NEWSನಮ್ಮಜಿಲ್ಲೆನಮ್ಮರಾಜ್ಯ

₹5 ಚಿಲ್ಲರೆಗೆ ಕಂಡಕ್ಟರ್‌ ಅಮಾನತು: ಸಿಟಿಎಂ ನಡೆ ಖಂಡಿಸಿ ಕನ್ನಡ ಸಂಘಟನೆಯ ರೂಪೇಶ್‌ ರಾಜಣ್ಣ- ಪದಾಧಿಕಾರಿಗಳ ಪ್ರತಿಭಟನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಐದು ರೂಪಾಯಿ ಚಿಲ್ಲರೆ ವಿಚಾರ ಸಂಬಂಧ ಪ್ರಯಾಣಿಕನ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಬಿಎಂಟಿಸಿ ಕಂಡಕ್ಟರ್‌ ಅಮಾನತು ಮಾಡಿರುವುದನ್ನು ವಿರೋಧಿಸಿ ಕನ್ನಡ ಸಂಘಟನೆಯ ರೂಪೇಶ್ ರಾಜಣ್ಣ ಮತ್ತು ಅವರ ಒಡನಾಡಿಗಳು ಬಿಎಂಟಿಸಿ ಕಚೇರಿಯಲ್ಲಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.

ಶಾಂತಿನಗರದಲ್ಲಿರುವ ಬಿಎಂಟಿಸಿಗೆ ಸೋಮವಾರ ಬಂದ ಕನ್ನಡ ಸಂಘಟನೆಯ ರೂಪೇಶ್ ರಾಜಣ್ಣ ಮತ್ತು ಅವರ ಒಡನಾಡಿಗಳು ಅಧಿಕಾರಿಗಳ ನಡೆಯನ್ನು ಖಂಡಿಸಿದರು. ಈ ವೇಳೆ ಅ.6 ರಂದು ನಡೆದಿದ್ದ ಘಟನೆಯ ಸತ್ಯಾಸತ್ಯತೆ ತಿಳಿಯದೆ ಏಕಾಏಕೆ ನಿರ್ವಾಹಕರನ್ನು ಅಮಾನತು ಮಾಡಿರುವುದು ಸರಿಯಲ್ಲ ನಿಮ್ಮ ಆದೇಶವನ್ನು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದರು.

ಇನ್ನು ಆ.6ರಂದು ಕೆ.ಆರ್‌ ಪುರಂ ರೈಲ್ವೆ ನಿಲ್ದಾಣದಿಂದ ಮಾರತ್ತಹಳ್ಳಿ ಕಲಾಮಂದಿರಕ್ಕೆ ಟಿಕೆಟ್‌ ತೆಗೆದುಕೊಂಡಿದ್ದ ಪ್ರಯಾಣಿಕ ಅಭಿನವ್ ಎಂಬಾತ ಟಿಕೆಟ್‌ ದರ 15 ರೂ. ಇತ್ತು. ಆತ 20 ರೂ. ಕೊಟ್ಟಿದ್ದ. ಇನ್ನು ಬಾಕಿ 5 ರೂ. ವಾಪಸ್‌ ಕೇಳಿದ್ದಕ್ಕೆ ನನ್ನ ಮೇಲೆ ಕಂಡಕ್ಟರ್ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದ.

ಇತ್ತ ಆ ಪ್ರಯಾಣಿಕ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದ. ಅದನ್ನು ಗಮನಿಸಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿರುವ ಹಿನ್ನೆಲೆ ಪ್ರಯಾಣಿಕರ ಮೇಲೆ ಯಾವುದೇ ತರಹದ ದೌರ್ಜನ್ಯ, ಅಸಭ್ಯವಾಗಿ ವರ್ತಿಸುವಂತಿಲ್ಲ ಹಾಗೇನಾದರೂ ವರ್ತಿಸಿದಲ್ಲಿ ಅಂತಹವರ ಮೇಲೆ ಶಿಸ್ತು ಕ್ರಮ ಜರುಗಿಸುತ್ತೀವೆ ಎಂದು ಹೇಳಿ ಪ್ರಯಾಣಿಕನಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಕಂಡಕ್ಟರ್‌ನನ್ನು ಅಮಾನತು ಮಾಡಿ ಆ.8ರಂದು ಆದೇಶ ಹೊರಡಿಸಿತ್ತು.

