ಬೆಂಗಳೂರು: ಸರ್ಕಾರ ಸಾರಿಗೆ ನೌಕರರ ಹೋರಾಟಕ್ಕೆ ಮಣಿದು ಅವರ ಬೇಡಿಕೆಯನ್ನು ಈಡೇರಿಸುವುದಕ್ಕೆ ಸರ್ಕಾರ ಮತ್ತು ಸಾರಿಗೆ ನಿಗಮಗಳ ಆಡಳಿತ ಮಂಡಳಿ ಮುಂದಾಗುತ್ತಿದ್ದರೂ ಕೆಲ ಸಂಘಟನೆಗಳ ಮುಖಂಡರೆ ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಬಗ್ಗೆ ವಿಜಯಪಥದಲ್ಲಿ ಭಾನುವಾರ ಅಂದರೆ ಆ.25ರಂದು ವರದಿಯಾಗಿದೆ.
ಈ ವರದಿ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ಹಾಸನ ವಿಭಾಗದಲ್ಲಿ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡು ನಟರಾಜ ಎಂಬ ವ್ಯಕ್ತಿ ಮೊ. 9591211436 ಈ ನಂಬರ್‌ನಿಂದ ವಿಜಯಪಥ ಕಚೇರಿಗೆ ಇಂದು ಮಧ್ಯಾಹ್ನ2ಗಂಟೆ ವೇಳೆ ಕರೆ ಮಾಡಿ ಅವಾಚ್ಯಪದ ಬಳಸಿದ್ದಾನೆ. ಅಲ್ಲದೆ ನಾನು 4 ದಶಕದಿಂದ ಕಾರ್ಮಿಕರ ಪರವಾಗಿ ಕೆಸಲ ಮಾಡಿಕೊಂಡು ಬಂದಿರುವ ಸಂಘಟನೆಯ ಮುಖಂಡನೆಂದು ಏರುಧ್ವನಿಯಲ್ಲಿ ಹೇಳಿಕೊಂಡಿದ್ದಾನೆ.
ಆದರೆ, ಆ ಸಂಘಟನೆ ಯಾವುದು ಎಂದು ವಿಜಯಪಥ ವರದಿಗಾರರು ಕೇಳಿದ್ದಕ್ಕೆ ಯಾವ ಸಂಘಟನೆಯಾದರೆ ನಿಮಗೇನು ಸರಿ ಸಮಾನ ವೇತನ ನಮಗೆ ಬೇಡ ನಮಗೆ ಅಗ್ರಿಮೆಂಟ್ ಆಗಬೇಕು. ಇದನ್ನು ಬಿಟ್ಟು ಸರ್ಕಾರವಾಗಲಿ ಅಥವಾ ಆಡಳಿತ ಮಂಡಳಿಯಾಗಲಿ ಸರಿ ಸಮಾನ ವೇತನ ಜಾರಿ ಮಾಡಲು ಹೊರಟರೆ ಅದರ ವಿರುದ್ಧ ನಾವು ಬೀದಿಗಿಳಿಯ ಬೇಕಾಗುತ್ತದೆ ಎಂದು ಈಗಾಗಲೇ ಸಾರಿಗೆ ಸಚಿವರು ಮತ್ತು ಎಂಡಿಗಳಿಗೂ ಎಚ್ಚರಿಕೆ ಕೊಟ್ಟಿದ್ದೇವೆ ಎಂದು ಹೇಳಿದ್ದಾನೆ.
ಅಲ್ಲದೆ ಅಗ್ರಿಮೆಂಟ್ ಬಿಟ್ಟು ಸರಿ ಸಮಾನ ವೇತನದ ಬಗ್ಗೆ ವಿಜಯಪಥದಲ್ಲಿ ವರದಿ ಬಂದರೆ ನಾನು ಸುಮ್ಮನಿರಲ್ಲ ಎಂದು ಬೆದರಿಕೆ ಕೂಡ ಹಾಕಿದ್ದಾನೆ. ಇದಿಷ್ಟೆ ಅಲ್ಲದೆ ನಿಮಗ ತಾಕತ್ತಿದ್ದರೆ ಎಲ್ಲ ನಾಲ್ಕೂ ನಿಗಮಗಳ ಕಾರ್ಮಿಕರು ಮತ್ತು ಅಧಿಕಾರಿಗಳನ್ನು ಒಗ್ಗೂಡಿಸಿ ನೋಡೋಣ? ನಮಗೆ ಯಾರನ್ನು ಎಲ್ಲಿ ಬಗ್ಗು ಬಡಿಯಬೇಕು ಎಂದು ಗೊತ್ತಿಗೆ ನಿಮ್ಮನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ.
ಇದರ ಜತೆಗೆ ದಮ್ಮಿದ್ದರೆ ಏಕ ನಿರ್ಧಾರ ತೆಗೆದುಕೊಂಡು ಸರಿ ಸಮಾನ ವೇತನ ಮಾಡಲಿ ನೋಡೋಣ ಎಂದು ಸರ್ಕಾರ ಮತ್ತು ಆಡಳಿತ ಮಂಡಳಿಗಳು ನಮ್ಮ ಸಂಘಟನೆಯ ಮಾತನ್ನು ಧಿಕ್ಕರಿಸಲು ಸಾಧ್ಯವಿದೆಯೆ. ಎಂದು ಪ್ರಶ್ನೆ ಕೂಡ ಮಾಡಿದ್ದಾನೆ.
ಇನ್ನು ಈತ ಯಾರು ಎಂದು ಟ್ರೂ ಕಾಲ್‌ನಲ್ಲಿ ನೋಡಿದಾಗ ನಟ ಕೆಎಸ್‌ಆರ್‌ಟಿಸಿ ಮೈಸೂರು ಎಂದು ಇದೆ. ಅಲ್ಲದೆ ಈತನ ವಾಟ್ಸ್ ಆಪ್‌ನಲ್ಲಿ ಫೋಟೋ ಸಿಕ್ಕಿದ್ದು ಆ ಫೋಟೋವನ್ನು ಕೂಡ ನಮ್ಮ ವಿಜಯಪಥದಲ್ಲಿ ಹಾಕಿದ್ದೇವೆ.
ಈತ ಒಂದು ಸಂಘಟನೆಗೆ ಸೇರಿದವನು ಎಂಬ ಅನುಮಾನವಿದೆ. ಈತನ ಈ ವರ್ತನೆಯಿಂದ ಆ ಸಂಘಟನೆಗೂ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ಸಂಘಟನೆ ಈತನ ವಿರುದ್ಧ ಸೂಕ್ತ ಕ್ರಮ ಜರುಗಿಸಿದರೆ ಒಳ್ಳೆಯದು. ಇಲ್ಲದಿದ್ದರೆ ವಿಜಯಪಥ ಮೀಡಿಯಾ ಕಾನೂನು ವಿಭಾಗದಿಂದಲೇ ಈತನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು.
ಇನ್ನು ಸಾರಿಗೆಯಲ್ಲಿ ಹೆಸರೇಳಿಕೊಂಡು ಕೆಲ ಕಿಡಿಗೇಡಿಗಳು ವಿಜಯಪಥ ನ್ಯೂಸ್ ಮೀಡಿಯಾ ಅಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆಯೂ ಕೂಡ ಮಾಹಿತಿ ಸಿಕ್ಕಿದ್ದು ಅಂಥವರು ಎಚ್ಚೆತ್ತುಕೊಳ್ಳದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು. – ಸಂ