NEWSನಮ್ಮಜಿಲ್ಲೆನಮ್ಮರಾಜ್ಯ

WELCOME TO KSRTC ಸ್ನಾನಗೃಹ ಬಸ್ – ಕಳಪೆ ಬಸ್‌ ಬಿಟ್ಟ NWKRTC ನಿಗಮಕ್ಕೆ ಛೀಮಾರಿಹಾಕಿದ ಪ್ರಯಾಣಿಕ

ವಿಜಯಪಥ ಸಮಗ್ರ ಸುದ್ದಿ

ಕುಮಟಾ: ಇದು ಕುಮಟಾ ಘಟಕದಿಂದ ಆರಂಭಗೊಂಡಿರುವ ನೂತನ ಕುಮಟಾ- ಮಂಗಳೂರು Non Stop ಸ್ನಾನಗೃಹ ಬಸ್. ಈ ಬಸ್‌ನಲ್ಲಿ ನಿಮಗೆ ಪ್ರಯಾಣದ ಜೊತೆ ಸ್ನಾನ ಫ್ರೀ ಫ್ರೀ!

ಹಾಗೇ, ಈ ಘಟಕದ ವ್ಯವಸ್ಥಾಪಕರು ಮತ್ತು ಬಸ್ಸಿನ ಚಾಲಕರಿಗೆ (ನಿರ್ವಾಹಕ ರಹಿತ) ಎಷ್ಟು ಜವಾಬ್ದಾರಿ ಎಂದರೆ, ಸರಿಯಾಗಿ ಕೆಲಸ ಮಾಡದ ಟಿಕೆಟ್ ಮಷಿನ್ನನ್ನೆ ತಂದು ಮುರ್ಡೇಶ್ವರದ ತನಕವೂ ಟಿಕೆಟ್ ಮಾಡಿ, ಭಟ್ಕಳದಲ್ಲಿ ಟಿಕೆಟ್ ಮಷಿನ್‌ ಹಾಳಾಯ್ತು ಅಂತ ಜನರನ್ನು ಅಲ್ಲೇ ಬಿಟ್ಟರು. ಇಂತಹ ಅದ್ಭುತ ಸೇವೆ ಒದಗಿಸುತ್ತಿರುವ NWKRTC ನಿಗಮಕ್ಕೊಂದು ನಿಮ್ಮ ಮೆಚ್ಚುಗೆ ಇರಲಿ ಎಂದು ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಛೀಮಾರಿ ಹಾಕಿದ್ದಾರೆ.

ಎಂ.ಎಸ್‌. ಶೋಭಿತ್‌ ಎಂಬುವರು ತಮ್ಮ ಫೇಸ್‌ಬುಕ್‌ನಲ್ಲಿ ಸಾರಿಗೆ ನಿಗಮದ ಸೇವೆ ಬಗ್ಗೆ ಭಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇವತ್ತು ಕೆಲಸವೊಂದರ ನಿಮಿತ್ತ ಮಂಗಳೂರಿಗೆ ಹೊರಟಿದ್ದೆವು. ಹೊನ್ನಾವರದಿಂದ ಮಂಗಳೂರಿಗೆ 7 ಗಂಟೆಗೊಂದು ಎಕ್ಸ್‌ಪ್ರೆಸ್‌ ಬಸ್ ಇದೆ. ಅದನ್ನೇ ಹತ್ತಿದ್ದೆವು.

ಕುಮಟಾ ಘಟಕದ ನಾನ್ ಸ್ಟಾಪ್ ಬಸ್ಸು. ನಿರ್ವಾಹಕ ರಹಿತ ಸೇವೆ. (KA 31 F 1566) ಬಸ್‌ ಬೆಳಗ್ಗೆ 7:15 ಹೊತ್ತಿಗೆ ಹೊನ್ನಾವರ ಬಸ್‌ ನಿಲ್ದಾಣಕ್ಕೆ ಬಂದ ಬಸ್‌, ಒಳಗೆಲ್ಲಾ ಸೋರುತ್ತಿತ್ತು. ಮಳೆ ನೀರೆಲ್ಲಾ ಒಳಗೇ ಬರುವುದರಿಂದ ಎಷ್ಟೋ ಜನ ಸೀಟು ಇದ್ದರೂ ನಿಂತೇ ಇದ್ದರು.

ನಾನೂ ಕೂಡ ಭಟ್ಕಳದ ತನಕ ನಿಂತೇ ಪ್ರಯಾಣ ಮಾಡಿದೆ. ಭಟ್ಕಳ ಬಸ್ ಸ್ಟ್ಯಾಂಡ್‌ಗೆ ಬಂದ ನಂತರ ಸೀಟು ಸಿಕ್ಕಿತು ಅಂತ ಕೂತ ತಕ್ಷಣ ಡ್ರೈವರ್ ” ಟಿಕೆಟ್‌ ಮಷಿನ್‌ ಹಾಳಾಗಿದೆ. ಬೇರೆ ಬಸ್ ಹತ್ತಿಸಿಕೊಡುತ್ತೇನೆ. ಎಲ್ಲರೂ ಇಳಿಯಿರಿ” ಎಂದ!

ಆ ನಂತರ ಬಂದ ಒಂದೆರಡು ಬಸ್‌ಗಳು ಉಡುಪಿ ತನಕ ಮಾತ್ರ ಹೋಗುವಂತದ್ದಾಗಿದ್ದವು. ಈ ಡ್ರೈವರ್ ಕಮ್ ಕಂಡಕ್ಟರ್ ಮಹಾಶಯ “ಇಲ್ಲೇ ಇರಿ. ಭಟ್ಕಳ ಡಿಪೋಗೆ ಹೋಗಿ ಮಷಿನ್‌ ಸರಿ ಆಗುತ್ತಾ ನೋಡ್ಕೊಂಡ್ ಬರ್ತೇನೆ. ಬಂದು ಬೇರೆ ಬಸ್ ಹತ್ತಿಸಿಕೊಡ್ತೇನೆ” ಅಂತ ಹೇಳಿ ಭಟ್ಕಳ ಡಿಪೋಗೆ ಹೋದ.

ಸ್ವಲ್ಪ ಹೊತ್ತಿಗೆ ವಾಪಾಸ್ ಬಂದು ಅದು ಸರಿ ಆಗಲ್ಲ, ನಾನು ವಾಪಾಸ್ ಕುಮಟಾಗೆ ಹೋಗ್ತೇನೆ. ನಿಮ್ಗೆ ಬಸ್ ಹತ್ತಿಸಿಕೊಡ್ತೇನೆ ಅಂದ. ಸರಿ ಓಕೆ ಅಂದೆವು. ಮೈಸೂರು ಗ್ರಾಮಾಂತರ ಘಟಕದ ಮಂಗಳೂರು ಮೂಲಕ ಹೋಗುವ ಬಸ್ಸೊಂದು ಬಂತು. “ನೀವು ಎಲ್ಲರೂ ಈ ಬಸ್ಸಿಗೆ ಹೋಗಿ. ಇದು ಮಂಗಳೂರು ಹೋಗುತ್ತೆ” ಎಂದ.

ಮೊದಲು ತೆಗೆದುಕೊಂಡಿದ್ದ ಕುಮಟಾ ಘಟಕದ ಬಸ್ಸಿನ ಟಿಕೆಟ್‌ನ್ನೇ ತೋರಿಸಿದಾಗ ಕೆಎಸ್‌ಆರ್‌ಟಿಸಿ ಮೈಸೂರು ಗ್ರಾಮಾಂತರ ಘಟಕದ ಬಸ್‌ ನಿರ್ವಾಹಕ, “ನಮಗೆ ಆ ಕಂಡಕ್ಟರ್ ಏನೂ ರಿಪೋರ್ಟ್ ಕೊಟ್ಟಿಲ್ಲ. ಭಟ್ಕಳ ಸ್ಟ್ಯಾಂಡ್ ಕಂಟ್ರೋಲರ್ ಕೂಡಾ ಮಾಹಿತಿ ಏನೂ ನೀಡಿಲ್ಲ. ನಾವು ಅಲೋ ಮಾಡಲ್ಲ. ನೀವು ಬೇರೆ ಟಿಕೆಟ್ ತೆಗೆದುಕೊಳ್ಳಬೇಕು” ಎಂದರು!

