CrimeNEWSನಮ್ಮರಾಜ್ಯ

KSRTC: ಗೃಹ ರಕ್ಷಕ ದಳದ ಸಿಬ್ಬಂದಿಗೆ 54 ವರ್ಷಗಳವರೆಗೂ ಮಾನ್ಯತೆ ಇರುವ ಬಸ್‌ಪಾಸ್‌ ವಿತರಣೆ!!? 2001ರಿಂದ ಫ್ರೀಯಾಗಿ ಪ್ರಯಾಣಿಸುತ್ತಿರುವ ಭೂಪ!

ವಿವಿ ಪುರಂ ಪೊಲೀಸ್‌ ಠಾಣೆಯಲ್ಲಿ ಹೊಂ ಗಾರ್ಡ್‌ ಎಂದು ಹೇಳಿಕೊಂಡು ಪ್ರಯಾಣ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಬಸ್‌ಗಳಲ್ಲಿ 54 ವರ್ಷಗಳ ವರೆಗೂ ಅಂದರೆ 2001-55ರವರೆಗೆ ಯಾವುದೇ ಬಸ್‌ನಲ್ಲಿ ಬೇಕಾದರೂ ಎಲ್ಲಿಗೆ ಬೇಕಾದರು ಫ್ರೀಯಾಗಿ ಓಡಾಡಬಹುದು ಎಂದು 2001ರಲ್ಲಿ ಕೋಲಾರ ವಿಭಾಗದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿದ್ದ ಪದ್ಮನಾಭನ್‌ ಅನ್ನುವವರು ಬಸ್‌ ಪಾಸ್‌ ಮಾಡಿಕೊಟ್ಟಿದ್ದಾರೆ ಎಂದು ಗೃಹ ರಕ್ಷಕ ದಳದ ಸಿಬ್ಬಂದಿ ಬಸ್‌ಗಳಲ್ಲಿ ಫ್ರೀಯಾಗಿ ಓಡಾಡುತ್ತಿದ್ದಾನೆ.

ಅಸಲಿಗೆ ಸಾರಿಗೆಯ ಯಾವುದೇ ನಿಗಮದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೂ ಕೂಡ ಒಂದು ವರ್ಷಕ್ಕಿಂತ ಹೆಚ್ಚಿಗೆ ಪಾಸ್‌ ಅವಧಿ ಇರುವುದಿಲ್ಲ. ಆದರೆ, ಗೃಹ ರಕ್ಷಕ ದಳದ ಎಂದು ಹೇಳಿಕೊಂಡು 54 ವರ್ಷದ ವರೆಗೆ ನನಗೆ ಪಾಸ್‌ ಕೊಟ್ಟಿದ್ದಾರೆ ನಾನು ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ 2055ರವರೆಗೂ ಓಡಾಡಬಹುದು ಎಂದು ಪಾಸ್‌ ತೋರಿಸಿಕೊಂಡು ಓಡಾಡುತ್ತಿದ್ದಾನೆ ಇಲ್ಲೊಬ್ಬ ಭೂಪ!

ಎನ್‌.ಮುನಿರಾಜು ಎಂಬಾತನೆ ಈ ರೀತಿ ಹೇಳಿಕೊಂಡು ಬಸ್‌ನಲ್ಲಿ ಫ್ರೀಯಾಗಿ ಓಡಾಡುತ್ತಿರುವವನು. ಈತ ಪ್ರಸ್ತುತ ಬೆಂಗಳೂರಿನ ವಿವಿ ಪುರಂ ಪೊಲೀಸ್‌ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಆದರೆ, ವಿವಿ ಪುರಂ ಪೊಲೀಸ್‌ ಇನ್ಸ್‌ಪೇಕ್ಟರ್‌ ಅವರಿಗೆ ಫೋನ್‌ ಮೂಲಕ ಸರ್ಪಕಿಸಿದಾಗ ಅವರು ಮುನಿರಾಜು ಎಂಬ ಹೆಸರಿನ ಗೃಹ ರಕ್ಷಕ ದಳದ ಸಿಬ್ಬಂದಿಯೇ ಇಲ್ಲ ಎಂದು ಹೇಳಿದರು.

