NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ನಿಮಗೆ ಮತ ನೀಡಿದವರ ನಿರೀಕ್ಷೆ ಹುಸಿಗೊಳಿಸಬೇಡಿ: ಸಹಕಾರ ಸಂಘದ ನೂತನ ನಿರ್ದೇಶಕರಿಗೆ ಸಾರಿಗೆ ಸಚಿವರ ಕಿವಿಮಾತು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ 19ಕ್ಕೆ 18ಸ್ಥಾನವನ್ನು ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್‌ ನೇತೃತ್ವದ ತಂಡ ಸೋಮವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿಮಾಡಿ ಆಶೀರ್ವಾದ ಪಡೆದರು.

ಈ ವೇಳೆ ಸಹಕಾರ ಸಂಘದ ನೂತನ ನಿರ್ದೇಶಕರಿಗೆ ಶುಭಕೋರಿದ ಸಚಿವರು, ನಿಮ್ಮ ಮೇಲೆ ಸಂಘದ ಸದಸ್ಯರು ಬಹಳ ನಂಬಿಕೆ ಇಟ್ಟುಕೊಂಡು ನಿಮ್ಮ ಚುನಾಯಿಸಿದ್ದಾರೆ ಅವರ ನಂಬಿಕೆಯನ್ನು ಹುಸಿಗೊಳಿಸದೆ ಅವರ ಸಮಸ್ಯೆಗಳು ಮತ್ತು ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ಈ ಸಹಕಾರಿ ಸಂಘವನ್ನು ಇನ್ನು ಎತ್ತರಕ್ಕೆ ಬೆಳೆಸುವತ್ತ ಗಮನ ಹರಿಸಿ ಎಂದು ಕಿವಿಮಾತು ಹೇಳಿದ್ದಾರೆ.

ಅಲ್ಲದೆ ಈವರೆಗೂ ಸಂಘದಲ್ಲಿ ಆಗಿರುವ ಎಲ್ಲ ಸಮಸ್ಯೆಗಳು ಮತ್ತು ಅಕ್ರಮಗಳನ್ನು ಕಾನೂನು ರೀತಿಯಲ್ಲೇ ಸರಿಪಡಿಸುವತ್ತ ಹೆಜ್ಜೆಹಾಕಬೇಕು. ಯಾರೆ ಸದಸ್ಯರ ಬೆವರಿನ ಹಣವನ್ನು ದುರುಪಯೋಗಪಡಿಸಿಕೊಂಡಿದ್ದರೆ ಅಂಥವರನ್ನು ಯಾವುದೆ ಮುಲಾಜಿಗೂ ಒಳಗಾಗದೆ ಕಾನೂನಿನ ರೀತಿಯಲ್ಲಿ ಶಿಕ್ಷೆಗೆ ಒಳಪಡಿಸುವತ್ತಲೂ ಗಮನ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

ಇನ್ನು ಸಾರಿಗೆ ನೌಕರರು ಮತ್ತು ಅಧಿಕಾರಿಗಳಲ್ಲಿ ಇರುವ ಭೇದಭಾವಗಳನ್ನು ಸರಿಪಡಿಸುವತ್ತ ನಾವು ಕೂಡ ಶ್ರಮಿಸುತ್ತಿದ್ದು, ಸಾರಿಗೆ ನಿಗಮಗಳು ಎಂದರೆ ಬರಿ ನೌಕರರು ಅಥವಾ ಅಧಿಕಾರಿಗಳು ಇಲ್ಲ ಆಡಳಿತ ಮಂಡಳಿ, ಸಂಘಟನೆಗಳ ಪದಾಧಿಕಾರಿಗಳಿಂದಲೇ ಅಲ್ಲ. ಈ ಎಲ್ಲರೂ ಒಗ್ಗೂಡಿದರೆ ಮಾತ್ರ ಸಾರಿಗೆ ನಿಗಮವಾಗಿ ಮುಂದೆ ಸಾಗಲು ಸಾಧ್ಯ ಇದನ್ನು ಪ್ರತಿಯೊಬ್ಬರೂ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು.

ಅದನ್ನು ಬಿಟ್ಟು ಇಲ್ಲಿ ಬರಿ ನೌಕರರು ಮಾತ್ರ ಸಾರಿಗೆ ನಿಗಮ ನಡೆಸುತ್ತಿರುವವರು ಎಂದು ಹೇಳುವುದು ತಪ್ಪಾಗುತ್ತದೆ. ಅಲ್ಲದೆ ಅಧಿಕಾರಿಗಳು ಕೂಡ ನಮಗೆ ಅಧಿಕಾರವಿದೆ ಎಂದು ನೌಕರರನ್ನು ಕೀಳಾಗಿ ಕಾಣುವುದು ಕೂಡ ತಪ್ಪಾಗುತ್ತದೆ. ಇನ್ನು ಎಲ್ಲವನ್ನು ಸರಿಪಡಿಸಿಕೊಂಡು ನಿಗಮವನ್ನು ಬಲಗೊಳಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿಯೂ ಕಾಲ ಕಾಲಕ್ಕೆ ಅಧಿಕಾರಿಗಳು ನೌಕರರ ಸಮಸ್ಯೆ ಮತ್ತು ಬೇಡಿಕೆಗಳಿಗೆ ಸ್ಪಂದಿಸಬೇಕು.

