NEWSನಮ್ಮಜಿಲ್ಲೆನಮ್ಮರಾಜ್ಯ

BMTC: 2020 ಜ.1ರಿಂದ 2023 ಮಾ.31ರ ನಡುವೆ ನಿವೃತ್ತರಾದ ನೌಕರರ ಉಪಧನ, ನಿವೃತ್ತಿ ಗಳಿಕೆ ರಜೆ ನಗದೀಕರಣ ಲೆಕ್ಕಾಚಾರ ಮಾಡಿ ಅ.30ರೊಳಗೆ ಸಲ್ಲಿಸಲು ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಿದ್ಧಪಡಿಸಿಕೊಂಡಿರುವ ಅಧಿಕಾರಿ/ನೌಕರರ ಉಪಧನ ಲೆಕ್ಕಚಾರ ಪಟ್ಟಿಯನ್ನು ಸೇವಾ ಪುಸ್ತಕಗಳೊಂದಿಗೆ ಆಡಳಿತ ಇಲಾಖೆಯ ಮುಖಾಂತರ ಲೆಕ್ಕಪತ್ರ ಇಲಾಖೆಗೆ ಹಾಗೂ ನಿವೃತ್ತಿ ಗಳಿಕೆ ರಜೆ ನಗದೀಕರಣ ವ್ಯತ್ಯಾಸದ ಬಿಲ್ಲುಗಳನ್ನು ನೇರವಾಗಿ ಲೆಕ್ಕಪತ್ರ ಇಲಾಖೆಗೆ ಇದೇ ಅ.30ರೊಳಗೆ ಸಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಲೆಕ್ಕಾಧಿಕಾರಿ ಆದೇಶ ಹೊರಡಿಸಿದ್ದಾರೆ.

01.01.2020 ರಿಂದ ದಿನಾಂಕ 31.03.2023 ರವರೆಗಿನ ಅವಧಿಯಲ್ಲಿ ಸಂಸ್ಥೆಯ ಸೇವೆಯಿಂದ ಸೇವಾ ವಿಮುಕ್ತಿ ಹೊಂದಿದ ಅಧಿಕಾರಿ/ನೌಕರರಿಗೂ ಸಹ 01.01.2020 ರಿಂದ ದಿನಾಂಕ 31.03.2023 ರ ಅವಧಿಯನ್ನು ನೋಷನಲ್ ಆಗಿ ಪರಿಗಣಿಸಿ ವೇತನ ನಿಗದಿಪಡಿಸಿ ಅಂತಿಮ ಆರ್ಥಿಕ ಸೌಲಭ್ಯಗಳ (ಉಪಧನ ಮತ್ತು ನಿವೃತ್ತಿ ಗಳಿಕೆ ರಜೆ ನಗದೀಕರಣಕ್ಕೆ ಮಾತ್ರ) ಪಾವತಿಸಬೇಕಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಉಲ್ಲೇಖಿತ ಸುತ್ತೋಲೆಯನ್ವಯ 01.01.2020 ರಿಂದ ದಿನಾಂಕ 31.03.2023 ರ ಅವಧಿಯಲ್ಲಿ ಸೇವಾ ವಿಮುಕ್ತಿ ಹೊಂದಿದ ಅಧಿಕಾರಿ/ನೌಕರರಿಗೆ ಅರ್ಹ ದಿನಾಂಕದವರೆಗೆ ವೇತನವನ್ನು ನೋಷನಲ್ ಆಗಿ ನಿಗದಿಪಡಿಸಲು ಹಾಗೂ ನಿಗದಿಪಡಿಸಿದ ವೇತನವನ್ನು ಅಧಿಕಾರಿ/ನೌಕರನು ಅಂತಿಮ ದಿನಾಂಕದಂದು ಪಡೆಯುತ್ತಿದ್ದ ಮೂಲ ವೇತನವೆಂದು ಪರಿಗಣಿಸಿ, ಅಂತಿಮ ಆರ್ಥಿಕ ಸೌಲಭ್ಯಗಳಾದ ಉಪಧನ ಮತ್ತು ನಿವೃತ್ತಿ ಗಳಿಕೆ ರಜೆ ನಗದೀಕರಣಗಳನ್ನು ಮಾತ್ರ ಲೆಕ್ಕಾಚಾರ ಮಾಡಿ ಪಾವತಿಸಲು ಆದೇಶಿಸಲಾಗಿದೆ.