ಬಸ್‌ ಪಾಸ್‌ನಲ್ಲಿ ಇರುವುದು ಏನು?: ಕೆಎಸ್‌ಆರ್‌ಟಿಸಿ ಎಲ್‌ಸಿ ಕ್ರೈಂ ವಿಭಾಗದಲ್ಲಿ ಫಾಸ್‌ ಕೊಟ್ಟಿದ್ದಾರೆ ಎಂದು ಪಾಸ್‌ ಹಿಡಿದುಕೊಂಡು ಬಸ್‌ನಲ್ಲಿ ಪ್ರಯಾಣ ಮಾಡುತ್ತಿರುವ ಮುನಿರಾಜು ಎಂಬ ಈತನ ಪಾಸ್‌ನಲ್ಲಿ ಇರುವುದು K.S.R.T.C.L.C. Crime ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ : …./2001-2055

ಗೃಹ ರಕ್ಷಕ ದಳದವರು ವಾಹನ (ಕೆ.ಎಸ್.ಆರ್.ಟಿ.ಸಿ.) ಗಳಲ್ಲಿ ಪ್ರಯಾಣ ಮಾಡುವಂತೆ ನಿರ್ವಾಹಕರಿಗೆ ತಿಳಿಸುವ ಬಗ್ಗೆ:

ಉಲ್ಲೇಖ: ಸಂ.ಕ.ಕ/ಕೆ.ಪಿ.ಎಸ್‌..ಆ.ನಂ 385/6.

ಮಾನ್ಯರೆ,

ಈ ಮೇಲ್ಕಂಡ ಉಲ್ಲೇಖಿತ ಪತ್ರದ ಅನ್ವಯದ ಮೇರೆಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ಶ್ರೀ ಎನ್. ಮುನಿರಾಜು, ಹೆಚ್‌.ಜಿ.ನಂ.39 ವಿ.ವಿ.ಪುರಂ ಪೊಲೀಸ್‌ ಠಾಣೆ, ಬೆಂಗಳೂರು ನಗರ ( ದೂರ: 89719177**, 74117734**)

ಇವರ ಖಾಯಂ ವಿಳಾಸ ಮನೆ ನಂ. 45, ಕೊಟ್ರುಗುಳಿ ಗ್ರಾಮ, ರೋಣೂರು ಹೋಬಳಿ, ಶ್ರೀನಿವಾಸ ಪುರ ತಾಲೂಕು, ಕೋಲಾರ ಜಿಲ್ಲೆ, ಇವರು ಬೆಂಗಳೂರು ನಗರ ಜಿಲ್ಲೆಯಲ್ಲಿ ಕರ್ತವ್ಯನಿರ್ವಹಿಸುತ್ತಿರುತ್ತಾರೆ.

ಇವರು ಮೂಲತಹ ಶ್ರೀನಿವಾಸಪುರದಿಂದ ಬೆಂಗಳೂರಿಗೆ ಕಾರ್ಯ ನಿಮಿತ ಪ್ರಯಾಣ ಮಾಡುತ್ತಿರುತ್ತಾರೆ ಹಾಗೂ ಇವರು ಗೃಹ ರಕ್ಷಕ ದಳದವರಾಗಿದ್ದು ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ ಆದುದರಿಂದ ಇವರಿಗೆ ಶ್ರೀನಿವಾಸಪುರ ಡಿಪೋ ಘಟಕ, ಬೆಂಗಳೂರು ಮತ್ತು ಎಲ್ಲಾ ಜಿಲ್ಲೇಯ ಗ್ರಾಮಾಂತರಗಳಿಂದ ಪ್ರಯಣ ಮಾಡುವಂತೆ ಹಾಗೂ ಬೇರೆ ರಾಜ್ಯಗಳಿಗೆ ಕರ್ತವ್ಯದ ನಿಮಿತವಾಗಿ ಪ್ರಯಾಣ ಮಾಡುವಂತೆ ವಾಹನ ಬಿ.ಎಂ.ಟಿ.ಸಿ. ಮತ್ತು ಕೆ.ಎಸ್.ಆರ್.ಟಿ.ಸಿಗಳಲ್ಲಿ ಸಮವಸ್ತ್ರಗಳಲ್ಲಿ ಹಾಗೂ ಮಪ್ತಿಯಲ್ಲಿಯೂ (ಸಿವಿಲ್ ಡ್ರೆಸ್) ಪ್ರಯಾಣ ಮಾಡುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಂಸ್ಥೆ ವತಿಯಿಂದ ಇದನ್ನು ನೀಡಿರುತ್ತದೆ.

