CrimeNEWSನಮ್ಮರಾಜ್ಯ

NWKRTC: ಪಿಎಫ್‌ ಲೋನ್‌ ಹಣ ರಿಲೀಸ್‌ಗೂ ಕೊಡಬೇಕು ಸಾವಿರಾರು ರೂ. ಲಂಚ – ಧನದಾಹಿ ಸಿ.ಎಸ್‌.ಗೌಡರ್‌ ಪರ ನಿಂತರೇ ಡಿಸಿ?

ವಿಜಯಪಥ ಸಮಗ್ರ ಸುದ್ದಿ
  • ಅಮಾನತು ಮಾಡಬೇಕಾದ ಡಿಸಿಯೇ ಸಬೂಬು ಹೇಳುತ್ತಿರುವುದು ಹಲವು ಅನುಮಾನ  ಹುಟ್ಟಿಸುತ್ತಿದೆ

ಗದಗ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಬಹುತೇಕ ಅಧಿಕಾರಿಗಳು/ ಸಿಬ್ಬಂದಿಗಳ ಕೈ ಬಿಸಿ ಮಾಡದಿದ್ದರೆ ಚಾಲನಾ ಸಿಬ್ಬಂದಿಗಳಿಗೆ ಸಂಬಂಧಿಸಿದ ಯಾವುದೇ ಫೈಲ್‌ಗಳು ಮೂವ್‌ ಆಗುವುದೇ ಇಲ್ಲ. ಅಷ್ಟರ ಮಟ್ಟಿಗೆ ಇಲ್ಲಿನ ವ್ಯವಸ್ಥೆ ಗಬ್ಬೆದ್ದು ನಾರುತ್ತಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾದ ಸಂಸ್ಥೆಯ ವಿಭಾಗೀಯ ಮಟ್ಟದ ಅಧಿಕಾರಿಗಳಲ್ಲಿ ಬಹುತೇಕರು ಇದೇ ಕೂಪದಲ್ಲಿ ಮಿಂದೇಳುತ್ತಿರುವುದರಿಂದ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ.

ನೋಡಿ ನಿಗಮದ ಗದಗ ವಿಭಾಗದ ಬೆಟಗೇರಿ ಘಟಕದ ಚಾಲನಾ ಸಿಬ್ಬಂದಿಯೊಬ್ಬರು ಅವರ ಮಗಳು ಅನಾರೋಗ್ಯದಿಂದ ಬಳಲುತ್ತಿದ್ದುದ್ದರಿಂದ ಆಕೆಗೆ ಚಿಕಿತ್ಸೆ ಕೊಡಿಸಲು ಹಣವಿಲ್ಲದ ಕಾರಣ ತಮ್ಮ ಪಿಎಫ್‌ನಿಂದ ಲೋನ್‌ ತೆಗೆದುಕೊಂಡು ಚಿಕಿತ್ಸೆ ಕೊಡಿಸಲು ನಿರ್ಧರಿಸಿ ಪಿಎಫ್‌ ಲೋನ್‌ಗೆ ಅರ್ಜಿ ಹಾಕುತ್ತಾರೆ.

ಆದರೆ, ನಿಗಮದ ಗದಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಯಲ್ಲೇ ಇರುವ ಭ್ರಷ್ಟನೊಬ್ಬ ಆ ಚಾಲನಾ ಸಿಬ್ಬಂದಿಗೆ ಲೋನ್‌ ಮುಂಜೂರು ಮಾಡಬೇಕಾದರೆ ನನ್ನ ಕೈ ಬಿಸಿ ಮಾಡಬೇಕು ಎಂದು ಆ ಚಾಲನಾ ಸಿಬ್ಬಂದಿಯನ್ನು ತನ್ನ ಚೇಂಬರ್‌ಗೆ ಕರೆಸಿಕೊಂಡು ಲಂಚದ ಹಣಕ್ಕೆ ಬೇಡಿಕೆ ಇಡುತ್ತಾನೆ.

