CrimeNEWSಬೆಂಗಳೂರು

ಫ್ರಿಡ್ಜ್‌ನಲ್ಲಿದ್ದ ಮಹಾಲಕ್ಷ್ಮೀ ದೇಹದ 32 ಪೀಸ್‌ಗಳು ಹೇಳುತ್ತಿವೆ ಭಯಾನಕ ಸತ್ಯ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವೈಯಾಲಿಕಾವಲ್‌ ಮನೆಯೊಂದರಲ್ಲಿ ನಿನ್ನೆ ಸಿಕ್ಕಿದ್ದ ಮಹಾಲಕ್ಷ್ಮೀಯ ತುಂಡಾದ 32 ಪೀಸ್‌ಗಳು ಸ್ಫೋಟಕ ಮಾಹಿತಿ ನೀಡುತ್ತಿವೆ. ಈಮೂಲಕ ಫ್ರಿಡ್ಜ್‌ನಲ್ಲಿ ತುಂಡು, ತುಂಡಾಗಿದ್ದ ದೇಹದ 32 ಭಾಗಗಳು ಒಂದೊಂದು ಭಯಾನಕ ಸತ್ಯವನ್ನು ಬಿಚ್ಚಿಡುತ್ತಿವೆ.

ವೈಯಾಲಿಕಾವಲ್ ಮನೆಯ ಫಸ್ಟ್ ಫ್ಲೋರ್‌ನಲ್ಲಿ ಮರ್ಡರ್ ವಾಸನೆ ಅಕ್ಕಪಕ್ಕದ ಮನೆಯವರ ಮೂಗಿಗೆ ಬಡಿದಿತ್ತು. ನೆರೆಮನೆಯವರು ಮಹಾಲಕ್ಷ್ಮೀ ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದರು. ಇದಾದ ಬಳಿಕ ಸ್ಥಳಕ್ಕೆ ಬಂದ ಪೊಲೀಸರಿಗೆ ಇಂತಹದೊಂದು ಮರ್ಡರ್ ಊಹಿಸಿಕೊಳ್ಳೋದು ಸಾಧ್ಯವಿರಲಿಲ್ಲ. ಇದೀಗ ಈ ಪ್ರಕರಣದ ಬೆನ್ನತ್ತಿರುವ ಪೊಲೀಸರು ಹಾಗೂ ವೈದ್ಯರಿಗೆ ಈ ಪ್ರಕರಣ ಕಗ್ಗಂಟಾಗಿದೆ.

ಈ ನಡುವೆ ಬೆಂಗಳೂರಲ್ಲಿ ನಡೆದ ಸಾಮಾನ್ಯ ಕೊಲೆಗಿಂತ ಈ ಪ್ರಕರಣ ತುಂಬಾನೇ ವಿಚಿತ್ರವಾಗಿದೆ. ಕೇಸ್​​ನಲ್ಲಿ ಪ್ರಾಥಮಿಕ ಸಾಕ್ಷ್ಯ ಪತ್ತೆ ಹಚ್ಚೋದೇ ದೊಡ್ಡ ಸವಾಲಾಗಿತ್ತು. ಮರಣೋತ್ತರ ಪರೀಕ್ಷೆ ವರದಿ ಈ ಪ್ರಕರಣದಲ್ಲಿ ತುಂಬಾನೇ ಮುಖ್ಯವಾಗಿದೆ.

ಮಹಾಲಕ್ಷ್ಮೀ ಬರ್ಬರ ಹತ್ಯೆಯ ಸುದ್ದಿ ತಿಳಿದ ಕುಟುಂಬಸ್ಥರು ಪೊಲೀಸರಿಗೆ ಸ್ಫೋಟಕ ಮಾಹಿತಿಯನ್ನು ನೀಡಿದ್ದಾರೆ. ಮಹಾಲಕ್ಷ್ಮಿ ಗಂಡ ಹಾಗೂ ಕುಟುಂಬಸ್ಥರು ಉತ್ತರಾಖಂಡ್ ಮೂಲದ ಅಶ್ರಫ್ ಎಂಬಾತನ ವಿರುದ್ಧ ದೂರು ನೀಡಿದ್ದಾರೆ. ಕಾರಣ ಮೃತ ಮಹಾಲಕ್ಷ್ಮೀ ಅಶ್ರಫ್ ಎಂಬಾತನ ಜೊತೆ ಸಲುಗೆಯಿಂದ ಇದ್ದಳಂತೆ.

ಇದೇ ವಿಚಾರಕ್ಕೆ ಮಹಾಲಕ್ಷ್ಮೀ ಪತಿ ಕಳೆದ ವರ್ಷ ನೆಲಮಂಗಲ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ನಂತರ ಪತಿ, ಪತ್ನಿ ದೂರವಾಗಿ ವಾಸ ಮಾಡುತ್ತಿದ್ರು. ಉತ್ತರಾಖಂಡ್ ಮೂಲದ ಅಶ್ರಫ್‌, ಬೆಂಗಳೂರಿನ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ. ಮಹಾಲಕ್ಷ್ಮೀ ಸಾವಿನ ಅಶ್ರಫ್ ಪರಾರಿಯಾಗಿದ್ದಾನೆ. ಸದ್ಯ ಈತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ನಾಲ್ವರ ಮೇಲೆ ಅನುಮಾನ!: ಈ ಸಾವಿನ ಪ್ರಕರಣದಲ್ಲಿ ವೈಯಾಲಿಕಾವಲ್ ಪೊಲೀಸರಿಗೆ ಮಹಾಲಕ್ಷ್ಮೀ ಕುಟುಂಬಸ್ಥರು ಇನ್ನೂ ಮೂವರ ಬಗ್ಗೆ ಮಾಹಿತಿ ನೀಡಿದ್ದಾರೆ. ಅಶ್ರಫ್ ಜೊತೆಗೆ ಮುಕ್ತ, ಶಶಿಧರ್, ಸುನೀಲ್ ಮೂವರು ಮಹಾಲಕ್ಷ್ಮೀಯ ಸಹೋದ್ಯೋಗಿಗಳು.

ಕೆಲಸ ಮಾಡುವ ಕಡೆಯೂ ಮಹಾಲಕ್ಷ್ಮೀ ಜಗಳ ಮಾಡಿಕೊಂಡಿದ್ದರು. ಹೀಗಾಗಿ ಒಟ್ಟು ನಾಲ್ವರ ಮೇಲೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಮಹಾಲಕ್ಷ್ಮೀ ಜೊತೆ ತುಂಬಾ ಸಲುಗೆಯಿಂದ ಇದ್ದ ಅಶ್ರಫ್ ಅನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.

Leave a Reply

error: Content is protected !!
LATEST
ಫ್ರಿಡ್ಜ್‌ನಲ್ಲಿದ್ದ ಮಹಾಲಕ್ಷ್ಮೀ ದೇಹದ 32 ಪೀಸ್‌ಗಳು ಹೇಳುತ್ತಿವೆ ಭಯಾನಕ ಸತ್ಯ ಬಡವರು-ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ನಿವೇಶನ ವಿತರಣೆ: ಡಾ.ಬಸ್ತಿ ರಂಗಪ್ಪ KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ... ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!! KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