NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ತಮ್ಮ ಜವಾಬ್ದಾರಿ ಮರೆತ ಡಿಎಂ – ತನ್ನ ತಪ್ಪು ಮುಚ್ಚಿಹಾಕಲು ಚಾಲನಾ ಸಿಬ್ಬಂದಿಗೆ ಮೆಮೋ ಕೊಟ್ಟ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬೆಂಗಳೂರು ಕೇಂದ್ರೀಯ ವಿಭಾಗ ಘಟಕ ವ್ಯವಸ್ಥಾಪಕರು ತಮ್ಮ ಬೇಜವಾಬ್ದಾರಿತನವನ್ನು ಮುಚ್ಚಿಕೊಳ್ಳಲು ಚಾಲಕ ಕಂ ನಿರ್ವಾಹಕರೊಬ್ಬರ ಮೇಲೆ ಹಾಕಿ ಅವರಿಗೆ ಮೆಮೋ ನೀಡಿರುವುದು ಅವರ ಕರ್ತವ್ಯದಲ್ಲಿ ನಿರ್ಲಕ್ಷ್ಯತನಕ್ಕೆ ಹಿಡಿದ ಕನ್ನಡಿಯಾಗಿದೆ.

ಚಾಲಕ ನಿರ್ವಾಹಕರು ಬಸ್‌ನಲ್ಲಿ ಕಂಡು ಬರುವ ದೋಷಗಳ ಬಗ್ಗೆ ಲಾಗ್‌ ಶೀಟ್‌ನಲ್ಲಿ ವಿವರಿಸಿದರೆ ಚಾಲನಾ ಸಿಬ್ಬಂದಿಗಳ ವಿರುದ್ಧವೇ ಆರೋಪ ಮಾಡಿ ಮೆಮೋ ಕೊಡುತ್ತಾರೆ. ಇನ್ನು ಹೇಳದೆ ಹೋದರೆ ಅದಕ್ಕೂ ನೀವೆ ಜವಾಬ್ದಾರರು ಎಂದು ಹೇಳಿ ಮೆಮೋ ಕೊಡುತ್ತಾರೆ.

ಒಟ್ಟಾರೆ ಈ ಡಿಪೋ ವ್ಯವಸ್ಥಾಪಕರು ಮತ್ತು ಡಿಪೋ ಮಟ್ಟದ ಅಧಿಕಾರಿಗಳು ಚಾಲನಾ ಸಿಬ್ಬಂದಿಗಳನ್ನು ಒಂದು ರೀತಿ ಗರಗಸದಂತೆ ಹಿಂಸಿಸುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಪ್ರತಿಯೊಂದಕ್ಕೂ ಚಾಲನಾ ಸಿಬ್ಬಂದಿಯನ್ನೆ ಹೊಣೆಗಾರರನ್ನಾಗಿ ಮಾಡಿದರೆ ಇವರೇಕೆ ಡಿಎಂಗಳಾಗಿರಬೇಕು? ಡಿಎಂಗಳ ಕೆಲಸವೇನು? ತಾವು ಮಾಡಬೇಕಾದ ಕೆಲಸವನ್ನು ಮಾಡದೆ ಅದನ್ನು ಚಾಲನಾ ಸಿಬ್ಬಂದಿಗಳ ಮೇಲೆ ಹಾಕಿ ನಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ನಡೆದುಕೊಳ್ಳುವುದಾ?

ಹೀಗೆ ಮಾಡುವುದಕ್ಕಾಗಿಯೇ ಇವರಿಗೆ ಡಿಎಂ ಪೋಸ್ಟ್‌ ಕೊಟ್ಟಿರುವುದಾ? ಘಟಕ ವ್ಯವಸ್ಥಾಪಕರ ಜವಾಬ್ದಾರಿ ಏನು ಎಂದು ಅರಿಯದ ಇಂಥ ಮೂರ್ಖರನ್ನು ಡಿಎಂಗಳಾಗಿ ನೇಮಕ ಮಾಡಿದವರನ್ನು ಮೊದಲು ತರಾಟೆಗೆ ತೆಗೆದುಕೊಳ್ಳಬೇಕು. ಡಿಎಂಗಳಾಗಿ ನೇಮಕ ಮಾಡುವ ಮುನ್ನ ಅವರ ಜವಾಬ್ದಾರಿ ಏನು ಎಂದು ತಿಳಿಸಿ ಅಂತ.

ಇಷ್ಟೆಲ್ಲ ಏಕೆ ವಿವರಿಸುತ್ತಿದ್ದೇವೆ ಎಂದರೆ ಅದಕ್ಕೆ ಕೇಂದ್ರೀಯ ವಿಭಾಗದ ಘಟಕ 4ರ ಡಿಎಂ ಅವರು ಚಾಲಕ ಕಂ ನಿರ್ವಾಹಕರೊಬ್ಬರಿಗೆ ತಮ್ಮ ತಪ್ಪುನ್ನು ಮುಚ್ಚಿಕೊಳ್ಳುವುದಕ್ಕಾಗಿ ಆಪಾದನ ಪಟ್ಟಿ ನೀಡಿದ್ದಾರೆ.

