NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನೌಕರರ ವೇತನ ವಿಷಯದಲ್ಲಿನ ನಿಮ್ಮ ಗೋಸುಂಬೆ ಆಟಗಳಿಗೆ ಯಾರು ಇಲ್ಲಿ ತಲೆ ಕೆಡಿಸಿಕೊಳ್ಳುವುದಿಲ್ಲ..!!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಗಳು/ ಸಿಬ್ಬಂದಿಗಳಿಗೆ 6ನೇ ವೇತನ ಆಯೋಗ ಮಾದರಿಯಲ್ಲಿ ವೇತನ ಕೊಡಬೇಕು ಎಂಬ ಬಗ್ಗೆ ಈ ಮೊದಲು ಅಂದರೆ 2020 ಡಿಸೆಂಬರ್‌ ಮತ್ತು 2021ರ ಏಪ್ರಿಲ್‌ನಲ್ಲಿ ಭಾರಿ ಹೋರಾಟವೆ ನಡೆಯಿತು.

ಆದರೆ, ಕೆಲ ನೌಕರರ ಸಂಘಟನೆಗಳ ಮುಖಂಡರ ಪಿತೂರಿಯಿಂದ ಆಗಬೇಕಿದ್ದದ್ದು ಆಗದೆ ನನೆಗುದಿಗೆ ಬಿದ್ದಿದೆ. ಅದು ಈಗಲೂ ಕೂಡ ಆಗಬಾರದು ಎಂದು ಕೆಲ ಸಂಘಟನೆಗಳು ಸರ್ಕಾರ ಮತ್ತು ಸಾರಿಗೆ ಆಡಳಿತ ಮಂಡಳಿಯ ಪದಾಧಿಕಾರಿಗಳ ಕಿವಿಯೂದುತ್ತಲೇ ಇದ್ದಾರೆ.

ಒಟ್ಟಾರೆ ಸಾರಿಗೆ ನೌಕರರಿಗೆ ಯಾವುದೇ ಹೋರಾಟವಿಲ್ಲದೆ ವೇತನ ಹೆಚ್ಚಳ ಆಗಬಾರದು. ವೇತನ ಹೆಚ್ಚಳವಾಗಬೇಕು ಎಂದರೆ ಅಲ್ಲಿ ನಾವಿರಬೇಕು. ನಮ್ಮಿಂದಲೇ ಇದು ಸಾಧ್ಯವಾಯಿತು. ನಾವು ಶೇ… ಕೊಡಿಸಲು ಹೋರಾಡಿದ್ದೇವೆ. ಬೇರೆ ಸಂಘಟನೆಯವರು ಇದನ್ನೂ ಕೊಡಿಸಲು ಆಗಲಿಲ್ಲ ಎಂಬ ಬೊಬ್ಬೆ ಹೊಡೆದುಕೊಳ್ಳಬೇಕು ಎಂಬ ಚಾಳಿಗೆ ಬಿದ್ದಿದ್ದಾರೆ.

ಇದರಿಂದ ವೃತ ಸಾರಿಗೆಯ ನಿಷ್ಠಾವಂತ ಅಧಿಕಾರಿಗಳು ಮತ್ತು ನೌಕರರು ಕಾಲ ಕಾಲಕ್ಕೆ ನ್ಯಾಯಯುತವಾಗಿ ಸಿಗಬೇಕಿರುವ ಸೇವಾ ಸೌಲಭ್ಯಗಳನ್ನು ಪಡೆಯಲಾಗದೆ ನೋವು ಅನುಭವಿಸುತ್ತಿದ್ದಾರೆ. ಕೆಲ ಸಂಘಟನೆಗಳಿಗೆ ನೌಕರರು ನೋವು ಅನುಭವಿಸುವುದೇ ಬೇಕಿದೆ. ಅದಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಕೆಲ ನೌಕರರೇ ಕಿಡಿಕಾರುತ್ತಿದ್ದಾರೆ.

ಇನ್ನು 2018ರ ಆದೇಶವನ್ನು ಸ್ವಲ್ಪ ಸರಿಯಾಗಿ ಓದಿ ಅದರಲ್ಲಿ 6ನೇ ವೇತನ ಆಯೋಗದ ಪರಿಷ್ಕರಣೆ ಮಾಡಲು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳುವಂತೆ ತಮ್ಮನ್ನು ಕೋರಲು ನಿರ್ದೇಶಿತನಾಗಿರುತ್ತೇನೆ ಅಂತ ಇದೆ. ಅಂದ್ರೆ ಅರ್ಜಿದಾರರು ಕೊಟ್ಟಿರೋ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಿ ಅಂತ ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿಗಳು KSRTC ವ್ಯವಸ್ಥಾಪಕ ನಿರ್ದೇಶಕರಿಗೆ ಲೆಟರ್ ಬರಿದ್ದಾರೆ ಅಷ್ಟೇ….

ಇದು ಯಾವುದೇ ಒಂದು ಸಂಘಟನೆಯ ಕಾರ್ಯದರ್ಶಿಗಳು ಅಥವಾ ಅಧ್ಯಕ್ಷರು ಯಾರೇ ಆಗಿರಲಿ ಅವರು ಲೆಟರ್ ಕೊಟ್ಟಾಗ ಇದೆ ತರ ಮುಖ್ಯಮಂತ್ರಿ ಕಡೆಯಿಂದ ಲೆಟರ್ ಬರಿಯೋದು ಸಾಮಾನ್ಯ. ಇಂತಹ ಲೆಟರ್‌ಗಳು ಬಹಳಷ್ಟು ಬಿಜೆಪಿ ಸರ್ಕಾರವಿದ್ದಾಗಲೂ ಕೂಡ ವೇತನ ಆಯೋಗದ ಪ್ರಕಾರ ವೇತನ ನೀಡುತ್ತೇವೆ ಅಂತ ಹೇಳಿದಾಗ, ಅಂದಿನ ಮುಖ್ಯಮಂತ್ರಿಗಳಲ್ಲಿ ಕೆಲ ಶಾಸಕರು ಲೆಟರ್ ಮುಖಾಂತರ ಕೇಳಿ ಕೊಂಡಾಗ ಇದೆ ತರಹದ ನಿರ್ದೇಶನವನ್ನು ಸರ್ಕಾರದ ಕಾರ್ಯದಶಿಗಳು ಬರೆದಿದ್ದಾರೆ. ಅಂದರೆ ಈ ರೀತಿ ಹಲವಾರು ಬಾರಿ MD ಯವರಿಗೆ ನಿರ್ದೇಶನ ಕೊಟ್ಟಿದಾರೆ.

ಬರಿ ಸರ್ಕಾರದ ಕಾರ್ಯದರ್ಶಿಗಳು ಮಾತ್ರವಲ್ಲ ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿ, ಸರ್ಕಾರದ ಕಾರ್ಯದರ್ಶಿಗಳು ಕೊಡೊ ಲೆಟರ್‌ಗೂ ಹಾಗೂ ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿಗಳು ಕೊಡೊ ಲೆಟರಿಗೂ ವ್ಯತ್ಯಾಸ ಇರುತ್ತೆ. ನಿರ್ದೇಶನ ಕೊಟ್ಟಿರೋದಕ್ಕೆ ಇಷ್ಟೊಂದು ಮಾತಾಡೋ ನೀವುಗಳು ಸರ್ಕಾರದ ಆದೇಶದ ಪ್ರಕಾರ ಆರನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಅಳವಡಿಸಲು ತಯಾರು ಮಾಡಿದಂತಹ ವೇತನ ಶ್ರೇಣಿಗಳು, ಇನ್ನಿತರೇ ಎಲ್ಲ ತಯಾರಿಗಳು ನಡೆದ್ದಕ್ಕೆ ತಡೆಯೊಡ್ಡಿದರಲ್ಲ ಆ ಮನೆ*ಳ ತಾತ … ಅವನ ಬಗ್ಗೆ ಮಾತಾಡ್ರಿ ಸ್ವಾಮಿ.

ಅದು 2021ರಲ್ಲಿ ಆಗಿರುವಂತಹ ಆದೇಶ. ಅದರ ಬಗ್ಗೆ ಇವಾಗ ಆ ಬೋ*ಮಗ ಮಾಡ್ತಾ ಇರೋದೇ ಸರಿನಾ ಅಂತ? ಮುಷ್ಕರದಲ್ಲಿ 2000 ಜನ ವಜಾ, ಶಿಕ್ಷಾದೇಶಗಳಿಗೆ ಆ ಮುದಿಯನೇ ಕಾರಣ ಅಂತ ಗೊತ್ತಿದ್ದೂ ಇವಾಗ ಅವನ ಜತೆ ಸೇರಿದ್ದೀರಿ. ಇವಾಗ ಆ ಮುದಿಯ ಆಗೋ ಕೆಲಸಕ್ಕೂ ಕಡ್ಡಿ ಅಲ್ಲಾಡಿಸುತ್ತಿದ್ದಾನೆ.

ಇವಾಗ ಸರ್ಕಾರವೇ ತನ್ನ ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟಿರೋದನ್ನು ಮಾಡ್ತೇವೆ ಕೊಟ್ಟ ಮಾತು ತಪ್ಪೋಲ್ಲ ಅಂತ ಹೇಳುತ್ತಿದ್ದಾರೆ. ತಾವುಗಳೂ ಕೂಡ ಈ ವಿಚಾರವಾಗಿ ಕೈ ಜೋಡಿಸಿ, ಆ ಮುದಿಯನ ಕುತಂತ್ರಗಳ ಅರಿವು ನಮಗಿಂತ ಚನ್ನಾಗಿ ನಿಮಗೆ ಇದೆ. ಆದ್ರೂ ಕೂಡ ಅವನ ಜತೆ ಕೈ ಜೋಡಿಸಿದ್ದೀರಿ ಅಲ್ವಾ? ಸಾರಿಗೆ ನೌಕರರಿಗೆ ಯಾರು ಏನು ಎಂಬುದರ ಬಗ್ಗೆ ಚೆನ್ನಾಗಿ ಅರಿವು ಇದೆ. ನಿಮ್ಮ ಗೋಸುಂಬೆ ಆಟಗಳಿಗೆ ಯಾರು ತಲೆ ಕೆಡಿಸಿಕೊಳ್ಳುವುದಿಲ್ಲ ಎಂಬ ವಿಷಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ. ಇದಕ್ಕೆ ನೌಕರರು ಹಲವಾರು ರೀತಿಯಲ್ಲಿ ಪ್ರತಿಕ್ರಿಯೆ ಕೂಡ ನೀಡುತ್ತಿದ್ದಾರೆ.

Leave a Reply

error: Content is protected !!
LATEST
KSRTC ನೌಕರರ ವೇತನ ವಿಷಯದಲ್ಲಿನ ನಿಮ್ಮ ಗೋಸುಂಬೆ ಆಟಗಳಿಗೆ ಯಾರು ಇಲ್ಲಿ ತಲೆ ಕೆಡಿಸಿಕೊಳ್ಳುವುದಿಲ್ಲ..!! NWKRTC: ಪಿಎಫ್‌ ಲೋನ್‌ ಹಣ ರಿಲೀಸ್‌ಗೂ ಕೊಡಬೇಕು ಸಾವಿರಾರು ರೂ. ಲಂಚ - ಧನದಾಹಿ ಸಿ.ಎಸ್‌.ಗೌಡರ್‌ ಪರ ನಿಂತರೇ ಡಿಸಿ? ಸೆ.27ರಂದು EPS ಪಿಂಚಣಿದಾರರ ಬೃಹತ್ ಪ್ರತಿಭಟನೆ: BMTC & KSRTC ನಿವೃತ್ತ ನೌಕರರ ಸಂಘಟನೆ ಕಾರ್ಯಾಧ್ಯಕ್ಷ ನಂಜುಂಡೇಗೌಡ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರ ಆರಂಭ- ಸ್ಥಗಿತಗೊಂಡ ರೈತರ ಕೆಲಸ ಕಾರ್ಯಗಳು ಸಾಲುಮರದ ತಿಮ್ಮಕ್ಕನವರಿಂದ ಮನುಕುಲ ರಕ್ಷಿಸುವ ಕೆಲಸವಾಗಿದೆ: ಗೃಹ ಸಚಿವ ಪರಮೇಶ್ವರ್‌ ಜನರ ಸಮಸ್ಯೆಗೆ ಧ್ವನಿಯಾಗಲಿದೆ ಎಎಪಿ: ಪಾರ್ಕ್, ಆಟದ ಮೈದಾನದಲ್ಲಿ ಅವ್ಯವಸ್ಥೆ ಇದ್ದರೆ ಫೋಟೊ, ವಿಡಿಯೋ ಕಳಿಸಿ ಬನ್ನೂರು ಕಾವೇರಿ ವೃತ್ತ, ಬಸವೇಶ್ವರ ಪ್ರತಿಮೆ ಬಳಿಯ ಸಿಸಿ ಕ್ಯಾಮರಾ ತೆರವಿಗೆ ಆಗ್ರಹಿಸಿ ಸಹಸ್ರಾರು ರೈತರ ಪ್ರತಿಭಟನೆ- ಆ... ಸೆ.27ರಂದು EPS ಪಿಂಚಣಿದಾರರ ಬೃಹತ್ ಪ್ರತಿಭಟನೆ: BMTC & KSRTC ನಿವೃತ್ತ ನೌಕರರ ಸಂಘಟನೆ ಕಾರ್ಯಾಧ್ಯಕ್ಷ ನಂಜುಂಡೇಗೌಡ WELCOME TO KSRTC ಸ್ನಾನಗೃಹ ಬಸ್ - ಕಳಪೆ ಬಸ್‌ ಬಿಟ್ಟ NWKRTC ನಿಗಮಕ್ಕೆ ಛೀಮಾರಿಹಾಕಿದ ಪ್ರಯಾಣಿಕ KSRTC: ಬಸ್‌ ಬರುತ್ತಿರುವುದ ಗಮನಿಸದೆ ರಸ್ತೆ ದಾಟುತ್ತಿದ್ದ ಮಹಿಳೆಗೆ ಬಸ್‌ ಡಿಕ್ಕಿ- ಕಾಲು ಮುರಿತ