ಬೆಂಗಳೂರು: ಸರ್ಕಾರಿ ನೌಕರರಿಗೆ ಸರಿ ಸಮಾನವಾದ ವೇತನವನ್ನು ಅಂದರೆ 7ನೇ ವೇತನ ಆಯೋಗವನ್ನು ನಮಗೂ ಅಳವಡಿಸಬೇಕು ಎಂದು ಸರ್ಕಾರ ಮತ್ತು ಸಾರಿಗೆ ನಿಗಮಗಳ ಆಡಳಿತ ಮಂಡಳಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಿಬ್ಬಂದಿ ಹಾಗೂ ಲೆಕ್ಕ ಪತ್ರ, ಮೇಲ್ವಿಚಾರಕ & ಅಧೀಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಈ ಸಂಬಂಧ ಅ.24ರ ಗುರುವಾರ ಅಂದರೆ ನಿನ್ನೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, KSRTC ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು, ಸಂಸ್ಥೆಯ ಮುಖ್ಯ ಲೆಕ್ಕಾಧಿಕಾರಿಗಳು, ನಿಗಮದ ಸಿಬ್ಬಂದಿ ಮತ್ತು ಜಾಗೃತ ನಿರ್ದೇಶಕರು ಹಾಗೂ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬಳಿಕ ಮಾತನಾಡಿದ ಪದಾಧಿಕಾರಿಗಳು, ಸಾರಿಗೆ ನಿಗಮಗಳ ನೌಕರರು ಸರ್ಕಾರಿ ಮತ್ತು ಇತರೆ ನಿಗಮ-ಮಂಡಳಿಗಳ ನೌಕರರಿಗಿಂತ ತುಂಬಾ ಕಷ್ಟ ಪಟ್ಟು ಕಾರ್ಯನಿರ್ವಹಿಸುತ್ತಿದ್ದು, ಇದನ್ನು ಸಾರಿಗೆ ಸಿಚಿವರು ಮತ್ತು ಅಧಿಕಾರಿಗಳು ತಿಳಿದಿರುತ್ತೀರೆಂದು ನಾವು ಭಾವಿಸಿಕೊಂಡಿದ್ದೇವೆ. ನಮ್ಮ ಈ ಕಠಿಣ ಪರಿಶ್ರಮಕ್ಕೆ ತಕ್ಕಂತೆ ಸರ್ಕಾರಿ ನೌಕರರಿಗಿಂತ ಹೆಚ್ಚು ವೇತನ ನೀಡಬೇಕಾಗಿತ್ತು. ಆದರೆ ದುರ್ದೈವವೆಂದರೆ ಸರ್ಕಾರಿ ನೌಕರರಿಗಿಂತ ಸರಾಸರಿ ಶೇಕಡಾ 46 ರಷ್ಟು ಕಡಿಮೆ ವೇತನ ನೀಡಲಾಗುತ್ತಿದೆ. ಇದು ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಸಾರಿಗೆ ನಿಗಮದ ಅಧಿಕಾರಿಗಳು/ ನೌಕರರಿಗೆ ಹಾಗೂ ಸರ್ಕಾರಿ ಅಧಿಕಾರಗಳು/ನೌಕರರಿಗಿರುವ ಕೆಲವು ಪ್ರಮುಖ ಹುದ್ದೆಗಳ ವೇತನದಲ್ಲಿನ ವ್ಯತ್ಯಾಸದ ವಿವರಗಳನ್ನು ಕೊಟ್ಟಿದ್ದು ಆ ಪಟ್ಟಿ ಈ ಕೆಳಗಿನಂತಿದೆ.