ಅಮಾನತು ಅದೇಶವನ್ನು ವಿರೋಧಿಸಿ ಶಾಂತಿನಗರದಲ್ಲಿರುವ ಮುಖ್ಯ ಸಂಚಾರ ವ್ಯವಸ್ಥಾಪಕ ಕಚೇರಿಗೆ ನುಗ್ಗಿದ ರೂಪೇಶ್ ರಾಜಣ್ಣ ಒಡನಾಡಿಗಳು ಬಿಎಂಟಿಸಿ ನಿರ್ವಾಹಕರ ಅಮಾನತು ಮಾಡಿರೋದನ್ನು ಖಂಡಿಸಿದ್ದಾರೆ. ಅಲ್ಲದೆ ಬಿಎಂಟಿಸಿ ಮುಖ್ಯಸಂಚಾರ ವ್ಯವಸ್ಥಾಪಕ (ಕಾರ್ಯಾಚರಣೆ) ಪ್ರಭಾಕರ್ ಅವರ ಕಚೇರಿಗೆ ಹೋಗಿ ಈ ರೀತಿ ವಿಷಯವನ್ನು ಪೂರ್ಣವಾಗಿ ತಿಳಿದುಕೊಳ್ಳದೆ ಅಮಾನತು ಮಾಡುವುದು ಸರಿಯಿಲ್ಲ ಎಂದು ಹೀಗೆ ಮಾಡಬೇಡಿ ಎಂದು ಮನವಿ ಸಲ್ಲಿಸಿದರು.

ಇನ್ನು ಕನ್ನಡಿಗ ಬಿಎಂಟಿಸಿ ಕಂಡಕ್ಟರ್‌ ತಪ್ಪು ಮಾಡಿಲ್ಲ, ಮತ್ತೊಮ್ಮೆ ಘಟನೆ ಬಗ್ಗೆ ಪರಿಶೀಲಿಸಬೇಕು. ಅಮಾನತು ಮಾಡಿರೋ ಆದೇಶವನ್ನು ಹಿಂಪಡೆಯಿರಿ ಎಂದು ರೂಪೇಶ್ ರಾಜಣ್ಣ ಮತ್ತು ಸಂಘಟನೆ ಪದಾಧಿಕರಿಗಳು ಒತ್ತಾಯಿಸಿದರು. ಈ ವೇಳೆ ಬಿಎಂಟಿಸಿ ಅಧಿಕಾರಿಗಳು ರಾಜಣ್ಣ ಮತ್ತು ಸಂಘಟನೆ ಪದಾಧಿಕರಿಗಳು ನಡುವೆ ವಾಗ್ವಾದ ನಡೆಯಿತು.

ಪ್ರಯಾಣಿಕರಿಗೆ ಕಂಡಕ್ಟರ್‌ ಆಗಲಿ ಸಿಬ್ಬಂದಿಯಾಗಲಿ ಹಲ್ಲೆ ನಡೆಸುವಂತಿಲ್ಲ. ಆದರೂ ಕಂಡಕ್ಟರ್ ಹಲ್ಲೆ ನಡೆಸಿರುವ ಬಗ್ಗೆ ಪ್ರಯಾಣಿಕ ಟ್ವೀಟರ್‌ನಲ್ಲಿ ಆರೋಪಿಸಿದ್ದಾರೆ ಎಂದು ಬಿಎಂಟಿಸಿ ಅಧಿಕಾರಿ ಅಮಾನತು ಮಾಡಿರುವುದನ್ನು ಸಮರ್ಥಿಸಿಕೊಳ್ಳಲು ಮುಂದಾದರು. ಅದಕ್ಕೆ ವಿರೋಧ ವ್ಯಕ್ತಪಡಿಸಿದ ರೂಪೇಶ್ ರಾಜಣ್ಣ, ‘ಟ್ವೀಟ್ ಮಾಡಿರೋದನ್ನೇ ನಂಬಿಕೊಂಡು ಅಮಾನತು ಮಾಡ್ತೀರಾ ಎಂದು ಪ್ರಶ್ನಿಸಿದರು.

ಈ ನಡುವೆ ಅಧಿಕಾರಿಗಳು ಮತ್ತು ರಾಜಣ್ಣ ಮಧ್ಯೆ ವಾದ ಪ್ರತಿವಾದ ಏರುಧ್ವನಿಯಲ್ಲಿ ನಡೆಯಿತು. ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೆ ಕೇಂದ್ರ ಕಚೇರಿಯ ಬೇರೆ ಬೇರೆ ಕ್ಯಾಬಿನ್‌ಗಳಿಂದ, ಮುಖ್ಯಸಂಚಾರ ವ್ಯವಸ್ಥಾಪಕ ಕ್ಯಾಬಿನ್‌ಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಓಡಿ ಬಂದರು.

