NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಒಗ್ಗಟ್ಟಿಗಾಗಿ ನಾಲ್ಕೂ ನಿಗಮಗಳ ಎಸ್ಸಿ, ಎಸ್ಟಿ ನೌಕರರ ಸಭೆ ಯಶಸ್ವಿ- ಅಭೂತಪೂರ್ವ ಬೆಂಬಲ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಒಂದೇ ಕುಲ ಒಂದೇ ಸಂಘಟನೆ ಒಂದೇ ವೇದಿಕೆ ತತ್ವದ ಅಡಿಯಲ್ಲಿ ಕೆಎಸ್ಆರ್ಟಿಸಿ ನಾಲ್ಕೂ ನಿಗಮಗಳ ಎಸ್ಸಿ, ಎಸ್ಟಿ ನೌಕರರನ್ನು ಒಗ್ಗೂಡಿಸಿ ಒಂದೇ ಸಂಘಟನೆಯಲ್ಲಿ ಮುಂದುವರಿಯಬೇಕೆನ್ನುವ ಪೂರ್ವಭಾವಿ ಸಭೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿ ನೂರಾರು ನೌಕರರು ಸಭೆಯಲ್ಲಿ ಭಾಗವಹಿಸಿದ್ದರು.

ಹೌದು! ಭಾನುವಾರ ಮಧ್ಯಾಹ್ನ 3ಗಟೆಯಲ್ಲಿ ಜೈ ಭೀಮ್ ಭವನದಲ್ಲಿ ಸಭೆ ಆಯೋಜನೆ ಮಾಡಲಾಗಿತ್ತು. ಸಭೆಯಲ್ಲಿ ಪ್ರಸ್ತುತ ಇರುವ ನಾಯಕರು ಒಗ್ಗಟ್ಟಾಗಿ ಯುವ ನಾಯಕರ ಶಕ್ತಿ ಮತ್ತು ಯುಕ್ತಿಯನ್ನು ಬಳಸಿಕೊಳ್ಳಲು ರುದ್ರೇಶ್ ಎಸ್ ನಾಯಕ ಕರೆ ನೀಡಿದರು.

ಸಂಸ್ಥೆಯಲ್ಲಿ SCSP TSSP ಯೋಜನೆಯಲ್ಲಿ ಎಸ್ಸಿ ಎಸ್ಟಿ ಕಾರ್ಮಿಕರಿಗಾಗಿ ಕೋಟಿಗಟ್ಟಲೆ ದುಡ್ಡು ಬರುತ್ತಿದ್ದು ಅದರ ಸದುಪಯೋಗ ಆಗದೆ ಸರ್ಕಾರಕ್ಕೆ ವಾಪಸ್ ಹೋಗುತ್ತಿದೆ. ಇದರ ಬಗ್ಗೆ ಇಲ್ಲಿಯವರೆಗೆ ಯಾವ ಸಂಘಟನೆ ನಾಯಕರು ಧ್ವನಿ ಎತ್ತಿಲ್ಲ. ಇದಕ್ಕೆಲ್ಲ ಪರಿಹಾರ ಒಂದೇ ಸಂಘ ಬೇಕು ಎಂದು ನಿಂಗಪ್ಪ ತಡಿಬಿಡಿ ಹೇಳಿದರು.

ರೇಖಾ ಮಾದರ ಮಾತನಾಡಿ, ಸಂಘ ಒಂದೇ ಆಗುವುದಾದರೆ ನಾನು ನನ್ನ ಇತರ ಎಲ್ಲ ಸಂಘಗಳಿಗೆ ರಾಜೀನಾಮೆ ಕೊಟ್ಟು ನನ್ನ ಸಮುದಾಯ ನನಗೆ ಒಗ್ಗಟ್ಟು ಮುಖ್ಯ ಅಂತ ತಿಳಿಸಿದರೆ, ಮಹಾಂತೇಶ್ ಭಜಂತ್ರಿ ಯವರು ನನ್ನ ಸಂಪೂರ್ಣ ಬೆಂಬಲವಿದ್ದು ಇದಕ್ಕೆ ನನ್ನ ಕೈಲಾದ ತನು ಮನ ಧನ ಸಹಾಯ ಮಾಡುತ್ತೇನೆ ಎಂದು ಘೋಷಿಸಿದರು.

ಎಲ್ಲ ನೌಕರರು ತಮ್ಮ ತಮ್ಮ ಅಭಿಪ್ರಾಯ ತಿಳಿಸಿ ರಾಜ್ಯದ್ಯಂತ ಎಸ್ಸಿಎಸ್ಟಿ ನೌಕರರಿಗಾಗಿ ಒಂದೇ ಸಂಘ ಮಾಡಲು ತೀರ್ಮಾನ ಮಾಡಿದರು. ಅಭಿಯಾನಕ್ಕೆ ಈ ಎಲ್ಲ ಸಂಘಟನೆಗಳು ಸಂಪೂರ್ಣ ಬೆಂಬಲ ಸೂಚಿಸಿದ್ದೂ ಮತ್ತು ಒಂದೇ ಸಂಘದ ಅಡಿಯಲ್ಲಿ ಮುಂದುವರಿಯಲು ಒಪ್ಪಿಗೆ ಸೂಚಿಸಿದರು.

ಅವುಗಳಲ್ಲಿ ಪ್ರಮುಖವಾಗಿ ಬೆಂಗಳೂರಿನಲ್ಲಿ ಇರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ (671) ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ ಬರಗೂರು ಮತ್ತು ಅವರ ತಂಡ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚಿಕ್ಕತಿಮ್ಮಯ್ಯನವರು ಮತ್ತು ವರ ಸಂಪೂರ್ಣ ಸಂಘ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಭೂತರಾಜ್ ಅವರು ಮತ್ತು ಅವರ ತಂಡ ಸಂಪೂರ್ಣ ಬೆಂಬಲ ಸೂಚಿಸಿದೆ. ಜತೆಗೆ ಪ. ಜಾತಿ ಮತ್ತು ಪ. ಪಂಗಡ ನೌಕರರು ಮತ್ತು ಅಧಿಕಾರಿಗಳು ಸಂಘದ ಅಧ್ಯಕ್ಷ ಲಗುಮಯ್ಯ ನವರು ಕಾರ್ಯಕ್ರಮಕ್ಕೆ ಬಾರದೇ ಇದ್ದರೂ ಕೂಡ ಸಂಪೂರ್ಣ ಬೆಂಬಲ ಸುಚಿಸಿರುವುದಾಗಿ ತಿಳಿಸಿದ್ದಾರೆ ಎಂದು ರುದ್ರೇಶ್ ಎಸ್ ನಾಯಕ ತಿಳಿಸಿದರು.

ಆದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ ಜಾತಿ ಮತ್ತು ಪ. ಪಂಗಡ ನೌಕರರ ಸಂಘ (40/78) ರಾಜ್ಯ ಸಮಿತಿ ನಾಯಕರಿಂದ ಯಾವುದೇ ಅಭಿಪ್ರಾಯ ಬಂದಿಲ್ಲ. ಮುಂದಿನ ಸಭೆಯ ಒಳಗಡೆ ಒಂದೇ ಕುಲ ಒಂದೇ ವೇದಿಕೆ ಒಂದೇ ಸಂಘಟನೆ ತತ್ವಕ್ಕೆ ಇವರ ಬೆಂಬಲ ಸಿಗಬಹುದೆಂದು ನೌಕರರು ನಿರೀಕ್ಷೆಯಲ್ಲಿದ್ದಾರೆ ಎಂದು ಕೆಎಸ್ಆರ್ಟಿಸಿ 4 ನಿಗಮಗಳ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ಬಿಎಂಟಿಸಿ ವಿಭಾಗದ ಅಧ್ಯಕ್ಷ ರುದ್ರೇಶ್ ಎಸ್‌. ನಾಯಕ ತಿಳಿಸಿದ್ದಾರೆ.

ಉಳಿದಂತೆ ಕಾರ್ಯಕ್ರಮ ಯಶಸ್ವಿಯಾಗಿದ್ದು ಕೆಲವೇ ದಿನಗಳಲ್ಲಿ ಎಲ್ಲ ಎಸ್ಸಿ, ಎಸ್ಟಿ ಕಾರ್ಮಿಕ ಮುಖಂಡರ ಜೊತೆ, ಎಲ್ಲ ಮುಖಂಡರನ್ನು ಒಂದೇ ಸಭೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸುತ್ತೇವೆ. ಆ ಸಭೆಯಲ್ಲಿ ಬರೀ ಸಂಘದ ಮುಖಂಡರು ಮಾತ್ರ ಇದ್ದು ಅಲ್ಲಿ ಒಂದು ಅಂತಿಮ ತೀರ್ಮಾನಕ್ಕೆ ಬರುವ ಸಾಧ್ಯತೆ ಇದೆ.

ಮುಂದಿನ ಸಭೆಯ ನೇತೃತ್ವವನ್ನು ಜ್ಞಾನಪ್ರಕಾಶ್ ಸ್ವಾಮೀಜಿಗಳು ವಹಿಸಲಿದ್ದಾರೆ. ಈ ಸಭೆಯಲ್ಲಿ ಸಮುದಾಯದ ATS ಗಳಾದ ಚಿಕ್ಕಭೈರಪ್ಪ ಮತ್ತು ಹನುಮಯ್ಯ, ಮುಖಂಡರಾದ ಭೂತರಾಜ್, ಮಲ್ಲಿಕಾರ್ಜುನಯ್ಯ, ಚಿಕ್ಕತಿಮ್ಮಯ್ಯ, ಯಲ್ಲಪ್ಪ TI, ದೊಡಪ್ಪ, ಲಕ್ಕಪ್ಪ, ಬಿಎಂಟಿಸಿ ಸೊಸೈಟಿ ನಿರ್ದೇಶಕರಾದ ದೇವರಾಜ್ ಮತ್ತು ಕಬ್ಬಡಿ ರಮೇಶ್, ಸಂಜಯ್ ನಾಯಕ್, ರಮೇಶ್ ವಿ. ಮಲ್ಲಿ, ರಾಘವೇಂದ್ರ, ವಿಮಲಾದೇವಿ, ಇತರೆ ಎಲ್ಲ ಮುಖಂಡರು ಭಾಗವಹಿಸಿದ್ದರು.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