NEWSನಮ್ಮಜಿಲ್ಲೆನಮ್ಮರಾಜ್ಯ

KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ – ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ
  • ನಾನು ಭಿಮಾತೀರದವನು ನನಗೆ ಭೀಮಾತೀರದ ಎಲ್ಲ ರೌಡಿಗಳು ಪರಿಚಯವಿದ್ದಾರೆ ನೀವು ಏನಾದರೂ ಬಾಲ ಬಿಚ್ಚಿದರೇ ನಿಮ್ಮ ತಲೆಗಳನ್ನು ಉರುಳಿಸಬೇಕಾಗುತ್ತದೆ ಎಂದು ಜೀವ ಬೇದರಿಕೆ ಹಾಕುವ ಡಿಎಂ
  • 4-5 ಸಾವಿರ ರೂ. ಪಡೆದುಕೊಂಡು 7-8 ದಿಗ ಗೈರಾದವರಿಗೆ ಅಬ್ಸೆಂಟ್ (A) ಇದ್ದುದ್ದನ್ನು  ತಿದ್ದಿ ಪ್ರೆಸೆಂಟ್‌ ಮಾಡುವ ಡಿಎಂ 
  • ರೂಟ್‌ಗಾಗಿ ಪ್ರತಿತಿಂಗಳು 500ರಿಂದ 1000 ಕೊಡಬೇಕು.  ಬೆಂಗಳೂರು, ಧರ್ಮಸ್ಥಳ, ದಾವಣಗೆರೆ ಈ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುವವರು ಡಿಎಂಗೆ ಅಡ್ವಾನ್ಸ್‌ 5000 ಕೊಡಬೇಕಂತೆ

ಇಂಡಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗ ವಿಜಯಪುರ ವಿಭಾಗದ ಇಂಡಿ ಘಟಕದ ಘಟಕ ವ್ಯವಸ್ಥಾಪಕರ ಭ್ರಷ್ಟಾಚಾರ ಮತ್ತು ನೌಕರರಿಗೆ ಕಿರುಕುಳ ನೀಡುತ್ತಿರುವುದು ಹೆಚ್ಚಾಗಿದೆ ಎಂದು ಆರೋಪಿಸಿ ಇಂಡಿ ಘಟಕದ ನೌಕರರು ಬೆಂಗಳೂರು ಕೇಂದ್ರ ಕಚೇರಿಗೆ ಹಾಗೂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಭದ್ರಾತಾ ಮತ್ತು ಜಾಗ್ರತಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಇಂಡಿ ಘಟಕದಲ್ಲಿ ಘಟಕದ ನೌಕರರು ಅನುಭವಿಸುತ್ತಿರುವ ಯಾತನೆ ಬಗ್ಗೆ ಸಾಮೂಹಿಕವಾಗಿ ಲಿಖಿತ ದೂರು ನೀಡಿದ್ದು, ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೇಂದ್ರ ಕಚೇರಿ ಬೆಂಗಳೂರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಭದ್ರಾತಾ ಮತ್ತು ಜಾಗ್ರತಾಧಿಕಾರಿಗಳು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೇಂದ್ರ ಕಚೇರಿ ಕಲಬುರಗಿ ಅವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ದೂರು ಏನು? ನಾವು ಇಂಡಿ ಘಟಕದ ನೌಕರರು ತಮಗೆ ಮನವಿ ಮಾಡಿಕೊಳ್ಳುವುದೇನೆಂದರೆ ಇಂಡಿ ಘಟಕ ವ್ಯವಸ್ಥಾಪಕ ಸಂಗನಗೌಡ ಬಿರದಾರ ಅವರು ಘಟಕಕ್ಕೆ ಬಂದು 1 ವರ್ಷವಾಗಿದೆ. ಬಂದ 1-2 ತಿಂಗಳು ಸರಿಯಾಗಿದ್ದರು ನಂತರ ನೌಕರರಿಗೆ ತೊಂದರೆ ಕೊಡಲು ಶುರುಮಾಡಿದ್ದಾರೆ. ಅದು ಹೇಗೆ ಎಂದರೆ..