ಕೆ.ಎಸ್.ಆರ್.ಟಿ.ಸಿ., ರಾಜಹಂಸ, ಅಂಬಾರಿ, ಐರಾವತ, ವಾಯುವಜ್ರ, ಬಿಎಂಸಿ, ಬಿಎಂಟಿಸಿ, ಮತ್ತು ನಮ್ಮ ಕರ್ನಾಟಕ ಬಸ್ಸು (ಕೇರಳ, ತಮಿಳುನಾಡು, ಆಂದ್ರ) ನಮ್ಮ ಕರ್ನಾಟಕ ಬಸ್ಸು ಎಲ್ಲಿಗೆ ಕೊನೆಗೊಳ್ಳುತ್ತದೆಯೋ ಅಲ್ಲಿಯವರೆಗೆ ಚಾಲ್ತಿಯಲ್ಲಿರುತ್ತದೆ.

ನಿರ್ವಾಹಕರು ಇದನ್ನು ಪರಿಶೀಲಿಸಿ ಸಿಬ್ಬಂದಿಯವರು ಪ್ರಯಾಣಕ್ಕೆ ಅನುಕೂಲ ಮಾಡಿಕೊಡತಕ್ಕದ್ದು ಅಂತ ವಿಭಾಗೀಯ ನಿಯಂತ್ರಣಾಧಿಕಾರಗಳು ಬರೆದು ಸಹಿ ಮಾಡಿರುವಂತ ಪಾಸ್‌ ಇದೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾನೆ.

ಇನ್ನು ಸಾರಿಗೆ ನಿಗಮಗಳ ಅಧಿಕಾರಿಗಳನ್ನು ಈ ಪಾಸ್‌ ಬಗ್ಗೆ ವಿಚಾರಿಸಿದಾಗ ಇದು ಫೇಕ್‌ ಪಾಸ್‌. ಈ ರೀತಿಯ ಪಾಸ್‌ಗಳನ್ನು ನಮ್ಮ ನಿಗಮದಿಂದ ವಿತರಿಸುವುದಿಲ್ಲ ಎಂದು ಹೇಳಿದ್ದಾರೆ.

ಅಲ್ಲದೆ ಇದು ನಕಲಿ ಬಸ್‌ ಪಾಸ್‌ ಎಂಬುವುದಕ್ಕೆ ಇನ್ನೊಂದು ಬಲವಾದ ಕಾರಣವು ಇದೆ. ಕೆಎಸ್‌ಆರ್‌ಟಿಸಿ ಕೋಲಾರ ವಿಭಾಗದ ಡಿಸಿ ಅವರಿಗೆ ಬಿಎಂಟಿಸಿ ಬಸ್‌ಗಳಲ್ಲಿ ಓಡಾಡುವುದಕ್ಕೆ ಅನುಮತಿಸುವ ಅಧಿಕಾರವಿಲ್ಲ. ಆದರೆ ಈ ಬಸ್‌ ಪಾಸ್‌ನಲ್ಲಿ ಎರಡು ನಿಗಮಗಳ ಬಸ್‌ಗಳಲ್ಲಿ ಪ್ರಯಾಣಿಸಬಹುದು ಎಂದು ಇದೆ. ಇದನ್ನು ಗಮನಿಸಿದರೇ ಗೊತ್ತಾಗುತ್ತದೆ ಇದು ಅಸಲಿಯೋ ನಕಲಿಯೋ ಎಂದು.

ಇನ್ನು ಸಾರಿಗೆ ನಿಗಮಗಳಲ್ಲಿ ಕರ್ತವ್ಯ ನಿರತ ಅಧಿಕಾರಿಗಳಿಗೆ 1 ವರ್ಷಕ್ಕಿಂದ ಹೆಚ್ಚುದಿನದ ವರೆಗೆ ಪಾಸ್‌ಗಳನ್ನು ಕೊಡುವುದಿಲ್ಲ. ಅಲ್ಲದೆ ಪತ್ರಕರ್ತರು, ಪೊಲೀಸ್‌ ಇಲಾಖೆ ಸಿಬ್ಬಂದಿ, ಸ್ವಾತಂತ್ರ್ಯ ಹೋರಾಟಗಾಗರು ಹೀಗೆ ಯಾರೆ ಬಸ್‌ ಪಾಸ್‌ ಪಡೆದರೂ ಅವರಿಗೆ ಒಂದು ವರ್ಷದ ಮಾನ್ಯತೆಯೊಂದಿರುವ ಪಾಸ್‌ ಮಾತ್ರ ನೀಡಲಾಗುತ್ತದೆ.

ಜತೆಗೆ ಪಾಸ್‌ ವಿತರಿಸಿದ ದಿನಾಂಕ ತಿಂಗಳು ವರ್ಷ ಮತ್ತು ಪಾಸ್‌ ಮುಗಿಯುವ ಕೊನೆಯ ದಿನಾಂಕ ವರ್ಷ ಎಲ್ಲವನ್ನೂ ನಮೂದಿಸಲಾಗಿರುತ್ತದೆ. ಆದರೆ ಈ ಬಸ್‌ ಪಾಸ್‌ನಲ್ಲಿ ಆ ರೀತಿ ಯಾವುದೇ ಆರಂಭದ ಮತ್ತು ಕೊನೆಯ ದಿನಾಂಕ ನಮೂದಾಗಿಲ್ಲ.

ಇನ್ನು ಈ ವಿಷಯ ತಿಳಿಯುತ್ತಿದ್ದಂತೆ ಕೋಲಾರ ವಿಭಾಗದ ಜಾಗೃತ ಮತ್ತು ಭದ್ರತಾಧಿಕಾರಿಗಳು ಫೇಕ್‌ ಬಸ್‌ ಪಾಸ್‌ ಇಟ್ಟುಕೊಂಡು ಓಡಾಡುತ್ತಿರುವ ವ್ಯಕ್ತಯ ಪತ್ತೆಗೆ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

error: Content is protected !!
LATEST
KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್ ದೆಹಲಿ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಅತಿಶಿ: ಎಎಪಿ ನಾಯಕರ ಸಭೆಯಲ್ಲಿ ನಿರ್ಧಾರ BMTC 1500 ನಿವೃತ್ತ ನೌಕರರ ಗ್ರಾಚ್ಯುಟಿ, EL ಹಣ 400 ಕೋಟಿ ರೂ.ಬಾಕಿ: 16-18 ತಿಂಗಳಿನಿಂದ ಕೇಂದ್ರ ಕಚೇರಿಗೆ ಅಲೆದಾಟ!! ಸುಪ್ರೀಂ ಕೋರ್ಟ್ ಅಧಿಕೃತ  ಭಾಷೆ ಇಂಗ್ಲಿಷ್- ಹಿಂದಿಯಲ್ಲಿ ವಾದಕ್ಕೆ ಅನುಮತಿ ಇಲ್ಲ: ವಕೀಲರಿಗೆ ನೆನಪಿಸಿದ ಕೋರ್ಟ್‌ ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಖರೀದಿ ಮಾಡದಂತ ಕಟ್ಟುನಿಟ್ಟಿನ ಕಾನೂನು ಜಾರಿಗೆ ರೈತ ಮುಖಂಡರ ಆಗ್ರಹ KSRTC ಬಸ್‌ -ಕಾರು ನಡುವೆ ಅಪಘಾತ: ಅನಾರೋಗ್ಯದ ನಡುವೆ ಕಾರು ಚಲಾಯಿಸಿದ ಪತಿ ಮೃತ- ಪತ್ನಿ ಪ್ರಾಣಾಪಾಯದಿಂದ ಪಾರು