ಕೋಲಾರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಹಾಗೂ ಓಮ್ನಿವ್ಯಾನ್ ನಡುವೆ ಸಂಭವಿಸಿದ ಅಪಘಾತದಲ್ಲಿ ಓಮ್ನಿವ್ಯಾನ್ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೋಲಾರದ ಅಮಾನಿ ಕೆರೆ ಬಳಿ ಇಂದು ಮುಂಜಾನೆ 3 ಗಂಟೆ ಸುಮಾರಿಗೆ ನಡೆದಿದೆ.
ಕೋಲಾರ ಮೂಲದ ವ್ಯಾನ್ ಚಾಲಕ ಫೋಟೋಗ್ರಾಫರ್ ಚೇತನ್ (20) ಎಂಬುವರೆ ಮೃತಪಟ್ಟವರು. ಗುರುವಾರ ಮುಂಜಾನೆ 3ಗಂಟೆ ಸುಮಾರಿಗೆ ಸಮಾರಂಭ ಒಂದರ ಫೋಟೋಶೋಟ್ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಕೋಲಾರಕ್ಕೆ ಬರುತ್ತಿದ್ದಾಗ ನಿದ್ರೆಮಂಪರಿನಲ್ಲಿ ಎದುರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದ್ದರಿಂದ ಈ ಅವಘಡ ಸಂಭವಿಸಿದೆ.
ಇನ್ನು ತಿರುಪತಿಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಸಿ ಬಸ್ ಚಾಲಕ ವ್ಯಾನ್ ತನ್ನ ಕಡೆಗೆ ಬರುತ್ತಿರುವುದನ್ನು ನೋಡಿ ಬ್ರೇಕ್ ಹಾಕುವ ಮೂಲಕ ಬಸ್ಸನ್ನು ನಿಂತ್ರಿಸುತ್ತಿದ್ದರು ಆದರೆ ಅಷ್ಟರಲ್ಲೇ ಓಮ್ನಿವ್ಯಾನ್ ಬಸ್‌ಗೆ ಡಿಕ್ಕಿಹೊಡೆದಿದ್ದರಿಂದ ಬಸ್ ಚಾಲಕನ ಭಾಗಕ್ಕೆ ವ್ಯಾನ್ ನುಗ್ಗಿದೆ. ಇದರಿಂದ ವ್ಯಾನ್ ಚಾಲಕ ಚೇತನ ಸ್ಥಳದಲ್ಲೇ ಅಸುನೀಗಿದ್ದಾರೆ.
ಈ ಅಫಘಾತಕ್ಕೆ ವ್ಯಾನ್ ಚಾಲಕ ಎಡಭಾಗದಿಂದ ಬಸ್ ಬರುತ್ತಿದ್ದ ಬಲಭಾಗಕ್ಕೆ ಹೋಗಿರುವುದೇ ಕಾರಣ ಎಂದು ಹೇಳಲಾಗುತ್ತಿದ್ದು ವ್ಯಾನ್ ಬಸ್‌ಗೆ ಡಿಕ್ಕಿ ಹೊಡದ ರಭಸಕ್ಕೆ ಮುಂದಿನ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಟೆರಿಂಗ್ ಮೇಲೆಯೇ ಚೇತನ್ ಮೃತಪಟ್ಟಿದ್ದಾರೆ.
ಇನ್ನು ಬಸ್ ಮತ್ತು ವ್ಯಾನ್‌ಅನ್ನು ಬೇರ್ಪಡಿಸಿದ ಬಳಿಕ ವ್ಯಾನ್‌ನಲ್ಲಿದ್ದ ಚೇತನ್ ಅವರ ಮೃತದೇಹವನ್ನು ಹೊರ ತೆಗೆಯಲೂ ಕೂಡ ಪೊಲೀಸರು ರಾಡ್ ಬಳಸಬೇಕಾಯಿತು. ಅಂದರೆ ಅಪಘಾತದ ತೀವ್ರತೆ ಎಷ್ಟಿತ್ತು ಎಂಬುವುದು ಇದರಿಂದ ಊಹಿಸಿಕೊಳ್ಳಬಹುದು.
ಬಳಿಕ ಪೊಲೀಸರು ಚೇತನ್ ಮೃತದೇಹವನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ರವಾನಿಸಿದರು. ಅಪಘಾತ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Related

 










