಲ್ಲಿ ಬಿದ್ದರೂ ನಾಗರಿಕರ ಸಾವು ನೋವಾಗಿಲ್ಲ ಎಂದು ವರದಿಯಾಗಿದೆ. ಪೈಲಟ್‌ ವಿಮಾನ ಮನೆಗಳ ಮೇಲೆ ಬೀಳುವುದನ್ನು ತಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ಮೇಲಿನಿಂದ ಗಿರಕಿ ಹೊಡೆಯುತ್ತಾ ಬೀಳುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವಿಮಾನವು ಪತನ ಹೊಂದಲು ಕಾರಣವೇನು ಎಂಬುದರ ಬಗ್ಗೆ ಈಗ ತನಿಖೆ ಆರಂಭವಾಗಿದೆ. ಹವಾಮಾನ ವೈಪರಿತ್ಯದಿಂದ ಪೈಲಟ್‌ ಎಂಜಿನ್ ಮೇಲೆ ನಿಯಂತ್ರಣ ಕಳೆದುಕೊಂಡು ಈ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. Voepass ಏರ್‌ಲೈನ್ಸ್‌ ಬ್ರೆಜಿಲ್‌ನ ನಾಲ್ಕನೇ ಅತಿದೊಡ್ಡ ನಾಗರಿಕ ವಿಮಾನಯಾನ ಸಂಸ್ಥೆಯಾಗಿದೆ.

ಏರ್‌ಬಸ್ ಮತ್ತು ಇಟಾಲಿಯನ್ ಏರೋಸ್ಪೇಸ್ ಗ್ರೂಪ್ ಲಿಯೊನಾರ್ಡೊ ಜಂಟಿ ಒಡೆತನದ ಎಟಿಆರ್‌ ಕಂಪನಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Leave a Reply

error: Content is protected !!
LATEST
160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್