ನಿಗಮದಲ್ಲಿರುವ ಆ ಲಂಚಕೋರ ಭ್ರಷ್ಟನ ಹೆಸರು ಸಿ.ಎಸ್‌.ಗೌಡರ್‌ ಅಲಿಯಾಸ್‌ ಪಿಎಫ್‌ ಗೌಡರ್‌ ಅಂತ. ಸಹಾಯಕ ಲೆಕ್ಕಾಧಿಕಾರಿಯಾಗಿರುವ ಈತ ಕಳೆದ ಸುಮಾರು 15 ವರ್ಷಗಳಿಂದಲೂ ಇಲ್ಲೇ ಗಟ್ಟಿಯಾಗಿ ಬೇರುಬಿಟ್ಟುಕೊಂಡು ಚಾಲನಾ ಸಿಬ್ಬಂದಿಗಳ ರಕ್ತ ಹೀರುತ್ತಿರುವ ರಕ್ತರಾಕ್ಕಸನಾಗಿದ್ದಾನೆ. ಆದರೆ, ಈತನ ಭ್ರಷ್ಟಾಚಾರ ಲಂಚಾವತಾರದ ಬಗ್ಗೆ ಮೇಲಧಿಕಾರಿಗಳಿಗೆ ಗೊತ್ತಿದ್ದರು ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದರೆ ಇವರು ಇನ್ನೆಂಥ ಲಂಚಕೋರರು ಎಂಬುವುದು ಇಲ್ಲೇ ಗೊತ್ತಾಗುತ್ತಿದೆ ?

ಪಾಪ  ಮಗಳು ಅನಾರೋಗ್ಯದಿಂದ ಬಳಲುತ್ತಿದ್ದು ಆಕೆಗೆ ಸೂಕ್ತ ಚಿಕಿತ್ಸೆ ಕೊಡಿಸಿ ಆಕೆಯ ಆರೋಗ್ಯ ಸರಿಯಾದರೆ ಸಾಕು ಎಂದು ಮಗಳ ಭವಿಷ್ಯದ ಬಗ್ಗೆ ನೂರಾರು ಕನಸ್ಸುಗಳನ್ನು ಕಟ್ಟಿಕೊಂಡು ಸಾಲವಾದರೂ ಸರಿ ಎಂದು ಆಕೆಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ತನ್ನದೇ ಪಿಎಫ್‌ ಹಣದಿಂದ ಲೋನ್‌ ತೆಗೆದುಕೊಳ್ಳಲು ಹೋದ ವೀರೇಶ್‌ ಎಂಬುವರಿಗೆ 1500 ರೂ.ಗಳ ಲಂಚಕ್ಕೆ ಬೇಡಿಕೆ ಇಟ್ಟು ಕೊನೆಗೆ 1000 ರೂಪಾಯಿ ಕೊಟ್ಟಮೇಲೆ ಅದು ಕೂಡ 10ದಿನಗಳ ಬಳಿಕ ಲೋನ್‌ ಹಣವನ್ನು ರಿಲೀಸ್‌ ಮಾಡಿದ್ದಾನೆ ಈ ಪಾಪಿ ಸಿ.ಎಸ್‌.ಗೌಡರ್‌.

ಈತ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಯಲ್ಲಿ ಪಿಎಫ್‌ ಲೋನ್‌ ರಿಲೀಸ್‌ ಮಾಡುವ ವಿಭಾಗದಲ್ಲಿ ಕುಳಿತಿರುವ ಸಹಾಯಕ ಲೆಕ್ಕಾಧಿಕಾರಿ. ವೀರೇಶ್‌ ಅವರು ಕಳೆದ ಆಗಸ್ಟ್‌ 29ರಂದು ಇವರ ಬಳಿ ಹೋಗಿ ಪಿಎಫ್‌ನಿಂದ ಲೋನ್‌ ತೆಗೆದುಕೊಳ್ಳಬೇಕು ಎಂದು ಅದಕ್ಕೆ ಅರ್ಜಿ ಹಾಕಿದ್ದೇನೆ ಎಂದು ಹೇಳಿದ್ದಾರೆ.

ಆದರೆ, ಈ ವೇಳೆ ಸಿ.ಎಸ್‌.ಗೌಡರ್‌ ಲೋನ್‌ ಬರುವುದು ತುಂಬ ತಡವಾಗುತ್ತದೆ. ಏಕೆಂದರೆ, ನಿನಗಿಂತಲೂ ಮೊದಲೇ ಈಗಾಗಲೇ ಹಲವಾರು ಮಂದಿ ಹಾಕಿದ್ದಾರೆ ಎಂದು ಹೇಳುತ್ತಾನೆ. ಆ ಬಳಿಕ ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟು ಆ ಹಣ ಪಡೆದ ಬಳಿಕ ಲೋನ್‌ ಹಣವನ್ನು ರಿಲೀಸ್‌ ಮಾಡಿದ್ದಾನೆ.

ಇನ್ನು ತನ್ನ ಪಿಎಫ್‌ ಖಾತೆಯಿಂದ ನಾನು ಲೋನ್‌ ತೆಗೆದುಕೊಳ್ಳಲು ಏಕೆ ಲಂಚ ಕೊಡಬೇಕು ಎಂದು ಈ ಸಂಬಂಧ ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ಎಂ.ದೇವರಾಜು, ಎಂಡಿ ಪ್ರಿಯಾಂಗಾ, ಭದ್ರತಾ ಮತ್ತು ಜಾಗೃತಾಧಿಕಾರಿಗಳಿಗೆ ವೈಯಕ್ತಿಕವಾಗಿ ವೀರೇಶ್‌ ಅವರು ತಿಳಿಸಿದ್ದಾರೆ. ಆದರೂ ಇದಕ್ಕೆ ಅಧಿಕಾರಿಗಳು ಸ್ಪಂದಿಸಿಲ್ಲ.

ಈ ನಡುವೆ ರಾಜ್ಯದ ಒಳ್ಳೆ ಟಿಆರ್‌ಪಿ ಬರುತಿರುವ ದೃಶ್ಯ ಮಾಧ್ಯಮದ ವರದಿಗಾರರು ಸಂಪರ್ಕಿಸಿ ಆ.30ರಂದೆ ವಿಡಿಯೋ ಸಹಿತ ದಾಖಲೆಗಳನ್ನು ಕೊಟ್ಟಿದ್ದಾರೆ. ಆದರೆ ಆ ದೃಶ್ಯ ಮಾಧ್ಯಮದ ಮಹಾಶಯ  ವರದಿಗಾರರು ಈ ಸಿ.ಎಸ್‌.ಗೌಡರ್‌ನನ್ನು ಸೆ.1ರಂದು ಭೇಟಿ ಮಾಡಿ, 25 ಸಾವಿರ ರೂ.ಗಳ ಲಂಚ ಪಡೆದು ವೀರೇಶ್‌ ಅವರು ಕೊಟ್ಟಿದ್ದ ವಿಡಿಯೋ ಇತರೆ ದಾಖಲೆಗಳನ್ನು ಕಸದ ಬುಟ್ಟಿಗೆ ಹಾಕಿದ್ದಾರೆ.

ಬಳಿಕ ಮತ್ತೊಂದು ದೃಶ್ಯ ಮಾಧ್ಯಮದ ಗದಗ ವರದಿಗಾರರನ್ನು ಸಂಪರ್ಕಿಸಿ ವಿಡಿಯೋ ದಾಖಲೆಗಳನ್ನು ಕೊಟ್ಟಿದ್ದಾರೆ. ಆ ಬಳಿಕ ಸಹಾಯಕ ಲೆಕ್ಕಾಧಿಕಾರಿ ಸಿ.ಸ್‌.ಗೌಡರ್‌ ಲಂಚಾವತಾರವನ್ನು ವಿಡಿಯೋ ಸಹಿತ ನ್ಯೂಸ್‌ ಮಾಡಿದ್ದಾರೆ.

ಇನ್ನು ಈ ಬಗ್ಗೆ ವಿಭಾಗೀಯ ನಿಯಂತ್ರಣಾಧಿಕಾರಿ ದೇವರಾಜು ಅವರನ್ನು ಕೇಳಿದರೆ ಈ ವಿಷಯ ನಮಗೆ ಗೊತ್ತೇಯಿಲ್ಲ ಎಂದು ನಯವಾಗಿ ಹೇಳುವ ಮೂಲಕ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಹೇಳಿಕೆ ನೀಡಿದ್ದಾರೆ. ಆದರೆ ನಾವು ಈ ದೇವರಾಜು ಅವರನ್ನು ಕೇಳ ಬಯಸುತ್ತೇವೆ ನಿಮಗೆ ಚಾಲನಾ ಸಿಬ್ಬಂದಿ ವಿರೇಶ್‌ ಅವರು ಇದೇ ಸೆ.4ರಂದೇ ದೂರು ನೀಡಿದ್ದರೂ ಈವರೆಗೂ ಸಿ.ಎಸ್‌.ಗೌಡರ್‌ ವಿರುದ್ಧ ಏಕೆ ಯಾವುದೇ ಕ್ರಮ ಜರುಗಿಸಿಲ್ಲ? ಜಾಣ ಮೌನವನ್ನೇಕೆ ಪ್ರದರ್ಶಿಸುತ್ತಿದ್ದೀರಿ ಡಿಸಿ ಸಾಹೇಬರೆ? ಇದಕ್ಕೆ ಸಮಂಜಸವಾದ ಉತ್ತರ ಕೊಡುವಿರ ತಾವು?

ಒಬ್ಬ ನಿರ್ವಾಹಕ ಮಹಿಳೆಗೆ ಟಿಕೆಟ್‌ ಕೊಟ್ಟಿದ್ದು, ಆಕೆ ಮಾರ್ಗಮಧ್ಯೆ ಇಳಿದು ಹೋದರೂ ಚೆಕಿಂಗ್‌ ವೇಳೆ ಆ ಮಹಿಳೆ ಇಲ್ಲ ಎಂದು ನೀನುಸಂಸ್ಥೆಗೆ ಮೋಸ ಮಾಡುತ್ತಿದ್ದೀಯೇ ಎಂದು ಪುಟಗಟ್ಟಲೇ ಇಲ್ಲ ಸಲ್ಲದ ಆರೋಪ ಮಾಡಿ ಆ ಅಮಾಯಕ ನಿರ್ವಾಹಕರನ್ನು ಕೂಡಲೇ ಅಮಾನತು ಮಾಡುತ್ತೀರಿ. ನಿಮ್ಮ ಕಣ್ಣ ಮುಂದೆಯೇ ಅದು ನೀವಿರುವ ಕಚೇರಿಯಲ್ಲೇ ಲಂಚ ಪಡೆಯುತ್ತಿರುವ ವಿಡಿಯೋ ಇದ್ದರೂ, ಅದೂ ನಡೆದು ಒಂದು ತಿಂಗಳು ಕಳೆದಿದ್ದರೂ ಏಕೆ ಈವರೆಗೂ ಆತನನ್ನು ಅಮಾನತು ಮಾಡಿಲ್ಲ? ನಿಮ್ಮ ನಡೆ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣಾನಾ?

ನಾಚಿಕೆ ಆಗಬೇಕು ಈ ನಿಮ್ಮ ನಡೆಗೆ ಡಿಸಿ ಸಾಹೇಬರೆ.ನೀವು ನಿಜವಾಗಲು ನಿಷ್ಠಾವಂತ ಅಧಿಕಾರಿಯೇ ಆಗಿದ್ದರೆ ನಡೆದಿರುವುದನ್ನು ಇನ್ನಾದರೂ ಪರಿಶೀಲಿಸಿ ಚಾಲನಾ ಸಿಬ್ಬಂದಿಗಳ ರಕ್ತ ಹೀರುತ್ತಿರುವ ಈ ರಕ್ತ ಪಿಶಾಚಿ, ಭ್ರಷ್ಟನ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ನಾನು ಭ್ರಷ್ಟ ಎಂದು ಒಪ್ಪಿಕೊಂಡತೆ ಆಗುತ್ತದೆ.

ಒಟ್ಟಾರೆ ಕಷ್ಟಕ್ಕಾಗಿ ತಮ್ಮದೇ ಪಿಎಫ್‌ ಖಾತೆಯಿಂದ ಸಾಲ ತೆಗೆದುಕೊಳ್ಳುವುದಕ್ಕೂ ಲಂಚ ಕೊಡುವ ಪರಿಸ್ಥಿತಿ ಸಾರಿಗೆ ನಿಗಮಗಳಲ್ಲಿ ಇದೆ ಎಂದರೆ ಇಂಥ ಭ್ರಷ್ಟರನ್ನು ಏನು ಮಾಡಬೇಕು? ಏಕೆ ಸಂಸ್ಥೆ ಇವರಿಗೆ ವೇತನ ಕೊಡುತ್ತಿಲ್ಲವೇ? ಇಂಥ ಹೇಸಿಗೆ ಕೆಲಸ ಮಾಡುವುದಕ್ಕೆ ಇವರಿಗೆ ಕಾನೂನಿನ ಭಯ ಇಲ್ಲವೇ? ಅಥವಾ ಇವರಿಗೆ ಹೆಂಡತಿ, ಗಂಡ, ಮಕ್ಕಳು ಇಲ್ಲವೇ? ಕೈ ತುಂಬ ವೇತನ ಪಡೆಯುತ್ತಿದ್ದರು ಕೊಚ್ಚೆ ಮೇಲೆಯೇ ಇವರಿಗೆ ವ್ಯಾಮೋಹ ಹೆಚ್ಚು ಎಂದರೆ ಇವರನ್ನು ಅಧಿಕಾರಿಗಳು ಎಂದು ನಾವು ಒಪ್ಪಿಕೊಳ್ಳಬೇಕೆ. ಇಂಥವರಿಗೆ ಕಠಿಣಾತಿಕಠಿಣ ಶಿಕ್ಷೆ ಆಗಬೇಕು.