ಅದರಂತೆಬಿಎಂಟಿಸಿಯಲ್ಲಿಯೂ ಸಹಾ ಈ ಸುತ್ತೋಲೆಯನ್ನು ಯಥಾವತ್ತಾಗಿ ಅಳವಡಿಸಿಕೊಳ್ಳಲಾಗಿದೆ ಹಾಗೂ ಅದರಂತೆ ಸೇವಾ ವಿಮುಕ್ತಿ ಹೊಂದಿದ ಅಧಿಕಾರಿ/ನೌಕರರಿಗೆ ಪರಿಷ್ಕೃತ ವೇತನ ನಿಗದಿ (ನೋಷನಲ್‌ಆಗಿ) ಪಟ್ಟಿಗಳನ್ನು 31.08.2024 ರೊಳಗಾಗಿ ತಯಾರಿಸಲು ಅಗತ್ಯ ಕ್ರಮಕೈಗೊಂಡು ಅರ್ಹ ಸೇವಾ ವಿಮುಕ್ತ ಅಧಿಕಾರಿ/ನೌಕರರ ಪರಿಷ್ಕೃತ ವೇತನ ನಿಗದಿಯನ್ವಯ ಉಪಧನ ಮತ್ತು ನಿವೃತ್ತಿ ಗಳಿಕೆ ರಜೆ ನಗದೀಕರಣಗಳ ವ್ಯತ್ಯಾಸಗಳನ್ನು ಲೆಕ್ಕಾಚಾರಗೊಳಿಸಬೇಕು.

ಇನ್ನು ಮುಂದುರೆಇದು ಗಳಿಕೆ ರಜೆ ನಗದೀಕರಣ ಬಿಲ್ಲಿನಲ್ಲಿ ಶಾಸನ ಬದ್ಧ ಕಡಿತಗಳನ್ನು ಹಾಗೂ ಅಧಿಕಾರಿ/ನೌಕರನಿಂದ ಬರಬೇಕಾದ ಯಾವುದೇ ಬಾಕಿ ಮೊತ್ತವಿದ್ದಲ್ಲಿ ಕಡಿತಗೊಳಿಸಿ ಪಾವತಿಸಬೇಕಾದ ನಿವ್ವಳ ಮೊತ್ತದ ಕ್ಷೇಮುಗಳನ್ನು 30.09.2024 ರೊಳಗಾಗಿ ಸಿದ್ಧಪಡಿಸಿಕೊಳ್ಳಲು ಸುತ್ತೋಲೆಯಲ್ಲಿ ನಿರ್ದೇಶನ ನೀಡಲಾಗಿತ್ತು. ಆದಾಗ್ಯೂ ಈವರೆಗೂ ಸೇವಾವಿಮುಕ್ತಿ ಹೊಂದಿರುವ ನೌಕರರ ವ್ಯತ್ಯಾಸದ ಕ್ಷೇಮುಗಳನ್ನು ಸಲ್ಲಿಸಿಲ್ಲ.

ಆದ್ದರಿಂದ ಸಿದ್ಧಪಡಿಸಿಕೊಂಡಿರುವ ಉಪಧನ ಲೆಕ್ಕಚಾರ ಪಟ್ಟಿಯನ್ನು ಸೇವಾ ಪುಸ್ತಕಗಳೊಂದಿಗೆ ಆಡಳಿತ ಇಲಾಖೆಯ ಮುಖಾಂತರ ಲೆಕ್ಕಪತ್ರ ಇಲಾಖೆಗೆ ಹಾಗೂ ನಿವೃತ್ತಿ ಗಳಿಕೆ ರಜೆ ನಗದೀಕರಣ ವ್ಯತ್ಯಾಸದ ಬಿಲ್ಲುಗಳನ್ನು ನೇರವಾಗಿ ಲೆಕ್ಕಪತ್ರ ಇಲಾಖೆಗೆ 30.10.2024 ರೊಳಗೆ ಸಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳಲು ಈ ಮೂಲಕ ಆದೇಶಿಸಲಾಗಿದೆ ಎಂದು ಮುಖ್ಯ ಲೆಕ್ಕಾಧಿಕಾರಿ ತಿಳಿಸಿದ್ದಾರೆ.

ಇಲ್ಲಿ ಉಪಧನ ಮತ್ತು ನಿವೃತ್ತಿ ಗಳಿಕೆ ರಜೆ ನಗದೀಕರಣಕ್ಕೆ ಮಾತ್ರ ಒತ್ತು ನೀಡಲಾಗಿದ್ದು,  2020 ಜನವರಿ 1ರಿಂದ ಅನ್ವಯವಾಗಿರುವ ಶೇ.15ರಷ್ಟು ವೇತನ ಹೆಚ್ಚಳದ ಹಿಂಬಾಕಿ ಕೊಡುವುದರ ಬಗ್ಗೆ ಆದೇಶ ಮಾಡಿಲ್ಲ. ಹೀಗಾಗಿ ಏನು 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ  ಬಗ್ಗೆ ಸರ್ಕಾರ ಅಂತಿಮಾ ನಿರ್ಧಾರ ತೆಗೆದುಕೊಳ್ಳಬೇಕಿದೆ.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