1.ಅನ್ಸೆನ್‌ನಲ್ಲಿ ಘಟಕ ವ್ಯವಸ್ಥಾಪಕ ಕೋಟಾದಡಿ ನೌಕರರಿಗೆ ರಜೆ ಬೇಕಾದರೆ 1-2 ದಿನಕ್ಕೆ 2000 ರೂಪಾಯಿ 4-5 ದಿನಕ್ಕೆ 5000 ರಿಂದ 6000 ರೂಪಾಯಿಗಳು ಘಟಕ ವ್ಯವಸ್ಥಾಪಕರಿಗೆ ಕೊಡಬೇಕು. ಇಲ್ಲದಿದ್ದರೆ ರಜೆ ಬದಲು ಅಬ್ಸೆಂಟ್‌(A) ಹಾಕುತ್ತಾರೆ.

2. ನೌಕರರು 7-8 ದಿಗಳವರೆಗೆ ಗೈರಾಗಿ ಘಟಕ್ಕೆ ಬಂದು ಘಟಕದ ವ್ಯವಸ್ಥಾಪಕರನ್ನು ಭೇಟಿಮಾಡಿ ಸರ್ ನಮಗೆ ವಿಭಾಗೀಯ ಕಚೇರಿಗೆ ಕಳಿಸಬೇಡಿ ಇಲ್ಲೆ ನಮಗೆ ಡ್ಯೂಟಿಕೊಡಿ ಅಂತ ಕೇಳಿಕೊಂಡರೆ 4-5 ಸಾವಿರವರೆಗೆ ಹಣ ಪಡೆದುಕೊಂಡು ಅವರಿಗೆ ಅಬ್ಸೆಂಟ್ (A) ಇದ್ದುದ್ದನ್ನು ಮಾಸ್ಟರ್‌ನಲ್ಲಿ ತಿದ್ದಿ ಪ್ರೆಸೆಂಟ್‌ ಮಾಡಿ ಡಿಸಿ ಸಾಹೇಬರ ಕಡೆ ಕಳುಹಿಸದೆ ಘಟಕದಲ್ಲೇ ಕರ್ತವ್ಯಕ್ಕೆ ಹೋಗಲು ಅನುಮತಿ ಕೊಡುತ್ತಾರೆ.

3. ಘಟಕದ ಆವರಣವನ್ನು ಸ್ವಚ್ಛ ಗೊಳಿಸುವ ನೆಪದಲ್ಲಿ ಘಟಕದಲ್ಲಿ ಇದ್ದ ಗುಜರಿ ಸಾಮಗ್ರಿಗಳನ್ನು ಮಾರಿಕೊಂಡಿರುತ್ತಾರೆ (ಸ್ಕ್ಯ್ರಾಪ್ ಸಾಮಗ್ರಿಗಳು). 4. ರೂಟ್‌ಗೆ ಹೊಸ ವಾಹನವನ್ನು ಫಿಕ್ಸ್ ಮಾಡಲು ಚಾಲಕರ ಕಡೆಯಿಂದ 3 ರಿಂದ 5 ಸಾವಿರದವರೆಗೆ ಹಣವನ್ನು ಪಡೆದುಕೊಂಡಿರುತ್ತಾರೆ.

5. ಚಾಲಕ, ಚಾಲಕ ಕಂ. ನಿರ್ವಾಹಕರು ಮತ್ತು ನಿರ್ವಾಹಕರು ಸೇವಾ ಹಿರಿತನದ ಪ್ರಕಾರ ರೂಟೇಷನ್‌ನಲ್ಲಿ ರೂಟ್ ಫಿಕ್ಸ್ ಮಾಡಿಕೊಂಡರೂ ಕೂಡ ವಾಸ್ಕೊ ಬೆಂಗಳೂರ, ಪೂಣಾ, ಧರ್ಮಸ್ಥಳ, ದಾವಣಗೆರೆ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುವವರು ಅಡ್ವಾನ್ಸ್‌ ಘಟಕ ವ್ಯವಸ್ಥಾಪಕರಿಗೆ 5000 ಕೊಡಬೇಕಾಗಿದೆ.

ಅಲ್ಲದೆ ಪ್ರತಿ ತಿಂಗಳು 500 ರಿಂದ 1000 ರೂ.ಗಳವರಿಗೆ ಹಣವನ್ನು ಕೊಡಬೇಕು ಇಲ್ಲದಿದ್ದರೆ ಅವರಿಗೆ ಎಕ್ಸಪ್ರೆಸ್ ಮಾಡುವವರಿಗೆ ಆರ್‌ಡಿನರಿ ರೂಟ್ ಕೊಡುತ್ತಾರೆ ಮತ್ತು ಇಲ್ಲಸಲ್ಲದ ನೆಪಹೇಳಿ ಸಂಜೆವರೆಗೆ ಘಟಕದಲ್ಲಿ ಕೂರಿಸಿಕೊಂಡು ಆ ರೂಟ್‌ಗೆ ಬೇರೆಯವರನ್ನು ಕಳಹಿಸಿ ಇವರಿಗೆ ಅಬ್ಸೆಂಟ್ (A) ಹಾಕಿ ನಿನಗೆ ಇವತ್ತು ಕರ್ತವ್ಯ ಇಲ್ಲ, ನೀನು ಮನೆಗೆ ಹೋಗು ನಾಳೆ ಬಾ ಎಂದು ಕಳುಹಿಸುತ್ತಾರೆ.

6. ಸ್ತ್ರೀ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ನಮ್ಮ ಕರ್ನಾಟಕ ಸರ್ಕಾರವು ಉಚಿತ ಪ್ರಯಾಣ ಮಾಡಲು ಅವಕಾಶ ಮಾಡಿಕೊಟ್ಟಿದೆ. ಆದರೆ ಬಸ್‌ಗಳನ್ನು ಟೂರ್‌ಗೆ ತೆಗೆದುಕೊಂಡು ಹೋಗಲು ಮಹಿಳೆಯರಿಗೆ ಫ್ರೀ ಅವಕಾಶ ಇರುವುದಿಲ್ಲ. ಆದರೆ ನಮ್ಮ ಇಂಡಿ ಘಟಕದಲ್ಲಿ ಮಹಿಳೆಯರಿಗೆ ಬಸ್ ಉಚಿತ ತೆಗೆದುಕೊಂಡುಹೋಗಲು ನಮ್ಮ ಘಟಕದ ವ್ಯವಸ್ಥಾಪಕರು ಧರ್ಮಸ್ಥಳಕ್ಕೆ ಹೋಗಲು ಮಾನ್ಯತೆ ಕೊಟ್ಟಿದ್ದಾರೆ.

ಅದು ಹೇಗೆ ಎಂದರೆ ಆ ಹಳ್ಳಿಯಿಂದ ಒಬ್ಬರು ಮಹಿಳೆ ಮುಖಂಡತ್ವ ವಹಿಸಿಕೊಂಡು ಒಬ್ಬೊಬ್ಬಬ್ಬರ ಕಡೆಯಿಂದ 200 ರೂಪಾಯಿ ವಸೂಲಿ ಮಾಡಿಕೊಂಡ ಒಟ್ಟು 40 ರಿಂದ 50 ಜನ ಮಹಿಳೆಯರಿಗೆ 10 ರಿಂದ 12 ಸಾವಿರದ ವರೆಗೆ ಹಣ ವಸೂಲಿಯಾಗುತ್ತದೆ. ಅದರಲ್ಲಿ 6 ರಿಂದ 7 ಸಾವಿರ ಘಟಕ ವ್ಯವಸ್ಥಾಪಕರಿಗೆ ಕೊಡಬೇಕು. ಉಳಿದ ಹಣದಲ್ಲಿ ಆ ಮಹಳಾ ಲೀಡರ್ ಸ್ವಲ್ಪ ಹಣವನ್ನು ತೆಗೆದುಕೊಂಡು ಉಳಿದಿರುವ ಹಣದಲ್ಲಿ ಚಾಲಕರಿಗೆ ಸ್ವಲ್ಪ ಹಣವನ್ನು ಕೊಡುತ್ತಾರೆ. ಇದೇ ರೀತಿ ಪ್ರತಿ ಹಳ್ಳಿ ಇಂದ ಧರ್ಮಸ್ಥಳಕ್ಕೆ ಸುಮಾರು ವಾಹನಗಳು ಹೋಗಿವೆ. ಅದನ್ನು ಸೂಕ್ತವಾಗಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು.