Leave a Reply

error: Content is protected !!
LATEST
NWKRTC: ಪಿಎಫ್‌ ಲೋನ್‌ ಹಣ ರಿಲೀಸ್‌ಗೂ ಕೊಡಬೇಕು ಸಾವಿರಾರು ರೂ. ಲಂಚ - ಧನದಾಹಿ ಸಿ.ಎಸ್‌.ಗೌಡರ್‌ ಪರ ನಿಂತರೇ ಡಿಸಿ? ಸೆ.27ರಂದು EPS ಪಿಂಚಣಿದಾರರ ಬೃಹತ್ ಪ್ರತಿಭಟನೆ: BMTC & KSRTC ನಿವೃತ್ತ ನೌಕರರ ಸಂಘಟನೆ ಕಾರ್ಯಾಧ್ಯಕ್ಷ ನಂಜುಂಡೇಗೌಡ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರ ಆರಂಭ- ಸ್ಥಗಿತಗೊಂಡ ರೈತರ ಕೆಲಸ ಕಾರ್ಯಗಳು ಸಾಲುಮರದ ತಿಮ್ಮಕ್ಕನವರಿಂದ ಮನುಕುಲ ರಕ್ಷಿಸುವ ಕೆಲಸವಾಗಿದೆ: ಗೃಹ ಸಚಿವ ಪರಮೇಶ್ವರ್‌ ಜನರ ಸಮಸ್ಯೆಗೆ ಧ್ವನಿಯಾಗಲಿದೆ ಎಎಪಿ: ಪಾರ್ಕ್, ಆಟದ ಮೈದಾನದಲ್ಲಿ ಅವ್ಯವಸ್ಥೆ ಇದ್ದರೆ ಫೋಟೊ, ವಿಡಿಯೋ ಕಳಿಸಿ ಬನ್ನೂರು ಕಾವೇರಿ ವೃತ್ತ, ಬಸವೇಶ್ವರ ಪ್ರತಿಮೆ ಬಳಿಯ ಸಿಸಿ ಕ್ಯಾಮರಾ ತೆರವಿಗೆ ಆಗ್ರಹಿಸಿ ಸಹಸ್ರಾರು ರೈತರ ಪ್ರತಿಭಟನೆ- ಆ... ಸೆ.27ರಂದು EPS ಪಿಂಚಣಿದಾರರ ಬೃಹತ್ ಪ್ರತಿಭಟನೆ: BMTC & KSRTC ನಿವೃತ್ತ ನೌಕರರ ಸಂಘಟನೆ ಕಾರ್ಯಾಧ್ಯಕ್ಷ ನಂಜುಂಡೇಗೌಡ WELCOME TO KSRTC ಸ್ನಾನಗೃಹ ಬಸ್ - ಕಳಪೆ ಬಸ್‌ ಬಿಟ್ಟ NWKRTC ನಿಗಮಕ್ಕೆ ಛೀಮಾರಿಹಾಕಿದ ಪ್ರಯಾಣಿಕ KSRTC: ಬಸ್‌ ಬರುತ್ತಿರುವುದ ಗಮನಿಸದೆ ರಸ್ತೆ ದಾಟುತ್ತಿದ್ದ ಮಹಿಳೆಗೆ ಬಸ್‌ ಡಿಕ್ಕಿ- ಕಾಲು ಮುರಿತ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆಗಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಮನವಿ ಸಲ್ಲಿಸಿದ ಕೆಎಚ್‌ಎಂ