NEWSನಮ್ಮರಾಜ್ಯ

KSRTC 2020ರ ವೇತನ ಹೆಚ್ಚಳದ ಶೇ.15ರಷ್ಟು ಹಿಂಬಾಕಿ ಪಾವತಿಗೆ ಅ.9ರಂದು ದೃಢ ನಿರ್ಧಾರ ತೆಗೆದುಕೊಳ್ಳಿ: ನಿವೃತ್ತ ನೌಕರರ ಒತ್ತಾಯ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು, ನೌಕರರಿಗೆ 2020ನೇ ಸಾಲಿನ ವೇತನ ಪರಿಷ್ಕರಣೆ ಆಗಿದ್ದು, ಅದರಲ್ಲಿ ನಿವೃತ್ತ ನೌಕರರಿಗೆ ಕೊಡಬೇಕಿರುವ ಹಿಂಬಾಕಿ ಪಾವತಿಸಲು ಆಡಳಿತ ಮಂಡಳಿ ಅನಗತ್ಯ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ನಿಗಮದ ನಿವೃತ್ತ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೇ ಅಕ್ಟೋಬರ್‌ 9ರಂದು 2020ರ ವೇತನ ಹಿಂಬಾಕಿ ಹಾಗೂ 2024ರ ವೇತನ ಪರಿಷ್ಕರಣೆ ಸಂಬಂಧ ಕಾರ್ಮಿಕ ಸಂಘಟನೆಗಳ ಮುಖಂಡರ ಸಭೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ವಿಧಾನಸೌಧಲ್ಲಿ ನಡೆಯುವ ಈಸಭೆಯಲ್ಲಾದರೂ ನಮಗೆ ಒಂದು ನಿರ್ದಿಷ್ಟ ತಿಂಗಳಿನಲ್ಲಿ ಹಿಂಬಾಕಿ ಪಾವತಿಯಾಗುತ್ತದೆ ಎಂಬ ದೃಢವಾದ ತೀರ್ಮಾನ ತೆಗೆದುಕೊಳ್ಳಬೇಕು ಎಂದು ನಿವೃತ್ತರು ಆಗ್ರಹಿಸಿದ್ದಾರೆ.

ಇನ್ನು ಕಳೆದ 2023ರ ಮಾರ್ಚ್‌ನಿಂದಲೂ ಹಿಂಬಾಕಿ ಕೊಡುವ ಬಗ್ಗೆ ಸರ್ಕಾರ ಕಾಲಹರಣ ಮಾಡಿಕೊಂಡು ಬಂದಿದೆಯೇ ಹೊರತು ಯಾವುದೆ ಸ್ಪಷ್ಟತೆಯನ್ನು ನೀಡಿಲ್ಲ. ಹೀಗಾಗಿ ಈಗಲಾದರೂ ನಮಗೆ ಬರಬೇಕಿರುವುದು ಕೂಡಲೇ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ವಾಡಿಕೆಯಂತೆ 2020ರ ಜನವರಿ 1ರಿಂದ ಜಾರಿಗೆ ಬರುವಂತೆ ವೇತನ ಪರಿಷ್ಕರಣೆಯನ್ನು ಮಾರ್ಚ್ 2023ರಲ್ಲಿ ಜಾರಿಗೆ ತಂದು ಹಾಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರಿಗೆ ಒಂದೇ ತಿಂಗಳ ಅವಧಿಯಲ್ಲಿ ವೇತನ ಪರಿಷ್ಕರಣೆ ಮಾಡಿ ಹೆಚ್ಚಳ ಮಾಡಿರುವ ವೇತನವನ್ನು ಕೊಡುತ್ತಿದ್ದಾರೆ. ಆದರೆ 2020ರ ನಂತರ ನಿವೃತ್ತಿಗೊಂಡ ನೌಕರರಿಗೆ ವೇತನ ಪರಿಷ್ಕರಣೆ ಮಾಡದೆ ಈವರೆಗೂ ಮುಂದೂಡಿಕೊಂಡು ಬರುತ್ತಿದ್ದಾರೆ ಇದು ಸರಿಯಾದ ನಡೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾರಿಗೆ ಸಂಸ್ಥೆಗಳ ಆಡಳಿತ ಮಂಡಳಿಯ ಈ ಧೋರಣೆಯ ವಿರುದ್ಧ ಹಲವು ನೌಕರರ ಸಂಘಟನೆಗಳು ಅನೇಕ ಬಾರಿ ಧರಣಿ ಸತ್ಯಾಗ್ರಹಗಳನ್ನು ನಡೆಸಿವೆ. ಈ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್‌ ಧರಣಿ ಸ್ಥಳಕ್ಕೆ ಬಂದು ವೇತನ ಹಿಂಬಾಕಿಗೆ ಚುನಾವಣಾ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ, ನಿಮ್ಮಗೆ ಅತಿ ಶೀಘ್ರದಲ್ಲಿ ಪಾವತಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು. ಆದರೆ, 19 ತಿಂಗಳುಗಳು ವಿಳಂಬ ಮಾಡಿದ್ದು ಅಲ್ಲದೆ ಈ ಹಿಂದೆ ನೌಕರರ ಹಿಂಬಾಕಿ ನೀಡಲು ಸರ್ಕಾರ ನೀಡಿದ್ದ 220 ಕೋಟಿ ರೂ.ಗಳನ್ನು ಕೊಡುವುದಕ್ಕೆ ಮೀನಮೇಷ ಎಣಿಸುತ್ತಿರುವುದು ಏತಕ್ಕೆ ಎಂದು ನಿವೃತ್ತರು ಕೇಳುತ್ತಿದ್ದಾರೆ.