ಆದರೂ ಅಧಿಕಾರಿಗಳು ನಾವು ಮಾಡಿರುವುದೇ ಸರಿ ಎಂದು ರಾಜಣ್ಣ ಮತ್ತು ಸಂಘಟನೆ ಪದಾಧಿಕರಿಗಳ ನಡುವೆ ವಾಗ್ವಾದ ಮಾಡುವ ಬದಲು ಈ ಬಗ್ಗೆ ಕೂಲಂಕಶವಾಗಿ ಪರಿಶೀಲಿಸಿ ಬಳಿಕ ಕಂಡಕ್ಟರ್‌ ತಪ್ಪು ಮಾಡಿಲ್ಲ ಎನ್ನುವುದು ವಿಚಾರಣೆಯಿಂದ ಸಾಬೀತಾದರೆ ಅವರಿಗೆ ನೀಡಿರುವ ಅಮಾನತು ಶಿಕ್ಷೆ ವಾಪಸ್‌ ಪಡೆದು ಪೂರ್ಣ ವೇತನ ಕೊಡುತ್ತೇವೆ ಎಂದು ಏಕೆ ಹೇಳಲಿಲ್ಲ.

ಏಕೆಂದರೆ ಸಾರಿಗೆ ನಿಗಮಗಳಲ್ಲಿ ಕೆಲ ಅಧಿಕಾರಿಗಳು ನೌಕರರನ್ನು ಹದ್ದಿನ ರೀತಿ ಕಿತ್ತು ತಿನ್ನುವ ಚಾಳಿ ಬೆಳೆಸಿಕೊಂಡಿದ್ದಾರೆ. ಹೀಗಾಗಿ ಸಿಟಿಎಂ ಅವರ ದಾರಿಯನ್ನು ತಪ್ಪಿಸಿ ನೌಕರರಿಗೆ ಸುಲಿಗೆ ಮಾಡುತ್ತಾರೆ. ಹೀಗಾಗಿ ಏಕಾಏಕಿ ವಿಚಾರಣೆ ಮಾಡುವ ಮುನ್ನವೇ ಚಾಲನಾ ಸಿಬ್ಬಂದಿಗಳನ್ನು ಅಮಾನತು ಮಾಡಿ ಬಳಿಕ ಡೀಲ್‌ ಕುದುರಿಸಿಕೊಂಡು ಮತ್ತೆ ಅಮಾನತಾದ ಅವಧಿಯಲ್ಲಿ ಅಲ್ಪವೇತನಕೊಟ್ಟು ಜತೆಗೆ ಇನ್ನೊಂದಷ್ಟು ಕಿತ್ತುಕೊಂಡು ಮರಳಿ ಡ್ಯೂಟಿ ಕೊಡುತ್ತಾರೆ.

ಅಲ್ಲದೆ ಅಮಾನತಾದ ಸಿಬ್ಬಂದಿ ಅದೇ ಡಿಪೋದಲ್ಲೇ ಮತ್ತೆ ಕೆಲಸ ಮಾಡಬೇಕು ಎಂದರು ಅದಕ್ಕೂ ಇಂತಿಷ್ಟು ಲಂಚಕೊಡಬೇಕು ಎಂಬ ನಿಯಮವನ್ನು ಕೆಲ ಅಧಿಕಾರಿಗಳು ಹಾಕಿಕೊಂಡಿದ್ದಾರೆ. ಆ ಲಂಚ ಕೊಟ್ಟರೆ ಅದೇ ಡಿಪೋನಲ್ಲೇ ಕೆಲಸ ಮಾಡಬಹುದು ಇಲ್ಲದಿದ್ದರೆ ಬೇರೆ ಡಿಪೋಗೆ ವರ್ಗಾವಣೆ ಮಾಡಿ ಒಂದು ಕಪ್ಪುಚುಕ್ಕೆ ಇಡುವ ಸಂಸ್ಕೃತಿ ಕಳೆದ 4 ದಶಕಗಳಿಂದಲೂ ನಡೆದು ಬರುತ್ತಿದೆ. ಇದು ಭಾರೀ ನೋವಿನ ವಿಚಾರ.

ಆದರೂ ಈ ಬಗ್ಗೆ ನಿಷ್ಠಾವಂತ ಅಧಿಕಾರಿಗಳು ಮಾತನಾಡಲು ಅಥವಾ ಅದನ್ನು ವಿರೋಧಿಸಲು ಹೋಗುವುದಿಲ್ಲ ಕಾರಣ ಅವರಿಗೂ ಅಮಾನತು ಮತ್ತು ವರ್ಗಾವಣೆ ಭೀತಿ. ಈ ಸ್ಥಿತಿಯಲ್ಲಿರುವ ನಿಗಮಗಳನ್ನು ಸುಧಾರಿಸಲು ಈ ಹಿಂದೆ ಇದ್ದ ಸತ್ಯವತಿ ಅವರಂಥ ಎಂಡಿಗಳೇ ಬರಬೇಕು. ಇಲ್ಲದಿದ್ದರೆ ಈ ಅಧಿಕಾರಿಗಳ ಅಟ್ಟಹಾಸ ಮೆರೆಯುತ್ತಲೇ ಇರುತ್ತದೆ.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