ಅದನ್ನು ಬಿಟ್ಟು ಕಡೆಗಾಣಿಸಿದರೆ ತಪ್ಪಾಗುತ್ತದೆ. ಇದು ಒಗ್ಗಟ್ಟನ್ನು ಒಡೆಯುವ ಸೂಚನೆಯಾಗುತ್ತದೆ. ಇನ್ನು ಬಹಳ ಮುಖ್ಯವಾಗಿ ಸಾರಿಗೆ ನೌಕರರ ಸಂಘಟನೆಗಳು ಕೂಡ ಸ್ವಾರ್ಥವನ್ನು ಬಿಟ್ಟು ಅಧಿಕಾರಿಗಳು ನೌಕರರ ಸಮಸ್ಯೆ ಮತ್ತು ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹೋರಾಟ ಮಾಡಬೇಕಿದೆ. ಇದು ಎಲ್ಲರಿಗೂ ಅರಿವಾಗಿದೆ ಎಂದು ನಾನು ಭಾವಿಸಿದ್ದೇನೆ ಎಂದು ಸಚಿವ ರಾಮಲಿಂಗಾರೆಡ್ಡಿ ಸೂಕ್ಷ್ಮವಾಗಿ ತಿಳಿ ಹೇಳಿದರು.

ಈ ವೇಳೆ ನೌಕರರ ಸಂಘದ ರಾಜ್ಯಾಧ್ಯಕ್ಷ ಆರ್‌.ಚಂದ್ರಶೇಖರ್‌, ವಕೀಲ ನಟರಾಜಶರ್ಮಾ,   ಸಹಕಾರ ಸಂಘದ ನೂತನ ನಿರ್ದೇಶಕರಾದ ವೀನ್ ಎ., ಕುರುವತ್ತಿ ಸುಣಗಾರ, ಚಲುವರಂಗಯ್ಯ ಎಂ.ಕೆ., ಮಹೇಂದ್ರ ಡಿ.ಪಿ., ಲೋಕೇಶ್ ಪಿ., ಪುಟ್ಟಯ್ಯ ಕೆ.ವಿ., ರಾಘವೇಂದ್ರ ಪಿ.ಬಿ., ರಾಘವೇಂದ್ರ ಜಿ., ನಾಗೇಶ್ ಜಿ.ಬಿ., ಮಲ್ಲೇಶಪ್ಪ, ಮಲ್ಲಪ್ಪ ಅಣ್ಣಿಗೇರಿ, ಸತೀಶ್ ಎನ್., ರೇಣುಕಾನಂದ, ಗೌರಮ್ಮ, ಭಾಗ್ಯಲಕ್ಷ್ಮಿ ಆರ್., ಕೃಷ್ಣ, ಓಂಕಾರಪ್ಪ ಎಸ್., ಯೋಗೀಶ್ ವಿ.ಎಸ್. ಹಾಗೂ ನೌಕರರ ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು ಇದ್ದರು.

1 Comment

  • ಕೂಟದ ಅಧ್ಯಕ್ಷರು ಇದೇ ಸಮಯವನ್ನು ಸದುಪಯೋಗ ಪಡಿಸಿಕೊಂಡು ಸಾರಿಗೆ ಸಚಿವರಿಗೆ ಸರ್ಕಾರವು ಈ ಹಿಂದೆ ಪ್ರಣಾಳಿಕೆಯಲ್ಲಿ ಘೋಷಿಸಿದ ಹಾಗೆ ಸರಿಸಮಾನ ವೇತನ ಕೊಡಬೇಕು ,ಸರ್ಕಾರಿ ನೌಕರರಿಗೆ ನೀವು ಹೇಳಿದ ಹಾಗೆ ವೇತನ ನಿಗದಿ ಮಾಡಿದ್ದೀರಿ ನಮಗೂ ಹಾಗೆಯೇ ಮಾಡಿ ಎಂದು ಒತ್ತಾಯಪೂರ್ವಕವಾಗಿ ಮನವಿ ಮಾಡಬೇಕಿತ್ತು

Leave a Reply

error: Content is protected !!
LATEST
160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್