ನೋಡಿ ರಾಜ್ಯದ ಎಲ್ಲ ನಿಗಮ-ಮಂಡಳಿಗಳ (KPTCL & Escoms, BWSSB & KSRTC’s ಹೊರತು ಪಡಿಸಿ) ನೌಕರರಿಗೆ ರಾಜ್ಯ ಸರ್ಕಾರಿ ನೌಕಕರಿಗೆ ಜಾರಿಯಾಗಿರುವ 7ನೇ ವೇತನ ಆಯೋಗದಂತೆ ವೇತನವನ್ನು ಅಳವಡಿಸಿಕೊಂಡು ವೇತನ ನೀಡಲಾಗುತ್ತಿದೆ. ಆದರೆ, ನಮ್ಮ ನಿಗಮಗಳಲ್ಲಿ ಯಾವ ರೀತಿಯಲ್ಲೂ ವೈಜ್ಞಾನಿಕವಾಗಿರದ ರೀತಿಯಲ್ಲಿ ವೇತನವನ್ನು ನಿಗದಿಪಡಿಸುವ ಪದ್ಧತಿಯನ್ನು ಅಳವಡಿಸಿಕೊಂಡು ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಅವೈಜ್ಞಾನಿಕ ವೇತನ ಪರಿಷ್ಠರಣಿ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಕೊಡುತ್ತಿರುವುದನ್ನೂ ಕೂಡ ಸರಿಯಾದ ಸಮಯಕ್ಕೆ ಮಾಡದೇ ನೌಕರರು ಹೋರಾಟಕ್ಕೆ ಇಳಿದಾಗ, ಕೆಲವು ಸಿಬ್ಬಂದಿಗಳನ್ನು ಅಮಾನತು & ವಜಾಗೊಳಿಸಿದ ನಂತರವೇ ವೇತನ ಪರಿಷ್ಕರಣೆ ಮಾಡುವ ಪರಿಪಾಟವನ್ನು ಇಟ್ಟುಕೊಳ್ಳಲಾಗಿದೆ.
ಮುಂದುವರೆದು, ನಾವು ಸಾರಿಗೆ ನೌಕರರ ಮತ್ತು ಅಧಿಕಾರಿಗಳ ನಡುವಿನ ಕೊಂಡಿಯಾಗಿ ನಿಗಮಗಳ ಅಭಿವೃದ್ಧಿಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತಾ, ವಿಪರೀತ ಕೆಲಸದ ಒತ್ತಡದಿಂದ ವಿನಾಕಾರಣ ಶಿಸ್ತು ಕ್ರಮಕ್ಕೆ ಒಳಗಾಗುತ್ತಾ, ನಿಗಮಗಳ ಎಲ್ಲ ನೌಕರರಲೇ ಅತ್ಯಂತ ಕಡಿಮೆ ವೇತನ (ಅಂದರೆ ಮೇಲ್ವಿಚಾರಕರು-71% ರಷ್ಟು & ಅಧೀಕ್ಷಕರು-98% ರಷ್ಟು ಕಡಿಮೆ ವೇತನ) ಪಡೆದುಕೊಂಡು ಜೀವನ ಸಾಗಿಸುತ್ತಿದ್ದೇವೆ.
ಪ್ರಸ್ತುತ ದಿನಗಳಲ್ಲಿ ದಿನ ಬಳಕೆ ವಸ್ತುಗಳ ತೀವ್ರ ಬೆಲೆ ಏರಿಕೆ & ಮಕ್ಕಳ ದುಬಾರಿ ಶಿಕ್ಷಣ ವೆಚ್ಚವನ್ನು ಭರಿಸುತ್ತಾ ಆರ್ಥಿಕವಾಗಿ ಅತ್ಯಂತ ನಿಕೃಷ್ಟವಾಗಿ ಕುಟುಂಬ ನಿರ್ವಹಣೆ ಮಾಡುತ್ತಿದ್ದೇವೆ. ಅಲ್ಲದೇ ನಮಗೆ ಮುಂಬಡ್ತಿಯಲ್ಲಿ ಸೂಕ್ತವಾದ ಅವಕಾಶವಿಲ್ಲದಾಗಿರಿಸಿರುವ ನಿಗಮದ ಪದವೃಂದ & ನೇಮಕ ನಿಯಮವಳಿಗಳಿಂದ ಸುಮಾರು ವರ್ಷಗಳ ವರೆಗೆ (15-20 ವರ್ಷಗಳು) ಯಾವುದೇ ಮುಂಬಡ್ತಿ ಇಲ್ಲ.