7. ನೌಕರರ ಪರ ಸಂಘಟನೆಯವರ ಜತೆಗೆ ಪ್ರತಿತಿಂಗಳು ಘಟಕದಲ್ಲಿ ಸಭೆಮಾಡಬೇಕು ಎಂಬ ಆದೇಶವಿದೆ. ಆದರೆ ಘಟಕ ವ್ಯವಸ್ಥಾಪಕರು ಮಾಡುತ್ತಿರುವ ಅವ್ಯವಹಾರದ ಬಗ್ಗೆ ಸಂಘಟನೆಯವರು ಕೇಳುತ್ತಾರೆ ಎಂದು ತಿಳಿದು ಘಟಕ ವ್ಯವಸ್ಥಾಪಕರು ಮೀಟಿಂಗ್‌ ಮಾಡುವುದಿಲ್ಲ.

8. ಯಾರಾದರೂ ನೌಕರರು ಘಟಕ ವ್ಯವಸ್ಥಾಪಕರಿಗೆ ಹೀಗೇಕೆ ಮಾಡುತ್ತದ್ದಿರಿ ಸರ್ ಎಂದು ಕೇಳಿದರೆ, ನಾನು ಹೀಗೇ ಇರೊದು ನಿಮಗೆ ನನ್ನ ಬಗ್ಗೆ ಗುರುತಿಲ್ಲ. ನಾನು ಸಿಟಿಎಂ ಸಾಹೇಬರ ಆತ್ಮೀಯ ಗೆಳೆಯನಿದ್ದೇನೆ ಅವರಿಗೆ ಹೇಳಿ ನಿಮಗೆ ಅಮಾನತು ಮಾಡುತ್ತೇನೆ ಎಂದು ಹೆದರಿಸಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನಾನು ಭಿಮಾತೀರದವನು ನನಗೆ ಭೀಮಾತೀರದ ಎಲ್ಲ ರೌಡಿಗಳು ಪರಿಚಯವಿದ್ದಾರೆ, ನೀವು ಏನಾದರೂ ಬಾಲ ಬಿಚ್ಚಿದರೇ ನಿಮ್ಮ ತಲೆಗಳನ್ನು ಉರುಳಿಸಬೇಕಾಗುತ್ತದೆ ಎಂದು ಜೀವ ಬೇದರಿಕೆ ಹಾಕುತ್ತಾನೆ.

9. ಘಟಕದಲ್ಲಿ ವಾಶಿಂಗ್ ಮತ್ತು ಸ್ವಚ್ಛತೆಯ ಸಲುವಾಗಿ ತಿಂಗಳಿಗೆ 30,000 ರಿಂದ 35.000 ವರೆಗೆ ಬಿಲ್‌ಬರುತ್ತದೆ. ಕೆಲಸ ಮಾಡುವವರಿಗೆ 9000 ಪ್ರತಿ ತಿಂಗಳಿಗೆ ಕೊಡಬೇಕಾಗಿದ್ದರೆ ಅವರಿಗೆ 3000 ರಿಂದ 4000 ಸಾವಿರಸದವರೆಗೆ ಕೊಡುತ್ತಾರೆ. ಇನ್ನೂ ನಮಗೆ ಹೆಚ್ಚಿನ ಹಣ ಬರಬೇಕು ಸರ್ ಎಂದು ಕೆಲಸಗಾರರು ಕೇಳಿದಾಗ ಮೇಲಿನಿಂದ ಇಷ್ಟೇ ಹಣ ಬರುತ್ತದೆ ಕೆಲಸ ಮಾಡುದಿದ್ದರೆ ಮಾಡಿ ಇಲ್ಲದಿದ್ದರೆ ಬಿಟ್ಟುಬಿಡಿ ಎಂದು ಬೇದರಿಕೆ ಹಾಕುತ್ತಾರೆ.

ಪ್ರತಿ ತಿಂಗಳ ನೌಕರರ ಮುಖಂಡರ ಕಡೆಯಿಂದ ಬಿಲ್ ಮೇಲೆ ಸಹಿ ಮಾಡಿಸಿಕೊಳ್ಳಬೇಕೆಂದು ರೂಲ್ಸ್ ಇದೆ. ಆದರೆ ಇವರು ಸಹಿ ಮಾಡಿಸಿಕೊಳ್ಳದೆ ನೌಕರರ ಮುಖಂಡರ ಸಹಿ ತಾವೆ ಮಾಡಿ ಬಿಲ್ ಮಂಜೂರು ಮಾಡಿಸಿಕೊಂಡು ಸಂಸ್ಥೆಯ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಸೂಕ್ತವಾಗಿ ಪರಿಶೀಲನೆ ಮಾಡಿ ಶಿಸ್ತು ಕ್ರಮ ಜರುಗಿಸಬೇಕು.

