Please assign a menu to the primary menu location under menu

NEWSಆರೋಗ್ಯದೇಶ-ವಿದೇಶ

ವಯಸ್ಸಿನ ಬೇಧವಿಲ್ಲದೆ ಮುಂಜಾನೆ 11 ನಿಮಿಷ ವಾಕ್‌ ಮಾಡಿ ದೀರ್ಘಕಾಲ ಆರೋಗ್ಯದಿಂದ ಜೀವನ ನಡೆಸಿ!

ವಿಜಯಪಥ ಸಮಗ್ರ ಸುದ್ದಿ

ನಾವು ಆರೋಗ್ಯವಾಗಿರಲು ಏನೆಲ್ಲಾ ಮಾಡುತ್ತೇವೆ. ಅದರ ಜತೆಗೆ ಜಸ್ಟ್ 11 ನಿಮಿಷದಲ್ಲಿ ಅಕಾಲಿಕ ಸಾವಿನಿಂದ ಬಚಾವ್ ಆಗಬಹುದು ಎಂದರೆ ನೀವು ನಂಬುತ್ತೀರಾ? ನಂಬಲೇಬೇಕು. ಜಸ್ಟ್ 11 ನಿಮಿಷ ತಾವು ಹೀಗೆ ಮಾಡಿದರೆ ಮೃತ್ಯುವನ್ನು ಹೊಡೆದು ಹೋಡಿಸಬಹುದಾಗಿದೆ.

ಹೌದು! ಬೆಳಗ್ಗೆ ವಾಕಿಂಗ್, ಪ್ರತಿದಿನ ನಡೆಯುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಜತೆಗೆ ಅಕಾಲಿಕ ಮರಣದ ಅಪಾಯವನ್ನು ಕೂಡ ಕಡಿಮೆ ಮಾಡುತ್ತದೆ. ಮುಂಜಾನೆ ವಾಕಿಂಗ್​ ಮಾಡುವುದರಿಂದ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು.

ನಿತ್ಯ ನಡೆಯುವುದರಿಂದ ಹೃದಯಾಘಾತ, ಮಧುಮೇಹ, ರಕ್ತದೊತ್ತಡ, ಬೊಜ್ಜು ಮುಂತಾದ ಸಮಸ್ಯೆಗಳಿಂದ ದೂರವಿರಬಹುದು. ಅಂದರೆ ಬೆಳಗ್ಗೆ ನಿಯಮಿತವಾಗಿ ವಾಕಿಂಗ್ ಮಾಡುವುದರಿಂದ ಮಾರಣಾಂತಿಕ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ. ನೀವು ಆಸ್ಪತ್ರೆಗಳಿಗೆ ಹೋಗಿ ಔಷಧಗಳನ್ನು ಪಡೆಯಬೇಕಾಗಿಲ್ಲ. ಅದರ ಬದಲು ಪ್ರತಿನಿತ್ಯ ವಾಕಿಂಗ್​ ಮಾಡುವುದೇ ರಾಮಬಾಣ.

ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್‌ನ ವರದಿ ಪ್ರಕಾರ ಪ್ರತಿದಿನ ನಾವು ಕೆಲ ನಿಮಿಷಗಳ ಕಾಲ ನಡೆದಾಡುವುದರಿಂದ ಅಕಾಲಿಕ ಮರಣದಿಂದ ದೂರ ಇರಬಹುದು. ಒಂದು ಅಧ್ಯಯನವು 30 ಮಿಲಿಯನ್‌ಗಿಂತಲೂ ಹೆಚ್ಚು ಜನರ ಡೇಟಾವನ್ನು ಸಂಗ್ರಹಿಸಿತ್ತು.

ಪ್ರತಿದಿನ ಕನಿಷ್ಠ 11 ನಿಮಿಷಗಳ ಕಾಲ ನಡೆಯುವ 10 ಜನರಲ್ಲಿ ಒಬ್ಬರಿಂದ ಅಕಾಲಿಕ ಮರಣದ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಕಂಡುಹಿಡಿದಿದೆ. ಇದರರ್ಥ ಪ್ರತಿದಿನ ನಿಯಮಿತವಾಗಿ ನಡೆಯುವ ಜನರು ಅಕಾಲಿಕ ಮರಣದ ಅಪಾಯವನ್ನು ಕಡಿಮೆ ಮಾಡುತ್ತಾರಂತೆ. ಇದರ ಜೊತೆಗೆ ನೀವು ದೀರ್ಘಕಾಲದವರೆಗೆ ರೋಗಗಳನ್ನು ದೂರವಿಡಬಹುದು.

ದೈನಂದಿನ ವ್ಯಾಯಾಮದ ಪ್ರಯೋಜನಗಳು..!: ಈಗಿನ ಕಾಲದಲ್ಲಿ ಜನರಿಗೆ ಬಿಡುವೆ ಇಲ್ಲದಂತೆ ಆಗಿಬಿಟ್ಟಿದೆ. ಫಿಟ್‌ನೆಸ್‌ಗಾಗಿ ನಿಮಗಾಗಿ ನೀವು ದಿನದ ಕನಿಷ್ಠ 1 ಗಂಟೆಗಳನ್ನಾದರೂ ಮೀಸಲು ಇಡಬೇಕು. ನಿಮ್ಮ ದೇಹವು ಆರೋಗ್ಯವಾಗಿದ್ದರೆ, ನೀವು ಮಾಡುವ ಪ್ರತಿ ಕೆಲಸವು ಉತ್ಸಾಹ ಭರಿತವಾಗಿರುತ್ತದೆ. ಅದಕ್ಕಾಗಿಯೇ ವೈದ್ಯರು ಫಿಟ್ ಆಗಿರಲು ನಿಯಮಿತವಾಗಿ ವ್ಯಾಯಾಮ ಮಾಡಿ ಎಂದು ಸಲಹೆ ನೀಡುತ್ತಾರೆ.

ಹೀಗೆ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಜನರು ಅಕಾಲಿಕ ಮರಣದ ಅಪಾಯವನ್ನು ಕಡಿಮೆ ಮಾಡುತ್ತಾರೆ ಎಂದು ಅನೇಕ ಸಂಶೋಧನೆಗಳು ದೃಢಪಡಿಸುತ್ತವೆ.

ವ್ಯಾಯಾಮ ಮಾಡುವುದರಿಂದ ದೇಹವು ಆರೋಗ್ಯಕರವಾಗಿರುತ್ತದೆ. ಇದು ಜೀವನಶೈಲಿ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು. ಹೃದಯ ಮತ್ತು ಮೆದುಳನ್ನು ಆರೋಗ್ಯವಾಗಿಡಲು ವಾಕಿಂಗ್ ಕೂಡ ಪರಿಣಾಮಕಾರಿ ವ್ಯಾಯಾಮವಾಗಿದೆ. ಆದ್ದರಿಂದ ಪ್ರತಿದಿನ ಅರ್ಧ ಗಂಟೆ ನೀವು ನಡೆಯಿರಿ. ಇದು ಅಕಾಲಿಕ ಮರಣದ ಅಪಾಯವನ್ನು 23% ರಷ್ಟು ಕಡಿಮೆ ಮಾಡುತ್ತದೆ.

ಅದೇ ಸಮಯದಲ್ಲಿ, ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು 17% ರಷ್ಟು ಕಡಿಮೆ ಮಾಡಬಹುದು. ಕ್ಯಾನ್ಸರ್ ಅಪಾಯವನ್ನು 7% ರಷ್ಟು ಕಡಿಮೆ ಮಾಡಬಹುದು. ಮೈಲೋಯ್ಡ್ ಲ್ಯುಕೇಮಿಯಾ ಮತ್ತು ಹೊಟ್ಟೆಯ ಕ್ಯಾನ್ಸರ್ ಅಪಾಯವನ್ನು 26% ರಷ್ಟು ಕಡಿಮೆ ಮಾಡಬಹುದು.

Leave a Reply

error: Content is protected !!
LATEST
ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ವಿಧಿವಶ ಬೆಳಗಾವಿ: ಸಚಿವರ ಕಾರು ಅಪಘಾತ- ಲಕ್ಷ್ಮೀ ಹೆಬ್ಬಾಳ್ಕರ್ ಬೆನ್ನು ಮೂಳೆ ಮುರಿತ BMTC ಕಂಡಕ್ಟರ್‌: 1ನೇ ಮದುವೆ ಮುಚ್ಚಿಟ್ಟು ಯುವತಿ ಜತೆ ಲವ್ವಿಡವ್ವಿ - ಬಳಿಕ ತಾಳಿ ಕಟ್ಟಿ ಗರ್ಭಿಣಿ ಮಾಡಿ ವಲ್ಲೆ ಎನ್ನು... KSRTC: ಪ್ರಯಾಣಿಕರು ಕಳೆದುಕೊಂಡಿದ ಬೆಲೆ ಬಾಳುವ ಬ್ಯಾಗ್‌ ಮರಳಿಸಿ ಪ್ರಾಮಾಣಿಕತೆ ಮೆರೆದ ತುರುವೇಕೆರೆ ಘಟಕದ ನೌಕರರು ಇಂದು ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ -ಕಿಚಡಿ ಮುದ್ದೆ, ಪೊಂಗಲ್‌ ರುಚಿಯ ಸವಿ ಮೈಸೂರು: ಬೇಡಿಕೆ ಈಡೇರಿಕೆಗೆ ಮೀನಮೇಷ ಎಣಿಸುತ್ತಿರುವ ಪ್ರಧಾನಿ, ಕೃಷಿ ಮಂತ್ರಿಗಳ ಪ್ರತಿಕೃತಿ ದಹಿಸಲು ಯತ್ನಿಸಿದ ರೈತರ ಬ... ಹೈಪರ್‌ಟೆನ್ಷನ್: ಭಾರತದ ಯುವಜನತೆಗೆ ಅಡಗಿದ ಅಪಾಯ: ಡಾ.ಸಾಯಿಶಂಕರ್ ಹುಬ್ಬಳ್ಳಿ: ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಜಾರಿಗೆ ಸಿಎಂ ಒತ್ತಾಯಿಸಿ: ಸಚಿವರಿಗೆ ವಾಯವ್ಯ ವಲಯ ನೌಕರರ ಕೂಟ ಮನವಿ "ಕೆಎಸ್‌ಆರ್‌ಟಿಸಿ ಆರೋಗ್ಯ" ಯೋಜನೆ ಕುರಿತು ನೌಕರರಿಗೆ ಪತ್ರ ಬರೆದು ಖುಷಿ ಹಂಚಿಕೊಂಡ ಸಂಸ್ಥೆ ಎಂಡಿ ಅನ್ಬುಕುಮಾರ್‌ BMTC: ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯಕ್ಕೆ ನೌಕರರಿಂದ ದಾಖಲೆ ಸಂಗ್ರಹಿಸಲು ಮೂವರು ಅಧಿಕಾರಿಗಳ ನಿಯೋಜನೆ