ಗದಗ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಿರ್ವಾಹಕಿಯೊಬ್ಬರು ತನಗೆ ಸಿಕ್ಕ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ, ಬಂಗಾರ, ಹಣವಿದ್ದ ಬ್ಯಾಗನ್ನು ಕಳೆದುಕೊಂಡವರಿಗೆ ಮರಳಿ ನೀಡಿ ಮಾನವೀಯತೆ ಮೆರೆದ ಘಟನೆ ಜಿಲ್ಲೆಯ ನಗರದ ಹೊಸ ಬಸ್ ನಿಲ್ದಾಣದಲ್ಲಿ ನಡೆದಿದೆ.
ಗದಗ ತಾಲೂಕಿನ ಮುಳಗುಂದ ನಿವಾಸಿ ಶಕಿಲಾಬಾನು ಹಣ ಆಭರಣಗಳಿದ್ದ ಬ್ಯಾಗ್ ಕಡೆದುಕೊಂಡಿದ್ದ ಮಹಿಳೆ. ಅವರು ಬಸ್‌ನಲ್ಲಿ ತನ್ನ ಬ್ಯಾಗನ್ನು ಮರೆತು ಬಿಟ್ಟು ಹೋಗಿದ್ದರು. ಹಾವೇರಿ ಜಿಲ್ಲೆ ಬ್ಯಾಡಗಿ ಘಟಕದ ನಿರ್ವಾಹಕಿ ಎಸ್.ಎಂ.ಅನಸೂಯಾ ಅವರು ಬ್ಯಾಗ್ ಮರಳಿ ನೀಡಿ ಮಾನವೀಯತೆ ಮೆರೆದಿದ್ದಾರೆ.
ಈ ಬಸ್ ಬ್ಯಾಡಗಿಯಿಂದ ಗದಗ ಮಾರ್ಗವಾಗಿ ಬಾದಾಮಿಗೆ ಹೊರಟಿತ್ತು. ಮಹಿಳೆ ಮುಳಗುಂದದಲ್ಲಿ ಹತ್ತಿ ಗದಗ ಹೊಸ ಬಸ್ ನಿಲ್ದಾಣದಲ್ಲಿ ಇಳಿದುಕೊಂಡಿದ್ದಾರೆ. ಈ ವೇಳೆ ಸುಮಾರು 30 ಗ್ರಾಂ ಬಂಗಾರದ ಆಭರಣಗಳು, 100 ಗ್ರಾಂ ಬೆಳ್ಳಿ ಆಭರಣಗಳು ಹಾಗೂ 2,160 ರೂ. ಹಣ ಹಾಗೂ ಬ್ಲೂಟುತ್ ಸೇರಿದಂತೆ ಇತರೆ ವಸ್ತುಗಳಿದ್ದ ಬ್ಯಾಗನ್ನು ಮರೆದು ಬಸ್‌ನಲ್ಲೇ ಬಿಟ್ಟು ಹೋಗಿದ್ದರು.
ಇನ್ನು ಇದೇ ವೇಳೆ ಟಿಕೆಟ್ ವಿತರಿಸಿಕೊಂಡು ಬಂದ ನಿರ್ವಾಹಕಿ ಅನಸೂಯಾ ಅವರು ಅಪರಿಚಿತವಾಗಿದ್ದ ಬಿದ್ದಿದ್ದ ಆ ಬ್ಯಾಗದದ ಗನಿಸಿದ್ದಾರೆ. ಆ ವೇಳೆ ಬ್ಯಾಗ್ ವಾರಸುದಾರರು ಯಾರು ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಬಳಿ ಅದಲ್ಲಿ ಏನಿದೆ ಎಂದು ಚೆಕ್ ಮಾಡಿದ್ದಾರೆ. ಆ ವೇಳೆ ಹಣ ಮತ್ತು ಚಿನ್ನಾಭರವಿರುವುದು ಗೊತ್ತಾಗಿದೆ.
ಬಳಿ ಆ ನಿರ್ವಾಹಕರು ಆ ಬ್ಯಾಗ್ನಲ್ಲಿದ್ದ ಯಾವುದೇ ವಸ್ತುಗಳನ್ನು ಮುಟ್ಟದೇ, ಗದಗ ಬಸ್ ನಿಲ್ದಾಣದ ಅಧಿಕಾರಿ ಶಿವಾನಂದ ಸಂಗಣ್ಣವರ್ ಹಾಗೂ ಇತರೆ ಅಧಿಕಾರಿಗಳ ಸಮ್ಮುಖದಲ್ಲಿ ಬ್ಯಾಗ್ ತಲುಪಿಸಿದ್ದಾರೆ. ನಂತರ ಬ್ಯಾಗ್‌ನಲ್ಲಿರುವ ಪಾನ್ ಕಾರ್ಡ್ ಗುರುತಿನ ಚೀಟಿ ಮೂಲಕ ಬ್ಯಾಗ್ ಕಳೆದುಕೊಂಡ ಮಹಿಳೆ ವಿಳಾಸ ಪತ್ತೆಹಚ್ಚಿದ್ದಾರೆ.
ಬಳಿಕ ಬ್ಯಾಗ್ ಕಳೆದುಕೊಂಡಾಕೆಯನ್ನು ಕರೆಸಿಕೊಂಡು ಬೆಟಗೇರಿ ಬಡಾವಣೆ ಪೊಲೀಸರು, ಗದಗ ಬಸ್ ನಿಲ್ದಾಣ ಅಧಿಕಾರಿಗಳ ಸಮ್ಮುಖದಲ್ಲಿ ಆ ಮಹಿಳೆಗೆ ಬ್ಯಾಗ್ ಮರಳಿಸಿದ್ದಾರೆ. ಮರಳಿ ಸಿಕ್ಕ ಬಂಗಾರ, ಬೆಳ್ಳಿ, ಹಣವಿದ್ದ ಬ್ಯಾಗ್ ಕಂಡು ಫಲಾನುಭವಿ ಶಕಿಲಾಬಾನು ಸಂತೋಷ ಪಟ್ಟರು.
ನಿರ್ವಾಹಕಿ ಅನಸೂಯಾ ಹಾಗೂ ಚಾಲಕ ಸೊಲಂಕಿ ಅವರ ಮಾನವೀಯತೆಯ ನಡೆ ನಿಜಕ್ಕೂ ಶ್ಲಾಘನೀಯ. ಅವರು ಈ ಕಾರ್ಯಕ್ಕೆ ಈಗ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಗದಗ ಹಾಗೂ ಹಾವೇರಿ ಜಿಲ್ಲೆಯ ಸಾರಿಗೆ ಅಧಿಕಾರಿಗಳು ನಿರ್ವಾಹಕ, ನಿರ್ವಾಹಕಿಗೆ ಬೆನ್ನು ತಟ್ಟಿ ಪ್ರೋತ್ಸಾಹಿದ್ದಾರೆ.