10. ಇಂಡಿ ಘಟಕದಲ್ಲಿ ಘಟಕ ವ್ಯವಸ್ಥಾಪಕರ ಚೇಲಾಗಳಿದ್ದಾರೆ (ಬಂಟರು) ಅವರಿಗೆ ಚಾಲಕ, ಚಾಲಕ ಕಂ ನಿರ್ವಾಹಕ ಮತ್ತು ನಿರ್ವಾಹಕ ಮತ್ತು ತಾಂತ್ರಿಕ ಸಿಬ್ಬಂದಿ ಇವರ ಕಡೆಯಿಂದ ಹಣ ವಸೂಲಿ ಮಾಡಲು ಹೇಳುತ್ತಾರೆ. ಹಣವನ್ನು ವಸೂಲಿ ಮಾಡಿ ಘಟಕ ವ್ಯವಸ್ಥಾಪಕರಿಗೆ ಮುಟ್ಟಿಸುತ್ತಾರೆ.

ಇದೇ ರೀತಿ ಒಂದು ವರ್ಷದಿಂದ ನೌಕರರಿಗೆ ತೊಂದರೆಯಾಗುತ್ತಿದ್ದು, ಕೆಲಸವನ್ನು ಬಿಟ್ಟುಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಮೇಲಧಿಕಾರಿಗಳಾದ ತಾವುಗಳು ಇದನ್ನು ಕುಲಂಕುಶವಾಗಿ ಪರಿಶೀಲನೆ ಮಾಡಿ ಇವರಿಗೆ ಬೇರೆಕಡೆಗೆ ವರ್ಗಾವಣೆ ಮಾಡಿ ನೌಕರರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸುವಿರಿ ಎಂದು ನಂಬಿರುತ್ತವೆ.

ವಂದನೆಗಳೊಂದಿಗೆ ತಮ್ಮ ವಿಶ್ವಾಸಿಗರು ಇಂಡಿ ಘಟಕದ ನೌಕರರು ಎಂದು 54ಕ್ಕೂ ಹೆಚ್ಚು ನೌಕರರು ತಮ್ಮತಮ್ಮ ಫೋನ್‌ ನಂಬರ್‌ ಸಹಿತ ಸಹಿ ಮಾಡಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಇನ್ನು ಇಂಥ ನೀಚರನ್ನು ಅಧಿಕಾರಿಗಳು ಹೇಗೆ ಇಟ್ಟುಕೊಂಡಿದ್ದಾರೋ ಗೊತ್ತಿಲ್ಲ. ಈ ರೀತಿ ಒಬ್ಬಿಬ್ಬರು ಆರೋಪ ಮಾಡಿದರೆ ಅದು ಸುಳ್ಳು ಎನ್ನಬಹುದು. ಆದರೆ ಸಾಮೂಹಿಕವಾಗಿ ಘಟಕದ ನೌಕರರೆಲ್ಲರೂ ಸೇರಿ ಆರೋಪ ಮಾಡುತ್ತಿದ್ದಾರೆ ಎಂದರೆ ನೌಕರರು ಎಷ್ಟು ನೋವು ಅನುಭವಿಸುತ್ತಿದ್ದಾರೆ ಎಂಬುವುದು ತಿಳಿಯುತ್ತಿದೆ.

ಹೀಗಾಗಿ ಈತನನ್ನು ಕೂಡಲೇ ಅಮಾನತು ಮಾಡಿ ವಿಚಾರಣೆಗೊಳಪಡಿಸಬೇಕು ಎಂದು ನೌಕರರ ಕೂಟದ ವಿಜಯಪುರ ವಿಭಾಗದ ಗೌರವ ಅಧ್ಯಕ್ಷ ಯಾಕೂಬ ನಾಟಿಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಒತ್ತಾಯ ಮಾಡಿದ್ದಾರೆ.

2 Comments

Leave a Reply

error: Content is protected !!
LATEST
KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ...