ತುಮಕೂರು: ತುಮಕೂರು ವಿಭಾಗದ ತಿಪಟೂರು ಘಟಕದ ಚಾಲಕ ಕಂ ನಿರ್ವಾಹಕರಾದ ಮಂಜುನಾಥ್ ಅವರು ತಮ್ಮ ತಾಯಿ ನಿಧನ ಹೊಂದಿದ ಕಾರಣ ಗೈರು ಹಾಜರಾಗಿದ್ದರು.
ಈ ವಿಷಯವನ್ನು ಮಂಜುನಾಥ್ ಅವರು ಅಧಿಕಾರಿಗಳಿಗೆ ತಿಳಿಸಿದ್ದರೂ ಕೂಡ ಘಟಕದಲ್ಲಿ ಈ ಬಗ್ಗೆ ತಪ್ಪು ವರದಿ ನೀಡಿ ಗೈರುಹಾಜರಿ ಪ್ರಕರಣ ದಾಖಲಿಸಿ, ಸಂಬಂಧಪಟ್ಟ ಚಾಲಕರಿಗೆ ಮೆಮೋ ನೀಡಲಾಗಿತ್ತು.
ಇನ್ನು ಈ ಎಲ್ಲ ದಾಖಲೆಗಳನ್ನು ವಿಜಯಪಥ ವರರಿಗಾರರು ಕಲೆಹಾಕಿದ ಬಳಿಕ ಎಲ್ಲ ದಾಖಲೆಗಳೊಂದಿಗೆ ವಿವರವಾದ ವರದಿ ಮಾಡಲಾಗಿತ್ತು. ವರದಿಯ ಹಿನ್ನೆಲೆಯಲ್ಲಿ ಕೇಂದ್ರ ಕಚೇರಿ ಆದೇಶದಂತೆ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಮಂಜುನಾಥ್ ಅವರಿಗೆ 20 ದಿನಗಳ ರಜೆ ಮಂಜೂರು ಮಾಡಿದ್ದಾರೆ.
ವಿಜಯಪಥ.ಇನ್ ನಲ್ಲಿ ವರದಿ ಬಂದಿದ್ದರಿಂದ ಕೇಂದ್ರ ಕಚೇರಿಯಲ್ಲಿರುವ ಉನ್ನತ ಅಧಿಕಾರಿಗಳು ಹಾಗೂ ಸಾರಿಗೆ ಸಚಿವರು ವಿಷಯ ತಿಳಿದು ಸತ್ಯಾಸತ್ಯತೆ ಪರಿಶೀಲಿಸಿದಾಗ ಮಂಜುನಾಥ್ ಅವರ ಅಮ್ಮ ನಿಧನರಾಗಿರುವುದು ಗೊತ್ತಾಗಿದೆ. ಹೀಗಾಗಿ ಕೂಡಲೇ ಗೈರು ಹಾಜರಿ ಎಂದು ತೋರಿಸಿರುವುದುದನ್ನು ಬಿಟ್ಟು ರಜೆ ಮಂಜೂರು ಮಾಡಿ ವೇತನ ಕೊಡಬೇಕು ಎಂಬ ಕೇಂದ್ರ ಕಚೇರಿ ಆದೇಶದಂತೆ ಡಿಸಿ ಅವರು ರಜೆ ಮಂಜೂರು ಮಾಡಿದ್ದಾರೆ ಡಿಸಿ.
ಅಭಿನಂದನೆ: ವಿಜಯಪಥ ಮೀಡಿಯಾದಲ್ಲಿ ವರದಿ ಬಂದಿದ್ದರಿಂದ ರಜೆ ಮಂಜೂರು ಆಗಿದೆ ಎಂದು ಚಾಲಕ ಹಾಗೂ ತಿಪಟೂರು ಘಟಕದ ಸಾರಿಗೆ ಸಿಬ್ಬಂದಿಗಳು ವಿಜಯಪಥಕ್ಕೆ ಅಭಿನಂದನೆ ತಿಳಿಸಿದ್ದಾರೆ.
ಇದನ್ನು ಓದಿ: KSRTC ತುಮಕೂರು: ಅಮ್ಮ ನಿಧನರಾಗಿದ್ದಕ್ಕೆ ನೌಕರನಿಗೆ ರಜೆ ಬದಲು ಮೆಮೋ ಕೊಟ್ಟು ಅಮಾನವೀಯ ವರ್ತನೆ ತೋರಿದ ಡಿಸಿ
ವಿಜಯಪಥ ಪತ್ರಿಕೆ ಸಂಪಾದಕರಿಗೆ ತುಂಬು ಹೃದಯದ ಧನ್ಯವಾದಗಳು ಸರ್ 🌹🌹