ಹೀಗಾಗಿ ಸಾರಿಗೆ ನಿಗಮದ ಇತರೆ ಇಲಾಖೆಗಳಲ್ಲಿ ನಮಗಿಂತ ಕಿರಿಯರಾಗಿ ನೇಮಕಗೊಳ್ಳುವ ಮೇಲ್ವಿಚಾರಕ ಸಿಬ್ಬಂದಿಗಳು, ನಮ್ಮ ಮುಂದೆಯೇ 2 ರಿಂದ 3 ಮುಂಬಡ್ತಿ ಪಡೆದು ನಮ್ಮ ಮೇಲಧಿಕಾರಿಗಳಾಗಿ ಬರುತ್ತಿರುವುದರಿಂದ ಅವರ ಅಧೀನದಲ್ಲಿ ಸ್ವಾಭಿಮಾನಕ್ಕೆ ಧಕ್ಕೆಯಾದರೂ ಕಾರ್ಯನಿರ್ವಹಿಸುತ್ತಾ ಸಾರಿಗೆ ನಿಗಮಗಳ ಅಭಿವೃದ್ಧಿಗೆ ಸಹಕಾರಿಯಾಗಿದ್ದೇವೆ.
ಆದ್ದರಿಂದ ತಾವು ಸಾರಿಗೆ ನಿಗಮಗಳ ನೌಕರರಿಗೆ ನಾಲ್ಕು ವರ್ಷಕ್ಕೊಮ್ಮೆ ಮಾಡುವ ಅವೈಜ್ಞಾನಿಕ ವೇತನ ಪರಿಷ್ಕರಣೆಯ ಪದ್ಧತಿ ಕೈಬಿಟ್ಟು ರಾಜ್ಯ ಸರ್ಕಾರದ 7ನೇ ವೇತನ ಆಯೋಗದಂತೆ ವೇತನವನ್ನು ಅಳವಡಿಸಿಕೊಂಡು ಸರ್ಕಾರದಲ್ಲಿ ನಮ್ಮ ಹುದ್ದೆಗಳಿಗೆ ಸರಿ ಸಮಾನವಾದ ಹುದ್ದೆಯ ಸೇವಾವಧಿಗನುಗುಣವಾಗಿ ಸರಿ ಸಮಾನ ವೇತನವನ್ನು ನಿಗದಿಪಡಿಸಬೇಕು ಎಂದು ಒತ್ತಾಯಿಸುತ್ತಿದ್ದೇವೆ.
ಅಲ್ಲದೆ ಕಷ್ಟ ಜೀವಿಗಳಾದ ನಿಗಮದ ನೌಕರರಿಗೆ ನ್ಯಾಯ ಒದಗಿಸುವುದು ಹಾಗೂ ಮುಂಬಡ್ತಿಯಲ್ಲಿ ಅನ್ಯಾಕ್ಕೊಳಗಾದ ನಮಗೆ ಸಾಮಾನ್ಯ ಹುದ್ದೆಯಾದ “ಘಟಕ ವ್ಯವಸ್ಥಾಪಕರ ಮುಂಬಡ್ತಿ ಹುದ್ದೆಗೆ” ನಮ್ಮನ್ನು ಪರಿಗಣಿತವಾಗುವಂತೆ ನೇಮಕಾತಿ ನಿಯಮಗಳಿಗೆ ಸೂಕ್ತ ತಿದ್ದುಪಡಿ ಮಾಡಿ ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ನಮ್ಮ ಸಂಘಟನೆ ವತಿಯಿಂದ ತಮ್ಮಲ್ಲರಲ್ಲಿ ಕಳಕಳೆಯಿಂದ ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಮನವಿ ಪತ್ರ ಸಲ್ಲಿಸುವ ವೇಳೆ ಅಧ್ಯಕ್ಷ ವಿಜಯ ಚಿಕ್ಕೋಣ, ಪ್ರಧಾನ ಕಾರ್ಯದರ್ಶಿ ಕೃಷ್ಣ ರಾಹುತನಕಟ್ಟಿ, ಕಾನೂನು ಸಲಹೆಗಾರ ತಿಪ್ಪೇಶ್ವರ ಅಣಜಿ, ಉಪಾಧ್ಯಕ್ಷ ಯಲ್ಲಪ್ಪ ದಳಪತಿ, ಸಂ.ಕಾರ್ಯದರ್ಶಿ ಪ್ರವೀಣ ಬಾದರದಿನ್ನಿ ಮತ್ತಿತರರ ಇದ್ದರು.