ಕೆಳೆದ ಸೆ.26ರಂದು ನೀಡಿರುವ ಆ ಆಪಾದನ ಪಟ್ಟಿಯಲ್ಲಿ ನೇರವಾಗಿ ಚಾಲಕ ಕಂ ನಿರ್ವಾಹಕ ಚೇತನ್‌ ಎಂಬುವರನ್ನೇ ಹೊಣೆಗಾರರನ್ನಾಗಿ ಮಾಡಿ ಅವರಿಗೆ ದಂಡ ಹಾಕುವುದಕ್ಕೆ ಬೇಕಾದ ರೀತಿಯಲ್ಲಿ ಮೆಮೋ ನೀಡಿರುವುದು ಎಲ್ಲೆಡೆ ಹರಿದಾಡುತ್ತಿದೆ.

ಡಿಎಂ ಕೊಟ್ಟಿರುವ ಆಪಾದನಾ ಪಟ್ಟಿಯಲ್ಲೇನಿದೆ?: ಈ ಕೆಳಗೆ ಸಹಿ ಮಾಡಿರುವ ನಾನು ಬೆಂಕೇಂವಿ 4ನೇ ಘಟಕಕ್ಕೆ ಸೇರಿದ ಚೇತನ್, ಚಾಲಕ ಕಂ ನಿರ್ವಾಹಕ ಬಿ.ಸಂ.7363 ಆಗಿದ್ದು, ಇವರ ಮೇಲೆ ಸಾರಿಗೆ ನಿಯಮಾವಳಿಯ 1971ರ 22 ನೇ ಅನುಸಾರವಾಗಿ ಈ ಕೆಳಗಿನಂತೆ ಆಪಾದನೆಯನ್ನು ಹೊರಿಸುತ್ತೇನೆ.

ನಿಮ್ಮನ್ನು ದಿ:28.08.2024 ರಂದು 2100BIALCDP ಮಾರ್ಗ ಸಂಖ್ಯೆ 44 ಮತ್ತು 45 ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕುಂದಾಪುರಕ್ಕೆ ಕೆಎ 57 ಎಫ್-5391 ವಾಹನದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿರುತ್ತದೆ. ಕುಂದಾಪುರದಿಂದ ಬೆಂಗಳೂರಿಗೆ ಹಿಂದಿರುಗಿ ಟ್ರಿಪ್‌ ಕೋಡ್ 2050CDPBIAL ನಲ್ಲಿ ಬರುವಾಗ ಮಂಗಳೂರಿನಿಂದ ಬೆಂಗಳೂರಿಗೆ ಮುಂಗಡ ಆಸನ ಕಾಯ್ದಿರಿಸಿದ್ದ ಆಸನ ಸಂಖ್ಯೆ 34 ರ ಪ್ರಯಾಣಿಕರಾದ ಭಾಸ್ಕರ್ ಅವರು “ಈ ವಾಹನವು ಮಳೆ ನೀರಿನಿಂದ ಸೋರುತ್ತಿದ್ದು, ಮೊಬೈಲ್ ಹಾಳಾಗಿದೆ.

ಈ ಸೋರುವ ವಾಹನದಲ್ಲಿ ಹೇಗೆ ಬೆಂಗಳೂರಿನವರೆಗೂ ಪ್ರಯಾಣ ಮಾಡುವುದು ಇದರಿಂದ ತೊಂದರೆಯಾಗಿರುತ್ತದೆಂದು, ವಾಹನವನ್ನು ಸಂಪೂರ್ಣವಾಗಿ ಪರಿಶೀಲಿಸುವುದು ನಿಮ್ಮ ಜವಬ್ದಾರಿಯಾಗಿರುತ್ತದೆ. ನನ್ನ ಫೋನ್‌ಗೆ ನೀರು ತುಂಬಿ ಡಿಸ್‌ಪ್ಲೇ ಮದ‌ರ್ ಬೋರ್ಡ್ ಹಾಳಾಗಿರುತ್ತದೆ ಅದನ್ನು ರಿಪೇರಿ ಮಾಡಲು ಸಾಧ್ಯವಿಲ್ಲ ಅದರ ವೆಚ್ಚ ಸುಮಾರು 01 ಲಕ್ಷ.

ನನ್ನ ಫೋನ್ ಹಾಳಾಗಿರುವುದಕ್ಕೆ ಹೊಸ ಫೋನ್ ನನಗೆ ಕೊಡಿಸಬೇಕು ಇಲ್ಲದಿದ್ದರೆ, ಕೆಎಸ್‌ಆರ್‌ಟಿಸಿ ಅಂಬಾರಿ ಮತ್ತು ಸಂಬಂಧ ಪಟ್ಟ ಮಂತ್ರಿಯ ವಿರುದ್ಧ ಬೇಜವಾಬ್ದಾರಿತನ ಮತ್ತು ಇತರೆ ಪ್ರಕರಣವನ್ನು ನ್ಯಾಯಾಲಯದಲ್ಲಿ ದಾಖಲಿಸಲಾಗುವುದೆಂದು” ಇ ಮೇಲ್ ಮುಖಾಂತರ ದೂರನ್ನು ದಾಖಲಿಸಿದ್ದಾರೆ.

ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುವಾಗ ವಾಹನದಲ್ಲಿ ಮಳೆ ನೀರು ಸೋರಿಕೆಯಾಗುತ್ತಿರುವ ಬಗ್ಗೆ ಗುರುತಿಸಿ ಮೇಲಧಿಕಾರಿಗಳಿಗೆ ತಿಳಿಸುವುದು ನಿಮ್ಮ ಜವಬ್ದಾರಿಯಾಗಿರುತ್ತದೆ. ವಾಹನದಲ್ಲಿ ಮಳೆ ನೀರು ಸೋರಿಕೆಯಾಗಿ ಪ್ರಯಾಣಿಕರ ಮೊಬೈಲ್ ಹಾಳಾಗಿ ರಿಪೇರಿ ಮಾಡಲು ಸಾಧ್ಯವಾಗದೇ ಅದಕ್ಕಾಗುವ ವೆಚ್ಚವನ್ನು ಕೊರುತ್ತಿದ್ದಾರೆ.

ಅಂದರೆ ಇದು ನಿಮ್ಮ ಕರ್ತವ್ಯದಲ್ಲಿನ ಬೇಜವಾಬ್ದಾರಿ ಮತ್ತು ನಿರ್ಲಕ್ಷತನವನ್ನು ತೋರುತ್ತದೆ. ಆದ್ದರಿಂದ ನಿಮ್ಮ ಮೇಲೆ ಸೂಕ್ತ ಶಿಸ್ತಿನ ಕ್ರಮವನ್ನೇಕೆ ಕೈಗೊಳ್ಳಬಾರದು ಎಂಬುದಕ್ಕೆ ಈ ಆಪಾದನಾ ಪಟ್ಟಿ ಸ್ವೀಕರಿಸಿದ 07 ದಿನಗಳ ಒಳಗಾಗಿ ನಿಮ್ಮ ಸಂರಕ್ಷಣೆಯ ಕುರಿತಾದ ವಿವರಣೆಯನ್ನು ಸಲ್ಲಿಸತಕ್ಕದ್ದು. ಇಲ್ಲವಾದಲ್ಲಿ ನಿಮ್ಮನ್ನೇ ತಪ್ಪಿತಸ್ಥರೆಂದು ಪರಿಗಣಿಸಿ ಏಕಪಕ್ಷೀಯವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು.

ಶಿಸ್ತುಪಾಲನಾಧಿಕಾರಿ ಘಟಕ ವ್ಯವಸ್ಥಾಪಕರು. ಬೆಂಕೇಂವಿ 4ನೇ ಘಟಕ ಎಂದು ಡಿಎಂ ಅಪಾದನಾ ಪತ್ರವನ್ನು ಸಿಬ್ಬಂದಿಗೆ ನೀಡಿದ್ದಾರೆ. ಅಂದರೆ ಸಿಬ್ಬಂದಿ ಮಳೆಯಿಂದ ಬಸ್‌ ಸೋರುತ್ತಿದೆ ಎಂದು ಹೇಳಿದ್ದರೆ ಈ ಡಿಎಂ ಬೇರೆ ಬಸ್‌ ವ್ಯವಸ್ಥೆ ಮಾಡುತ್ತಿದ್ದರೇ? ಇಲ್ಲತಾನೆ. ಜತೆಗೆ ಬಸ್‌ಗಳು ರಸ್ತೆಗಿಳಿಯುವ ಮುನ್ನ ಬಸ್‌ಗಳು ಫೀಟ್‌ ಆಗಿವೇ ಎಂದು ಪರಿಶೀಲಿಸುವುದು ತಾಂತ್ರಿಕ ಸಿಬ್ಬಂದಿಯ ಕೆಲಸ ಅದನ್ನು ನಿರ್ವಾಹಣೆ ಮಾಡುವುದನ್ನು ಬಿಟ್ಟು ಚಾಲನಾ ಸಿಬ್ಬಂದಿಗೆ ಮೆಮೋ ನೀಡಿರುವುದು ಡಿಎಂ ಬೇಜವಾಬ್ದಾರಿಯನ್ನು ತೋರಿಸುತ್ತದೆ.

ಇನ್ನಾದರೂ ಡಿಎಂಗಳು ತಮ್ಮ ಜವಾಬ್ದಾರಿಯನ್ನು ಅರಿತು ನಡೆಕೊಳ್ಳಬೇಕು ಅದನ್ನು ಬಿಟ್ಟು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು ಎಂಬಂತೆ ಎಲ್ಲ ತಪ್ಪುಗಳಿಗೂ ಚಾಲನಾ ಸಿಬ್ಬಂದಿಗಳನ್ನೇ ಹೊಣೆಗಾರರನ್ನಾಗಿ ಮಾಡುವುದನ್ನು ಮೊದಲು ಬಿಡಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