NEWSಉದ್ಯೋಗದೇಶ-ವಿದೇಶನಮ್ಮರಾಜ್ಯ

160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ

ವಿಜಯಪಥ ಸಮಗ್ರ ಸುದ್ದಿ
  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ- 2024ರ ಸೆ. 21. ಅರ್ಜಿ ಸಲ್ಲಿಸಲು ಕೊನೆ ದಿನಾಂಕ- 2024ರ ಅ.  21

ನ್ಯೂಡೆಲ್ಲಿ: ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ (ತಾಂತ್ರಿಕ) ಹುದ್ದೆಗಳಿಗೆ ಭಾರತ ಸರ್ಕಾರ ಅರ್ಜಿಗಳನ್ನು ಆಹ್ವಾನಿಸಿದೆ.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಬಿಡುಗಡೆಗೊಂಡಿರುವ ಅಧಿಕೃತ ಅಧಿಸೂಚನೆಯನ್ನು ಗಮನಿಸಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಸೆಕ್ರೆಟರಿಯೇಟ್‌ನಲ್ಲಿ ಗ್ರೂಪ್ ಬಿ, ಗೆಜೆಟೆಡ್ ಅಲ್ಲದ ವರ್ಗದಲ್ಲಿನ ಖಾಲಿ ಹುದ್ದೆಗಳನ್ನು ಸದ್ಯಕ್ಕೆ ಭರ್ತಿ ಮಾಡಲಾಗುತ್ತಿದೆ. ಹೀಗಾಗಿ ಅಧಿಸೂಚನೆಯಲ್ಲಿ ನೀಡಲಾಗಿರುವ ಎಲ್ಲ ವಿವರಗಳನ್ನು ಅಭ್ಯರ್ಥಿಗಳು ಸರಿಯಾಗಿ ಮನನ ಮಾಡಿಕೊಳ್ಳಬೇಕು.

ವಯೋಮಿತಿ, ವಿದ್ಯಾರ್ಹತೆ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಸೇರಿದಂತೆ ಇತರೆ ಮಾಹಿತಿಯನ್ನು ಇಲ್ಲಿ ನೀಡಲಾಗಿದ್ದು ಆಸಕ್ತರು ಸರಿಯಾಗಿ ಗಮನಿಸಿ ಹುದ್ದೆಗಳಿಗೆ ಅಪ್ಲೇ ಮಾಡಿ. ಈ ಹುದ್ದೆಗೆ ಸಂಬಂಧಿಸಿದ ಲಿಂಕ್ ಹಾಗೂ ದಿನಾಂಕಗಳ ವಿವರವನ್ನು ಕೆಳಗೆ ನೀಡಲಾಗಿದೆ. ಹುದ್ದೆಯ ಫಾರ್ಮ್​ ಡೌನ್​​ಲೋಡ್ ಮಾಡಿಕೊಂಡು ಅದನ್ನು ಇಲಾಖೆಗೆ ಕಳುಹಿಸಬೇಕು.

ವೇತನ: ತಿಂಗಳಿಗೆ ಸಂಬಳ- 95,000 ರೂಪಾಯಿ. ಹುದ್ದೆಯ ಹೆಸರು- ಡೆಪ್ಯೂಟಿ ಫೀಲ್ಡ್ ಆಫೀಸರ್ (ಟೆಕ್ನಿಕಲ್). ಒಟ್ಟು ಪೋಸ್ಟ್​ಗಳು- 160. ಉದ್ಯೋಗದ ಸ್ಥಳ- ದೆಹಲಿ.

ವಯಸ್ಸಿನ ಮಿತಿ: 30 ವರ್ಷದ ಒಳಗಿನ ಅಭ್ಯರ್ಥಿಗಳಿಗೆ ಅವಕಾಶ. ಇನ್ನು ಎಸ್​​ಸಿ, ಎಸ್​ಟಿ, ಒಬಿಸಿ ಸರ್ಕಾರಿ ಅಧಿಕಾರಿಗಳು, ಮಾಜಿ ಸೈನಿಕರಿಗೆ ವಯೋಮಿತಿ ಸಡಿಲಿಕೆ ಇದೆ.

ವಿದ್ಯಾರ್ಹತೆ: ಇಂಜಿನಿಯರಿಂಗ್ ಅಥವಾ ಟೆಕ್ನಾಲಜಿಯಲ್ಲಿ ಪದವಿ ಪೂರ್ಣ ಆಗಿರಬೇಕು ಅಥವಾ ವಿಜ್ಞಾನ ವಿಭಾಗದಲ್ಲಿ ಮಾಸ್ಟರ್ ಡಿಗ್ರಿ . GATE ಅಲ್ಲಿ ಪಡೆದ ಅಂಕಗಳನ್ನು ಮುಖ್ಯವಾಗಿ ಪರಿಗಣಿಸಲಾಗುತ್ತದೆ.

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ..?: ಅಭ್ಯರ್ಥಿಗಳ ಮೆರಿಟ್ ಲಿಸ್ಟ್ ಸಿದ್ಧಪಡಿಸಲಾಗುತ್ತದೆ. ಬಳಿಕ ಸಂದರ್ಶನ ಏರ್ಪಡಿಸಲಾಗುತ್ತದೆ. ಅರ್ಜಿಯಲ್ಲಿ ಸಂದರ್ಶನದ ಸ್ಥಳ ಅಭ್ಯರ್ಥಿಗಳೇ ನಿರ್ಧರಿಸಬೇಕು. GATE ಅಲ್ಲಿ ಪಡೆದ ಅಂಕಗಳು ಹಾಗೂ ಸಂದರ್ಶನದಲ್ಲಿನ ಪರ್ಫಾಮೆನ್ಸ್​ ನೋಡಿ ಆಯ್ಕೆ ಮಾಡಲಾಗುತ್ತದೆ.

ಫಾರ್ಮ್​ ಜೊತೆ ಯಾವ್ಯಾವ ದಾಖಲೆಗಳನ್ನು ನೀಡಬೇಕು..?: ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು. SSLC, ಸೆಕೆಂಡ್ ಪಿಯುಸಿ, ಪದವಿ ಅಂಕ ಪಟ್ಟಿಗಳು. GATE ಅಲ್ಲಿ ಪಡೆದ ಅಂಕ ಪಟ್ಟಿ. ಜಾತಿ ಪ್ರಮಾಣಪತ್ರ. ಎಲ್ಲಿಯಾದರೂ ಕೆಲಸ ಮಾಡುತ್ತಿದ್ದರೇ ಎನ್​​ಒಸಿ ಕೊಡಬಹುದು. ಮಾಜಿ ಸೈನಿಕ ಆಗಿದ್ದರೇ ಸರ್ಟಿಫಿಕೆಟ್. ಇತ್ತೀಚಿನ 2 ಪಾಸ್​​ಪೋರ್ಟ್​ ಫೋಟೋಗಳು.

ಅರ್ಜಿ ಫಾರ್ಮ್‌ಗಾಗಿ ಈ ಲಿಂಕ್​ಗೆ ಭೇಟಿ ನೀಡಿ-https://drive.google.com/file/d/1f8jIBTktisgg4D38HnpGpl1F_bNBR0gG/view   ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ- ಸೆಪ್ಟೆಂಬರ್ 21. ಅರ್ಜಿ ಸಲ್ಲಿಸಲು ಕೊನೆ ದಿನಾಂಕ- ಅಕ್ಟೋಬರ್ 21.

Leave a Reply

error: Content is protected !!
LATEST
ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ ಸಿಮೆಂಟ್ ಲಾರಿಗೆ ಕಾರು ಡಿಕ್ಕಿ: ತಂದೆ, 2ವರ್ಷದ ಮಗು ಮೃತ, ತಾಯಿ ಸ್ಥಿತಿ ಗಂಭೀರ KSRTC: ವಾರದೊಳಗೆ ವೇತನ ಹೆಚ್ಚಳದ 38ತಿಂಗಳ ಹಿಂಬಾಕಿ ನಿವೃತ್ತ ನೌಕರರ ಬ್ಯಾಂಕ್‌ ಖಾತೆಗೆ ಜಮಾ! ಚೆಂಡು ಹೂವಿನ ಬೆಲೆ ತೀವ್ರ ಕುಸಿತ- ರಸ್ತೆ ಬದಿ ಹೂ ಸುರಿದು ಬೆಳೆಗಾರ ರೈತರ ಅಕ್ರೋಶ