ಆಗ ಕುಮಟಾ ಡಿಪೋದ ಡ್ರೈವರ್‌ಗೆ ಫೋನ್ ಮಾಡಿದಾಗ ಇಲ್ಲ ನಾನು ಅವ್ರಿಗೆ ಹೇಳಿದೇನೆ. ಕಂಟ್ರೋಲರ್ ಕೂಡಾ ಹೇಳಿದಾರೆ ಅಂದ! ಅದಾಗಲೇ ನಾವು ಭಟ್ಕಳದಿಂದ ಸ್ವಲ್ಪ ದೂರ ಬಂದಿದ್ದರಿಂದ ಟಿಕೆಟ್ ತೆಗೆದುಕೊಳ್ಳಲೇಬೇಕಾಯ್ತು.

ಇದು ದುಡ್ಡಿನ ವಿಷಯ ಅಲ್ಲ. ನಮ್ಮ ಸಮಯ ವ್ಯರ್ಥವೂ ಹೌದು. ಇಷ್ಟೊಂದು ಬೇಜವಾಬ್ದಾರಿಯಾಗಿ ವರ್ತಿಸುವ, ಇಂಥವರ ವಿರುದ್ಧ ಕ್ರಮ ಆಗಬೇಕಿದೆ. ಇಲ್ಲಿ ಪಾಪ ಡ್ರೈವರ್ರು ಎಂಬಿತ್ಯಾದಿ ಸೆಂಟಿಮೆಂಟುಗಳಿಗೆ ಅವಕಾಶವಿಲ್ಲ. ವಿಷಯ ಎಲ್ಲಿಗೆ ತಲುಪಿಸಬೇಕೋ ಅಲ್ಲಿಗೆ ಖಂಡಿತ ತಲುಪಿಸಲಾಗುತ್ತದೆ. ನಿಮ್ಮಲ್ಲಿ ಏನಾದರೂ ಸಲಹೆ ಇದ್ದಲ್ಲಿ ಕೊಡಬಹುದು ಎಂದು ಫೇಸ್‌ಬುಕ್‌ ಪೇಜ್‌ನಲ್ಲಿ ವಿವರಿಸಿದ್ದಾರೆ ಶೋಭಿತ್‌.

ನೋಡಿ ಮಳೆ ಬಂದರೆ ಸೋರುವ ಬಸ್‌, ಟಿಕೆಟ್‌ ಮೆಷಿನ್‌ ಹಾಳಾಗಿದ್ದರೂ ಅದನ್ನೇ ರೂಟ್‌ ಮೇಲೆ ಕೊಡುತ್ತಾರೆ ಎಂದರೆ ಇಲ್ಲಿ ಯಾರನ್ನು ಹೊಣೆ ಮಾಡಬೇಕು. ಇನ್ನು NWKRTC ಮತ್ತು KSRTC ನಿಗಮಗಳು ಬೇರೆ ಬೇರೆ ಆಗಿದ್ದರಿಂದ ಪ್ರಯಾಣಿಕರು ಮತ್ತೆ ಟಿಕೆಟ್‌ ತೆಗೆದುಕೊಂಡು ಪ್ರಯಾಣ ಮಾಡಬೇಕಾಯಿತು. ಆ ಪ್ರಯಾಣಿಕರಿಗೆ ಲಾಸ್‌ ಆಗಲಿಲ್ಲವೇ?

ಪ್ರಯಾಣಿಕರಿಗೆ ಏನು ಗೊತ್ತು ಇವು ಬೇರೆ ಬೇರೆ ನಿಗಮಗಳು ಎಂದು ಅವರಿಗೆ ಗೊತ್ತಿರುವುದು ಒಂದೆ ಸರ್ಕಾರಿ ಬಸ್‌ಗಳು ಎಂದು ಆದರೆ, ಅಮಾಯಕ ಪ್ರಯಾಣಿಕರಿಗೆ ಈರೀತಿ ತೊಂದರೆ ಕೊಡುವ ನಿಯಮ ಮಾಡಿಕೊಂಡಿರುವುದು ಅಧಿಕಾರಿಗಳಿಗೆ ಶೋಭೆ ತರುತ್ತದೆಯೇ? ಈ ಬಗ್ಗೆ ಸಾರಿಗೆ ಸಚಿವರು ಗಮನಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