ಇನ್ನು 220 ಕೋಟಿ ರೂ,ಗಳನ್ನು ಹಾಲಿ ಸರ್ಕಾರ ಬಿಡುಗಡೆ ಮಾಡಿದ್ದರೂ ಅದನ್ನು ನಿವೃತ್ತರಿಗೆ ವಿತರಣೆ ಮಾಡದೇ ಕಳೆದ ಜೂನ್27 ರಂದು ಆದೇಶ ಸಂಖ್ಯೆ: ಕರಾಸ/ಕೇಶ/ಲೇಪ/ವೇತನ/ಕಸಂ-24/904/24-25ರಲ್ಲಿ ಗ್ರಾಚ್ಯುಯಿಟಿ ವ್ಯತ್ಯಾಸದ ಹಿಂಬಾಕಿ ಮತ್ತು ಗಳಿಕೆ ರಜೆ ನಗದೀಕರಣದ ವ್ಯತ್ಯಾಸದ ಮೊತ್ತದಲ್ಲಿ ಲೆಕ್ಕಚಾರ ಮಾಡಿ ಮೊತ್ತವನ್ನು ನಿಗದಿಪಡಿಸಲು ಎಲ್ಲ ವಿಭಾಗಗಳಿಗೆ 30.09.2024ರಂದು ಗಡು ನೀಡಿದ್ದರು ಅಂದರೆ 3 ತಿಂಗಳ ವಿಸ್ತೃತ ಕಾಲಾವಧಿವರೆಗೆ ಧಾರಳವಾಗಿ ಕಾಲಾವಧಿ ನೀಡಿದ್ದರು. ಈ ಗಡುವೆ ಮುಗಿದು 7 ದಿನಗಳು ಕಳೆದಿದ್ದರೂ ಈವರೆಗೂ ಯಾವುದೆ ತೀರ್ಮಾನ ತೆಗೆದುಕೊಂಡಿಲ್ಲ ಇದು ನಿವೃತ್ತರಿ ಭಾರಿ ಬೇಸರ ತಂದಿದೆ.

ಇನ್ನು 2024-25 ರ ಆರ್ಥಿಕ ವರ್ಷದಲ್ಲಿ ಆರ್ಥಿಕ ಪರಿಸ್ಥಿತಿಯ ಅನ್ವಯ ತೀರ್ಮಾನಿಸಬಹುದೆಂದು ಕೂಡ ತಿಳಿಸಿದ್ದರು ಆದಾಗ್ಯೂ 2020ರ ನಂತರ ನಿವೃತ್ತಿ ಹೊಂದಿದ ನಿವೃತ್ತ ನೌಕರರಿಗೆ ಮತ್ತು ಅಧಿಕಾರಿಗಳಿಗೆ 24 ರಿಂದ 30 ತಿಂಗಳುಗಳು ಕಾರ್ಯನಿರ್ವಹಿಸಿದ ಸಿಬ್ಭಂದಿಗಳಿಗೆ ವೇತನ ಹೆಚ್ಚಳ ಹಿಂಬಾಕಿಯ ಪಾವತಿ ಬಗ್ಗೆ ಇಲ್ಲಿಯವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದು ಸಂಸ್ಥೆಯಲ್ಲಿ ಹಿಂದೆದು ಕೂಡ ಈ ರೀತಿ ಆಗಿಲ್ಲ ಎಂದು ನಿವೃತ್ತರು ಹೇಳಿದ್ದಾರೆ.

23.03.2023 ರಂದು ಶೇ.15ರಷ್ಟು ವೇತನ ಪರಿಷ್ಕರಣೆ ಜಾರಿಗೊಳಿಸಿ ಹಾಲಿ ಸಿಬ್ಬಂದಿಗಳಿಗೆ ಅಂದರೆ ಸುಮಾರು 33,000 ನೌಕರರಿಗೆ (ಕೆಎಸ್ಆರ್ಟಿಸಿಯಲ್ಲಿನ ನೌಕರರಿಗೆ) ಕೇವಲ 1 ತಿಂಗಳಲ್ಲಿ ವೇತನ ನಿಗದಿಪಡಿಸಿ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ. ಆದರೆ ಕೇವಲ 2000 ದಿಂದ 2500 ನಿವೃತ್ತ ನೌಕರರಿಗೆ ವೇತನ ಪರಿಷ್ಕರಣೆ ಗ್ರಾಚ್ಯುಯಿಟಿ/ ರಜೆ ನಗದೀಕರಣದ ವ್ಯತ್ಯಾಸದ ಹಣವನ್ನು ಲೆಕ್ಕಾಚಾರ ಮಾಡಲು ವಿಭಾಗಗಳಿಗೆ 30.09.2024 ರವರೆಗೆ ಸುದೀರ್ಘವಾಗಿ 93 ದಿನಗಳ ಕಾಲಾವಕಾಶ ನೀಡಿದ್ದರೂ ಈವರೆಗೂ ನಿರ್ಧಾರ ತೆಗೆದುಕೊಳ್ಳದಿರುವುದು ನಮಗೆ ನಿರಾಸೆ ಮಾಡುತ್ತಿದ್ದಾರೆ.

ಇನ್ನು ನಿವೃತ್ತ ನೌಕರರಿಗೆ ಅತೀ ಕಡಿಮೆ ಪಿಂಚಣಿ ದೊರೆಯುತ್ತಿರುವುದು ಎಲ್ಲರಿಗೂ ತಿಳಿದ ವಿಷಯ, ನೌಕರರಿಗೆ ನ್ಯಾಯವಾಗಿ ಬರಬೇಕಾಗಿರುವ ಹಣವನ್ನು ನೀಡಲು ಈ ಸಂಸ್ಥೆ ವಿಳಂಬ ಧೋರಣೆ ಮಾಡುತ್ತಿದ್ದು, ಶಕುನಿ ಬುದ್ಧಿ ತೋರುತ್ತಿರುವುದು ಈ ಸಂಸ್ಥೆಗೆ ತರವಲ್ಲ. ಆದುದರಿಂದ ನಿವೃತ್ತ ನೌಕರರಿಗೆ ಸಂದಾಯವಾಗಬೇಕಿರುವ ಎಲ್ಲ ಸೌಲಭ್ಯಗಳನ್ನು ಪ್ರಾಯೋಗಿಕವಾಗಿ ವಿಮರ್ಶಿಸಿ ಒಂದೇ ಕಂತಿನಲ್ಲಿ ಕೂಡಲೇ ಪಾವತಿಸಲು ಕ್ರಮಕೈಗೊಂಡು ನಿಗಮದ ಘನತೆಯನ್ನು ಉಳಿಸಿಕೊಳ್ಳಬೇಕು ಎಂದು ಸಾರಿಗೆ ಸಚಿವರಿಗೆ ಒತ್ತಾಯಿಸಿದ್ದಾರೆ.

ಇನ್ನು ಇದೇ ಅ.9ರಂದು ನಡೆಯುವ ಸಭೆಯಲ್ಲಿ ಇದೇ ತಿಂಗಳು ನಿವೃತ್ತ ನೌಕರರ ಹಿಂಬಾಕಿ ಸೇರಿ ಎಲ್ಲವನ್ನು ಪಾವತಿಸುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂಘಟನೆಗಳ ಮುಖಂಡರೂ ಕೂಡ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ನಮವಿ ಮಾಡಿದ್ದಾರೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು